ಎಲ್ಲೂ ಇಲ್ಲದ ನಿಯಮ ಭಾರತದಲ್ಲಿದೆ, ಪಾಲಿಸಲು ಒತ್ತಾಯಿಸಿದರೆ ದೇಶ ಬಿಡುತ್ತೇವೆ, ವ್ಯಾಟ್ಸ್ಆ್ಯಪ್ ಎಚ್ಚರಿಕೆ!

Published : Apr 26, 2024, 06:05 PM ISTUpdated : May 10, 2024, 07:21 PM IST
ಎಲ್ಲೂ ಇಲ್ಲದ ನಿಯಮ ಭಾರತದಲ್ಲಿದೆ, ಪಾಲಿಸಲು ಒತ್ತಾಯಿಸಿದರೆ ದೇಶ ಬಿಡುತ್ತೇವೆ, ವ್ಯಾಟ್ಸ್ಆ್ಯಪ್ ಎಚ್ಚರಿಕೆ!

ಸಾರಾಂಶ

ಭಾರತದಲ್ಲಿ ವ್ಯಾಟ್ಸ್ಆ್ಯಪ್ ಪ್ರತಿಯೊಬ್ಬನ ಅವಿಭಾಜ್ಯ ಅಂಗವಾಗಿದೆ. ಕಚೇರಿ ಕೆಲಸವಿರಲಿ, ಮಾರಾಟವೇ ಇರಲಿ, ಬಹುತೇಕ ಕೆಲಸ, ಸಂದೇಶ, ಮೀಟಿಂಗ್ ಎಲ್ಲವೂ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ಆದರೆ ಇಂದು ವ್ಯಾಟ್ಸ್ಆ್ಯಪ್ ಏಕಾಏಕಿ ಭಾರತ ತೊರೆಯುವುದಾಗಿ ಹೈಕೋರ್ಟ್‌ನಲ್ಲಿ ಎಚ್ಚರಿಕೆ ಹೇಳಿಕೆ ನೀಡಿದೆ.  

ನವದೆಹಲಿ(ಏ.26) ವ್ಯಾಟ್ಸ್ಆ್ಯಪ್ ಭಾರತದಲ್ಲಿ ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ದಿನ ನಿತ್ಯದ ಬದುಕಿನಲ್ಲಿ, ವೃತ್ತಿಯಲ್ಲಿ, ಕುಟುಂಬದ ಜೊತೆಗಿನ ಸಂಪರ್ಕ,  ಮಾತುಕತೆಗೆ ಸೇರಿದಂತೆ ಎಲ್ಲದ್ದಕ್ಕೂ ಭಾರತದಲ್ಲಿ ವ್ಯಾಟ್ಸ್ಆ್ಯಪ್ ಪ್ರಮುಖ ವೇದಿಕೆಯಾಗಿದೆ. ಆದರೆ ಇದೇ ವ್ಯಾಟ್ಸ್ಆ್ಯಪ್ ಇದೀಗ ಭಾರತ ತೊರೆಯುವ ಎಚ್ಚರಿಕೆ ನೀಡಿದೆ. ಐಟಿ ನಿಯಮ ಹೇರಿ ವ್ಯಾಟ್ಸ್ಆ್ಯಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ಸ್ ಬ್ರೇಕ್ ಮಾಡಲು ಹೇಳಿದರೆ, ನಾವು ಭಾರತದಲ್ಲಿ ಇರುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿದೆ. ವ್ಯಾಟ್ಸ್ಆ್ಯಪ್ ಈ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಮೇಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಭಾರತದಲ್ಲಿ ಐಟಿ ನಿಯಮದ ಅಡಿಯಲ್ಲಿ ಕೆಲ ಸವಾಲು ಎದುರಿಸುತ್ತಿದೆ. ಈ ಪೈಕಿ ಪ್ರಮುಖವಾಗಿ  ವ್ಯಾಟ್ಸ್ಆ್ಯಪ್ ಸೇರಿದಂತೆ ಇತರ ಮೇಸೆಜಿಂಗ್ ಆ್ಯಪ್‌ಗಳ ಸರ್ಕಾರ ಬಯಸಿದ್ದಲ್ಲಿ ಯಾವುದೇ ಮೆಸೇಜ್ ಹುಡುಕುವ, ಡಿಕೋಡ್ ಮಾಡುವ ಅನುಮತಿಯನ್ನು ಕೇಳಿದೆ. ಇದು ಐಟಿ ನಿಯಮದ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ಅಡಿಯಲ್ಲಿ ಈ ಅನುಮತಿಯನ್ನು ವ್ಯಾಟ್ಸ್ಆ್ಯಪ್ ನೀಡುವಂತೆ ಸೂಚಿಸಿತ್ತು. ದೇಶದ ಭದ್ರತೆ, ಸೌರ್ವಭೌಮತ್ವ, ಐಕ್ಯತೆ ವಿಚಾರದಲ್ಲಿ ಯಾವುದೇ ಮಸೇಜ್ ಡಿಕೋಡ್ ಮಾಡುವ ಅನುಮತಿಯನ್ನು ನೀಡಲು ಭಾರತ ಸರ್ಕಾರ ಕೇಳಿದೆ.

ಈ ದೇಶದ ಐಫೋನ್ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ನಿಷೇಧ, ಸರ್ಕಾರದ ಆದೇಶ!

ಈ ಕುರಿತು ವ್ಯಾಟ್ಸ್ಆ್ಯಪ್ ಹಾಗೂ ಭಾರತ ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದೀಗ ವ್ಯಾಟ್ಸ್ಆ್ಯಪ್ ಪರ ವಕೀಲ ತೇಜಸ್ ಕಾರಿಯಾ ದೆಹಲಿ ಹೈಕೋರ್ಟ್‌ನಲ್ಲಿ ಈ ಕುರಿತು ವಾದ ಮಂಡಿಸಿದ್ದಾರೆ. ಭಾರತದಲ್ಲಿ ವ್ಯಾಟ್ಸ್ಆ್ಯಪ್ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಕೋಟ್ಯಾಂತರ ಜನರು ವ್ಯಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಪ್ರಮುಖವಾಗಿ ವ್ಯಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸುರಕ್ಷತೆಯನ್ನು ನೀಡುತ್ತದೆ. ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಬ್ರೇಕ್ ಮಾಡಿದರೆ ವ್ಯಾಟ್ಸ್ಆ್ಯಪ್ ಬಳಕೆದಾರರಿಕೆ ಯಾವುದೇ ಭದ್ರತೆ ನೀಡಲು ಸಾಧ್ಯವಿಲ್ಲ. ಐಟಿ ನಿಯಮದ ಮೂಲಕ ಒತ್ತಾಯಿಸಿದರೆ ನಾವು ಭಾರತ ತೊರೆಯುತ್ತೇವೆ ಎಂದು ಹೈಕೋರ್ಟ್‌ನಲ್ಲಿ ವ್ಯಾಟ್ಸ್ಆ್ಯಪ್ ಹೇಳಿದೆ.

ಇದೇ ವೇಳೆ ಚೀಫ್ ಜಸ್ಟೀಸ್ ಮನ್‌ಮೋಹನ್ ಈ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಸಮಸ್ಯೆ ಇತರ ಯಾವುದಾದರೂ ದೇಶದಲ್ಲಿ ಎದುರಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಾಟ್ಸ್ಆ್ಯಪ್ ಈ ರೀತಿಯ ಐಟಿ ನಿಯಮ ಯಾವುದೇ ದೇಶದಲ್ಲಿ ಇಲ್ಲ. ಬ್ರಿಜಿಲ್ ಕೂಡ ಈ ರೀತಿಯ ನಿಯಮ ಹೇರಿಲ್ಲ ಎಂದು ಹೇಳಿದೆ.  

ವಾಟ್ಸಪ್ ಬಳಕೆದಾರರಿಗೆ ಗುಡ್‌ನ್ಯೂಸ್, Meta AI chatbot ಪರಿಚಯಿಸಿದೆ! ಯಾರೆಲ್ಲ ಬಳಸಬಹುದು?
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್