ಭಾರತದಲ್ಲಿ BMW ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಭಾರತದ ಅತೀ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ಇದರ ಬೆಲೆಗೆ ಸಣ್ಣ ಕಾರು ಖರೀದಿಸಬಹುದು.
ನವದೆಹಲಿ(ಅ.02) ಭಾರತದಲ್ಲಿ ಈಗಾಗಲೇ ಹಲವು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಕಡಿಮೆ ಬೆಲೆಯಿಂದ ಆರಂಭಗೊಂಡು ದುಬಾರಿ ಬೆಲೆಯ ಇವಿ ಸ್ಕೂಟರ್ ಲಭ್ಯವಿದೆ. ಇದರ ನಡುವೆ BMW ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಿದೆ. BMW CE 02 ಅನ್ನೋ ಹೊಸ ಸ್ಕೂಟರ್ ಬಿಡುಗಡೆಯಾಗಿದೆ. ಭಾರತದಲ್ಲಿ BMW ಬಿಡುಗಡೆ ಮಾಡಿದ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ವಿಶೇಷ ಅಂದರೆ ಇದು ಏರ್ ಕೂಲ್ಡ್ ಸಿಂಕ್ರೋನಸ್ ಮೋಟಾರ್ ಬಳಸಲಾಗಿದೆ
BMW CE 02 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 4.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ನಗರ ಪ್ರದೇಶಗಳಲ್ಲಿ ಸುಲಭವಾಗಿ ರೈಡ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಹೊಸ BMW CE 02 ಎಲೆಕ್ಟ್ರಿಕ್ ಸ್ಕೂಟರ್ ಡಿಸೈನ್ ಆಕರ್ಷಕವಾಗಿದೆ. ಸ್ಕೂಟರ್ ಆಗಿದ್ದರೂ ಮೊದಲ ನೋಟಕ್ಕೆ ಬೈಕ್‌ನಂತ ಕಾಣಲಿದೆ. ಹೊಸ ವಿನ್ಯಾಸ, ಹೊಸತನದ ಮೂಲಕ ಮಾರುಕಟ್ಟೆಗೆ BMW CE 02 ಲಗ್ಗೆ ಇಟ್ಟಿದೆ.
undefined
ನಟಿ ಹನ್ಸಿಕಾ ಮೋಟ್ವಾನಿಗೆ ಬಂತು 75 ಲಕ್ಷ ರೂ ಮೌಲ್ಯದ BMW 6 GT ಕಾರು ಗಿಪ್ಟ್!
ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು 0.9kW ಯೂನಿಟ್ ಚಾರ್ಜಿಂಗ್ ಸಾಕೆಟ್ ಮೂಲಕ ಚಾರ್ಜಿಂಗ್ ಮಾಡಿದರೆ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ 12 ನಿಮಿಷ ತೆಗೆದುಕೊಳ್ಳಲಿದೆ. ಇನ್ನು 1.5kW ಯೂನಿಟ್ ಮೂಲಕ ಸಂಪೂರ್ಣ ಚಾರ್ಜಿಂಗ್‌ಗೆ 3 ಗಂಟೆ 30 ನಿಮಿಷ ಸಮಯ ತೆಗೆದುಕೊಳ್ಳಲಿದೆ. 14 ಇಂಚಿನ ವ್ಹೀಲ್ ಬಳಸಲಾಗಿದೆ. ಇದು ಸ್ಕೂಟರ್ ಆಕರ್ಷಣೆ ಹೆಚ್ಚಿಸಿದೆ. 239mm ಡಿಸ್ಕ್ ಬ್ರೇಕ್ ಮುಂಭಾಗದಲ್ಲಿದ್ದರೆ, ಹಿಂಭಾಗದಲ್ಲಿ 220mm ಡಿಸ್ಕ್ ಬ್ರೇಕ್ ಹೊಂದಿದೆ.
ಇದರೊಂದಿಗೆ LED ಲೈಟ್ಸ್, LED ಇಲ್ಯುಮಿನೇಶನ್, ಯುಎಸ್‌ಬಿ ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲುವ ಫೀಚರ್ಸ್ ಇದರಲ್ಲಿದೆ. ಇನ್ನು ಎರಡು ರೈಡ್ ಮೊಡ್‌ಗಳು ಲಭ್ಯವಿದೆ. ಸಿಂಗಲ್ ಚಾನೆಲ್ ಎಬಿಸಿ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದೆ. ಈ ಮೂಲಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಕಾರಿನಲ್ಲಿರುವಂತೆ ಸ್ಟೆಬಿಲಿಟಿ ಕಂಟ್ರೋಲ್, ರಿವರ್ಸ್ ಮೋಡ್ ಸೇರಿದಂತೆ ಹಲವು ಕಾರಿನ ಫೀಚರ್ಸ್ ಲಭ್ಯವಿದೆ.
ತಮಗೆ ತಾವೇ ಐಷಾರಾಮಿ ಕಾರು ಉಡುಗೊರೆ ನೀಡಿದ ಬಿಗ್‌ಬಾಸ್ ಖ್ಯಾತಿಯ ಜಿಯಾ ಶಂಕರ್!
ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೊಸ ಸ್ಕೂಟರ್ ಖರೀದಿಗೆ ಇದೀಗ ಹಲವರು ಆಸಕ್ತಿ ತೋರಿದ್ದಾರೆ. ಬೇಡಿಕೆಗಳು ಹೆಚ್ಚಾಗುತ್ತಿದೆ. ಸ್ಕೂಟರ್ ದುಬಾರಿಯಾದರೂ ಬೇಡಿಕೆ ಮಾತ್ರ ಹಾಗೆ ಇದೆ. ದೇಶದ ಎಲ್ಲಾ BMW ಅಧಿಕೃತ ಡೀಲರ್ ಬಳಿ ಬುಕಿಂಗ್ಸ್ ಆರಂಭಗೊಂಡಿದೆ.