ಸೋನಿ ‘ಬ್ರಾವಿಯಾ’ ಹೊಸ ಟಿವಿ ಅನಾವರಣ: ಮನೆಯಲ್ಲೇ ಸಿಗಲಿದೆ ಥಿಯೇಟರ್‌ನ ಅನುಭವ

First Published | Oct 2, 2024, 11:55 PM IST

ಗೋಪಾಲ ಪುರುಷೋತ್ತಮ

ಹೈದರಾಬಾದ್(ಅ.02):  ಗ್ರಾಹಕರು ಮನೆಯಲ್ಲೇ‌ ಥಿಯೇಟರ್‌ ಅನುಭವ ಪಡೆಯಲು ಸೋನಿ ಕಂಪನಿ ತಯಾರಿಸಿರುವ ಬ್ರಾವಿಯಾ ಸೀರಿಸ್‌ನ ಹೊಸ ಟಿವಿಗಳನ್ನು ಸೋಮವಾರ ಖ್ಯಾತ ನಿರ್ದೇಶಕ ಹಾಗೂ ಬ್ರಾವಿಯಾ ಟೀವಿ ರಾಯಭಾರಿ ಎಸ್.ಎಸ್. ರಾಜಮೌಳಿ ಅವರು ಅನಾವರಣಗೊಳಿಸಿದರು.

ಹೈದರಾಬಾದ್‌ನ ವೆಸ್ಟಿನ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಮಾತನಾಡಿದ ರಾಜಮೌಳಿ, ಸೋನಿ ಕಂಪನಿಯು ‘ಬ್ರಾವಿಯಾ; ಸಿನಿಮಾ ಈಸ್‌ ಕಮಿಂಗ್‌ ಹೋಮ್‌’ ಎಂಬ ಪರಿಕಲ್ಪನೆಯಲ್ಲಿ ಬ್ರಾವಿಯಾ ಸೀರಿಸ್‌ನ ಟೀವಿಗಳಲ್ಲಿ ಬಣ್ಣಗಳ ಹೊಂದಾಣಿಕೆ, ಚಿತ್ರಗಳ ಸ್ಪಷ್ಟತೆ ಹಾಗೂ ಧ್ವನಿ ಪರಿಣಾಮವನ್ನು ಅಳವಡಿಕೆ ಮಾಡಿದ್ದಾರೆ. ಇದರಿಂದ ನಮಗೆ ಥಿಯೆಟರ್‌ನಲ್ಲಿ ಸಿನಿಮಾ ನೋಡುವಾಗ ಸಿಗುವಂತಹ ಅನುಭವವನ್ನು ನಾವು ಪಡೆಯಬಹುದು ಎಂದು ಹೇಳಿದ್ದಾರೆ.

ಸೋನಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ನಾಯರ್ ಮಾತನಾಡಿ, ನಮ್ಮ ಕಂಪನಿ ಹೊಸದಾಗಿ ಬ್ರಾವಿಯಾ 7,8 ಹಾಗೂ 9 ಸೀರಿಸ್ ಟೀವಿಗಳನ್ನು ಅನಾವರಣಗೊಳಿಸಿದೆ. ಇದರಲ್ಲಿ ಪ್ರಮುಖವಾಗಿ ಅಡ್ವಾನ್ಸ್ಡ್ಎಐ ಎಕ್ಸ್‌ಆರ್‌ ಪ್ರೊಸೆಸರ್‌ ಅನ್ನು ಬಳಕೆ ಮಾಡಿರುವುದರಿಂದ ನಮಗೆ ಚಿತ್ರಗಳ ಸ್ಪಷ್ಟತೆ ಗೊತ್ತಾಗುತ್ತದೆ. ಜತೆಗೆ ಉತ್ತಮ ಧ್ವನಿ ಪರಿಣಾಮವನ್ನು ನೀಡಲು ಟೀವಿ ಮುಂಭಾಗದಲ್ಲೇ ಸ್ವೀಕರ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.

Tap to resize

ಇದರಲ್ಲಿ ಬ್ರಾವಿಯಾ 7 ಮತ್ತು 9 ಮಿನಿ ಎಲ್‌ಇಡಿ ಹಾಗೂ ಬ್ರಾವಿಯಾ 8 ಒಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿದೆ. ಪ್ರಮುಖವಾಗಿ ಈ ಸೀರಿಸ್‌ನಲ್ಲಿ 55, 65, 75, 85 ಇಂಚ್‌ಗಳ ಟೀವಿ ಲಭ್ಯವಿವೆ. ಇವುಗಳಲ್ಲಿ 55 ಇಂಚಿನ ಟೀವಿ ಆರಂಭಿಕ ದರ 1.5 ಲಕ್ಷ ರು. ಹಾಗೂ 75 ಇಂಚಿನ ಟೀವಿಯ ಆರಂಭಿಕ ದರ 4 ಲಕ್ಷ ರು. ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಬ್ರಾವಿಯಾ ಸೀರಿಸ್‌ ಟೀವಿಗಳನ್ನು ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರು ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಸೋನಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ನಾಯರ್ ಇದ್ದರು

Latest Videos

click me!