ಬಾಲಿವುಡ್‌ನೇ ಮೀರಿಸಿದ ಸೌತ್ ಸಿನಿಮಾಗಳು: ಯಾವ ಚಿತ್ರದ ಬಜೆಟ್ ಎಷ್ಟು? ಇಲ್ಲಿದೆ ಮಾಹಿತಿ

Jul 5, 2023, 2:25 PM IST

ಸೌತ್ ಸಿನಿಮಾಗಳು ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿವೆ. ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಬಜೆಟ್ 600 ಕೋಟಿ, ಆದಿಪುರುಷ್ 500 ಕೋಟಿ, ಪೊನ್ನಿಯಿನ್ ಸೆಲ್ವನ್ 500 ಕೋಟಿ, ಆರ್ ಆರ್ ಆರ್ 450 ಕೋಟಿ, ಬಾಹುಬಲಿ 430 ಕೋಟಿ,  2.0 ರಜನಿ ಮತ್ತು ಅಕ್ಷಯ್ ಕುಮಾರ್ ಸಿನಿಮಾ  570 ಕೋಟಿ. ಈ ಸಂಖ್ಯೆಗಳನ್ನು ನೋಡುತ್ತಿದ್ದರೇನೆ ನಡುಕ ಹುಟ್ಟಿಸುತ್ತೆ.  ಆದರೂ ನಿಜ. ಸೋತ ಆದಿಪುರುಷ್ ಸಿನಿಮಾನೆ 500 ಕೋಟಿಯಲ್ಲಿ ನಿರ್ಮಿಸಲಾಗಿತ್ತು. ಪ್ರಭಾಸ್ ಬಾಹುಬಲಿ ನಂತರದ ಎಲ್ಲ ಚಿತ್ರಗಳೂ ಹೈ ಬಜೆಟ್ ಚಿತ್ರಗಳೇ ಆಗಿವೆ. ಪ್ರಭಾಸ್ ಮುಂದಿನ ಸಿನಿಮಾ ಪ್ರಾಜೆಕ್ಟ್ ಕೆ ಬಜೆಟ್ 600 ಕೋಟಿ ಎನ್ನಲಾಗಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನೂರಾರು ಕೋಟಿ ಹೀರೋಗೆ ಸುರಿದರು ಹಿಂದಕ್ಕೆ ಬರುತ್ತೆ ಎನ್ನುವ ಧೈರ್ಯ ಮಾಡಿದ್ದೆ ಮೊದಲು ಸೂಪರ್ ಸ್ಟಾರ್ ರಜನಿಕಾಂತ್. ಈ ಪ್ರಯೋಗ ಯಶಸ್ವಿಯಾದಂತೆ ಆ ಬಜೆಟ್ ಹೆಚ್ಚುತ್ತಾ ಹೋಯಿತು. ರಜನಿಕಾಂತ್ ರೋಬೋ  ಯಶಸ್ವಿಯಾದ ನಂತರ ರಜನಿ ಅಕ್ಷಯ್ ಕುಮಾರ್ ನಟನೆಯ 2.0 ಚಿತ್ರವನ್ನು  ಶಂಕರ್  570 ಕೋಟಿ ಬಜೆಟ್ನಲ್ಲಿ ನಿರ್ಮಿಸಿದರು.