
ಪಾಕಿಸ್ತಾನ (Pakistan) ದಲ್ಲಿ ಹುಡುಗಿಯರಿಗೆ ಸ್ವಾತಂತ್ರ್ಯವಿಲ್ಲ, ಬುರ್ಕಾ ಹಾಕಿಕೊಂಡೇ ಓಡಾಡ್ಬೇಕು, ಅನೇಕ ನಿಯಮಗಳನ್ನು ಪಾಲನೆ ಮಾಡ್ಬೇಕು ಎಂದು ಜನರು ನಂಬ್ತಾರೆ. ಆದ್ರೆ ಪಾಕ್ ನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯವಿರುವ ಜಾಗವೊಂದಿದೆ. ಅಲ್ಲಿನ ಮಹಿಳೆಯರು ಸ್ವಚ್ಛಂದ ಹಕ್ಕಿಗಳು. ತಮಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳುವ, ಇನ್ನೊಬ್ಬ ಪುರುಷನ ಜೊತೆ ಓಡಿಹೋಗುವ, ಬುರ್ಕಾ (burqa) ಧರಿಸದೆ ಸುತ್ತಾಡುವ ಎಲ್ಲ ಅಧಿಕಾರ ಮಹಿಳೆಯರಿಗಿದೆ.
ಇಸ್ಲಾಮಾಬಾದ್ (Islamabad)ನಿಂದ 400 ಕಿಲೋಮೀಟರ್ ದೂರದಲ್ಲಿರುವ ಚಿತ್ರಾಲ್ ಜಿಲ್ಲೆಯಲ್ಲಿರುವ ಕಲಾಶ್ ಕಣಿವೆ (Kalash Valley)ಯಲ್ಲಿ ಮಹಿಳೆಯರು ಈ ಎಲ್ಲ ಅಧಿಕಾರ ಹೊಂದಿದ್ದಾರೆ. ಅವರು ತಮ್ಮ ಪ್ರೇಮಿಯನ್ನು ತಾವೇ ಆಯ್ಕೆ ಮಾಡಿಕೊಳ್ತಾರೆ. ವಿಚ್ಛೇದನ ನೀಡುವ ನಿರ್ಧಾರದಿಂದ ಹಿಡಿದು, ಬೇರೆ ಪುರುಷನೊಂದಿಗೆ ಓಡಿಹೋಗುವ ಆಯ್ಕೆ ಅವರಿಗಿದೆ. ಮಹಿಳೆ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಅವರ ಕುಟುಂಬ ಮಾತ್ರವಲ್ಲ ಇಡೀ ಊರಿಗೆ ಊರೇ ಬೆಂಬಲ ನೀಡುತ್ತದೆ.
ತುಂಬಿದ ಸಭಾಂಗಣದಲ್ಲಿ ಮದುವೆ ಕನಸು, ಬಂದ ಗೆಸ್ಟ್ ನೋಡಿ ದಂಪತಿ ದಂಗು!
ವಿಶ್ವದ ಅತ್ಯಂತ ಸುಂದರ ಮಹಿಳೆಯರು ಇವರು : ಕಲಾಶ್ ಜನರನ್ನು ಕಲಶ ಅಥವಾ ಕಾಫಿರ್ ಎಂದೂ ಕರೆಯುತ್ತಾರೆ. ಕಲಾಶ್ ಜನರು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಅವರನ್ನು ಗುರುತಿಸಲಾಗುತ್ತದೆ. ಪಾಕಿಸ್ತಾನದಲ್ಲಿ ಈ ಜನಾಂಗದ ಬಗ್ಗೆ ಸಂಶೋಧನೆ ನಡೆದಿದೆ. ಅವರು ಎಲ್ಲಿಂದ ಬಂದರು, ಅವರ ಮೂಲ ಯಾವುದು ಎಂಬುದನ್ನೆಲ್ಲ ಪತ್ತೆ ಮಾಡಲಾಗಿದೆ.
ಕಲಾಶ್ ಜನರನ್ನು ಅಲೆಕ್ಸಾಂಡರ್ ದಿ ಗ್ರೇಟ್ ವಂಶಸ್ಥರು ಎಂದು ಹೇಳಲಾಗಿದೆ. ಅವರ ಸೌಂದರ್ಯ, ಮೈಬಣ್ಣ, ಕಣ್ಣುಗಳ ಆಧಾರದ ಮೇಲೆ ಅವರ ಮೂಲವನ್ನು ಪತ್ತೆ ಮಾಡಲಾಗಿದೆ. ಕಲಾಶ್ ಜನರು, ಶಲಾಕ್ ಷಾ ಅವರನ್ನು ತಮ್ಮ ಪೂರ್ವಜ ಎಂದು ನಂಬುತ್ತಾರೆ. ಅಲೆಕ್ಸಾಂಡರ್‌ನ ಸೈನ್ಯದಿಂದ ಹಿಂದೆ ಉಳಿದ ಕಲಾಶ್ ಜನರು ಪಾಕಿಸ್ತಾನದಲ್ಲಿ ಉಳಿದರು ಎನ್ನಲಾಗುತ್ತದೆ.
ಕಲಾಶ್ ಜನರು ಡಿಎನ್ ಎ ಪರೀಕ್ಷೆ ಕೂಡ ನಡೆದಿದೆ. ಅವರು ಪಶ್ಚಿಮ ಯುರೇಷಿಯಾಕ್ಕೆ ಸೇರಿದವರು ಎಂದು ಸಂಶೋಧನೆ ಹೇಳುತ್ತದೆ. ಕಲಾಶ್ ಜನಸಂಖ್ಯೆಯ ಹೆಚ್ಚಿನ ಹ್ಯಾಪ್ಲೋಗ್ರೂಪ್ಗಳು ಕ್ಯಾನನ್ ಅಥವಾ ಇಂದಿನ ಇಸ್ರೇಲ್-ಪ್ಯಾಲೆಸ್ಟೈನ್, ಲೆಬನಾನ್ ಮತ್ತು ಸಿರಿಯಾ ಪ್ರದೇಶವನ್ನು ಸೂಚಿಸುತ್ತವೆ. ಸಂಶೋಧಕರು ನಡೆಸಿದ ಹಲವಾರು ಇತ್ತೀಚಿನ ಅಧ್ಯಯನಗಳು ಕಲಾಶ್ ಜನರು ಪಶ್ಚಿಮ ಯುರೇಷಿಯಾದಿಂದ ಬಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.
ಪಾಕಿಸ್ತಾನದ ಉತ್ತರ ಭಾಗದಲ್ಲಿ ಮಹಿಳೆಯರಿಗೆ ಕಠಿಣ ನಿಯಮವಿದೆ. ಆದ್ರೆ ಕಲಾಶ್ ಮಹಿಳೆಯರಿಗೆ ಮಾತ್ರ ಸಂಪೂರ್ಣ ಅಧಿಕಾರವಿದೆ. ಅವರು ಪುರುಷರ ಜೊತೆ ಒಂದಾಗಿ ಜೀವನ ನಡೆಸುತ್ತಾರೆ. ಅವರು ಪತಿಯನ್ನು ಬಿಟ್ಟು ಇತರ ಪುರುಷರ ಜೊತೆ ಮಾತನಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಕಲಾಶ್ ಮಹಿಳೆಯರು ತಮಗಿಷ್ಟವಿಲ್ಲ ಎಂದಾಗ ಗಂಡನನ್ನು ಬಿಡಬಹುದು. ಪರಪುರುಷ ಇಷ್ಟವಾದ್ರೆ ಆತನ ಜೊತೆ ಓಡಿ ಹೋಗಬಹುದು. ಇದನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಆದ್ರೆ ಆರ್ಥಿಕ ನಿಯಮ ಸ್ವಲ್ಪ ಭಿನ್ನವಾಗಿದೆ.
ನೀತಾ ಅಂಬಾನಿ ಬಳಿ ಇರುವ ಲಕ್ಸುರಿ ವಾಚ್‌ಗಳು ಹಾಗೂ ಅವುಗಳ ದುಬಾರಿ ದರ
ಮಹಿಳೆ ಮೊದಲ ಪತಿಯನ್ನು ಬಿಟ್ಟು ಎರಡನೇ ಮದುವೆಗೆ ಮುಂದಾದ್ರೆ, ಎರಡನೇ ಪತಿ, ಮೊದಲ ಪತಿಗೆ ಮದುವೆ ಸಮಯದಲ್ಲಿ ನೀಡಿದ್ದ ಹಣದ ದುಪ್ಪಟ್ಟು ಹಣ ನೀಡಬೇಕು. ಮೊದಲ ಪತಿ, ಪತ್ನಿ ಹಾಗೂ ಹಣ ಎರಡನ್ನೂ ಕಳೆದುಕೊಳ್ಳಬಾರದು ಎಂಬುದು ಇದರ ಉದ್ದೇಶ. ಒಂದ್ವೇಳೆ ಮಹಿಳೆ ಮೊದಲ ಪತಿಯನ್ನು ಬಿಟ್ಟಿದ್ದು, ಇನ್ನೊಂದು ಮದುವೆಯಾಗದಿರಲು ನಿರ್ಧರಿಸಿದ್ದಾಳೆ ಎಂದಾದ್ರೆ ಮಹಿಳೆ ತಂದೆ ಹಣವನ್ನು ನೀಡ್ಬೇಕಾಗುತ್ತದೆ.
ಪಿರಿಯಡ್ಸ್ ವೇಳೆ ಕಟ್ಟುನಿಟ್ಟಿನ ನಿಯಮ : ಬೇರೆಲ್ಲ ವಿಷ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಹೊಂದಿರುವ ಮಹಿಳೆಯರು ಪಿರಿಯಡ್ಸ್ ಆದಾಗ ಮಾತ್ರ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡ್ಬೇಕು. ಆ ಸಮಯದಲ್ಲಿ ಅವರು ಊರಿನಿಂದ ಹೊರಗಿರುವ ಜಾಗದಲ್ಲಿ ವಾಸ ಮಾಡ್ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.