Covid 19: ನಿರ್ಲಕ್ಷ್ಯ ಮಾಡಿದ್ರೆ ದಿನಕ್ಕೆ 1 ಲಕ್ಷ ಕೇಸ್ ದಾಖಲಾಗುವ ಸಾಧ್ಯತೆ: ಡಾ. ವಿಶಾಲ್ ರಾವ್

Jan 18, 2022, 3:00 PM IST

ಬೆಂಗಳೂರು (ಜ. 18): ಕೊರೊನಾ (CoronaVirus) ನಿರ್ಲಕ್ಷ್ಯ ಮಾಡಿದ್ರೆ ದಿನಕ್ಕೆ 1 ಲಕ್ಷ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಸೋಂಕಿತರು ಹೆಚ್ಚಾದರೆ ಆರೋಗ್ಯ ಇಲಾಖೆ ಮೇಲೆ ಒತ್ತಡ ಬೀಳಲಿದೆ ಎಂದು ಕೊರೊನಾ ವಿಜ್ಞಾನಿ ಡಾ. ವಿಶಾಲ್ ರಾವ್ ಹೇಳಿದ್ದಾರೆ. 

Covid 19: ಇಂದು ಡಿಸಿಗಳ ಜೊತೆ ಸಿಎಂ ಸಭೆ, ಸೋಂಕು ನಿಯಂತ್ರಣಕ್ಕೆ ಫುಲ್ ಅಲರ್ಟ್

 ಕೆಲವು ಜಿಲ್ಲೆಗಳಲ್ಲಿ ಸೋಕು ಇಪ್ಪತ್ತು ಮೂವತ್ತು ಪಟ್ಟು ವೇಗವಾಗಿ ಹಬ್ಬುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಕಳೆದ ಒಂದು ವಾರದಲ್ಲಿ 15 ಜಿಲ್ಲೆಯಲ್ಲಿ ಹತ್ತು ಪಟ್ಟಿಗಿಂತ ಹೆಚ್ಚು ಸೋಂಕಿನ ಪ್ರಕರಣ ದಾಖಲಾಗಿವೆ.

ಜನವರಿ 8 ರಿಂದ ಜ. 15ರ ಮಧ್ಯೆ ರಾಜ್ಯದಲ್ಲಿ 1.45 ಲಕ್ಷ ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬೆಂಗಳೂರು ನಗರದಿಂದಲೇ ಒಂದು ಲಕ್ಷ ಪ್ರಕರಣ ಪತ್ತೆಯಾಗಿವೆ. ಆದರೆ ಬೆಂಗಳೂರು ನಗರದಲ್ಲಿ ಹಿಂದಿನ ವಾರಕ್ಕಿಂತ ಕೇವಲ ಮೂರ್ನಾಲ್ಕು ಪಟ್ಟು ಪ್ರಕರಣ ಏರಿಕೆ ಕಂಡು ಬಂದಿದೆ.