ಕೆಣಕಿದ ಜಗದೀಶ್ ವಿರುದ್ಧ ರೆಬೆಲ್‌ ಆದ ಧನ್‌ರಾಜ್, ಚುಚ್ಚಿದ ವಕೀಲರಿಗೆ ಮೈಮ್‌ ಮೂಲಕ ಉತ್ತರ ಕೊಟ್ಟ ಕಾಮಿಡಿಯನ್ ಧನು

Published : Oct 03, 2024, 01:13 AM IST

ಬಿಗ್ ಬಾಸ್ ಮನೆಯಲ್ಲಿ ಧನ್‌ರಾಜ್ ಮತ್ತು ಜಗದೀಶ್ ನಡುವೆ ಮಾತಿನ ಚಕಮಕಿ ನಡೆಯಿತು. ಧನ್‌ರಾಜ್ ಅವರನ್ನು ರೆಫ್ರಿ ಎಂದು ಒಪ್ಪಿಕೊಳ್ಳಲು ಜಗದೀಶ್ ನಿರಾಕರಿಸಿದರು ಮತ್ತು ಅವರ ಮೇಲೆ ವಾಗ್ದಾಳಿ ನಡೆಸಿದರು. ಈ ಜಗಳದಿಂದಾಗಿ ಆಟವನ್ನು ಸ್ವಲ್ಪ ಹೊತ್ತು ನಿಲ್ಲಿಸಲಾಯಿತು.

PREV
16
ಕೆಣಕಿದ ಜಗದೀಶ್ ವಿರುದ್ಧ ರೆಬೆಲ್‌ ಆದ ಧನ್‌ರಾಜ್, ಚುಚ್ಚಿದ ವಕೀಲರಿಗೆ ಮೈಮ್‌ ಮೂಲಕ ಉತ್ತರ ಕೊಟ್ಟ ಕಾಮಿಡಿಯನ್ ಧನು

ಮರಳು ತೆಗೆಕೊಂಡು ಹೆಚ್ಚಿನವರು ಲಾಯರ್‌ ಜಗದೀಶ್ ಡಬ್ಬಕ್ಕೆ ಹಾಕುತ್ತಿದ್ದರು. ಈ ವೇಳೆ ಜಗದೀಶ್ ಗೆ ಡಿಕ್ಕಿಯಾಗಿ ಯಮುನಾ ಶ್ರೀನಿಧಿ ಕೆಳಬಿದ್ದರು. ಧನ್‌ರಾಜ್ ಫೌಲ್‌ ಎಂದು ಘೋಷಿಸಿದರು. ಇದು ಗಲಾಟೆಗೆ ಕಾರಣವಾಯ್ತು. ಫೌಲ್ ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಜಗದೀಶ್ ರೆಫ್ರಿ ಚೀಟಿಂಗ್ ಎಂದು ಧನ್‌ರಾಜ್ ಅವರನ್ನು ಧೂಷಿಸಿದರು. ಮತ್ತು ನರಕದಲ್ಲಿರುವವರು ಯಾರಾದರೂ ರೆಫ್ರಿ ಆಗಲಿ ನಾನು ಅವರನ್ನು ನಂಬುತ್ತೇನೆ ಎಂದರು. ನಾನು ಹೊರಹೋಗುತ್ತೇನೆ ಎಂದ ಜಗದೀಶ್ ವಿ ವಾಂಟ್‌ ಜಸ್ಟೀಸ್‌ ಎಂದು ಸ್ಲೋಗನ್‌ ಕೂಗಿದರು.  ಕೊನೆಗೆ ಪ್ರಾಪರ್ಟಿ ಟಚ್‌ ಮಾಡಿದ್ರೆ ಔಟ್ ಎಂಬ ತೀರ್ಮಾನವಾಯ್ತು. ಕೊನೆಗೆ ಬಿಗ್‌ಬಾಸ್ ಆಟವನ್ನು ನಿಲ್ಲಿಸಿ ಎಂದರು.

26

ಕನ್ಫೆಷನ್ ರೂಂ ಗೆ ಬಂದ ಧನ್‌ರಾಜ್ ನಾನು ಕಾನ್ಫಿಡೆಂಟ್‌ ಕಳೆದುಕೊಳ್ಳುತ್ತಿದ್ದೇನೆ. ಕಷ್ಟ ಆಗುತ್ತಿದೆ ಎಂದು ಅತ್ತರು. ಜಗದೀಶ್ ಅಗ್ರೆಸಿವ್‌ ನಲ್ಲಿರುವುದರಿಂದ ಉಳಿದ ಸ್ಪರ್ಧಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ನಾನು ತಳ್ಳುವುದೆಲ್ಲ ಮಾಡಬಾರದು ಎಂದು ಹೇಳಿದ್ದೆ. ಜಗದೀಶ್ ಬಿಗ್‌ಬಾಸ್‌ ನೋಡಿಕೊಳ್ಳುತ್ತಾರೆಂದರು. ಈ ವಿಷ್ಯದಲ್ಲಿ ಹೇಗೆ ಡಿಸಿಷನ್ ತೆಗೆದುಕೊಳ್ಳಬೇಕೆಂದು  ಗೊತ್ತಾಗುತ್ತಿಲ್ಲ ಎಂದು ಧನ್‌ರಾಜ್ ಅಳಲು ತೋಡಿಕೊಂಡರು. ಕೊನೆಗೆ ಧನ್‌ರಾಜ್‌ ಗೆ ಬಿಗ್ಬಾಸ್ ಧೈರ್ಯ ತುಂಬಿ, ಉಸ್ತುವಾರಿ ವಹಿಸಲು ಸಹಾಯಕನನ್ನು ನೀಡಿದರು ಜಿಂಕೆಯಂತೆ ಹೋಗಿ ಗೇಮ್‌ ಮುಂದುವರೆಸಲು ತಿಳಿಸಿದರು. ಅದರಂತೆ ತ್ರಿವಿಕ್ರಮ್ ಸಹಾಯಕನಾಗಿ ಬಂದಾಗ ಮತ್ತೊಮ್ಮೆ ರೂಲ್ಸ್ ಗಳನ್ನು ಅರ್ಥ ಮಾಡಿಸುವ ಪ್ರಯತ್ನ ನಡೆಯಿತು, ಮ್ಯಾನ್ ಹ್ಯಾಂಡಲಿಂಗ್ ಮಾಡುವಂತಿಲ್ಲ ಎಂದು ಎಲ್ಲಾ ನಿಯಮಗಳನ್ನು ತಿಳಿಸಲಾಯ್ತು. ಮಧ್ಯದಲ್ಲಿ ಮಾತನಾಡಿದ ಜಗದೀಶ್ , ನನಗೆ ಇಬ್ಬರ ಮೇಲೂ ನಂಬಿಕೆ ಇಲ್ಲ ಎಂದು ಹೇಳಿದರು.  

36

ಗೇಮ್ ಆರಂಭಕ್ಕೆ ಮುನ್ನ ಲಾಯರ್‌ ಜಗದೀಶ್ ಸುಮ್ಮನಿದ್ದ ಧನ್‌ರಾಜ್ ರನ್ನು ಕೆಣಕಲು ಮುಂದಾಗಿ ನಗಪ್ಪಾ, ನೀನು ನಕ್ಕಿಲ್ಲ ಅಂದರೆ ಹೇಗೆ ಎಂದರು. ಕೂಲ್ ಆಗಿ ಮಾತನಾಡಿದ ಧನ್‌ರಾಜ್ ನಿಮ್ಮ ವಯಸ್ಸಿಗೆ ನಾನು ಗೌರವ ಕೊಡ್ತೇನೆ ಪ್ಲೀಸ್‌ ಸರ್  ಎಂದಾಗ ಲಾಯರ್ ಜಗದೀಶ್ ನೀನ್ಯಾರು ನಂಗೆ ರೆಸ್ಪೆಕ್ಟ್ ಕೊಡಲು ಆಟ ಆಡಪ್ಪ ಅಲ್ಲಿ ಎಂದು ಮತ್ತೆ ಕೆಣಿದರು.

ಇದು ಧನ್‌ ರಾಜ್ ಪಿತ್ತ ನೆತ್ತಿಗೇರಿತು, ಏಯ್ , ಸುಮ್ನೆ ಕೂತ್ಕೋ ಅಲ್ಲಿ. ಸುಮ್ನೆ ಇರಿಟೇಷನ್‌ ಮಾಡಬೇಡಿ.
ಜಗದೀಶ್: ಏನ್.. ಏನಾಯ್ತು... (ಎದೆಯುಬ್ಬಿಸಿ ಬಂದರು)
ಧನ್‌ ರಾಜ್: ಗೇಮ್ ಶುರು ಆಗಲ್ವಾ
ಜಗದೀಶ್:ನೀನು ರೆಫ್ರಿ ಆಗಲು ಫಿಟ್ ಅಲ್ಲ.
ಧನ್‌ ರಾಜ್: ನೀವ್ಯಾರಿ ಅದನ್ನು ಹೇಳೋದಿಕ್ಕೆ, ನೀವ್ಯಾರು ಹೇಳೋಕೆ...
ಜಗದೀಶ್:ನೀನು ರೆಫ್ರಿಗೆ ಫಿಟ್ ಇಲ್ಲ.(ಪದೇ ಪದೇ ಇದೊಂದೇ ಡೈಲಾಗ್)
ಧನ್‌ ರಾಜ್: ಯಾಕ್ ಸಾಯಿಸ್ತೀರಾ ನಮ್ಮನ್ನ.

46

ಎಲ್ಲರೂ ಅವರ ಜಗಳ ಬಿಡಿಸಲು ಮುಂದಾಗಿ, ಅವರಿಗೆ ಇಷ್ಟೇ ಬೇಕಿತ್ತು. ಅರ್ಥ ಮಾಡಿಕೋ ಎಂದು ಧನ್‌ರಾಜ್‌ಗೆ ಹೇಳಿದ ಮೇಲೆ ಧನ್‌ರಾಜ್ ಕೂಲ್ ಆದರು. ಆದರೂ ಜಗದೀಶ್ ಕೆಣಕುವ ಬುದ್ದಿ ನಿಲ್ಲಲ್ಲಿಲ್ಲ.  ಇದಕ್ಕೆ ಧನ್‌ರಾಜ್ ಟಕ್ಕರ್ ನೀಡಿ ಮೈಮ್‌ ಮಾಡಿಯೇ ಸರಿಯಾದ ಉತ್ತರ ಕೊಟ್ಟರು. ಅದನ್ನು ಸಹಿಸದ ಜಗದೀಶ್ ಮತ್ತೆ ಹೀಗೆ ಚೆನ್ನಾಗಿ ಕಾಣುತ್ತಿ ಜಾಸ್ತಿ ಎಗರಬೇಡ  ಎಂದೆಲ್ಲ ಪ್ರೊವೋಕ್ ಮಾಡುತ್ತಿದ್ದರು. ಇಡೀ ಮನೆ ಧನ್‌ ರಾಜ್ ಮೈಮ್ ಗೆ ನಕ್ಕು ನಕ್ಕು ಸಾಕಾಯ್ತು. ಇಷ್ಟು ಸಾಲಲಿಲ್ಲ ಎಂದು ನೀನು ಹೊಡೆಯಲು ಬಂದೆ ಎಂದು ಜಗದೀಶ್ ಆರೋಪಿಸಿದರು. ಇದಕ್ಕೆ ನಾವು ಕೇಳಿದ್ದು ಅಷ್ಟೇ ನೀವೇನು ಹೊಡೀತೀರಾ ಹೊಡೆಯಿರಿ, ಸ್ವರ್ಗ ನಿವಾಸಿಗಳಿಗೆ ಹಂದಿನಿಂದ ಬಂದು ಚೂರಿ ಹಾಕಿದ್ರಲ್ಲ, ಅದು ಏನೂ ತಪ್ಪಲ್ವಾ? ಎಂದು ಧನ್‌ರಾಜ್ ಹೇಳಿದರು.

56

ಜಗದೀಶ್: ನಿಂಗೆ ಯೋಗ್ಯತೆ ಇದ್ರೆ, ಹೋಗಿ ಬಿಗ್‌ಬಾಸ್‌ ಗೆ ಈ ಬಗ್ಗೆ ದೂರು ನೀಡು. 
ಧನ್‌ರಾಜ್: ಯೋಗ್ಯತೆ ಬಗ್ಗೆ ಯಾರೂ ಮಾತನಾಡಲು ಬರಬಾರದು.
ಜಗದೀಶ್:  ಹೇ ಬಿಡೋ ನಿನ್ನ ಯೋಗ್ಯತೆ ಬಗ್ಗೆ ನಾನು ನೋಡಿದ್ದೀನಿ, ಸಾರಿ ಕೇಳು 
ಧನ್‌ರಾಜ್:  ಅಂಬಟೆ ಗೊಜ್ಜು, ಹೋಗಿ ನಿಂತುಕೊಳ್ಳಿ. ಸಾರಿ ಅದು ನಿಮಗೆ, ಹ್ಮ್...

66

ಕೊನೆಗೆ ನಾನು ಆಟ ಆಡುವುದಿಲ್ಲವೆಂದು ಜಗದೀಶ್ ಹೊರಗೆ ನಿಂತರು. ನೀವು ಒಳ್ಳೆ ರೆಫ್ರಿ ಕೊಟ್ಟಿಲ್ಲ ಎಂದು ಬಿಗ್‌ಬಾಸ್‌ ಗೆ ಹೇಳುತ್ತಿದ್ದಾಗ ಧನ್‌ರಾಜ್ ಶಟಪ್ ಯುವರ್ ಮೌತ್, ಆರ್ಡರ್ ಎಂದರು. ಆಯ್ತು ಬಿಡು ಎಂದ  ಜಗದೀಶ್ ಮತ್ತೆ ವಾಗ್ವಾದ ಮುಂದುವರೆಸಿ, ನೀನು ಸ್ಪರ್ಧಿಯಾಗಲು ಲಾಯಕ್ಕಿಲ್ಲ ಎಂದು ಧನ್‌ರಾಜ್ ಗೆ ಹೇಳಿದರು.  ಧನ್‌ರಾಜ್ ಮಾತ್ರ ಮೈಮ್‌ ಮೂಲಕವೇ ಉತ್ತರ ಕೊಟ್ಟು ಸುಮ್ಮನಾದರು. ಕೊನೆಗೆ ಈ ಟಾಸ್ಕ್ ಗೆದ್ದು, ಉಗ್ರಂ ಮಂಜು ಸೇಫ್ ಆದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories