ಶ್ರೀಹರಿ, ಡಿಸ್ಕೋ ಶಾಂತಿ ಜೊತೆ ಮದುವೆಯಾದರು. ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗು. ಹೆಣ್ಣು ಮಗುವಿನ ಆಸೆ ಹೊತ್ತಿದ್ದ ಶ್ರೀಹರಿಗೆ ಇಬ್ಬರು ಗಂಡು ಮಕ್ಕಳ ನಂತರ ಹೆಣ್ಣು ಮಗು ಜನಿಸಿತು. ಆದರೆ ಆ ಮಗು ನಾಲ್ಕು ತಿಂಗಳಿಗೆ ತೀರಿಕೊಂಡಿತು.
ಮಗಳು ಯಾವಾಗಲೂ ನಮ್ಮ ಜೊತೆ ಇರಬೇಕೆಂದು ಅರ್ಧ ಎಕರೆ ಜಮೀನಿನಲ್ಲಿ ಮಗಳ ಸ್ಮಾರಕ ನಿರ್ಮಿಸಿದರು.