Asianet Suvarna News Asianet Suvarna News

Covid 19: ಇಂದು ಡಿಸಿಗಳ ಜೊತೆ ಸಿಎಂ ಸಭೆ, ಸೋಂಕು ನಿಯಂತ್ರಣಕ್ಕೆ ಫುಲ್ ಅಲರ್ಟ್

ಇಂದು ಡಿಸಿಗಳ (DCs) ಜೊತೆ ಸಿಎಂ ಬೊಮ್ಮಾಯಿ (CM Bommai) ಸಂಜೆ 4 ಗಂಟೆಗೆ ಸಭೆ ನಡೆಸಲಿದ್ದಾರೆ. ಡಿಸಿಗಳಿಂದ ಕೊರೊನಾ ಸ್ಥಿತಿ ಬಗ್ಗೆ ವಿವರಣೆ ಪಡೆಯಲಿದ್ದಾರೆ. ಪಾಸಿಟಿವಿಟಿ ರೇಟ್, ವ್ಯಾಕ್ಸಿನೇಷನ್ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ. 
 

ಬೆಂಗಳೂರು (ಜ. 18): ಇಂದು ಡಿಸಿಗಳ (DCs) ಜೊತೆ ಸಿಎಂ ಬೊಮ್ಮಾಯಿ (CM Bommai) ಸಂಜೆ 4 ಗಂಟೆಗೆ ಸಭೆ ನಡೆಸಲಿದ್ದಾರೆ. ಡಿಸಿಗಳಿಂದ ಕೊರೊನಾ ಸ್ಥಿತಿ ಬಗ್ಗೆ ವಿವರಣೆ ಪಡೆಯಲಿದ್ದಾರೆ. ಪಾಸಿಟಿವಿಟಿ ರೇಟ್, ವ್ಯಾಕ್ಸಿನೇಷನ್ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ. 

Weekend Curfew: ಈ ವಾರ ವೀಕೆಂಡ್ ಕರ್ಫ್ಯೂ ಇರುತ್ತೋ, ಇರುವುದಿಲ್ಲವೋ? ಜ. 21 ಕ್ಕೆ ನಿರ್ಧಾರ

ಕೊರೋನಾ ನಿರ್ಬಂಧಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಭೆಯಲ್ಲಿ ‘ಕಾದು ನೋಡುವ ತಂತ್ರ’ ಅನುಸರಿಸಲು ಸರ್ಕಾರ ನಿರ್ಧರಿಸಿದ್ದು, ಶುಕ್ರವಾರ ಮತ್ತೊಂದು ಸಭೆ ನಡೆಸಿ ವಾರಾಂತ್ಯದ ಕರ್ಫ್ಯೂ ಕೈಬಿಡಬೇಕೆ ಅಥವಾ ಮುಂದುವರೆಸಬೇಕೆ ಎಂಬುದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಈಗಿನ ನಿರ್ಬಂಧಗಳೇ ಮುಂದುವರೆಯಲಿವೆ.