ಫೆಬ್ರವರಿ 1 ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಬೆಲೆ ಏರಿಕೆ ನಡುವೆ ಜನಸಾಮಾನ್ಯರಿಗೆ ನೆಮ್ಮದಿ ನೀಡುವ ಬಜೆಟ್ ನಿರೀಕ್ಷೆ ಇದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ಆಶಯವನ್ನು ಮಧ್ಯಮ ವರ್ಗದ ಜನ ಹೊಂದಿದ್ದಾರೆ. ಜಿಎಸ್‌ಟಿ ದರಗಳಲ್ಲಿ ದೊಡ್ಡ ಬದಲಾವಣೆ ಸಾಧ್ಯತೆ ಕಡಿಮೆ ಇದೆ.
ಫೆಬ್ರವರಿ ಒಂದರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Union Minister Nirmala Sitharaman) ಬಜೆಟ್ ಮಂಡನೆ ಮಾಡಲಿದ್ದಾರೆ. ಎಲ್ಲರ ಕಣ್ಣು ಬಜೆಟ್ ಮೇಲಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರು, ಕೇಂದ್ರ ಸರ್ಕಾರ, ಬಜೆಟ್ (Budget )ಮೂಲಕ ನೆಮ್ಮದಿ ನೀಡ್ಲಿ ಎಂಬ ಆಸೆಯಲ್ಲಿದ್ದಾರೆ. ಭಾರತದ ತೆರಿಗೆ (Tax) ವಿಷ್ಯ ಯಾವಾಗ್ಲೂ ಚರ್ಚೆಯಲ್ಲಿರುವಂತದ್ದು. ಅದ್ರಲ್ಲೂ ಬಜೆಟ್ ಮಂಡನೆ ಹತ್ತಿರವಾಗ್ತಿದ್ದಂತೆ, ಬಜೆಟ್ ಮುಗಿದ ಕೆಲ ದಿನಗಳವರೆಗೆ ತೆರಿಗೆ ವಿಷ್ಯ ಚರ್ಚೆಯಲ್ಲಿರುತ್ತದೆ.
ಆದಾಯ ತೆರಿಗೆ (Income Tax)ಯಲ್ಲಿ ವಿನಾಯಿತಿ ನಿರೀಕ್ಷೆ : ಪ್ರತಿ ಬಾರಿ ಮಧ್ಯಮ ವರ್ಗದವರ ಬಹುಮುಖ್ಯ ನಿರೀಕ್ಷೆ ಆದಾಯ ತೆರಿಗೆ ವಿನಾಯಿತಿಯಾಗಿದೆ. ವಾರ್ಷಿಕ 10 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಬಹುದು ಎಂಬ ನಿರೀಕ್ಷೆ ಸದ್ಯಕ್ಕಿದೆ. ಒಂದ್ವೇಳೆ ಸರ್ಕಾರ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ರೆ ಸಂಬಳ ಪಡೆಯುವ ಮತ್ತು ಮಧ್ಯಮ ವರ್ಗದ ತೆರಿಗೆದಾರರು ಖುಷಿಯಾಗಲಿದ್ದಾರೆ. ಆರೋಗ್ಯ ವಿಮೆ ಮತ್ತು ಜೀವ ವಿಮೆಯ ಪ್ರೀಮಿಯಂ ಪಾವತಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರ ಹೆಚ್ಚಿಸಬಹುದು ಎಂದು ಜನರು ಆಶಿಸುತ್ತಿದ್ದಾರೆ.
Union Budget 2025: ಬಜೆಟ್ ಸಿದ್ದಮಾಡಲು ನಿರ್ಮಲಾ ಸೀತಾರಾಮನ್ ಅವರ ಟೀಮ್‌ನಲ್ಲಿರುವವರು ಯಾರು?
ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಯಾಗೋದು ಯಾವ ಕ್ಷೇತ್ರದಲ್ಲಿ : ಭಾರತದಲ್ಲಿ ಸರಕು ಮತ್ತು ಸೇವೆಗಳನ್ನು ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ ವಿವಿಧ ಸ್ಲ್ಯಾಬ್‌ಗಳಾಗಿ ವಿಂಗಡಿಸಲಾಗಿದೆ. ಅದ್ರಲ್ಲಿ ಕೆಲವರು ಸೇವೆ ಜಿಎಸ್ ಟಿ ಮುಕ್ತವಾಗಿದ್ದರೆ ಮತ್ತೆ ಕೆಲವು ಸೇವೆಗಳಿಗೆ ಜಿಎಸ್ ಟಿ ವಿಧಿಸಲಾಗಿದೆ.
ಶೇ. 28 ಜಿಎಸ್ಟಿ ಸ್ಲ್ಯಾಬ್ ಅಡಿ ಬರುವ ಸೇವೆ : ಜಿಎಸ್ಟಿಯನ್ನು 2017ರಲ್ಲಿ ಪರಿಚಯಿಸಲಾಯಿತು. ಆ ಸಮಯದಲ್ಲಿ 226 ಉತ್ಪನ್ನಗಳನ್ನು 28 ಪ್ರತಿಶತ ತೆರಿಗೆ ಸ್ಲ್ಯಾಬ್ ಗೆ ಸೇರಿಸಲಾಗಿತ್ತು. ನಂತ್ರದ ದಿನಗಳಲ್ಲಿ ಈ ಪಟ್ಟಿ ಚಿಕ್ಕದಾಗ್ತಾ ಬಂತು. ಸದ್ಯ ಈ ಪಟ್ಟಿಯಲ್ಲಿ 35 ಉತ್ಪನ್ನಗಳನ್ನು ಇಡಲಾಗಿದೆ. ಅವುಗಳಲ್ಲಿ ಐಷಾರಾಮಿ ಅಥವಾ ಅನಗತ್ಯವೆಂದು ಪರಿಗಣಿಸಲಾಗುವ ವಸ್ತುಗಳು ಸೇರಿವೆ. ಸಿಮೆಂಟ್, ಆಟೋಮೊಬೈಲ್ ಬಿಡಿಭಾಗಗಳು, ಟೈರ್‌ಗಳು, ಮೋಟಾರ್ ವಾಹನ ಉಪಕರಣಗಳು, ತಂಬಾಕು, ಸಿಗರೇಟ್, ಪಾನ್ ಮಸಾಲ, ವಿಮಾನ ಮತ್ತು ಯಾಕ್‌ಗಳಂತಹ ವಿಶೇಷ ವಸ್ತುಗಳು, ಪಂಚತಾರಾ ಹೋಟೆಲ್‌ಗಳಲ್ಲಿ ಸಿನಿಮಾ ಟಿಕೆಟ್‌ಗಳು, ಆಹಾರ ಮತ್ತು ಪಾನೀಯಗಳು ಶೇಕಡಾ 28ರ ಜಿಎಸ್ಟಿ ಅಡಿ ಬರುತ್ತವೆ.
ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಚಿನ್ನದ ಬೆಲೆ ಏರಿಕೆಯಾಗುತ್ತಾ?
ಶೇ. 18ರ ಸ್ಲ್ಯಾಬ್ ನಲ್ಲಿ ಬರುವ ವಸ್ತುಗಳು : ಮೊದಲು ಶೇಕಡಾ 28ರ ತೆರಿಗೆ ಸ್ಲ್ಯಾಬ್‌ನಲ್ಲಿ ಸೇರಿಸಲಾಗಿದ್ದ 15 ವಸ್ತುಗಳನ್ನು ಶೇಕಡಾ 18 ರ ತೆರಿಗೆ ಸ್ಲ್ಯಾಬ್‌ಗೆ ಸೇರಿಸಲಾಗಿದೆ. ವಾಷಿಂಗ್ ಮೆಷಿನ್, 27 ಇಂಚಿನ ಟಿವಿ, ವ್ಯಾಕ್ಯೂಮ್ ಕ್ಲೀನರ್, ಫ್ರಿಡ್ಜ್ ಮತ್ತು ಪೇಂಟ್‌ನಂತಹ ವಸ್ತುಗಳು ಈ ಪಟ್ಟಿಯಲ್ಲಿ ಬರುತ್ತವೆ.
ಜಿಎಸ್ಟಿ ರಹಿತ ವಸ್ತು : ಸರ್ಕಾರ ಕೆಲ ವಸ್ತುಗಳಿಗೆ ಜಿಎಸ್ಟಿ ತೆರಿಗೆ ವಿಧಿಸುವುದಿಲ್ಲ. ಅದ್ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿದೆ. ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬಂದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ವಿವೇಚನೆಯಿಂದ ಇವುಗಳ ಮೇಲೆ ವ್ಯಾಟ್ ಮತ್ತು ಇತರ ತೆರಿಗೆಗಳನ್ನು ವಿಧಿಸುತ್ತವೆ.
2025ರ ಬಜೆಟ್ ನಿರೀಕ್ಷೆ : 2025 ರ ಬಜೆಟ್ ನಲ್ಲಿ ಸರ್ಕಾರ ಸ್ಲ್ಯಾಬ್ ನಲ್ಲಿ ಬದಲಾವಣೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದ್ರೆ ಜಿಎಸ್‌ಟಿ ದರಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಕಡಿಮೆ ಎಂಬುದು ತಜ್ಞರ ಹೇಳಿಕೆ.
