ಹೆಣ್ಣು ಮಗುವಿಗಾಗಿ ಹರಕೆ ಹೊತ್ತಿದ್ದ ನಟಿ ಶಿಲ್ಪಾ ಶೆಟ್ಟಿ; ಕುಟುಂಬ ಸಮೇತ ಕಟೀಲು ದೇವಸ್ಥಾನಕ್ಕೆ ಭೇಟಿ

Apr 23, 2023, 12:36 PM IST

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಚಿತ್ರನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ, ಶಮಿತಾ ಶೆಟ್ಟಿ ಸೇರಿದಂತೆ ಇಡೀ ಕುಟುಂಬ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದ ಶಿಲ್ಪಾ ಶೆಟ್ಟಿ ಕುಟುಂಬ ವಿಶೇಷ ಪೂಜೆ ಸಲ್ಲಿಸಿದರು. ಹೆಣ್ಣು ಮಗುವಿಗಾಗಿ ಹರಕೆ ಹೊತ್ತುಕೊಂಡಿದ್ದ ಶಿಲ್ಪಾ ಶೆಟ್ಟಿ ದಂಪತಿ ಸೀರೆ ಹರಕೆ ಒಪ್ಪಿಸಿದರು. ಮೊಕ್ತೇಸರ ವಾಸುದೇವ ಆಸ್ರಣ್ಣ ಪ್ರಸಾದ ನೀಡಿದರು. ಅರ್ಚಕರಾದ ಅನಂತ ಆಸ್ರಣ್ಣ ಶ್ರೀಹರಿ ಆಸ್ರಣ್ಣ ವಕೀಲ ರವಿ ಪೂಜಾರಿ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಗುಲದ ನಾಗಸ್ವರ ವಾದಕರಾದ ಲಿಂಗಪ್ಪ ಸೇರಿಗಾರರ ವಾದ್ಯವಾದನವನ್ನು ಆಲಿಸಿದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಕಟೀಲು ರಥಬೀದಿಯಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ಕೆಲಹೊತ್ತು ವೀಕ್ಷಿಸಿ ವೇಷಧಾರಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.