Feb 11, 2023, 2:32 PM IST
ಬೆಂಗಳೂರು (ಫೆ.11): ರಾಜಧಾನಿಯಲ್ಲಿ ಜನ ಗಲ್ಲಿ ಗಲ್ಲಿಗೆ ಹೋಗಬೇಕಾದರೆ ಇಂದಿಗೂ ಆಶ್ರಯಿಸೋದು ಆಟೋಗಳನ್ನ. ಮೆಟ್ರೋಗಳಾಗಿ, ಬಸ್‌ಗಳಾಗಿ ರಾಜಧಾನಿಯ ಗಲ್ಲಿಗಲ್ಲಿಗಳಿಗೆ ಅಷ್ಟಾಗಿ ಹೋಗಿ ತಲಪೋದಿಲ್ಲ. ಆದರೆ, ಇದನ್ನೇ ಲಾಭವನ್ನಾಗಿ ಮಾಡಿಕೊಳ್ಳುವ ಆಟೋ ಚಾಲಕರು ಬೇಕಾಬಿಟ್ಟಿಯಾಗಿ ರೇಟ್ ಹೇಳೋದು ನಡೆಯುತ್ತಿದೆ.
ಆಟೋ ಚಾಲಕರದಿಂದ ಪ್ರತಿದಿನ ನಡೆಯುತ್ತಿರುವ ಕಿರುಕುಳ ಇದು. ಆಟೋ ಮೀಟರ್ ಇದ್ದರೂ ಅದನ್ನ ಬಾಡಿಗೆ ಟೈಮ್‌ನಲ್ಲಿ ಹಾಕೋದೇ ಇಲ್ಲ. ಮೆಟ್ರೋ ಸ್ಟೇಷನ್‌ಗಳಿಂದ ಹೋಗೋವಾಗ ಯಾರೊಬ್ಬರೂ ಮೀಟರ್ ಹಾಕೋದಿಲ್ಲ. ಡಬಲ್ ದುಡ್ಡಲ್ಲ, ಅವರು ಹೇಳಿದ್ದಷ್ಟು ಕೊಡಬೇಕು ಅನ್ನೋದು ಸಾರ್ವಜನಿಕರ ಮಾತು.
Bengaluru: ಆಟೋ, ಟ್ಯಾಕ್ಸಿ ಚಾಲಕರ ವಿವರ ‘ಕ್ಯೂಆರ್ ಕೋಡ್’ನಲ್ಲಿ?
'ಮೆಜೆಸ್ಟಿಕ್ ಭಾಗಗಳಲ್ಲಿ ಈ ಹಾವಳಿ ಜಾಸ್ತಿ. ದುಡ್ಡು ಮಾಡೋದಲ್ಲ. ಜನರಿಂದ ಲೂಟಿ ಮಾಡ್ತಿದ್ದಾರೆ. 50 ರೂಪಾಯಿ ಬಾಡಿಗೆಗೆ 200 ರೂಪಾಯಿ ಕೇಳ್ತಾರೆ' ಎಂದು ಸಾರ್ವಜನಿಕ ಆರೋಪಕ್ಕೆ ನಮ್ಮ ಕವರ್ ಸ್ಟೋರಿ ತಂಡ ಸತ್ಯಾಂಶ ತಿಳಿಯುವ ಪ್ರಯತ್ನ ಮಾಡಿತು.