ಬೀದರ್: ಕನ್ನಡ ರಾಜ್ಯೋತ್ಸವದ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಜಿಪಂ ಸಿಇಒ ಗಿರೀಶ ಬದೋಲೆ!

By Girish Goudar  |  First Published Nov 1, 2024, 11:25 PM IST

ಕನ್ನಡ ರಾಜ್ಯೋತ್ಸವದ ವೇಳೆ ಜಿಪಂ ಸಿಇಒ ಗಿರೀಶ ಬದೋಲೆ ಶೂ ಹಾಕಿಕೊಂಡು ಧ್ವಜ ಕಟ್ಟಿ ಏರಿ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. 


ಬೀದರ್(ನ.01):  ಕನ್ನಡ ರಾಜ್ಯೋತ್ಸವದ ವೇಳೆ ಐಎಎಸ್ ಅಧಿಕಾರಿ ಎಡವಟ್ಡು ಮಾಡಿಕೊಂಡ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ಕನ್ನಡ ರಾಜ್ಯೋತ್ಸವದ ವೇಳೆ ಜಿಪಂ ಸಿಇಒ ಗಿರೀಶ ಬದೋಲೆ ಶೂ ಹಾಕಿಕೊಂಡು ಧ್ವಜ ಕಟ್ಟಿ ಏರಿ ಧ್ವಜಾರೋಹಣ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. 

ಬೀದರ್ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ ಬದೋಲೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡದಂತೆ ಸೂಚಿಸಬೇಕಾದ ಅಧಿಕಾರಿಯಿಂದಲೇ ಅವಮಾನ ಮಾಡಿದ್ದಾರೆ.  ಬೀದರ್ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಧ್ವಜಾರೋಹಣ ವೇಳೆ ಜಿಪಂ ಸಿಇಒ ಗಿರೀಶ ಬದೋಲೆ ಎಡವಟ್ಟು ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಕಾರವಾರ: ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿ‌ದ ಪಟ್ಟಣ ಪಂಚಾಯತ್ ಅಧ್ಯಕ್ಷೆ

ಎಲ್ಲ ಅಧಿಕಾರಿಗಳು ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಆಗ್ತಿದ್ರು ಸಿಬ್ಬಂದಿ ಮಾತ್ರ ಸಿಇಒ ಗಮನಕ್ಕೆ  ತಂದಿಲ್ಲ. ಅವಮಾನ ಮಾಡಿದ್ದಲ್ಲದೇ ಜಿಪಂ ಸಿಇಒ ಗಿರೀಶ ಬದೋಲೆ ಸಾಮಾಜಿಕ ಜಾಲತಾಣದಲ್ಲಿ ಸ್ಟೆಟಸ್ ಹಾಕಿಕೊಂಡಿದ್ದಾರೆ. 

click me!