ಮೊದ್ಲೇ ಹೆಣ್ಣು ಸಿಕ್ತಿಲ್ಲ, ಪ್ಲೀಸ್ ಈ ವಿಡಿಯೋ ಡಿಲೀಟ್‌ ಮಾಡಣ್ಣ... ಕಣ್ಣೀರು ಹಾಕ್ತಿರೋ ಯುವಕರು! ಅಂಥದ್ದೇನಿದೆ ಇದ್ರಲ್ಲಿ?

By Suchethana D  |  First Published Nov 14, 2024, 2:27 PM IST

ಮದುವೆಯಾದ ಬಹುತೇಕ ಮಹಿಳೆಯರ ಮನದಾಳವನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ ವಿಕ್ಕಿಪಿಡಿಯಾ ಖ್ಯಾತಿಯ ವಿಕಾಸ್‌. ಇದನ್ನು ನೋಡಿ ಯುವಕರು ಗೋಳೋ ಅಂತಿರೋದ್ಯಾಕೆ?
 


ಮದುವೆಯಾಗದವರಿಗೆ ಮದ್ವೆಯಾಗಿಲ್ಲ ಅನ್ನೋ ಒಂದೇ ಚಿಂತೆ, ಮದ್ವೆಯಾದವರಿಗೆ ನೂರೆಂಟು ಚಿಂತೆ ಎನ್ನುವ ಗಾದೆಮಾತು ಪ್ರಚಲಿತದಲ್ಲಿದೆ. ಈಗಿನ ಹುಡುಗಿಯರ ಡಿಮಾಂಡ್‌ ಪೂರೈಸಲು ಆಗದೇ ಎಷ್ಟೋ ಯುವಕರು ಮದುವೆಯಾಗದೇ ಕುಳಿತಿದಿದ್ದಾರೆ. ಎಷ್ಟು ಸಂಬಳ ತಂದರೂ ಸಾಲದು ಎನ್ನುವ ಸ್ಥಿತಿ ಯುವಕರಲ್ಲಿ ನಿರ್ಮಾಣವಾಗಿದೆ. ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಎನ್ನುವ ಕೊರಗು ಅವರದ್ದು. ಅಷ್ಟಕ್ಕೂ ಇಂದಿನ ಹೆಚ್ಚು ಯುವತಿಯರು ಮದುವೆಯಾಗದೇ ಇರೋದಕ್ಕೆ ಹುಡುಗನ ಸಂಬಳ, ಅಂತಸ್ತು ಅಷ್ಟೇ ಕಾರಣ ಎನ್ನಲೂ ಆಗದು. ಏಕೆಂದರೆ, ಸ್ವತಂತ್ರವಾಗಿ ಇರಲು ಬಯಸುತ್ತಿರುವ ಹಲವು ಹೆಣ್ಣುಮಕ್ಕಳಿಗೆ ಮದುವೆ ಎನ್ನುವುದು ಬಂಧನ ಎಂದು ಎನ್ನಿಸುತ್ತಿದೆ. ಮದುವೆಯಾದವರನ್ನು ನೋಡಿ ತಮಗೆ ಇಂಥ ಕಷ್ಟ ಬೇಡವೇ ಬೇಡ ಎನ್ನುತ್ತಿದ್ದಾರೆ ಹಲವರು.

ಪರಿಸ್ಥಿತಿ ಹೀಗಿರುವಾಗ ವಿಕ್ಕಿಪಿಡಿಯಾ ಖ್ಯಾತಿಯ ವಿಕ್ಕಿ ಅವರು ಹೆಣ್ಣುಮಕ್ಕಳ ಅದರಲ್ಲಿಯೂ ಮದುವೆಯಾದ ಹೆಣ್ಣುಮಕ್ಕಳ ಗೋಳು ಹೇಳಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದರೆ, ಮದುವೆಯಾಗುವ ಬಗ್ಗೆ ಅಲ್ಪ ಸ್ವಲ್ಪ ಮನಸ್ಸು ಮಾಡಿದ ಹೆಣ್ಣುಮಕ್ಕಳೂ ಖಂಡಿತ ಮದುವೆಯಾಗುವುದಿಲ್ಲ! ಸಾಲದು ಎಂಬುದಕ್ಕೆ ಈ ವಿಡಿಯೋಗೆ ಮದುವೆಯಾದವರೆಲ್ಲರೂ ಇದು 100% ಸತ್ಯ ಎನ್ನುತ್ತಿದ್ದಾರೆ ಬೇರೆ. ನಮ್ಮ ಮನದ ಮಾತನ್ನು ನೀವೇ ಹೇಳಿದ್ದೀರಿ, ಯುವಕ ಆದ್ರೂ, ವಿವಾಹಿತೆಯರ ಕಷ್ಟ ಅದೆಷ್ಟು ಚೆನ್ನಾಗಿ ಅರಿತುಕೊಂಡಿದ್ದೀರಿ ಎಂದೆಲ್ಲಾ ಕಮೆಂಟ್‌ ಮಾಡುತ್ತಿದ್ದು ಇದು ನಿಜಕ್ಕೂ ಯುವಕರು ಮತ್ತು ಯುವತಿಯರನ್ನು ದಂಗು ಬಡಿಸುತ್ತಿದೆ.

Tap to resize

Latest Videos

undefined

ಚಿನ್ನದ ವಿಷ್ಯದಲ್ಲಿ ಶಿವಣ್ಣ-ಅಪ್ಪು ಸೇರಿ ಜನರನ್ನು ಕನ್‌ಫ್ಯೂಸ್‌ ಮಾಡ್ತಿದ್ದಾರಾ? ಶಾಕಿಂಗ್‌ ಪ್ರಶ್ನೆಗೆ ನಟ ಹೇಳಿದ್ದೇನು?

ಅಷ್ಟಕ್ಕೂ ಈ ವಿಡಿಯೋದಲ್ಲಿ ವಿಕ್ಕಿ, ಯಾಕಾದ್ರೂ ಆಗೋದ್ನೋ ಮದ್ವೆ. ಡ್ಯಾಡಿಯ ರಾಜಕುಮಾರಿ ಆದೋಳು ಸರ್ವೆಂಟ್‌ ಆಗೋದೆ ಎಂದು ಹೇಳಿದ್ದಾರೆ. ಜಿಂಗಲ್‌ ಬೆಲ್‌ ಜಿಂಗಲ್‌ ಬೆಲ್‌ ಹಾಡಿನ ದಾಟಿಯಲ್ಲಿ ಈ ವಿಡಿಯೋ ಕಂಪೋಸ್‌ ಮಾಡಲಾಗಿದೆ. ಮಕ್ಕಳನ್ನು ನೋಡ್ಕೋಬೇಕು, ಎಲ್ಲಾ ಕೆಲ್ಸ ಮಾಡ್ಬೇಕು. ಎಷ್ಟು ಸುಸ್ತಾದ್ರೂ ಮೂರು ಹೊತ್ತು ಅಡುಗೆ ಮಾಡ್ಬೇಕು. ಗುರ್‌ ಅನ್ನೋ ಗಂಡ ಇದ್ರೂ, ಕಿರಿಕ್‌ ಅತ್ತೆ ಇದ್ರೂ ಎಲ್ಲಾ ಸಹಿಸ್ಕೋತೀನಿ. ಯಾಕಾದ್ರೂ ಮದ್ವೆ ಅದ್ನೋ ಅಂತ ಹಾಡಿದ್ದಾರೆ ವಿಕ್ಕಿ. ಮಕ್ಕಳ ಮುಖವನ್ನು ನೋಡಿ ಎಲ್ಲಾ ಸಹಿಸ್ಕೋಳೋದು ಅನಿವಾರ್ಯ ಎನ್ನುವ ಅರ್ಥದಲ್ಲಿ ಹಲವು ಮಹಿಳೆಯರ ಮನದಾಳದ ಮಾತನ್ನು ತೆರೆದಿಟ್ಟಿದ್ದಾರೆ. 

ಅಮ್ಮನ ಮನೆ ತವರಂತೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗಂತೆ, ನನ್ನ ಲೈಫ್‌ ಲಾಂಗ್‌ ಅಡ್ರೆಸ್‌ ಮಾತ್ರ ಕೇರ್‌ ಆಫ್‌ ಅವ್ರು- ಇವ್ರಂತೆ... ಹುಡುಗಿಗೆ ಕೆಲ್ಸ ಇರಬೇಕಂತೆ. ಡಬಲ್‌ ಇನ್‌ಕಮ್ ಬೇಕಂತೆ. ಆದ್ರೆ ಸ್ಯಾಲರಿ ಮಾತ್ರ ಗಂಡನಿಗಿಂತ ಕಡಿಮೆ ಇರ್ಬೇಕಂತೆ ಎಂದು ಈ ಹಾಡಿನಲ್ಲಿ ವಿಕ್ಕಿ ಹೇಳಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ. ಮಹಿಳೆಯರು ಇದು ನಿಜ ನಿಜ ಅಂತಿದ್ದರೆ, ಅವಿವಾಹಿತರು ಮೊದ್ಲೇ ಹೆಣ್ಣು ಸಿಕ್ತಿಲ್ಲ, ಈ ವಿಡಿಯೋ ನೋಡಿದ್ರೆ ಯಾರೂ ಮದ್ವೆನೇ ಆಗಲು ಮುಂದೆ ಬರಲ್ಲ, ಪ್ಲೀಸ್‌ ವಿಡಿಯೋ ಡಿಲೀಟ್‌ ಮಾಡಣ್ಣ ಎಂದು ದುಂಬಾಲು ಬಿದ್ದಿದ್ದಾರೆ. 

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

click me!