ಕುಂಭ : ವಿಪರೀತ ಲಾಭದ ವರ್ಷ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Nov 2018, 4:03 PM IST
Deepavali 2018 yearly kannada horoscope for every zodiac sign Aquarius
Highlights

ದೃಢತೆ ಇರುವುದರಿಂದ ಮನೆಯಲ್ಲಿ ನೆಮ್ಮದಿ. ಲಾಭದಾಯಕ ವರ್ಷದ. ಉಳಿದಂತೆ ಹೇಗಿದೆ..?

ಕುಂಭ : ವಿಪರೀತ ಲಾಭದ ವರ್ಷ
 
ದೃಢತೆ ಇರುವುದರಿಂದ ಮನೆಯಲ್ಲಿ ನೆಮ್ಮದಿ. ಬಾಲ್ಯ ಸ್ನೇಹಿತರಿಂದ ಸಹಾಯ ಅಥವಾ ಸಮ್ಮಿಲನ ಮಾಡಲಿದ್ದಾರೆ. ಕೃಷಿಯಲ್ಲಿ ತೆಂಗು ವಿಪರೀತ ಲಾಭ ಕೊಡಲಿದೆ. 

ವಿದೇಶ ವಿನಿಮಯ ಅಥವಾ ಬಂಡವಾಳ ಹೂಡಿಕೆ ಸಮಾಧಾನ ಕೊಡಲಿದೆ. ತಂದೆ ತಾಯಂದಿರ ಆರೋಗ್ಯದಲ್ಲಿ ಜಾಗ್ರತೆ ವಹಿಸುವುದು ಮಕ್ಕಳ ಆದ್ಯ ಕರ್ತವ್ಯ. 

ಕೊಟ್ಟ ಹಣ ವಾಪಸ್ಸಾಗಲಿದೆ. ಹೂಡಿಕೆಯಲ್ಲಿ ಎಚ್ಚರವಿರಲಿ. ಆರೋಗ್ಯದ ಸುಧಾರಣೆಯಾಗಲಿದೆ. ಉನ್ನತ ವ್ಯಾಸಂಗ ಅಥವಾ ಬಹುದಿನದ ವಿದೇಶದಲ್ಲಿ ಕೆಲಸ ಮಾಡುವ ಕನಸು ಯುವಕರಿಗೆ ನನಸಾಗಲಿದೆ. 

ಹಿರಿಯರಿಗೆ ಕುಟುಂಬದ ವಿಚಾರದಲ್ಲಿ ಮನಸ್ಸಿಗೆ ಬೇಸರ. ಮಿತ್ರರೊಡನೆ ಹಣ ಹೂಡಿಕೆ ಉಚಿತವಲ್ಲ. ವೈದ್ಯ ವೃತ್ತಿಯಲ್ಲಿ ತೊಡಗಿರುವ ಜನರಿಗೆ ಅನುಕೂಲ. 

ಸರಕಾರಿ ನೌಕರಿ ಲಭ್ಯವಾಗುವ ಲಕ್ಷಣ. ಹೊಸದಾದ ಭೂ ವ್ಯವಹಾರವನ್ನು ಉತ್ತಮ. ನೀರಾವರಿ ಕ್ಷೇತ್ರದ ಅಧಿಕಾರಿಗಳು ಅಥವಾ ರೈತರಿಗೆ ಅನುಕೂಲಕರವಾಗಿದೆ. ಕಬ್ಬಿಣ ತೈಲೋದ್ಯಮದಂಥ ವ್ಯಾಪಾರಿಗಳಲ್ಲಿ ಲಾಭ. ಭಾನುವಾರ ಶುಕ್ರವಾರ ಹೊಸ ಉದ್ಯಮ ಆರಂಭಕ್ಕೆ ಉಚಿತವಲ್ಲ.


ಶುಭಸಂಖ್ಯೆ: 2 4 8

ವಿದ್ವಾನ್ ಕಮಲಾಕರ ಭಟ್

loader