ಟವಲಲ್ಲಿ ಸುತ್ತಿ ಹೊಡೆಯೋದು ಅಂದ್ರೆ ಇದೇ ಅಲ್ವಾ? ಭೂಮಿಕಾಗೊಂದು ದೊಡ್ಡ ಸಲಾಂ ಅಂತಿದ್ದಾರೆ ಫ್ಯಾನ್ಸ್​

By Suvarna News  |  First Published Apr 26, 2024, 5:41 PM IST

ಗಂಡ ಗೌತಮ್​ಗೆ ಸರ್​ಪ್ರೈಸ್​ ಪಾರ್ಟಿ ಕೊಟ್ಟು ಅತ್ತೆಯ ಆಶೀರ್ವಾದ ಕೋರಿದ್ದಾಳೆ ಭೂಮಿಕಾ. ಏನೂ ಹೇಳದ ಸ್ಥಿತಿಯಲ್ಲಿ ಶಕುಂತಲಾ ದೇವಿ. ಅಭಿಮಾನಿಗಳು ಹೇಳ್ತಿರೋದೇನು?
 


ಟವಲಲ್ಲಿ ಸುತ್ತಿ ಹೊಡೆಯೋದು ಎನ್ನುವ ಗಾದೆ ಮಾತೊಂದಿದೆ. ಯಾರಿಗೆ ಯಾವ ಭಾಷೆಯಲ್ಲಿ ಹೇಳಬೇಕೋ ಅದನ್ನು ಅವರಿಗೆ ಅವರದ್ದೇ ಭಾಷೆಯಲ್ಲಿ ಹೇಳಬೇಕು.  ಹಾವು ಸಾಯಬೇಕು, ಆದ್ರೆ ಕೋಲು ಮುರಿಯಬಾರದು ಎನ್ನುವ ಗಾದೆ ಮಾತನ್ನು ಸಂಸಾರದಲ್ಲಿ ಅಳವಡಿಸಿಕೊಳ್ಳುವುದು ತುಸು ಕಷ್ಟವೇ. ಅತ್ತೆಯೋ ಇಲ್ಲವೇ ಸೊಸೆಯೋ ಕುತಂತ್ರಿಯಾದ ಸಂದರ್ಭದಲ್ಲಿ, ಸದಾ ಕೆಟ್ಟದ್ದನ್ನೇ ಮಾಡುತ್ತಿರುವ ಸಮಯದಲ್ಲಿ ಜಗಳವಾಡದೇ, ಗಂಡನ ಮನಸ್ಸನ್ನೂ ನೋಯಿಸದೇ, ಕುಟುಂಬದ ಯಾರ ಜೊತೆಯೂ  ಕಿರಿಕ್ಕೂ ಮಾಡಿಕೊಳ್ಳದೇ ಕುತಂತ್ರಿಗಳನ್ನು ಮಟ್ಟ ಹಾಕುವುದು ಎಂದರೆ ಸುಲಭದ ಮಾತೇ ಅಲ್ಲ. ಇದು ಸಂಸಾರ ಮಾತ್ರವಲ್ಲದೇ ನಿಜ ಜೀನದಲ್ಲಿ ಬಹುಶಃ ವೈರಿಗಳನ್ನು ಜಗಳವಾಡದೇ ಮಟ್ಟ ಹಾಕುವುದು ಕಷ್ಟ ಸಾಧ್ಯವೇ. ಆದರೆ ಅಮೃತಧಾರೆ ಸೀರಿಯಲ್​ನಲ್ಲೊಂದು ಕುತೂಹಲ ನಡೆದಿದೆ. ನಿಜ ಜೀವನದಲ್ಲಿಯೂ ಹೀಗೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿರೋ ಸೀರಿಯಲ್​ಗೆ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತನ್ನ ಅಮ್ಮನ ಮೇಲೆ ಪ್ರಾಣ ಇಟ್ಟುಕೊಂಡಿರೋ ಗಂಡನಿಗೂ ನೋವಾಗದಂತೆ, ಅಮ್ಮನ ಕಂತ್ರಿ ಬುದ್ಧಿಯನ್ನೂ ಶಾಂತ ರೀತಿಯಿಂದಲೇ ಹಿಮ್ಮೆಟ್ಟಿಸಿರುವ ಭೂಮಿಕಾ ಫ್ಯಾನ್ಸ್​ ದೃಷ್ಟಿಯಲ್ಲಿ ನಿಜವಾದ ನಾಯಕಿ ಆಗಿದ್ದಾಳೆ. 

ಹೌದು. ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಳು. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿತ್ತು. ನಂತರ ಈ ವಿಷಯ ಭೂಮಿಕಾಗೆ ತಿಳಿದಿತ್ತು. ಅಷ್ಟರಲ್ಲಿಯೇ ಪತ್ನಿ ಭೂಮಿಕಾಳಿಗಾಗಿ  ಗೌತಮ್​, ಉರುಳು ಸೇವೆ ಮಾಡಿದ್ದ. ನೆಲದ ಮೇಲೆ ಊಟ ಮಾಡಿದ್ದ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಳು. ಅಸಲಿ ವಿಷಯ ತಿಳಿದ ಮೇಲೆ ಅತ್ತೆಯ ವಿರುದ್ಧ ಇನ್ನೂ ರೇಗಿದ್ದಳು.

Tap to resize

Latest Videos

ಮನೆ ಬಿಟ್ಟ ಪೂರ್ಣಿ: ಮಹಿಳೆಯರನ್ನು ಅದೆಷ್ಟು ವಿಕೃತರಾಗಿ ತೋರಿಸ್ತೀರಪ್ಪಾ... ಸೀರಿಯಲ್​ ಅಭಿಮಾನಿಗಳ ಬೇಸರ

ಹಾಗೆಂದು ಅತ್ತೆಯ ಜೊತೆ ಅವಳು ಜಗಳವಾಡಲಿಲ್ಲ, ಕಚ್ಚಾಡಲಿಲ್ಲ. ಇದೀಗ ಗೌತಮ್​ನ ಹುಟ್ಟುಹಬ್ಬಕ್ಕೆಂದು ಸರ್​ಪ್ರೈಸ್​ ಪಾರ್ಟಿ ಇಟ್ಟಿರುವ ಭೂಮಿಕಾ ಅದನ್ನು ಅತ್ತೆಗೆ ಹೇಳಿದ್ದಾಳೆ. ನಿಮಗೆ ನಾವೆಂದರೆ ತುಂಬಾ ಪ್ರೀತಿ ಅಲ್ವಾ? ನಿಮ್ಮ ಆಶೀರ್ವಾದ ಇದ್ದರೆ ನಾವಿಬ್ಬರೂ ತುಂಬಾ ಹತ್ತಿರ ಆಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಬೇಕು. ಅದಕ್ಕಾಗಿ ಸರ್​ಪ್ರೈಸ್​ ಪಾರ್ಟಿ ಇಟ್ಟಿದ್ದೇವೆ ಎಂದಿದ್ದಾಳೆ. ಅಲ್ವಾ ಅತ್ತೆ ಎಂದಾಗ ಶಕುಂತಲಾ ದೇವಿ ಇಂಗು ತಿಂದ ಮಂಗನಂತಾದಳು. ಏನು ಹೇಳಬೇಕು ಎಂದು ತಿಳಿಯದೇ ಹೌದೌದು ಎಂದಳು.

ಅದೇ ಇನ್ನೊಂದೆಡೆ ಭೂಮಿಕಾ ಗಂಡ ಗೌತಮ್​ಗಾಗಿ ಕೇಕ್​ ಮಾಡಿ ಸರ್​ಪ್ರೈಸ್​ ಕೊಟ್ಟಳು. ತನ್ನ ಹುಟ್ಟುಹಬ್ಬವನ್ನು ಭೂಮಿಕಾ ಮರೆತೇ ಬಿಟ್ಟಿದ್ದಾಳೆ ಎಂದು ಗೋಳಾಡುತ್ತಿದ್ದ ಗೌತಮ್​ಗೆ ಕೇಕ್​ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ಇಷ್ಟು ವರ್ಷ ಐಷಾರಾಮಿ ಹೋಟೆಲ್​ನಲ್ಲಿ, ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಆದರೆ ಈ ಬಾರಿಯ ಹುಟ್ಟುಹಬ್ಬ ನನ್ನ ಜೀವನದ ಅತಿ ಸ್ಪೆಷಲ್​. ಇಡೀ ಕೇಕ್​ ಅನ್ನು ನಾನೊಬ್ಬನೇ ತಿಂದಿರುವುದು ಇದೇ ಮೊದಲು ಎಂದು ಖುಷಿ ಪಟ್ಟಿದ್ದಾನೆ. 

ಬಿಗ್​ಬಾಸ್​​ ನಮ್ರತಾ ಗೌಡ್​ ಹುಟ್ಟುಹಬ್ಬದ ಸಡಗರ ಹೇಗಿತ್ತು? ವಿಡಿಯೋದಲ್ಲಿದೆ ಫುಲ್​ ಡಿಟೇಲ್ಸ್​


click me!