Asianet Suvarna News Asianet Suvarna News

ಕೇಂದ್ರ ಬಜೆಟ್ 2020: ಆದಾಯ ತೆರಿಗೆ ಸ್ತರದಲ್ಲಿ ಬದಲಾವಣೆ?

5 ಲಕ್ಷವರೆಗೆ ಆದಾಯ ತೆರಿಗೆ ವಿನಾಯ್ತಿ?| ಬಜೆಟ್‌ನಲ್ಲಿ ತೆರಿಗೆ ಸ್ತರದಲ್ಲಿ ಬದಲಾವಣೆ ಸಾಧ್ಯತೆ| 5 ಲಕ್ಷ ರು.ವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ| 5-7 ಲಕ್ಷಕ್ಕೆ ಶೇ.5, 7-10 ಲಕ್ಷ ರು.ಗೆ ಶೇ.10 ತೆರಿಗೆ

Budget 2020 FM Nirmala Sitharaman may propose 5 percent tax on income up to Rs 7 lakh
Author
Bangalore, First Published Jan 23, 2020, 8:34 AM IST

ನವದೆಹಲಿ[ಜ.23]: ಫೆಬ್ರವರಿ 1ರಂದು ಮಂಡನೆಯಾಗುವ ಕೇಂದ್ರ ಮುಂಗಡಪತ್ರದಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಪ್ರಸಕ್ತ 2.50 ಲಕ್ಷ ರು.ವರೆಗೆ ಇರುವ ಆದಾಯ ತೆರಿಗೆ ಪಾವತಿ ವಿನಾಯ್ತಿಯನ್ನು 5 ಲಕ್ಷ ರು.ಗೆ ಹೆಚ್ಚಿಸುವ ಸಾಧ್ಯತೆ ಇದೆ.

ಮದ್ಯಪ್ರಿಯರಿಗೆ ಶಾಕ್...ಒಂದು ತಲೆಗೆ ಒಂದೇ ಬಾಟಲ್ ಎಣ್ಣೆ!

ಪ್ರಸಕ್ತ ವಾರ್ಷಿಕ 2.5 ಲಕ್ಷ ರು.ವರೆಗೆ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ಇರುತ್ತದೆ. 2.50 ಲಕ್ಷ. ರು.ನಿಂದ 5 ಲಕ್ಷ ರು. ವರೆಗಿನ ಆದಾಯಕ್ಕೆ ಶೇ.5 ಮತ್ತು 5ರಿಂದ 10 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10ರಷ್ಟುಆದಾಯ ತೆರಿಗೆ ವಿಧಿಸಲಾಗುತ್ತದೆ.

ಬಜೆಟ್‌ನಲ್ಲಿ ಈ ಸ್ತರದಲ್ಲಿ ಕೆಲ ಬದಲಾವಣೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದರೆ 2.50 ಲಕ್ಷ ರು.ಬದಲು 5 ಲಕ್ಷ ರು.ವರೆಗಿನ ವಾರ್ಷಿಕ ಆದಾಯಕ್ಕೆ ಪೂರ್ಣ ವಿನಾಯ್ತಿ ನೀಡಲಾಗುವುದು. 5ರಿಂದ 7 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.5ರಷ್ಟುತೆರಿಗೆ ವಿಧಿಸಲಾಗುವುದು. ಇನ್ನು 7 ರಿಂದ 10 ಲಕ್ಷ ರು.ವರೆಗಿನ ಆದಾಯಕ್ಕೆ ಶೇ.10ರಷ್ಟುತೆರಿಗೆ ವಿಧಿಸಲಾಗುವುದು ಎನ್ನಲಾಗಿದೆ.

ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

ಉಳಿದಂತೆ 10 ಲಕ್ಷ ರು.ನಿಂದ 20 ಲಕ್ಷ ರು. ಆದಾಯ ಹೊಂದಿದವರಿಗೆ ಶೇ.20 ತೆರಿಗೆ, 20 ಲಕ್ಷ ರು.ನಿಂದ 10 ಕೋಟಿ ರು.ವರೆಗೆ ಶೇ.30 ತೆರಿಗೆ ಹಾಗೂ 10 ಕೋಟಿ ರು. ಆದಾಯ ಮೀರಿದವರಿಗೆ ಶೇ.35ರ ತೆರಿಗೆ ನಿಗದಿಪಡಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios