
ಬಿಗ್‌ಬಾಸ್ ಕನ್ನಡ 11ರಲ್ಲಿ ಈ ವಾರ ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯವರ ಕಡೆಯಿಂದ ಸಂದೇಶ ಪಡೆಯುವ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ಮನೆಯವರು ಮಾಡಿದ ಮಿಸ್ಟೇಕ್ ನಿಂದ ಮಾನಸ ಮತ್ತು ಚೈತ್ರಾ ಕುಂದಾಪುರ ಸಂದೇಶ ಪಡೆಯುವ ಅವಕಾಶ ವಂಚಿತರಾದರು.ಇನ್ನು ಧನ್‌ರಾಜ್ ಕೂಡ ತಾವೇ ಮಾಡಿದ ಮಿಸ್ಟೇಕ್ ನಿಂದ ಮನೆಯವರ ಲೆಟರ್ ಮಿಸ್ ಮಾಡಿಕೊಂಡರು. ಬಝರ್ ಆದಾಗ ಬಿಗ್ ಬಾಸ್ ಮನೆಗೆ ಹೊರಗಿನವರು ಬಂದು ಡಿಸ್ಟರ್ಬ್ ಮಾಡುತ್ತಾರೆ. ಬಿಗ್‌ಬಾಸ್ ಮಾಡುವ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ನೀಡದಿದ್ದರೆ ಪತ್ರ ಸಿಗುತ್ತದೆ ಎಂಬುದು ಟಾಸ್ಕ್ ನ ನಿಯಮವಾಗಿತ್ತು.
ಲೈಟ್ ಆಫ್ ಆದಾಗ ಸ್ಪರ್ಧಿಗಳು ಗುಡ್ ನೈಟ್ ಬಿಗ್‌ಬಾಸ್ ಎಂದು ಪ್ರತಿಕ್ರಿಯಿಸಿದರು. ಶುಕ್ರವಾರದ ಎಪಿಸೋಡ್ನಲ್ಲಿ ತುಸು ಮುಂಚೆಯೇ ಲೈಟ್ ಆಫ್ ಆದಾಗ ಬಹುತೇಕರಿಗೆ ಶಾಕ್ ಆಯಿತು. ಈಗಲೇ ಮಲಗೇಕಾ ಎಂದು ಕೂಡ ಪ್ರತಿಕ್ರಿಯೆ ನೀಡಿದರು. ಹೀಗಾಗಿ ಮಾಸನಾ ಮತ್ತು ಚೈತ್ರಾ ಅವರಿಗೆ ಸಿಗಬೇಕಿದ್ದ ಮನೆಯವರ ಸಂದೇಶ ಇಬ್ಬರಿಗೆ ಕೈತಪ್ಪಿತು. ಚೈತ್ರಾ ಅವರು ಎಪಿಸೋಡ್ ಪೂರ್ತಿ ಬೇಸರದಲ್ಲೇ ಇದ್ದರು.
ಇನ್ನು ಯುಮುನಾ ಶ್ರೀನಿಧಿ ಮತ್ತೆ ಬಿಗ್‌ಬಾಸ್ ಮೆನೆಗೆ ಎಂಟ್ರಿ ಕೊಟ್ಟರು. ಮನೆಯವ ಪತ್ರ ಪಡೆಯಲು ಗೋಲ್ಡ್ ಸುರೇಶ್ ಮತ್ತು ಮೋಕ್ಷಿತಾ ಪೈ ಅವರಿಗೆ ಟಾಸ್ಕ್ ನೀಡಿದ ಸಂದರ್ಭದಲ್ಲಿ ಯುಮುನಾ ಶ್ರೀನಿಧಿ ಅವರು ಸರ್ಧಿಗಳನ್ನು ಡಿಸ್ಟ್ರಾಕ್ಟ್ ಮಾಡಲು ಕಳುಹಿಸಿದ್ದರು. ಆದರೆ ಯಾರು ಅವರು ಬಂದಾಗ ಪ್ರತಿಕ್ರಿಯೆ ನೀಡಲಿಲ್ಲ. ಕೊನೆಗೆ ಟಾಸ್ಕ್ ಮುಕ್ತಾಯವಾದಾಗ ಸುರೇಶ ಅವರ ಲೆಟರ್ ತೆಗೆದುೊಂಡು ಬಂದರು. ಮೋಕ್ಷಿತಾ ಅವರಿಗೆ ಮನೆಯವರಿಂದ ವಿಡಿಯೋ ಸಂದೇಶ ಸಿಕ್ಕಿತು.
ಇನ್ನುಳಿದಂತೆ ಬಿಗ್‌ಬಾಸ್ ನ ಎಲ್ಲಾ ಸ್ಪರ್ಧಿಗಳಿಗೆ ಮನೆಯವರಿಂದ ಲೆಟರ್ ಸಿಕ್ಕಿತು. ಆದರೆ ಹನುಮಂತ ಮತ್ತು ಐಶ್ವರ್ಯಾ ಅವರಿಗೆ ಮನೆಯವರ ಸಂದೇಶ ಬರಲಿಲ್ಲ. ಹೀಗಾಗಿ ಐಶ್ವರ್ಯ ಅವರಿಗೆ ಬಿಗ್‌ಬಾಸ್ ಸಂದೇಶ ಕಳುಹಿಸಿ ಧೈರ್ಯ ಹೇಳಿದರು. ಹನುಮಂತ ಕೂಡ ಮನೆಯವರ ಸಂದೇಶ ಬಂದಿಲ್ಲ ಎಂದು ಒಂದು ಪೋನ್ ಮಾಡಿ ಕೇಳಿ ಬಿಗ್‌ಬಾಸ್ ಎಂದು ಮನವಿ ಮಾಡಿಕೊಂಡರು. ಇನ್ನು ಎಲ್ಲರಿಗೂ ಮನೆಯವರಿಂದ ಊಟ ಬಂತು. ಆದರೆ ಐಶ್ವರ್ಯಾ ಅವರಿಗೆ ಬರದ ಕಾರಣ ಉಗ್ರಂ ಮಂಜು ಅವರು ತಮಗೆ ಬಂದ ಒಬ್ಬಟ್ಟನ್ನು ಐಶ್ವರ್ಯಾ ಅವರಿಗೆ ತಿಳಿಯದಂತೆ ಹೆಸರು ಚೇಂಜ್ ಮಾಡಿ ಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.