Delivery ಆದ್ಮೇಲೆ ಅಮ್ಮಂದಿರನ್ನು ಕಾಡ್ತಾ ಇದ್ಯಾ ಈ ಪ್ರಾಬ್ಲಂ? ಏನು ಮಾಡಬಹುದು?

By Suvarna News  |  First Published Jun 10, 2023, 5:48 PM IST

ಒಂಭತ್ತು ತಿಂಗಳು ಮಗುವನ್ನು ಹೊತ್ತು ನಂತ್ರ ಹೆತ್ತಾಗ ತಾಯಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಆದ್ರೆ ಮಕ್ಕಳ ಹೊಸ ಜವಾಬ್ದಾರಿ ಮಧ್ಯೆ ಆಕೆಯನ್ನು ಕಾಡುವ ಕೆಲ ಸಮಸ್ಯೆ ಅಪಾಯಕಾರಿಯಾಗಿರುತ್ತದೆ. ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. 
 


ಗರ್ಭಧರಿಸಿದಾಗಿನಿಂದ ಹೆರಿಗೆಯಾಗುವವರೆಗೂ ಮಹಿಳೆ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕ. ಏಕೆಂದರೆ ತಾಯಿಯ ಆರೋಗ್ಯದಲ್ಲಿ ಮಗುವಿನ ಆರೋಗ್ಯ ಅಡಗಿರುತ್ತದೆ. ಒಮ್ಮೆ ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಅದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹಾಗಾಗಿ ಗರ್ಭಿಣಿ ಹಾಗೂ ಬಾಣಂತಿ ಇಬ್ಬರೂ ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು.

ಹೆರಿಗೆ (Child Birth) ಯ ನಂತರ ಮಹಿಳೆಯರಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕ (Mental) ವಾಗಿ ಅನೇಕ ಬದಲಾವಣೆಗಳಾಗುತ್ತವೆ. ಹೆರಿಗೆಯ ನಂತರ ಕೆಲವು ಮಹಿಳೆಯರು ಬಾಣಂತಿ ಸನ್ನಿ, ಮೂಲವ್ಯಾಧಿ, ಸ್ನಾಯುಗಳ ನೋವು ಮುಂತಾದ ತೊಂದರೆಗಳಿಗೆ ಒಳಗಾಗುತ್ತಾರೆ. ಹೀಗೆ ಹೆರಿಗೆಯಾದ ಮಹಿಳೆಯರು ಎದುರಿಸುವ ಸಮಸ್ಯೆಗಳಲ್ಲಿ ಪೋಸ್ಟ್ ಪಾರ್ಟಮ್ ಡಿಪ್ರೆಶನ್ (Depression) ಕೂಡ ಒಂದು. ಇದನ್ನು ಪಿಪಿಡಿ ಎಂದು ಕೂಡ ಹೇಳಲಾಗುತ್ತೆ. ಇತ್ತೀಚೆಗೆ ಹಲವು ಮಹಿಳೆಯರು ಈ ಪಿಪಿಡಿ ಸಮಸ್ಯೆಯನ್ನು ಎದುರಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಕೂಡ ತಮ್ಮ ಜಾಲತಾಣದಲ್ಲಿ ತಮ್ಮ ಹೆರಿಗೆಯ ನಂತರದ ದಿನಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಹೆರಿಗೆಯ ನಂತರ ನಮಗೆ ಮಾನಸಿಕ ಅಸ್ಥಿರತೆ, ಒಂಟಿತನದ ಮತ್ತು ಹೆದರಿಕೆಯ ಅನುಭವ ಆಗುತ್ತಿತ್ತು ಎಂದು ಅವರು ಪಿಪಿಡಿ ಕುರಿತು ಹೇಳಿಕೊಂಡಿದ್ದಾರೆ.

Latest Videos

undefined

Women Health: ಬಾಣಂತಿಯರಿಗೆ ಹೇರುವ ಈ ನಿಯಮದಲ್ಲಿ ಎಷ್ಟು ಸತ್ಯವಿದೆ?

ಪ್ರತಿಶತ 22ರಷ್ಟು ಮಂದಿಗೆ ಪೋಸ್ಟಪಾರ್ಟಮ್ ಡಿಪ್ರೆಶನ್ : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಸುಮಾರು 22ರಷ್ಟು ಮಹಿಳೆಯರು ಪಿಪಿಡಿ ಸಮಸ್ಯೆಯನ್ನು ಅನುಭವಿಸಿದ್ದಾರೆ. ತಾಯಿಯಾಗುವ ಅನುಭವ ಹೆಣ್ಣಿಗೆ ಮುಖ್ಯವಾಗಿದ್ದರೂ ಅದರ ನಂತರ ದುಃಖ ಮತ್ತು ಆತಂಕವನ್ನು ಅನುಭವಿಸುವುದು ಅನೇಕ ಮಹಿಳೆಯರಿಗೆ ಸಮಸ್ಯೆಯಾಗಿದೆ.

ಏನಿದು ಪೋಸ್ಟಪಾರ್ಟಮ್ ಡಿಪ್ರೆಶನ್? (Postpartum Depression) : ಪೋಸ್ಟಪಾರ್ಟಮ್ ಡಿಪ್ರೆಶನ್ ಗರ್ಭಧಾರಣೆಯಾಗಿ ಒಂದು ವರ್ಷದ ನಂತರ ಆರಂಭವಾಗುತ್ತದೆ. ಇದು ಮಾನಸಿಕ ಸಮಸ್ಯೆಯಾಗಿದ್ದು, ವಿಚಾರ, ಭಾವನೆ ಮತ್ತು ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಇದು ಅಪಾಯಕಾರಿ ಖಾಯಿಲೆ ಎನ್ನಲಾಗುತ್ತದೆ.

ಹೆರಿಗೆಯ ನಂತರ ಕೂದಲು ಉದುರೋದು ನಿಂತಿಲ್ವಾ? ಈ ಟಿಪ್ಸ್ ಟ್ರೈ ಮಾಡಿ

ಪೋಸ್ಟಪಾರ್ಟಮ್ ಡಿಪ್ರೆಶನ್ ಉಂಟಾಗಲು ಕಾರಣವೇನು? : ಗರ್ಭಧರಿಸಿದಾಗಿನಿಂದ ಹೆರಿಗೆಯಾಗುವ ತನಕ ಪ್ರತಿಯೊಂದು ಹಂತದಲ್ಲೂ ಹೆಣ್ಣು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪೋಸ್ಟಪಾರ್ಟಮ್ ಡಿಪ್ರೆಶನ್ ಗೆ ನಿಖರವಾದ ಕಾರಣವನ್ನು ಹೇಳಲಾಗುವುದಿಲ್ಲ. ಪ್ರೆಗ್ನೆನ್ಸಿಯ ನಂತರ ಮಹಿಳೆಯರಲ್ಲಿ ಅನೇಕ ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆ ನಡೆಯುತ್ತವೆ. ಗರ್ಭವತಿ ಮಹಿಳೆಯರಲ್ಲಿ ಎಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಹಾರ್ಮೋನ್ ಗಳು ಏರಿಕೆಯಾಗುತ್ತೆ ಹಾಗೂ ಥೈರಾಯ್ಡ್ ಕಡಿಮೆಯಾಗುತ್ತದೆ.

ಪೋಸ್ಟಪಾರ್ಟಮ್ ಡಿಪ್ರೆಶನ್ ಲಕ್ಷಣಗಳು : ಪೋಸ್ಟಪಾರ್ಟಮ್ ಡಿಪ್ರೆಶನ್ ಒಬ್ಬೊಬ್ಬರಲ್ಲಿ ಒಂದು ರೀತಿಯ ಲಕ್ಷಣಗಳನ್ನು ತೋರಿಸುತ್ತೆ. ಸಾಮಾನ್ಯವಾಗಿ ಪಿಪಿಡಿಗೆ ಒಳಗಾದ ಮಹಿಳೆಯರಿಗೆ ಹಸಿವಿನ ಕೊರತೆ, ದಿನವಿಡೀ ಉದಾಸರಾಗಿರುವುದು, ನಿರಾಸೆ, ಚಿಂತೆ ಹಾಗೂ ಕಾರಣವಿಲ್ಲದೇ ಅಳು ಮುಂದಾದ ತೊಂದರೆಯನ್ನು ಅನುಭವಿಸುತ್ತಾರೆ. ಕೆಲವರಿಗೆ ಪೂರ್ತಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಸುಸ್ತು, ನಿಶ್ಶಕ್ತಿ, ಕೆಲಸದಲ್ಲಿ ನಿರಾಸಕ್ತಿ, ಕಿರಿಕಿರಿ ಮತ್ತು ಕೋಪದ ಲಕ್ಷಣಗಳು ಕಾಣಿಸಿಕೊಳ್ಳುತ್ತೆ.

ಪೋಸ್ಟಪಾರ್ಟಮ್ ಡಿಪ್ರೆಶನ್ ಗೆ ಚಿಕಿತ್ಸೆ : ಮಹಿಳೆಯರಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಸಾರವಾಗಿ ವೈದ್ಯರು ಪಿಪಿಡಿ ಚಿಕಿತ್ಸೆಯನ್ನು ನಡೆಸುತ್ತಾರೆ. ಕೆಲವು ಮಹಿಳೆಯರಿಗೆ ಔಷಧಿ, ಕೆಲವು ಮಹಿಳೆಯರಿಗೆ ಸೈಕಾಲಾಜಿಕಲ್ ಥೆರಪಿ ಮುಂತಾದ ಸಲಹೆಗಳನ್ನು ವೈದ್ಯರು ನೀಡುತ್ತಾರೆ.

ಡಿಲಿವರಿ ನಂತರ ಮಹಿಳೆಯರು ಏನು ಮಾಡ್ಬೇಕು? : ಹೆರಿಗೆಯ ನಂತರ ಮಹಿಳೆಯರ ಜೀವನದಲ್ಲಿ ಸ್ವಾಭಾವಿಕವಾಗಿಯೇ ಬದಲಾವಣೆಗಳು ನಡೆಯುತ್ತವೆ. ಹಾಗಾಗಿ ಮಹಿಳೆಯರು ದಿನದ ಕೆಲವು ಗಂಟೆಗಳನ್ನು ತಮಗಾಗಿಯೇ ಮೀಸಲಿಡಬೇಕು. ಅಂತಹ ಸಮಯದಲ್ಲಿ ಯೋಗ, ವ್ಯಾಯಾಮ, ವಿಶ್ರಾಂತಿ ಮುಂತಾದವನ್ನು ಮಾಡಬೇಕು. ಆರೋಗ್ಯಕರ ಡಯಟ್ ಅನ್ನು ಅನುಸರಿಸಬೇಕು. ನಿಮ್ಮ ಜೀವನದಲ್ಲಿ ಆದ ಬದಲಾವಣೆಯನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ನಿಮ್ಮ ತೊಂದರೆ ಹಾಗೂ ಕಷ್ಟಗಳನ್ನು ಆತ್ಮೀಯರ ಬಳಿ ಹಂಚಿಕೊಳ್ಳಬೇಕು. ಹಾಗೆ ಮಾಡಿದಾಗ ನಿಮ್ಮ ಮನಸ್ಸು ಕೂಡ ನಿರಾಳವಾಗುತ್ತದೆ. ಅದರಿಂದ ನಿಮ್ಮ ಮನಸ್ಸಿನ ಆರೋಗ್ಯ ಹಾಗೂ ಮಗುವಿನ ಆರೋಗ್ಯ ಕೂಡ ಚೆನ್ನಾಗಿರುತ್ತೆ.

click me!