ರಾಜಕೀಯಕ್ಕೆ ಬರ್ತಾರ ಡಿಕೆಶಿ ಪುತ್ರಿ... ಮತ ಚಲಾವಣೆ ಬಳಿಕ ಹೇಳಿದ್ದೇನು?

By Anusha Kb  |  First Published Apr 26, 2024, 6:02 PM IST

ಕರ್ನಾಟಕದ ಉಪಮುಖ್ಯಮಂತ್ರಿ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪುತ್ರಿ ರಾಜಕೀಯಕ್ಕೆ ಬರ್ತಾರ ಎಂಬ ಕುತೂಹಲ ಅನೇಕರದ್ದು, ಆದರೆ ರಾಜಕೀಯ ಸೇರುವ ಬಗ್ಗೆ ಅವರೇನು ಹೇಳ್ತಾರೆ ನೋಡೋಣ ಬನ್ನಿ...


ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪುತ್ರಿ ರಾಜಕೀಯಕ್ಕೆ ಬರ್ತಾರ ಎಂಬ ಕುತೂಹಲ ಅನೇಕರದ್ದು, ಮೋಟಿವೇಶನಲ್ ಸ್ಪೀಕರ್ ಆಗಿ ಹೆಸರು ಮಾಡಿರುವ ಡಿಕೆಶಿ ಪುತ್ರಿ ಐಶ್ವರ್ಯಾ ಡಿಕೆಶಿ ಹೆಗ್ಡೆ ಅವರು ಉತ್ತಮ ಭಾಷಣಕಾರ್ತಿ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಭಾಷಣದ ವೀಡಿಯೋಗಳನ್ನು ಕೇಳುವ ಬಹುತೇಕರು ಹೇಳುವ ಮಾತು ಆಕೆ ಮುಂದೆ ಈ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗ್ತಾರೆ ಅನ್ನೋದು, ಆದರೆ ರಾಜಕೀಯ ಸೇರುವ ಬಗ್ಗೆ ಅವರೇನು ಹೇಳ್ತಾರೆ ನೋಡೋಣ ಬನ್ನಿ...

ಇಂದು ಬೆಂಗಳೂರಿನಲ್ಲಿ ತಮ್ಮ ಮತ ಚಲಾಯಿಸಿದ ನಂತರ ಮಾಧ್ಯಮಗಳು ಡಿಕೆಶಿ ಪುತ್ರಿ ಐಶ್ವರ್ಯಾ ಅವರನ್ನು ಮಾತನಾಡಿಸಿದ್ದು, ರಾಜಕೀಯ ಸೇರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ ಹೆಗ್ಡೆ, ಇಂದಿನ ಮತದಾನ ದೇಶಕ್ಕೆ ಸಂಬಂಧಿಸಿದ್ದು, ದೇಶ ಬೆಳೆದರೆ ನಾನು ಅಥವಾ ಬೇರೆ ಯಾವುದೇ ವ್ಯಕ್ತಿ ಬೆಳೆಯುತ್ತೇನೆ. ನನಗೆ ರಾಜಕೀಯ ಸೇರುವ ಯಾವುದೇ ಉದ್ದೇಶವಿಲ್ಲ.  ನಾನು ಶಿಕ್ಷಣತಜ್ಞೆಯಾಗಿದ್ದೇನೆ ಮತ್ತು ಆ ಕೆಲಸದಲ್ಲಿನನಗೆ ಖುಷಿ ಇದೆ. ಭಾರತ ಹೆಮ್ಮೆಗೊಳ್ಳುವಂತೆ ಮಾಡಲು ಪ್ರತಿಯೊಬ್ಬರೂ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕಾಗಿದೆ ಮತ್ತು ನಾನು ಇದೀಗ ಬಹಳ ಅಗತ್ಯವಿರುವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯಕ್ಕೆ ಬರುವ ಊಹಾಪೋಹಾಗಳನ್ನು ಅವರು ತಳ್ಳಿ ಹಾಕಿದ್ದಾರೆ.

Tap to resize

Latest Videos

ಡಿಕೆಶಿ ಸಹೋದರ, ಐಶ್ವರ್ಯಾ ಚಿಕ್ಕಪ್ಪನೂ ಆಗಿರುವ ಡಿಕೆ ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದು, ತನ್ನ ಚಿಕ್ಕಪ್ಪನನ್ನು ಗೆಲ್ಲಿಸುವಂತೆ ಐಶ್ವರ್ಯಾ ಪ್ರಚಾರ ಮಾಡಿದ್ದರು. ಐಶ್ವರ್ಯಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಐಶ್ವರ್ಯಾ ಅವರು ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ ಜೆ ಸಿದ್ಧಾರ್ಥ್‌ ಅವರ ಪುತ್ರ ಅಮರ್ಥ್ಯ ಅವರನ್ನು ಮದ್ವೆಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ಐಶ್ವರ್ಯಾ, ಅವರು ಡಿಕೆ ಶಿವಕುಮಾರ್ ಅವರ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಾಜಿಯ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದು, ಇತ್ತೀಚೆಗೆ ಸ್ವತಂತ್ರವಾಗಿ ಮುನ್ನಡೆಸುತ್ತಿದ್ದಾರೆ.

ತಮನ್ನಾ ಜೊತೆ ಡ್ಯಾನ್ಸ್ ಮಾಡಿದ ಡಿಕೆಶಿ ಪುತ್ರಿ ಐಶ್ವರ್ಯಾ; ನಟಿಗಿಂತ ಚೆಂದ ಕಾಣ್ತೀರಿ ಅಂದ್ರು ಫ್ಯಾನ್ಸ್

ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆದಿದ್ದು, ಬಹುತೇಕ ಮತದಾನ ಮುಕ್ತಾಯದ ಹಂತ ತಲುಪಿದೆ. ಇಂದು ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.

ವೈಟ್‌ ಡ್ರೆಸ್‌ನಲ್ಲಿ ಮಿಂಚಿದ ಡಿಕೆಶಿ ಮಗಳು, ಬ್ಯೂಟಿ ವಿತ್ ಬ್ರೈನ್ ಅಂದ್ರೆ ನೀವೇ ಮೇಡಂ ಎಂದ ನೆಟ್ಟಿಗರು

ಹಾಗೆಯೇ ಮೂರನೇ ಹಂತದಲ್ಲಿ ರಾಜ್ಯದಲ್ಲಿ ಮೇ 7 ರಂದು ಉಳಿದ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು  ಬೀದರ್‌ನಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 

 

ರಾಜಕೀಯ ಸೇರುವ ಬಗ್ಗೆ ಐಶ್ವರ್ಯಾ ಏನಂದ್ರು ಇಲ್ಲಿದೆ ವಿಡಿಯೋ

| Kanakapura | After casting her vote, Aisshwarya DKS Hegde, daughter of Karnataka Deputy CM DK Shivakumar says, "It's about the country today. If only the country grows, I or any other individual will grow....I have no intentions (to join politics). I am an educationist… pic.twitter.com/hTy6VghGVo

— ANI (@ANI)

 

click me!