ರಸ್ತೆ ಡಿವೈಡರಗೆ ಹಾಕಿದ್ದ ಕಬ್ಬಿಣ್ಣದ ಪೈಪ್ ಚಾಲಕನ ಬೆನ್ನ ಹಿಂಭಾಗದಿಂದ ಎದೆ ಸೀಳಿದ ಹೊರಕ್ಕೆ ಬಂದಿದೆ. ಎದೆಯ ಭಾಗದಿಂದ ಕಬಿಣ್ಣದ ಫೈಪ್ ತೆಗೆಯಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ಹುಬ್ಬಳ್ಳಿ(ಅ.02): ಲಾರಿ ಪಲ್ಟಿಯಾಗಿ ಕಬ್ಬಿಣದ ರಾಡ್ ಚಾಲಕನ ಎದೆ ಸೀಳಿ ಒಳ ಹೊಕ್ಕ ಘಟನೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು(ಬುಧವಾರ) ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ರಸ್ತೆ ಡಿವೈಡರಗೆ ಹಾಕಿದ್ದ ಕಬ್ಬಿಣ್ಣದ ಪೈಪ್ ಚಾಲಕನ ಬೆನ್ನ ಹಿಂಭಾಗದಿಂದ ಎದೆ ಸೀಳಿದ ಹೊರಕ್ಕೆ ಬಂದಿದೆ. ಎದೆಯ ಭಾಗದಿಂದ ಕಬಿಣ್ಣದ ಫೈಪ್ ತೆಗೆಯಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ವಿಧಿ ಎಷ್ಟು ಕ್ರೂರಿ... ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ
ಫೈಪ್ ಕತ್ತರಿಸಿ ಚಾಲಕರನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಲಕ ಸಧ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಶಿ ಮೂಲದ ಚಾಲಕನ ಶಿವಾನಂದ ಬಡಗಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.