Asianet Suvarna News Asianet Suvarna News

ಅಯ್ಯೋ ರಾಮ! ಬೆಂಗ್ಳೂರಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ಬೆಲೆ! ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 81.72 ರೂ.! ಬೆಂಗಳೂರಿನಲ್ಲಿ ಡೀಸೆಲ್ ದರ ಲೀಟರ್‌ಗೆ 73.44 ರೂ.! ವಾಹನ ಸವಾರರ ಜೇಬು ಸುಡುತ್ತಲೇ ಇದೆ..!
ಪೆಟ್ರೋಲ್ ರೇಟ್ ಶತಕ ಬಾರಿಸಿದ್ರೂ ಅಚ್ಚರಿ ಇಲ್ಲ
 

ಬೆಂಗಳೂರು[ಸೆ.೪]: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹಿಂದೆಂದೂ ಕಂಡರಿಯದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಚ್ಚಾತೈಲ ಬೆಲೆಯಲ್ಲಿ ಏರಿಕೆ ಹಾಗೂ ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 81.72 ರೂ ಮತ್ತು ಡೀಸೆಲ್‌ ದರ 73.44 ರೂ ಆಗಿದೆ.  ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ 79.15 ರೂ. ಹಾಗೂ ಡೀಸಲ್‌ ಪ್ರತಿ ಲೀಟರ್‌ಗೆ 71.15 ರೂ. ತಲುಪಿದ್ದು, ಈವರೆಗಿನ ಅತಿ ಗರಿಷ್ಠ ದರ ಎಂಬ ದಾಖಲೆ ಮಾಡಿವೆ.

ಮುಂಬೈನಲ್ಲಿ ದೇಶದಲ್ಲೇ ಅತ್ಯಧಿಕ ಅಂದರೆ ಲೀಟರ್‌ ಪೆಟ್ರೋಲ್‌ ಬೆಲೆ 86.24 ರೂ. ಆಗಿದೆ. ಕಳೆದ ಆಗಸ್ಟ್‌ 16 ರಿಂದ ನಿತ್ಯವೂ ಬೆಲೆ ಏರಿಕೆಯಾಗುತ್ತಿದ್ದು, ಅಂದಿನಿಂದ ಪೆಟ್ರೋಲ್‌ ಬೆಲೆ 2 ರೂ. ಹೆಚ್ಚಳವಾಗಿದೆ. ಡೀಸೆಲ್‌ ಬೆಲೆಯು ಈ ಅವಧಿಯಲ್ಲಿ 2.42 ರೂ. ಆಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..