ಬೆಂಗಳೂರು(ಮಾ. 10 ) ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗ ನಿರ್ಮಾಣಕ್ಕಾಗಿ ಜಯದೇವ ಮೇಲ್ಸೇತುವೆಯನ್ನು ಮುಂದಿನ ಅಕ್ಟೋಬರ್ ನಲ್ಲಿ ತೆರವು ಮಾಡುವ ಸಾಧ್ಯತೆ ಇದೆ.

ಕೆಲ ಕಾರಣಗಳಿಂದ ಮೇಲ್ಸೇತುವೆ ತೆರವನ್ನು ಮುಂದಕ್ಕೆ ಹಾಕಿಕೊಂಡು ಬರಲಾಗುತ್ತಿತ್ತು. ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗ ಪೂರ್ಣ ಆಗಬೇಕು  ಎಂದಾಗ ಈ ಫ್ಲೈ ಓವರ್ ತೆರವು ಅನಿವಾರ್ಯ.

ಸಣ್ಣದಾಗಲಿವೆ ಸುರಂಗದೊಳಗಿನ ಮೆಟ್ರೋ ನಿಲ್ದಾಣಗಳು

ತೆರವು ಕಾರ್ಯ ಆರಂಭವಾದರೆ ಬಿಟಿಎಂ ಲೇಔಟ್, ಜಯನಗರ ಮತ್ತು ಬನ್ನೇರುಘಟ್ಟ ಭಾಗಗಳು ಪರಿಣಾಮ ಎದುರಿಸಬೇಕಾಘುತ್ತದೆ

ಬನ್ನೇರುಘಟ್ಟ ರಸ್ತೆಯಿಂದ ಸಿಲ್ಕ ಬೋರ್ಡ್ ಕಡೆ ತೆರಳುವ ಮೇಲ್ಸೇತುವೆಯನ್ನು ಮೊದಲು ತೆರವು ಮಾಡಲಾಗುತ್ತದೆ.   ಅಂದರೆ ಅಂಡರ್ ಪಾಸ್ ಗೆ ಸದ್ಯ ಯಾವುದೇ ತೊಂದರೆ ಇರುವುದಿಲ್ಲ. ನಿಗದಿಯಂತೆ ೧೦೧೭ರ ನವೆಂಬರ್ ನಲ್ಲಿಯೇ ಕೆಲಸ ಆರಂಭವಾಗಬೇಕಿತ್ತು.