ಕನ್ನಡ ಚಿತ್ರರಂಗದಲ್ಲಿ KGF 2 ಹೊಸ ಯುಗದ ಆರಂಭ: ಮಾಳವಿಕಾ ಅವಿನಾಶ್‌

Apr 14, 2022, 1:56 PM IST

ಬೆಂಗಳೂರು (ಏ. 14): ಬಾಗಲಕೋಟೆಯಲ್ಲಿ (Bagalkot) ಕೆಜಿಎಫ್-2 (KGF 2) ಟಿಕೆಟ್‌ಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ನಗರದ ಶಕ್ತಿ ಚಿತ್ರಮಂದಿರದ ಬಳಿ ಟಿಕೆಟ್‌ಗಾಗಿ ನೂಕು ನುಗ್ಗಲು ಉಂಟಾಗಿದೆ. ಯಶ್ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. 

ಬಟ್ಟೆ ಹಳೆಯದಾಗಿ ಕಾಣಲು ರಸ್ತೆಗೆ ಎಸೆದಿದ್ವಿ: KGF 2 ಕಾಸ್ಟ್ಯೂಂ ಡಿಸೈನರ್ ಮಾತು

ಕೆಜಿಎಫ್‌-2 ಶುರುವಾದಾಗಿನಿಂದ ಇಲ್ಲಿಯವರೆಗೆ ಹವಾ ಹುಟ್ಟಿಸಿದೆ. ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್‌ 2 ಹೊಸ ಯುಗದ ಆರಂಭವಾಗಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಕನ್ನಡ ಚಿತ್ರಕ್ಕೆ ದೇಶಾದ್ಯಂತ ಜನ ಕಾದು ಕುಳಿತಿರುವುದು ಇದೇ ಮೊದಲ ಬಾರಿ, ಇದು ದಾಖಲೆಯೇ ಸರಿ, ಇದು ನಮ್ಮೆಲ್ಲರ ಹೆಮ್ಮೆ' ಎಂದು ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.