ಏಪ್ರಿಲ್ 1 ರಿಂದ ಹೊಸ ನಿಯಮ| ನೂತನ ನಿಯಮದಿಂದ ಕಂಪನಿ, ಉದ್ಯೋಗಿಗಳು ಇಬ್ಬರಿಗೂ ಲಾಭವಿದೆ ಎಂದ ಸರ್ಕಾರ| ಪಿಎಚ್ ಹೆಚ್ಚಳ, ಸಿಗೋ ಸಂಬಳ ಕಡಿಮೆ
ನವದೆಹಲಿ(ಜ.11): ಮೋದಿ ಸರ್ಕಾರ ಉದ್ಯೋಗಿಗಳ ಕೆಲಸದ ಸಮಯ, ಪಿಎಫ್, ಗ್ರ್ಯಾಚುಟಿ ಹಾಗೂ ನಿವೃತ್ತಿ ಸಂಬಂಧಿತ ನಿಯಮಗಳಲ್ಲಿ ಏಪ್ರಿಲ್ 1ರಿಂದ ಮಹತ್ವದ ಬದಲಾವಣೆಗಳನ್ನು ತರಲಿದೆ. ಇನ್ನು ಕೆಲಸದ ಸಮಯ ಹನ್ನೆರಡು ತಾಸು ಆಗಲಿದೆ. ಇನ್ನು ಉದ್ಯೋಗಿಗಳ ಗ್ರ್ಯಾಚುಟಿ ಹಾಗೂ ಪಿಎಫ್ ಮೊತ್ತ ಹೆಚ್ಚಲಿದೆಯಾದರೂ, ವೇತನ ರೂಪದಲ್ಲಿ ಸಿಗುವ ಮೊತ್ತ(Take Home Salary) ಕಡಿಮೆಯಾಗಲಿದೆ.
ಇನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ನಿಯಮದಿಂದ ಕಂಪನಿಗಳ ಬ್ಯಾಲೆನ್ಸ್ ಶೀಟ್‌ಗಳ ಮೇಲೂ ಪ್ರಭಾವ ಬೀರಲಿದೆ. ಕಳೆದ ವರ್ಷ ಸಂಸತ್ತಿನಲ್ಲಿ ಮಂಡಿಸಿ ಪಾಸ್ ಆದ ಮೂರು ವೇತನ ಸಂಬಂಧಿ ಮೂರು ವಿಧೇಯಕಗಳು ಏಪ್ರಿಲ್ 1ರಿಂದ ಜಾರಿಯಾಗುವ ಸಾಧ್ಯತೆಗಳಿವೆ. ಈ ವಿಧೇಯಕಗಳ ಅನ್ವಯ ವೇತನದ ಅಡಿಯಲ್ಲಿನ ಭತ್ಯೆ ಒಟ್ಟು ವೇತನ ಶ್ರೇಣಿಯ ಗರಿಷ್ಠ 50%ರಷ್ಟಿರಬಹುದು. ಹೀಗಿರುವಾಗ ಮೂಲ ವೇತನ ಏಪ್ರಿಲ್‌ನಿಂದ ಒಟ್ಟು ಆದಾಯದ ಶೇ. 50ರಷ್ಟು ಇಲ್ಲವೇ ಹೆಚ್ಚಿರಬೇಕು.
ಇನ್ನು ದೇಶದ 73 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕಾರ್ಮಿಕ ಕಾನೂನುಗಳಲ್ಲಿ ಇಂತಹ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಕಾನೂನುಗಳು ಉದ್ಯೋಗದಾತರು ಮತ್ತು ಕಾರ್ಮಿಕರಿಬ್ಬರಿಗೂ ಉತ್ತಮವೆಂದು ಸಾಬೀತಾಗುವುದರಲ್ಲಿ ಅನುಮಾನ ಇಲ್ಲ ಎಂಬುವುದು ಸರ್ಕಾರದ ಮಾತಾಗಿದೆ.
'
ವೇತನ ಇಳಿಕೆ ಪಿಎಫ್ ಏರಿಕೆ
ನೂತನ ಕರಡು ನಿಯಮದನ್ವಯ ಮೂಲ ವೇತನ ಒಟ್ಟು ವೇತನದ ಶೇ. 50 ಅಥವಾ ಹೆಚ್ಚು ಇರಬೇಕು. ಇದರಿಂದ ಹೆಚ್ಚಿನ ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್ ಬದಲಾಗುತ್ತದೆ. ಯಾಕೆಂದರೆ ವೇತನದ ಭತ್ಯೆ ರಹಿತ ಭಾಗ ಸಾಮಾನ್ಯವಾಗಿ ಒಟ್ಟು ವೇತನದ ಶೇ. 50ಕ್ಕಿಂತ ಕಡಿಮೆ ಇರುತ್ತದೆ. ಮೂಲ ವೇತನ ಹೆಚ್ಚಿದಂತೆ ಪಿಎಫ್ ಕೂಡಾ ಏರಿಕೆಯಾಗುತ್ತದೆ. ಪಿಎಫ್ ಮೂಲ ವೇತನದ ಆಧಾರದಲ್ಲಿ ನೀಡಲಾಗುತ್ತದೆ. ಹೀಗಿರುವಾಗ ಅತ್ತ ಪಿಎಫ್ ಹೆಚ್ಚಾದರೆ ಇತ್ತ ಕೈಗೆ ಸಿಗುವ ಸಂಬಳ ಕಡಿಮೆಯಾಗುವುದು ಖಚಿತ.
ನಿವೃತ್ತಿ ಬಳಿಕ ಹೆಚ್ಚು ಮೊತ್ತ
ಗ್ರ್ಯಾಚುಟಿ ಹಾಗೂ ಪಿಎಫ್ ಮೊತ್ತ ಹೆಚ್ಚಾಗುವುದರಿಂದ ನಿವೃತ್ತಿ ಬಳಿಕ ಸಿಗುವ ಮೊತ್ತ ಹೆಚ್ಚಾಗಲಿದೆ. ಹೆಚ್ಚು ವೇತನ ಗಳಿಸುವ ಉದ್ಯೋಗಿಗಳ ಸ್ಯಾಲರಿ ಸ್ಟ್ರಕ್ಚರ್‌ನಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಈ ಹೊಸ ನಿಯಮ ಅಂತಹವರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಪಿಎಫ್ ಹಾಗೂ ಗ್ರ್ಯಾಚುಟಿ ಹೆಚ್ಚುವುದರಿಂದ ಕಂಪನಿ ಲಾಭವೂ ಹೆಚ್ಚಲಿದೆ. ಇದರಿಂದ ಕಂಪನಿಗಳ ಬ್ಯಾಲೆನ್ಸ್ ಶೀಟ್‌ನಲ್ಲೂ ಬದಲಾವಣೆಯಾಗಲಿದೆ.
ಕೆಲಸದ ಅವಧಿ ಹನ್ನೆರಡು ತಾಸಿಗೇರಿಸುವ ಪ್ರಸ್ತಾಪ
ಹೊಸ ಕಾನೂನಿನ್ಲಲಿ ಕೆಲಸದ ಅವಧಿ ಹನ್ನೆರಡು ಗಂಟೆಗೇರಿಸುವ ಪ್ರಸ್ತಾವನೆಯೂ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 11, 2021, 4:46 PM IST