Asianet Suvarna News Asianet Suvarna News

2024ನೇ ಸಾಲಿನ ಬಜೆಟ್ ನಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಿ; ಸರ್ಕಾರಕ್ಕೆ ಆರೋಗ್ಯ ಸಂಘಟನೆಗಳ ಮನವಿ

ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ 2024-25ನೇ ಸಾಲಿನ ಬಜೆಟ್ ನಲ್ಲಿ ಹೆಚ್ಚಿಸಬೇಕು ಎಂದು ವೈದ್ಯರು ಹಾಗೂ ಅರ್ಥಶಾಸ್ತ್ರಜ್ಞರನ್ನೊಳಗೊಂಡ ಸಾರ್ವಜನಿಕ ಆರೋಗ್ಯ ಸಂಘಟನೆಗಳು ಒತ್ತಾಯಿಸಿವೆ. 
 

Budget 2024 Hike Tax On Tobacco Products Urges Doctors and Public Health Groups anu
Author
First Published Nov 25, 2023, 3:38 PM IST

ನವದೆಹಲಿ (ನ.25): ಹೆಚ್ಚುವರಿ ಆದಾಯ ಗಳಿಸಲು 2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವಂತೆ ವೈದ್ಯರು ಹಾಗೂ ಅರ್ಥಶಾಸ್ತ್ರಜ್ಞರನ್ನು ಒಳಗೊಂಡ ಸಾರ್ವಜನಿಕ ಆರೋಗ್ಯ ಗುಂಪುಗಳು ಸರ್ಕಾರವನ್ನು ಒತ್ತಾಯಿಸಿವೆ. ಸಿಗರೇಟ್, ಬೀಡಿಗಳು ಹಾಗೂ ಹೊಗೆರಹಿತ ತಂಬಾಕಿನ ಮೇಲಿನ ಆರೋಗ್ಯ ತೆರಿಗೆ ಹೆಚ್ಚಿಸುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮಾಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಸಾರ್ವಜನಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ತಂಬಾಕಿನಂತಹ ಉತ್ಪನ್ನಗಳ ಮೇಲೆ ಆರೋಗ್ಯ ತೆರಿಗೆಯಂತಹ ಅಬಕಾರಿ ಸುಂಕಗಳನ್ನು ವಿಧಿಸಲಾಗುತ್ತದೆ. ತಜ್ಞರ ಅಭಿಪ್ರಾಯದ ಪ್ರಕಾರ ತಂಬಾಕು ಸೇವನೆ ನಿಯಂತ್ರಣಕ್ಕೆ ಅಬಕಾರಿ ಸುಂಕ ಹೆಚ್ಚಳ ಕೂಡ ಅನೇಕ ಸಾರ್ವಜನಿಕ ನೀತಿ ಸಾಧನಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ ನಡೆದ ಸಂಶೋಧನೆಗಳ ಆಧಾರದಲ್ಲಿ ಅಬಕಾರಿ ಸುಂಕವನ್ನು ಅತ್ಯಂತ ಪರಿಣಾಮಕಾರಿ ವೆಚ್ಚ ನಿಯಂತ್ರಿತ ಕ್ರಮವೆಂದು ಪರಿಗಣಿಸಲಾಗಿದೆ. 

ಆರೋಗ್ಯ ತೆರಿಗೆಯನ್ನು 'ಪಾಪ ತೆರಿಗೆ' ಎಂದು ಕೂಡ ಕರೆಯಲಾಗುತ್ತದೆ. ಅನೇಕ ರಾಷ್ಟ್ರಗಳು ತಂಬಾಕು ಉತ್ಪನ್ನಗಳ ಬಳಕೆ ಮೇಲೆ ನಿಯಂತ್ರಣ ಸಾಧಿಸಲು ಈ ತೆರಿಗೆ ಬಳಸುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ ಸಿಗರೇಟ್ಸ್, ಬೀಡಿಗಳು ಹಾಗೂ ಹೊಗೆರಹಿತ ತಂಬಾಕು ಕಳೆದ 10 ವರ್ಷಗಳಲ್ಲಿ ಹೆಚ್ಚು ಸುಲಭವಾಗಿ ಲಭಿಸುತ್ತಿವೆ. 

'ಇತ್ತೀಚಿಗೆ ಸಿಗರೇಟ್ ಗಳ ಮೇಲಿನ ರಾಷ್ಟ್ರೀಯ ವಿಕೋಪ ಅನಿಶ್ಚಿತ ಸುಂಕದಲ್ಲಿ (ಎನ್ ಸಿಸಿಡಿ) ಅಲ್ಪಮಟ್ಟಿನ ಏರಿಕೆಯಾಗಿದೆ. ಇದರ ಹೊರತಾಗಿ 2017ರ ಜುಲೈನಲ್ಲಿ ಜಿಎಸ್ ಟಿ ಪರಿಚಯಿಸಿದ ಬಳಿಕ ತಂಬಾಕು ತೆರಿಗೆಯಲ್ಲಿ ಯಾವುದೇ ಮಹತ್ವದ ಏರಿಕೆಯಾಗಿಲ್ಲ' ಎಂದು ಕೊಚ್ಚಿ ರಾಜಗಿರಿ ಕಾಲೇಜ್ ಆಫ್ ಸೋಷಿಯಲ್ ಸೈನ್ಸ್ ಆರೋಗ್ಯ ಅರ್ಥಶಾಸ್ತ್ರಜ್ಞ ಹಾಗೂ ಪ್ರಾಧ್ಯಾಪಕರಾದ ಡಾ.ರಿಜೊ ಜಾನ್ ತಿಳಿಸಿದ್ದಾರೆ.

600 ಕೋಟಿ ರೂಪಾಯಿ ನಷ್ಟದೊಂದಿಗೆ ಪೇಟಿಎಂನಿಂದ ಹೊರನಡೆದ ವಾರನ್‌ ಬಫೆಟ್‌!

ಪ್ರಸಕ್ತ ಜಿಎಸ್ ಟಿ ದರ, ಪರಿಹಾರ ಸುಂಕ, ಎನ್ ಸಿಸಿಡಿ ಹಾಗೂ ಕೇಂದ್ರೀಯ ಸುಂಕ  ಸೇರಿಸಿದರೆ  ಒಟ್ಟು ತೆರಿಗೆ ಭಾರ ಸಿಗರೇಟ್ ಮೇಲೆ ಕೇವಲ ಶೇ.49.3ರಷ್ಟಿದೆ. ಇನ್ನು ಬೀಡಿಗಳ ಮೇಲೆ ಶೇ22ರಷ್ಟು ಹಾಗೂ ಹೊಗೆರಹಿತ ತಂಬಾಕುಗಳ ಮೇಲೆ ಶೇ.63ರಷ್ಟಿದೆ ಎಂದು ಜಾನ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸುಗಳ ಅನ್ವಯ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಭಾರ ರಿಟೇಲ್ ಬೆಲೆಯ ಕನಿಷ್ಠ ಶೇ.75ರಷ್ಟು ಇರಬೇಕು. ಪ್ರಸ್ತುತ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಭಾರ ಇದಕ್ಕಿಂತ ಸಾಕಷ್ಟು ಕಡಿಮೆಯಿದೆ.

'ಜಿಎಸ್ ಟಿ ಅನುಷ್ಠಾನಗೊಂಡು ಆರು ವರ್ಷಗಳಿಗಿಂತಲೂ ಹೆಚ್ಚಿನ ಸಮಯವಾಗಿದೆ. ಆದರೆ, ಈ ಅವಧಿಯಲ್ಲಿ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿ ಯಾವುದೇ ಗಣನೀಯ ಏರಿಕೆಯಾಗಿಲ್ಲ. ಎನ್ ಸಿಸಿಡಿಯಲ್ಲಿ ಸಣ್ಣ ಪ್ರಮಾಣದ ಏರಿಕೆ ಹೊರತಾಗಿ ತಂಬಾಕು ಉತ್ಪನ್ನಗಳ ಮೇಲಿ ತೆರಿಗೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಗಮನಹರಿಸೋದು ಅಗತ್ಯ ಎಂದು ಜಾನ್ ಅಭಿಪ್ರಾಯಪಟ್ಟಿದ್ದಾರೆ.

ತಜ್ಞರ ಪ್ರಕಾರ ಎಲ್ಲ ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳ ಕೇಂದ್ರ ಸರ್ಕಾರ ಕಂದಾಯ ಹೆಚ್ಚಿಸಲು ಕೈಗೊಳ್ಳುವ ತಕ್ಷಣದ ಅಗತ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾದ ನೀತಿಯಾಗಿದೆ. ಕಂದಾಯ ಸೃಷ್ಟಿ ಹಾಗೂ ತಂಬಾಕು ಬಳಕೆ ಹಾಗೂ ಸಂಬಂಧಿತ ಕಾಯಿಲೆಗಳನ್ನು ತಗ್ಗಿಸಲು ಇದು ಅತ್ಯಂತ ಪರಿಣಾಮಕಾರಿಯಾದ ಕ್ರಮವಾಗಿದೆ. 

ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರಿಗೆ ತಿಳಿದಿಲ್ಲ ಈ 5 SIPs;ಇವುಗಳ ವಿಶೇಷತೆಯೇನು?

ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿ ಇತ್ತೀಚೆಗೆ ಕ್ಯಾನ್ಸರ್ ಸೇವಾ ಯೋಜನೆ ಹಾಗೂ ನಿರ್ವಹನೆ ಬಗ್ಗೆ ಸಲ್ಲಿಕೆ ಮಾಡಿದ್ದ ವರದಿಯಲ್ಲಿ ಭಾರತದಲ್ಲಿ ಕ್ಯಾನ್ಸರ್ ಗೆ ಕಾರಣವೇನು ಎಂಬ ಬಗ್ಗೆ ವಿಸ್ತಾರವಾದ ಅಧ್ಯಯನ ನಡೆಸಿದ್ದರು. ಭಾರತದಲ್ಲಿ ಬಾಯಿ ಕ್ಯಾನ್ಸರ್ ನಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರಾಣ ತೆಗೆದುಕೊಳ್ಳುತ್ತಿದ್ದಾರೆ. ಅದರ ನಂತರದಲ್ಲಿ ಶ್ವಾಸಕೋಶ, ಅನ್ನನಾಳ ಹಾಗೂ ಹೊಟ್ಟೆ ಕ್ಯಾನ್ಸರ್ ಕಾರಣದಿಂದ ಹೆಚ್ಚಿನ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನೀಡಿದೆ. 

Follow Us:
Download App:
  • android
  • ios