ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.
ಬೆಂಗಳೂರು (ಏ.26): ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮೇಲೆ ರಾಜ್ಯ ಚುನಾವಣಾ ಆಯೋಗ ಕೇಸ್ ದಾಖಲಿಸಿದೆ. ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಈ ಕೇಸ್ ದಾಖಲಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ.
ದೇವೇಗೌಡರ ಹೇಳಿಕೆಯಿಂದ ಬೇಸರವಾಗಿದೆ, ಕುಮಾರಸ್ವಾಮಿ ಒಂದೇ ಒಂದು ಕರೆ ಮಾಡಿಲ್ಲ: ಸುಮಲತಾ ಅಸಮಾಧಾನ
undefined
ಏಪ್ರಿಲ್ 25 ರಂದು ಜಯನಗರ ಮತಯಾಚನೆ ಮಾಡಿದ್ದು, ಈ ಬಗ್ಗೆ ಎಕ್ಸ್ ನಲ್ಲಿ ತೇಜಸ್ವಿ ಸೂರ್ಯ ಅವರು ವಿಡಿಯೋ ಹಾಕಿಕೊಂಡಿದ್ದರು. ಇದೀಗ ಸಂಕಷ್ಟ ತಂದೊಡ್ಡಿದ್ದು, ಧರ್ಮದ ಆಧಾರದ ಮೇಲೆ ಮತ ಯಾಚನೆ ಮಾಡಿದ್ದಕ್ಕಾಗಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
LIVE: ಮಂಡ್ಯ Elections 2024: ಸಂಜೆ 5 ಗಂಟೆಗೆ ಮಂಡ್ಯದಲ್ಲಿ ಅತೀ ಹೆಚ್ಚು 74.87% ಮತದಾನ
ರಾಮ ನವಮಿಯಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮೇಲೆ ಭವ್ಯವಾದ ಸೂರ್ಯ ತಿಲಕವನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಆಶೀರ್ವದಿಸಲ್ಪಟ್ಟಿದೆ. ಸುಮಾರು 500 ವರ್ಷಗಳ ಕಾಯುವಿಕೆ ಮತ್ತು ಕೋಟಿಗಟ್ಟಲೆ ಭಾರತೀಯರ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದರು. ಭಾರತೀಯತೆ ಉಳಿಯಲು ಬಿಜೆಪಿಗೆ ಮತ ನೀಡಿ ಎಂದು ಟ್ವೀಟ್ ಮಾಡಿದ್ದರು.
Our generation was blessed to witness the majestic Surya Tilak on Bhagwan Shri Ram at Ayodhya on Ram Navami.
A wait for almost 500 years & a wish of crores of Bharatiyas was fulfilled by PM Shri Ji.
For Bharatiyata to survive, vote for BJP! pic.twitter.com/4B0ti6pT1B