ಸದ್ಯ ಬಿಗ್ಬಾಸ್ನಲ್ಲಿ ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್ ಅವರದ್ದೇ ಹವಾ. ಆದರೆ ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಇವರಿಬ್ಬರ ಮಾತುಕತೆ ಹೇಗಿತ್ತು? ವಿಡಿಯೋ ವೈರಲ್ ಆಗಿದೆ.
ಬಿಗ್ಬಾಸ್ನ ಸೀಸನ್ 11 ಶುರುವಾಗಿ ಇದಾಗಲೇ ಸ್ವರ್ಗ ಮತ್ತು ನಗಕ ವಾಸಿಗಳ ನಡುವೆ ಜಟಾಪಟಿ ಶುರುವಾಗಿದೆ. ಅದರಲ್ಲಿಯೂ ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್ ನಡುವೆ ಮೊದಲಿನಿಂದಲೂ ತಿಕ್ಕಾಟ ನಡೆಯುತ್ತಲೇ ಇದೆ. ನರಕದ ವಾಸಿಗಳೆಲ್ಲಾ ನಿಯಮಗಳನ್ನು ಮುರಿಯೋಕೆ ತಮ್ಮದೇ ಆದ ಸ್ಟ್ರಾಟೆಜಿ ಮಾಡಿಕೊಂಡಿದ್ದರೆ, ಸ್ವರ್ಗದವರಿಗೆ ನಿಯಮ ಪಾಲನೆ ಮಾಡುವುದೇ ಕಷ್ಟ ಅನ್ನುವಂತಾಗಿದೆ. ಇದೇ ವೇಳೆ, ಚೈತ್ರಾ ಕುಂದಾಪುರ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ. ಚೈತ್ರಾ ಕುಂದಾಪುರ ಕೈಯಲ್ಲಿ ಮನೆಗೆಲಸ ಮಾಡಿಸುವ ವೇಳೆ ಹೆರಾಸ್ಮೆಂಟ್ ಪರ್ಸನಲ್ ಅಟ್ಯಾಕ್ ರೀತಿ ಕಾಣ್ತು ಅಂತ ಲಾಯರ್ ಜಗದೀಶ್ ಆರೋಪಿಸಿದ್ದಾರೆ. ಇದನ್ನ ಇತರೆ ಸ್ವರ್ಗವಾಸಿಗಳು ಒಪ್ಪಲಿಲ್ಲ. ಇದಕ್ಕೂ ಮುನ್ನ ಟಾಯ್ಲೆಟ್ ಕ್ಲೀನ್ ಮಾಡುವ ವಿಚಾರದಲ್ಲಿಯೂ ಗಲಾಟೆ ಆಗಿತ್ತು.
ನರಕದಲ್ಲಿರುವ ಚೈತ್ರಾ ಕುಂದಾಪುರ ಅವರು ಟಾಯ್ಲೆಟ್ ಕ್ಲೀನ್ ಮಾಡಿದ್ದರು. ಆದರೆ ಅದು ಸರಿಯಾಗಿ ಕ್ಲೀನ್ ಆಗಿಲ್ಲ ಎಂದು ಜಗದೀಶ್ ಪುನಃ ಕ್ಲೀನ್ ಮಾಡಿದರು. ಆದರೆ ಬಿಗ್‌ಬಾಸ್ ನಿಮಯದ ಪ್ರಕಾರ ಇದು ತಪ್ಪು. ವಕೀಲರಾಗಿ ಹೀಗೆ ಮಾಡಿದ್ದು ಸರಿಯಲ್ಲ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ ಇವರು ಬಿಗ್ಬಾಸ್ಗೆ ಹೋಗುವ ಮೊದಲು ಪರಸ್ಪರ ಮಾತನಾಡಿಕೊಂಡಿದ್ದು, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ್ ಅವರನ್ನು ಹಾಡಿ ಹೊಗಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
undefined
ಚೈತ್ರಾ ತೊಳೆದುಬಿಟ್ಟ ಟಾಯ್ಲೆಟ್ ಕ್ಲೀನ್ ಮಾಡಿ ಪೇಚಿಗೆ ಸಿಲುಕಿದ ಲಾಯರ್ ಜಗದೀಶ್! ರುಬ್ಬಿಸಿಕೊಳ್ಳೋರು ಯಾರು?
ಅಷ್ಟಕ್ಕೂ ಚೈತ್ರಾ ಅವರನ್ನು ಜಗದೀಶ್ ಅವರು ಡೈಮಂಡ್, ಅದ್ಭುತ ಮಾಟಗಾತಿ, ಮಾತುಗಾರ್ತಿ ಎಂದು ಹಾಡಿ ಹೊಗಳಿದ್ದಾರೆ. ನಾನು ನೋಡಿದ ಚೈತ್ರಾಗೂ ಈಗಿನ ಚೈತ್ರಾಗೂ ತುಂಬಾ ವ್ಯತ್ಯಾಸ ಇದೆ ಎಂದಿದ್ದಾರೆ. ಇದೇ ವೇಳೆ, ಚೈತ್ರಾ ಅವರು ಕುವೆಂಪು ಅವರ ಬಗ್ಗೆ ಮಾತನಾಡಿದ್ದು ನಾನು ಕೇಳಿದ್ದೇನೆ. ಇದು ತುಂಬಾ ಇಷ್ಟವಾಯ್ತು ಎಂದಿದ್ದಾರೆ. ಹಾಗೆನೇ ಬಿಗ್‌ಬಾಸ್ 2023 ನೀವು ಜೈಲಿನಿಂದ ನೋಡಿದ್ರೆ, 2022ರಲ್ಲಿ ನಾನು ಜೈಲಿನಿಂದ ನೋಡಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಜೈಲನಿಂದ ನೋಡಿದ್ವಿ ಎಂದಿದ್ದಾರೆ. ಅದಕ್ಕೆ ಸುದೀಪ್, ನಿಮ್ಮ ಸೀನಿಯರ್ಗೆ ವಿಷ್ ಮಾಡಲ್ವಾ ಎಂದು ಪ್ರಶ್ನಿಸಿದ್ರು. ಇದನ್ನು ಕೇಳಿ ಚೈತ್ರಾ, ಏನ್ ಸರ್ ಕಾಲೇಜಿನಲ್ಲಿ ಆದ್ರೆ ಮಾಡ್ಬೋದು, ವರ್ಕ್ ಪ್ಲೇಸ್ನಲ್ಲಿ ಸೀನಿಯರ್ ಆದ್ರೆ ವಿಷ್ ಮಾಡ್ಬೋದು, ಜೈಲಿನಲ್ಲಿ ಆದ್ರೆ ಎಂದು ಜೋರಾಗಿ ನಕ್ಕಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಕಲಿ ನಾಯಕರನ್ನು ಸೃಷ್ಟಿ ಮಾಡಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು.ಭಾರೀ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪ ಇವರ ಮೇಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಕುಂದಾಪುರ ಭಾಗದ ಜನಪ್ರಿಯ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಆರೋಪ ಕೇಳಿಬಂದಿತ್ತು. 7 ಕೋಟಿ ರೂಪಾಯಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದರು. ಇನ್ನು ಲಾಯರ್ ಜಗದೀಶ್ ಅವರು, ಈ ಹಿಂದೆ ಹಲಸೂರು ಗೇಟ್ ಠಾಣೆಪೊಲೀಸರು ದಾಖಲಿಸಿದ್ದ ಕೊಲೆ ಯತ್ನ ಕೇಸ್ನಲ್ಲಿ ಜೈಲುಪಾಲಾಗಿದ್ರೆ, ಬಳಿಕ ಕೊಡಿಗೇಹಳ್ಳಿ ಠಾಣೆ ಪೊಲೀಸರು ದಾಖಲಿಸಿದ್ದ ಜಾತಿ ನಿಂದನೆ ಕೇಸ್ನಲ್ಲಿ ಮತ್ತೆ ಜೈಲಿಗೆ ಹೋಗಿದ್ದರು. ಸದ್ಯ ಇಬ್ಬರೂ ಜಾಮೀನಿನ ಮೇಲೆ ಇದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ, ಉಗ್ರಂ ಮಂಜು ಪಿತ್ತ ನೆತ್ತಿಗೆ!