ಕರ್ನಾಟಕ ಲೋಕಸಭಾ ಚುನಾವಣೆ ದಿನವೇ ದೇಶಾದ್ಯಂತ X ಸೇವೆ ಡೌನ್, ಬಳಕೆದಾರರ ಆಕ್ರೋಶ!

By Suvarna News  |  First Published Apr 26, 2024, 5:25 PM IST

ದೇಶದಲ್ಲಿಂದು ಲೋಕಸಭಾ ಚುನಾವಣೆಯ 2ನೇ ಹಂತದ ಮತಾದನ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ನಡೆಯುತ್ತಿದೆ. ಇದರ ನಡುವೆ ಭಾರತದಲ್ಲಿ ಎಕ್ಸ್(X) ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಬಳಕೆದಾರರು ಪರದಾಡುವಂತಾಗಿದೆ.
 


ನವದೆಹಲಿ(ಏ.26) ಭಾರತದಲ್ಲಿ ಹಲವು X (ಟ್ವಿಟರ್) ಬಳಕೆದಾರರು ಪರದಾಡುವಂತಾಗಿದೆ. ದೇಶಾದ್ಯಂತ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಸೇವೆ ಡೌನ್ ಆಗಿರುವುದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಹಲವು ಬಳಕೆದಾರರು ಎಕ್ಸ್ ಸೇವೆ ಡೌನ್ ಆಗಿರುವ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ಡೌನ್‌ಡಿಟೆಕ್ಟರ್ ಈ ಕುರಿತು ವರದಿ ಮಾಡಿದೆ.  

ಡೌನ್‌ಡಿಟೆಕ್ಟರ್ ವರದಿ ಪ್ರಕಾರ, ಎಕ್ಸ್ ವೆಬ್‌ಸೈಟ್ ಹಾಗೂ ಆ್ಯಪ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿ ಮಾಡಿದೆ. ಮಧ್ಯಾಹ್ನ ಸುಮಾರು 1.15ರ ಹೊತ್ತಿಗೆ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಹಲವು ಬಳಕೆದಾರರು ದೂರು ನೀಡಿದ್ದರು. ಇದೇ ವೇಳೆ ಡೌನ್‌ಡಿಟೆಕ್ಟರ್ ಕೂಡ ಈ ಸಮಸ್ಯೆ ಕುರಿತು ವರದಿ ಮಾಡಿದೆ. 1.15ರ ಹೊತ್ತಿಗೆ 145ಕ್ಕೂ ದೂರುಗಳು ದಾಖಲಾಗಿದೆ. 

Tap to resize

Latest Videos

undefined

ಎಲಾನ್‌ ಮಸ್ಕ್‌ ಭಾರತ ಭೇಟಿಗೂ ಮುನ್ನವೇ ದೇಶದಲ್ಲಿ ಎಕ್ಸ್‌ ಬ್ಯಾನ್‌ ಮಾಡಿದ ಪಾಕಿಸ್ತಾನ!

ಶೇಕಡಾ 57 ರಷ್ಟು ಬಳಕೆದಾರರು ಸರ್ವರ್ ಸಮಸ್ಯೆ ಎದುರಿಸಿದ್ದಾರೆ ಎಂದು ವರದಿ ಮಾಡಿದೆ. ಇನ್ನು ಶಕೇಡಾ 36 ರಷ್ಟು ಬಳಕೆದಾರರು ಎಕ್ಸ್ ಆ್ಯಪ್‌ನಿಂದ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಇನ್ನು ಶೇಕಡಾ 7 ರಷ್ಟು ಬಳಕೆದಾರರು ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಬಳಕೆದಾರರು ಇತರ ಸಾಮಾಜಿಕ ಮಾಧ್ಯಮದಲ್ಲೂ ಈ ಕುರಿತು ಆಕ್ರೋಶ ಹೊರಹಾಕಿದ್ದಾರೆ.

ಎಲಾನ್ ಮಸ್ಕ್ ಟ್ವಿಟರ್(ಎಕ್ಸ್) ಖರೀದಿಸಿದ ಬಳಿಕ ಆರಂಭಿಕ ಹಂತದಲ್ಲಿ ಹಲವು ಬಾರಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈ ಸಮಸ್ಯೆ ಎದುರಿಸುತ್ತು. ಇದೇ ಕಾರಣದಿಂದ ಎಲಾನ್ ಮಸ್ಕ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಟ್ವಿಟರ್ ಖರೀದಿಸಿದ ಬೆನ್ನಲ್ಲೇ ಹಲವು ಪ್ರಮುಖ ಉದ್ಯೋಗಿಗಲನ್ನು ಕೈಬಿಟ್ಟದ್ದರು. ಇದೇ ವೇಳೆ ಸರ್ವರ್ ಡೌನ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು.

 

Twitter web is down

— Epicscalper 😎˚˖𓍢ִ໋🌷͙֒✧˚.🎀༘⋆ (@Epicscalp)

 

ಅಷ್ಟೇ ವೇಗದಲ್ಲಿ ಮಹತ್ತರ ಬದಲಾವಣೆ ಮಾಡಿದ ಎಲಾನ್ ಮಸ್ಕ್ , ಹೆಸರು ಸೇರಿದಂತೆ ಹಲವು ಬದಲಾವಣೆ ಮಾಡಿದ್ದರು. ನೀಲಿ ಬಣ್ಣದ ಹಕ್ಕಿಯ ಲೋಗೋವಿದ್ದ ಟ್ವಿಟರ್ ಎಕ್ಸ್ ಎಂದು ಬದಲಾಗಿತ್ತು. ಟ್ವಿಟರ್ ಬ್ಲೂ ಟಿಕ್ ಸೇರಿದಂತೆ ಹಲವು ನೀತಿಗಳಲ್ಲೂ ಬದಲಾವಣೆ ತಂದಿದ್ದರು.

ಸೋಶಿಯಲ್‌ ಮೀಡಿಯಾದ What's wrong with India ಟ್ರೆಂಡ್‌, ಚಂದ್ರಯಾನದ ಮೂಲಕ ಕೇಂದ್ರದ ತಿರುಗೇಟು!
 

click me!