ಸ್ವರ್ಗದಲ್ಲಿ ನರಕದ ಕಿಡಿ ಹಚ್ಚಿದ ಜಗದೀಶ್‌, ಉಗ್ರಂ ಮಂಜು ಬೆಡ್‌ರೂಂ ಅವತಾರಕ್ಕೆ ಬೆಚ್ಚಿಬಿದ್ದ ಧನ್‌ರಾಜ್‌!

Published : Oct 02, 2024, 10:28 PM ISTUpdated : Oct 02, 2024, 11:26 PM IST
ಸ್ವರ್ಗದಲ್ಲಿ ನರಕದ ಕಿಡಿ ಹಚ್ಚಿದ ಜಗದೀಶ್‌, ಉಗ್ರಂ ಮಂಜು ಬೆಡ್‌ರೂಂ ಅವತಾರಕ್ಕೆ ಬೆಚ್ಚಿಬಿದ್ದ ಧನ್‌ರಾಜ್‌!

ಸಾರಾಂಶ

ಬಿಗ್ ಬಾಸ್ ಕನ್ನಡ 11 ರಲ್ಲಿ ಲಾಯರ್ ಜಗದೀಶ್ ನಿಯಮ ಉಲ್ಲಂಘಿಸಿ ನರಕ ನಿವಾಸಿಗಳಿಗೆ ಸಹಾಯ ಮಾಡಿದ್ದರಿಂದ ಸ್ವರ್ಗ ನಿವಾಸಿಗಳಿಗೆ ಲಕ್ಷುರಿ ಐಟಂಗಳನ್ನು ಬಿಗ್‌ಬಾಸ್‌ ವಾಪಸ್ ಪಡೆದಿದ್ದಾರೆ. ಇದರಿಂದ ಸ್ವರ್ಗ ನಿವಾಸಿಗಳ ಆಕ್ರೋಶಕ್ಕೆ ಜಗದೀಶ್‌ ಕಾರಣರಾಗಿದ್ದಾರೆ.

 ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಸ್ವರ್ಗನಿವಾಸಿಗಳ ಲಕ್ಷುರಿ ಬಜೆಟ್ ಐಟಮ್ಸ್  ಅನ್ನು ಈಗ ಬಿಗ್‌ಬಾಸ್ ಮರಳಿ ಪಡೆದಿದೆ. ನರಕ ನಿವಾಸಿಗಳಿಗೆ ನೀಡುವ ಗಂಜಿ ಮೊಸರನ್ನವೇ ಈಗ ಸ್ವರ್ಗ ನಿವಾಸಿಗಳ ಆಹಾರವಾಗಿದೆ, ಅದಕ್ಕೆ ಕಾರಣ ಒಬ್ಬನೇ ಒಬ್ಬ ಅದು ಲಾಯರ್ ಜಗದೀಶ್, ನಿಯಮ ಉಲ್ಲಂಘನೆ ಮಾಡಿ ನರಕ ನಿವಾಸಿಗಳಿಗೆ ಬಿಸಿ ನೀರು ಮತ್ತು ಕದ್ದು ಹಣ್ಣುಗಳು, ಬೇಯಿಸಿರುವ ಮೊಟ್ಟೆ ನೀಡಿರುವುದೇ ಇದು ಕಾರಣವಾಗಿದೆ. ಕೊನೆಗೆ ಎಲ್ಲರಿಗೂ ಗಂಜಿ ಊಟವನ್ನೇ ಬಿಗ್‌ಬಾಸ್‌ ಕಳುಹಿಸಿಕೊಟ್ಟಿದ್ದಾರೆ.

ಮನೆಯವರೆಲ್ಲರೂ ಸೇರಿ ಜಗದೀಶ್ ಅವರನ್ನೇ ಬೈದಿದ್ದಾರೆ. ನೀವೇ ನಮಗೆ ಲಕ್ಷುರಿ ಊಟ ಇಲ್ಲದಿರುವುದಕ್ಕೆ ಕಾರಣ ಎಂದಿದ್ದಾರೆ. ಆದರೂ ಸುತಾರಾಂ ಜಗದೀಶ್ ಒಪ್ಪಿಕೊಂಡಿಲ್ಲ. ಈಗಾಗಲೇ ಮೂರು ದಿನದಿಂದ ಶೋ ವೀಕ್ಷಿಸುತ್ತಿರುವ ವೀಕ್ಷಕರು ಕೂಡ ಜಗದೀಶ್ ಮಾಡುತ್ತಿರುವುದು ಸರಿಯಲ್ಲ, ಡಬಲ್‌ ಗೇಮ್ ಆಡುತ್ತಿದ್ದಾರೆಂದು ನೆಗೆಟಿವ್ ಕಮೆಂಟ್‌ ಹಾಕುತ್ತಿದ್ದಾರೆ.

ಶಿಶಿರ್‌ ಹಸ್ತರೇಖೆ ನೋಡಿ 38ರಲ್ಲಿ ಮದುವೆ ಎಂದ ಚೈತ್ರಾ, ರಂಜಿತ್ ಮನಸ್ಸು ಗೆದ್ದು ಐಶೂ ಬ್ಲಶಿಂಗ್!

ಇನ್ನು ಎರಡನೇ ದಿನ ಕೂಡ ಇದೇ ನಡೆದಿತ್ತು. ಸ್ವರ್ಗನಿವಾಸಿಗಳಿಗೆ ಶಿಕ್ಷೆಯ ರೂಪದಲ್ಲಿ ಲಕ್ಷುರಿ ಐಟಂಗಳನ್ನ ‘ಬಿಗ್ ಬಾಸ್‌’ ವಾಪಸ್ ಪಡೆದರು. ಈ ವಿಚಾರದ ಬಗ್ಗೆ ಕಾಮೆಂಟ್ ಮಾಡುವಾಗ ಲಾಯರ್ ಜಗದೀಶ್‌  ‘’ಕಿತ್ತೋಗಿರೋ ಐಟಮ್ಸ್’’ ಅಂತ ಎಂದಿದ್ದರು. ಇದು ಸರಿನಾ ಅಂತ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಸ್ವರ್ಗನಿವಾಸಿ ಆಗಿದ್ದುಕೊಂಡು, ಸ್ವರ್ಗದ ನಿಯಮಗಳನ್ನ ಲಾಯರ್ ಜಗದೀಶ್  ಪಾಲಿಸುತ್ತಿಲ್ಲ.  ಹೀಗಾಗಿ, ಲಾಯರ್ ಜಗದೀಶ್‌ ವಿರುದ್ಧ ಸ್ವರ್ಗನಿವಾಸಿಗಳಲ್ಲಿ ಅಸಮಾಧಾನ ಇದೆ. ಇತ್ತ ನರಕ ನಿವಾಸಿಗಳಿಗೆ ಜಗದೀಶ್‌ ಸಪೋರ್ಟ್ ಮಾಡುತ್ತಿರುವುದು ‘ಮಾನವೀಯತೆ’ ಆಧಾರದಲ್ಲಿ ಅಂತ ಹೇಳಿಕೊಂಡರೂ ಡಬಲ್ ಗೇಮ್ ಅಂತೂ ಆಡುತ್ತಿರುವುದು ಸತ್ಯ. ಸ್ವರ್ಗದಲ್ಲಿರುವವರು ಕಿತ್ತಾಡುತ್ತಾ ಇದ್ದರೆ, ನರಕದಲ್ಲಿರುವವರು ನಲಿದಾಡುತ್ತಿದ್ದಾರೆ.  ಇನ್ನು ಧನ್‌ರಾಜ್ ಕೂಡ ಹೇಳಿದ್ದರು. ನರಕದಲ್ಲಿರುವುದೇ ಆರಾಮ ಎಂದಿದ್ದರು. ಅದರಂತೆ ಇಂದು ನರಕ ನಿವಾಸಿಗಳು ಕೂಡ ಜಗದೀಶ್ ಮೇಲೆ ನಂಬಿಕೆ ಇಡುವುದು ಕಷ್ಟ. ನಾವಿರುವುದೇ ಸೇಫ್‌ ಜಾಗ ಎಂದು ಮಾತನಾಡಿಕೊಂಡರು.

ಬಿಗ್‌ಬಾಸ್‌ ಮನೆಯಲ್ಲಿ ಕಳ್ಳ, ಪೊಲೀಸ್‌, ಚಿನ್ನ, ಲಾಯರ್‌: ಈ ಸೀಸನ್‌ ಒಂದು ಸಿನಿಮಾ!

ಧನ್‌ರಾಜ್‌ ರನ್ನು ಹೆದರಿಸಿದ ಉಗ್ರಂ ಮಂಜು:
ಇನ್ನು ಮೂರನೇ ದಿನ ರಾತ್ರಿ ಮಲಗಿದ್ದ ಧನ್‌ರಾಜ್‌ ರನ್ನು ಮೈಮೇಲೆ ಬಂದವರಂತೆ ಆಡಿ ಉಗ್ರಂ ಮಂಜು ಹೆದರಿಸಿದ್ದು, ಧನ್‌ರಾಜ್‌ ಹೆದರಿ ಭಯಗೊಂಡಿದ್ದಾರೆ. ಮರುದಿನ ಮನೆಯವರು ಧನ್‌ರಾಜ್ ಪುಕ್ಕಲ ಎಂದು ಮಾತನಾಡಿಕೊಂಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?