
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ ಮೂರು ದಿನಗಳಾಗಿವೆ. ಮೊದಲ ದಿನ ಮನೆಯಲ್ಲಿ ನಿಯಮಗಳನ್ನು ಪಾಲನೆ ಮಾಡುವ ವಿಚಾರವಾಗಿ ರಂಪ ರಾಮಾಯಣ ಆಗಿದ್ದು ಗೊತ್ತೇ ಇದೆ. ಅಲ್ಲಿ ಹೆಚ್ಚು ಹೈಲೈಟ್ಸ್ ಆಗಿದ್ದು, ಚೈತ್ರಾ ಕುಂದಾಪುರ, ವಕೀಲ ಜಗದೀಶ್, ಯಮುನಾ ಶ್ರೀನಿಧಿ. ನಿನ್ನೆಯ ಎಪಿಸೋಡ್ ನಲ್ಲಿ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಇನ್ನು ಇಂದಿನ ಎಪಿಸೋಡ್ ನಲ್ಲಿ ಸ್ವರ್ಗ ನಿವಾಸಿಗಳ ಮನೆಯಲ್ಲಿ ನಾಮಿನೇಷನ್ ಬಿಸಿ ಏರಿದೆ. ಗೌತಮಿ ಜಾಧವ್ ರನ್ನು ನಾಮಿನೇಷನ್ ಗೆ ತಳ್ಳಿದ್ದಕ್ಕೆ ನೀಡಿದ ಕಾರಣಕ್ಕೆ ವಾಗ್ವಾದ ನಡೆದಿದೆ.
ಇದೆಲ್ಲದರ ನಡುವೆ ಇಂದು ಬಿಡುಗಡೆಯಾಗಿರುವ ಮತ್ತೊಂದು ಪ್ರೋಮೋದಲ್ಲಿ ಮತ್ತೆ ಗಲಾಟೆ ನಡೆದಿದೆ. ಅದು ನರಕವಾಸಿಗಳ ಮಧ್ಯೆ. ವಕೀಲ ಜಗದೀಶ್ ಮತ್ತು ಇತರರ ಮೇಲೆ ಸಿಟ್ಟು ಪ್ರದರ್ಶಿಸಿದ ಚೈತ್ರಾ ಅವರು ತುಕಾಲಿ ಮಾನಸ ವಿರುದ್ಧ ಹರಿಹಾಯ್ದಿದ್ದಾರೆ. ಕಾರಣ ಧ್ಯಾನದಲ್ಲಿರುವ ಚೈತ್ರಾ ಅವರು ನಿದ್ದೆ ಮಾಡುತ್ತಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ್ದು ಇದು ಚೈತ್ರಾ ಕಿವಿಗೆ ಬಿದ್ದಿದೆ.
BBK11: ಯುಮುನಾ-ಚೈತ್ರಾ ಮಧ್ಯೆ ಜಗಳಕ್ಕೆ ಪಿನ್ ಇಟ್ಟ ವಕೀಲ ಜಗದೀಶ್!
ಇದಕ್ಕೆ ಆಕ್ರೋಶಗೊಂಡ ಚೈತ್ರಾ ನಿಮ್ಮದೆಷ್ಟಿದೆ ನೀವು ನೋಡ್ಕೊಳಿ ಅನುಮಾನದಿಂದ ಜಡ್ಜ್ ಮೆಂಟ್ ಕೊಡಬೇಡಿ. ಅದರ ಬಗ್ಗೆ ಮಾತನಾಡೋಕೆ ಒಂದು ಲೆವೆಲ್ ಬೇಕು. ನಾನು ಏನು ಮಾಡಿದ್ರು ತಪ್ಪು ಎಂದು ಮಾತಾಡೋಕೆ ನೀವ್ಯಾರು? ಎಂದು ಮಾನಸಾಗೆ ತಿವಿದಿದ್ದಾರೆ. ಚೈತ್ರಾ ಜೊತೆಗೆ ಗಲಾಟೆಗೆ ಹೋದ ಮಾನಸಾ ಜಗಳ ತಾರಕಕ್ಕೇರಿದ ನಂತರ ನಾನು ಅಲ್ಪ ಜ್ಞಾನಿ ಎಂಬ ಮಾತುಗಳನ್ನು ಹೇಳಿದ್ದಾರೆ.
ಇನ್ನು ನಿನ್ನೆಯ ಎಪಿಸೋಡ್ ನಲ್ಲಿ ಮನೆಯ ಬಹುತೇಕ ಮಂದಿ ಚೈತ್ರಾ ಕುಂದಾಪುರ ಅವರನ್ನು ನಾಮಿನೇಟ್ ಗೆ ತಳ್ಳಿದರು. ಇದಕ್ಕೆ ತಕ್ಕ ಉತ್ತರ ಕೊಟ್ಟ ಚೈತ್ರಾ ತನ್ನ ಆಟದ ವೈಖರಿಯನ್ನು ಖಡಕ್ ಮಾತಿನಲ್ಲೇ ಸಮರ್ಥಿಸಿಕೊಂಡರು. ಚೈತ್ರಾ ಅವರ ಉತ್ತರಕ್ಕೆ ಮನೆಯವರೆಲ್ಲ ಗಪ್ ಚುಪ್ ಆದರು.
BBK11: ಎಲ್ಲಾ ಕಡೆ ಲಾಯರ್ ಬುದ್ದಿ ತೋರಿಸ್ತಾರೆ: ಲಾಯರ್ ಜಗದೀಶ್ ಗೆ ಟಾಂಟ್ ಕೊಟ್ಟ ಧನ್‌ರಾಜ್
ಇನ್ನು ಇಂದಿನ ಮತ್ತೊಂದು ಪ್ರೋಮೋದಲ್ಲಿ ಎರಡನೇ ಹಂತದಲ್ಲಿ ಟಾಸ್ಕ್ ಮೂಲಕ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಸ್ವರ್ಗ ನಿವಾಸಿಗಳಿಗೆ ಕುತ್ತು ತಂದಿದೆ. ಸ್ವರ್ಗದಲ್ಲಿರುವರು ನರಕ ನಿವಾಸಿಗಳ ಬಳಿ ಹೋಗಿ ಮಾತನಾಡುತ್ತಿರುವುದು ತಪ್ಪು ಎನ್ನುವಂತೆ ಯಮುನಾ ಶ್ರೀನಿಧಿ ಮಾತನಾಡಿದ್ದು, ಇದು ಕೊನೆಗೆ ಹೋಗಿ ನರಕದಲ್ಲಿರುವ ಶಿಶಿರ್ ಮತ್ತು ಯುಮುನಾ ಮಧ್ಯೆ ಗಲಾಟೆಗೆ ಕಾರಣವಾಗಿದೆ. ನರಕದಲ್ಲಿರುವವರ ಬಳಿ ಮಾತನಾಡಲು ಬಂದರೆ ತಪ್ಪೇನು ಎಂದು ಶಿಶಿರ್ ಪ್ರಶ್ನಿಸಿದ್ದಾರೆ. ನೀವ್ಯಾರು ಇದನ್ನು ಕೇಳೋದಿಕ್ಕೆ ಎಂದು ಏರು ಧ್ವನಿಯಲ್ಲಿ ಯಮುನಾ ಕೇಳಿದ್ದಕ್ಕೆ ನೀವು ಇದನ್ನು ನನ್ನ ಬಳಿ ಕೇಳಬೇಡಿ ನಾನು ಇಲ್ಲಿ ಓರ್ವ ಸ್ಪರ್ಧಿಯೆಂದು ಶಿಶರ್ ಉತ್ತರ ಕೊಟ್ಟಿದ್ದಾರೆ.
ಅಂತು ಇಂತೂ ಈ ಬಾರಿ ಸ್ಪರ್ಧಿಗಳು ಬಿಗ್ಬಾಸ್ ಬಂದ ಮೇಲೆ ಜಗಳ ಆಗಲೇಬೇಕೆಂದು ಮನಸ್ಥತಿ ಇಟ್ಟುಕೊಂಡು ಬಂದಂತಿದೆ. ಮುಂದೇನಾಗುತ್ತೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.