Budget 2023: ನಿರ್ಮಲ ಬಜೆಟ್‌ನಲ್ಲಿ ಗರಿಷ್ಠ ಬಾರಿ ಬಳಕೆ ಮಾಡಿದ ಪದ 'ಟ್ಯಾಕ್ಸ್‌'!

ಸಾಮಾನ್ಯವಾಗಿ ಬಜೆಟ್‌ ಭಾಷಣದಲ್ಲಿ ತೆರಿಗೆ, ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಅನ್ನೋ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ತೆರಿಗೆದಾರರಿಗೆ ದೊಡ್ಡ ರಿಲೀಫ್‌ ನೀಡಿರುವ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಗರಿಷ್ಠ ಬಾರಿ ಬಳಕೆ ಮಾಡಿರುವ ಪದವೇ 'ಟ್ಯಾಕ್ಸ್‌' ಎನ್ನುವುದಾಗಿದೆ.
 

Budget 2023 Tax most used word in Nirmala Sitharamans speech in Parliament san

ನವದೆಹಲಿ (ಫೆ.1): ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಉಡುಗೊರೆಯಾಗಿ ನೀಡಿದ್ದ ಇಳಕಲ್‌ ಸೀರೆ ಉಟ್ಟು 2023-24ರ ಸಾಲಿನ ಬಜೆಟ್‌ ಮಂಡನೆ ಮಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌. ತಮ್ಮ 1 ಗಂಟೆ 40 ನಿಮಿಷದ ಸುದೀರ್ಘ ಬಜೆಟ್‌ ಭಾಷಣದಲ್ಲಿ ಟ್ಯಾಕ್ಸ್‌ ಎನ್ನುವ ಪದವನ್ನೇ ಗರಿಷ್ಠ ಬಾರಿ ಬಳಕೆ ಮಾಡಿದ್ದಾರೆ. ಡೇಟಾ ಇಂಟಲಿಜೆಂಟ್‌ ಯುನಿಟ್‌ ಬಜೆಟ್‌ನ ಕುರಿತಾಗಿ ತನ್ನ ವರದಿ ಮಾಡಿದ್ದು, ನಿರ್ಮಲಾ ಸೀತಾರಾಮನ್‌ ಅವರು ಟ್ಯಾಕ್ಸ್‌ ಎನ್ನುವ ಪದವನ್ನು ಗರಿಷ್ಠ  51 ಬಾರಿ ಬಳಕೆ ಮಾಡಿದ್ದಾರೆ ಎಂದು ಹೇಳಿದೆ. ಇನ್ನು ಮಿಷನ್‌, ಗವರ್ನೆನ್ಸ್‌ ಅನ್ನೋ ಪದಗಳನ್ನು ತೀರಾ ಕನಿಷ್ಠ ಬಾರಿ ಅಂದರೆ ತಲಾ 6 ಬಾರಿ ಮಾತ್ರವೇ ಬಳಕೆ ಮಾಡಿದ್ದಾರೆ ಎಂದು ಹೇಳಿದೆ. ಡೆವಲಪ್‌ಮೆಂಟ್‌ ಎನ್ನುವ ಪದವನ್ನು ನಿರ್ಮಲಾ ಸೀತಾರಾಮನ್‌ 28 ಬಾರಿ ಬಳಕೆ ಮಾಡಿದ್ದಾರೆ. ಇದು 2ನೇ ಸ್ಥಾನದಲ್ಲಿದೆ.

ಬಜೆಟ್‌ನಲ್ಲಿ ನಿರ್ಮಲಾ ಬಳಕೆ ಮಾಡಿರುವ ಪದಗಳು: ನಿರ್ಮಲಾ ಸೀತಾರಾಮನ್‌ ತಮ್ಮ ಭಾಷಣದಲ್ಲಿ ಟ್ರೈಬಲ್‌, ಮಿಷನ್‌ ಹಾಗೂ ಗವರ್ನೆನ್ಸ್‌ ಎನ್ನುವ ಪದಗಳನ್ನು ತೀರಾ ಕನಿಷ್ಠ 6 ಬಾರಿ ಬಳಕೆ ಮಾಡಿದ್ದಾರೆ. ರಿಸರ್ಚ್‌, ಜಾಬ್‌ ಹಾಗೂ ಡೈಮಂಡ್ಸ್‌  ಎನ್ನುವ ಪದಗಳನ್ನು ತಲಾ 7 ಬಾರಿ ಬಳಕೆ ಮಾಡಿದ್ದಾರೆ. ಇನ್ನು ಯೂತ್‌, ಬಯೋ, ಲೋಕಲ್‌, ಸೆಕ್ಯುರಿಟಿ ಹಾಗೂ ಸ್ಟಾರ್ಟ್‌ಅಪ್‌ ಎನ್ನುವ ಪದಗಳನ್ನು ತಮ್ಮ ಭಾಷಣದಲ್ಲಿ 8 ಬಾರಿ ನಿರ್ಮಲಾ ಸೀತಾರಾಮನ್‌ ಬಳಕೆ ಮಾಡಿದ್ದಾರೆ. ಅಮೃತ್‌ ಕಾಲ್‌ , ನ್ಯೂ ರೆಜಿಮ್‌ ಹಾಗೂ ಚಿಲ್ಡ್ರನ್‌/ಲೈಬ್ರೆರಿ ಎನ್ನುವ ಪದಗಳನ್ನು ತಲಾ 9 ಬಾರಿ ಬಳಕೆ ಮಾಡಿದ್ದಾರೆ. ಅರ್ಬನ್‌ ಸಿಟೀಸ್‌ ಎನ್ನುವ ಪದವನ್ನು 10 ಬಾರಿ ಬಳಕೆ ಮಾಡಿದ್ದರೆ, ಸ್ಕಿಲ್‌ ಹಾಗೂ ಗ್ಲೋಬಲ್‌ ಎನ್ನುವ ಪದಗಳು ತಲಾ 11 ಬಾರಿ ಬಳಕೆ ಮಾಡಿದ್ದಾರಂತೆ.

Union Budget 2023 ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿನ ಅತೀ ದೊಡ್ಡ ಘೋಷಣೆ ಪಟ್ಟಿ!


ಇನ್ನು ವಾಟರ್‌/ಫಿಶರೀಸ್‌,  ವುಮೆನ್‌, ಬ್ಯುಸಿನೆಸ್‌ ಹಾಗೂ ಬಜೆಟ್‌  ಎನ್ನುವ ಪದಗಳನ್ನು 12 ಬಾರಿ ಬಳಕೆ ಮಾಡಿದ್ದಾರೆ.  ಎಂಎಸ್‌ಎಂಇ, ಮ್ಯಾನುಫ್ಯಾಕ್ಚರಿಂಗ್‌ ಹಾಗೂ ಟೆಕ್ನಾಲಜಿ ಪದಗಳನ್ನು ತಲಾ 13 ಬಾರಿ, ಫಾರ್ಮರ್‌/ರೈತ, ಎಕ್ಸ್‌ಪೆಂಡಿಚರ್‌, ಎನರ್ಜಿ ಹಾಗೂ ಫಿಸ್ಕಲ್‌  ಪದಗಳನ್ನು 14 ಬಾರಿ, ಮಿಲ್ಲೆಟ್‌/ಶ್ರೀಅನ್ನ, ರೆಗ್ಯುಲೇಷನ್‌, ಇನ್ವೆಸ್ಟ್‌ಮೆಂಟ್‌, ಫೈನಾನ್ಸ್‌, ಕೋಆಪರೇಟಿವ್‌ ಪದಗಳನ್ನು ಬಜೆಟ್‌ ಭಾಷಣದಲ್ಲಿ ತಲಾ 15 ಬಾರಿ ನಿರ್ಮಲಾ ಸೀತಾರಾಮನ್‌ ಬಳಸಿದ್ದಾರೆ.

Defence Budget 2023: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!

ಗ್ರೀನ್‌ ಎನ್ನುವ ಪದವನ್ನು 16 ಬಾರಿ ಬಳಸಿದ್ದರೆ, ಡಿಜಿಟಲ್‌/ಆನ್‌ಲೈನ್‌  ಹಾಗೂ ಕ್ರೆಡಿಟ್‌  ಎನ್ನುವ ಪದಗಳನ್ನು 17 ಬಾರಿ, 18 ಬಾರಿ ಬ್ಯಾಂಕ್‌/ಆರ್‌ಬಿಐ ಎನ್ನುವ ಪದ ಬಳಕೆ ಮಾಡಿದ್ದಾರೆ. ಕಸ್ಟಮ್‌ ಡ್ಯೂಟಿ ಎನ್ನುವ ಪದವನ್ನು 20 ಬಾರಿ ಬಳಸಿದ್ದರೆ, ಎಕಾನಮಿ ಎನ್ನುವ ಪದವನ್ನು 21 ಬಾರಿ, ಸ್ಕೀಮ್‌/ಯೋಜನೆ ಎನ್ನುವ ಪದವನ್ನು 22 ಬಾರಿ,  ಇನ್‌ಫ್ರಾಸ್ಟ್ರಕ್ಚರ್‌/ಹೌಸಿಂಗ್‌  ಪದವನ್ನು 24 ಬಾರಿ, ಅಗ್ರಿಕಲ್ಚರ್‌/ಕೃಷಿ/ಫಾರ್ಮಿಂಗ್‌ ಪದವನ್ನು 25 ಬಾರಿ, ಇನ್‌ಕಮ್‌ ಪದವನ್ನು 26 ಬಾರಿ, ಸ್ಟ್ರೇಟ್ಸ್‌/ರಾಜ್ಯಗಳು ಪದವನ್ನು 27 ಬಾರಿ ಹಾಗೂ ಡೆವಲಪ್‌ಮೆಂಟ್‌ ಎನ್ನುವ ಪದವನ್ನು 28 ಬಾರಿ ಬಳಕೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios