ಬೆಂಗಳೂರು (ಏ.14): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನರ್‌ರಚನೆ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಬಯಸಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮಂಡಿಸಿದ್ದಾರೆ. ರಾಷ್ಟ್ರ ರಾಜಧಾನಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ಮನೆಗೆ ಸೋಮವಾರ 23 ಶಾಸಕರ ನಿಯೋಗ ತೆರಳಿದ್ದು, ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
09:38 PM (IST) Apr 14
ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
09:27 PM (IST) Apr 14
ಐದು ನಗರ ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಬೇಕು. ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳೇ ಪಕ್ಷದ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ ಎಂದು ಸಲೀಂ ಅಹಮದ್ ತಿಳಿಸಿದರು.
08:46 PM (IST) Apr 14
ಚಿಕ್ಕಮಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಪ್ರತಿಮೆ ಅನಾವರಣ ಕಾರ್ಯಕ್ರ, ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.
08:23 PM (IST) Apr 14
ಬೇಸಿಗೆಯಲ್ಲಿ ಆರೋಗ್ಯವಾಗಿರಲು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದೀರಾ? ಆದರೆ, ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎಂಬುದು ಮುಖ್ಯ. ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು? ಯಾವ ಸಮಯದಲ್ಲಿ ತಿನ್ನಬಾರದು? ಇಲ್ಲಿದೆ ಮಾಹಿತಿ.
08:05 PM (IST) Apr 14
ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
08:00 PM (IST) Apr 14
07:49 PM (IST) Apr 14
07:20 PM (IST) Apr 14
06:45 PM (IST) Apr 14
06:39 PM (IST) Apr 14
ಬೇಸಿಗೆ ಬಂತೆಂದರೆ ಸಾಕು, ಸುಡು ಬಿಸಿಲು, ಸನ್‌ಸ್ಟ್ರೋಕ್ ಭಯ ಹಾಗೂ ಹೊಟ್ಟೆ ಉರಿ ಶುರು. ಈ ಎಲ್ಲಾ ಸಮಸ್ಯೆಗಳಿಗೆ ಬೇಲದ ಹಣ್ಣಿನ ಶರಬತ್ತು ಒಂದು ಸೂಪರ್ ದೇಸಿ ಮದ್ದು. ಬೇಲದ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ.
06:33 PM (IST) Apr 14
ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಪದಾಧಿಕಾರಿಗಳ ಹುದ್ದೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕೆಪಿಸಿಸಿಗೆ ದೂರು ಸಲ್ಲಿಕೆಯಾದ ನಂತರ, ಜಿಲ್ಲಾ ಸಮಿತಿಯು ವಿವಾದಿತ ನೇಮಕಾತಿಗಳಿಗೆ ತಡೆ ನೀಡಿದೆ.
06:14 PM (IST) Apr 14
06:12 PM (IST) Apr 14
ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ 12 ವರ್ಷದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಈ ಹಿಂದೆ ಎರಡು ಬಾರಿ ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಸಾವು ಮೃಗಾಲಯಕ್ಕೆ ನಷ್ಟವಾಗಿದೆ.
05:47 PM (IST) Apr 14
ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಸಿಗುತ್ತದೆ ಎಂದು ನಟ ದುನಿಯಾ ವಿಜಯ್ ಹೇಳಿದರು.
05:33 PM (IST) Apr 14
ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
05:24 PM (IST) Apr 14
ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಘಟನೆ ನಡೆದಿದೆ.
05:18 PM (IST) Apr 14
ಮಹಿಳಾ ಮೀಸಲಾತಿಯು ಒಂದು ಚರಿತ್ರಾರ್ಹ ನಿರ್ಣಯವಾಗಿದ್ದು, ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
05:07 PM (IST) Apr 14
ಅಧಿಕಾರ ದಾಹ ಚಟುವಟಿಕೆಗಳಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಮುಖಂಡರ ನಡೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಎರಡು ತಿಂಗಳ ಒಳಗಾಗಿ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
04:57 PM (IST) Apr 14
04:42 PM (IST) Apr 14
04:39 PM (IST) Apr 14
Kannada Actress Divorce: ಇತ್ತೀಚೆಗೆ ಡಿವೋರ್ಸ್ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್ ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.
03:56 PM (IST) Apr 14
03:22 PM (IST) Apr 14
Sobhita Dhulipala: ನಾಗ ಚೈತನ್ಯ ಜೊತೆ ಮದುವೆಯಾದ ಬಳಿಕ ಶೋಭಿತಾ ಧೂಳಿಪಾಲ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಸಿನಿಮಾಗಳಿಗಿಂತ ಹೆಚ್ಚಾಗಿ ಬ್ರ್ಯಾಂಡ್ ಪ್ರಚಾರಗಳಿಂದಲೇ ಕೋಟಿ ಸಂಪಾದಿಸುತ್ತಿದ್ದಾರೆ. ವರ್ಷಕ್ಕೆ ಬರೀ ಬ್ರ್ಯಾಂಡ್ ಪ್ರಮೋಷನ್‌ಗಳಿಂದಲೇ ಶೋಭಿತಾ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ.
03:16 PM (IST) Apr 14
02:59 PM (IST) Apr 14
02:53 PM (IST) Apr 14
ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕದ ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಚಿತಪಡಿಸಿದ್ದಾರೆ.
02:51 PM (IST) Apr 14
Train Ticket Booking: ಭಾರತೀಯ ರೈಲ್ವೆಯು ಕಾಯ್ದಿರಿಸದ ಟಿಕೆಟ್‌ಗಳ ಮೇಲೆ 3% ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಜುಲೈ 14, 2026ರ ವರೆಗೆ ಲಭ್ಯವಿರಲಿದೆ. ಪ್ರತಿದಿನ ಪ್ರಯಾಣಿಸುವವರಿಗೆ ಈ ಸಣ್ಣ ರಿಯಾಯಿತಿಯು ದೊಡ್ಡ ಉಳಿತಾಯಕ್ಕೆ ಕಾರಣವಾಗಬಹುದು. ಇದರ ಸಂಪೂರ್ಣ ವಿವರ ಇಲ್ಲಿದೆ.
01:45 PM (IST) Apr 14
Who is Praful Hinge: ಇತ್ತೀಚೆಗೆ ಮ್ಯಾನಿಫೆಸ್ಟೇಶನ್ ಬಗ್ಗೆ ಸಿಕ್ಕಾಪಟ್ಟೆ ಮಾತು ಕೇಳಿ ಬರುತ್ತಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಟೀಂನ ವೈಭವ್ ಸೂರ್ಯವಂಶಿಯನ್ನು ಮೊದಲ ಬಾಲ್‌ನಲ್ಲೇ ಔಟ್ ಮಾಡ್ತೀನಿ ಎಂದು ಹೇಳಿದ್ದ ಪ್ರಫುಲ್ ಹಿಂಗೆ ಅವರು ಅದೇ ಥರ ನಡೆದುಕೊಂಡರು.
01:29 PM (IST) Apr 14
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಟ್ರಸ್ಟಿ ಚಂದ್ರಶೇಖರ ಪೂಜಾರ್ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಮತ್ತು ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಎಂದು ಆರೋಪಿಸಿ, ಶ್ರೀಗಳು ತಕ್ಷಣವೇ ಮಠವನ್ನು ತೊರೆಯಬೇಕೆಂದು ಆಗ್ರಹಿಸಿದ್ದಾರೆ.
12:45 PM (IST) Apr 14
Kannada Tv Actress: ಕನ್ನಡದ ಕೆಲ ನಟಿಯರು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿ ಕೂಡ ಹೆಸರು ಮಾಡಿದ್ದಾರೆ. ಇನ್ನೂ ಕೆಲ ನಟಿಯರು ಸಹನಟರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಈ ಆರ್ಟಿಕಲ್ ನೋಡಿ. ಒಟ್ಟಿನಲ್ಲಿ ಪ್ರೀತಿ ಮುಖ್ಯ ಅಲ್ವೇ?
12:22 PM (IST) Apr 14
ಬೆಳಗಾವಿಯಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಯುವಕನೋರ್ವ ಬೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
11:48 AM (IST) Apr 14
11:43 AM (IST) Apr 14
ಮೈಸೂರಿನಲ್ಲಿ ಆಟೋ ಗ್ಯಾಸ್ ಕೊರತೆಯಿಂದ ಚಾಲಕರು ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಪರದಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ, ಕಿರಣ್ ಎಂಬ ಫೈನಾನ್ಷಿಯರ್ ನೂರಾರು ಚಾಲಕರಿಗೆ ತಲಾ 200 ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ.
11:41 AM (IST) Apr 14
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗವು ಹಾವೇರಿ-ಬೆಂಗಳೂರು, ಹುಬ್ಬಳ್ಳಿ-ಹಾವೇರಿ-ಬೆಂಗಳೂರು ಹಾಗೂ ದಾವಣಗೆರೆ-ಹಾವೇರಿ-ಪಣಜಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ಸುಗಳ ಸಂಚಾರವನ್ನು ಆರಂಭಿಸಿದೆ. ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ಈ ನೂತನ ಸಾರಿಗೆ ಸೇವೆಗೆ ಚಾಲನೆ ನೀಡಿದರು.
11:40 AM (IST) Apr 14
Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್ ಸಮರ್ಥ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ಬಿಚ್ಚಿಟ್ಟಿದ್ದಾರೆ.
11:33 AM (IST) Apr 14
ಧಾರವಾಡದಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಮುನ್ನವೇ ಪೊಲೀಸರು ವಿದ್ಯಾರ್ಥಿ ಮುಖಂಡರಿಗೆ ನೋಟಿಸ್ ನೀಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದರೂ ಹೋರಾಟ ಮುಂದುವರಿಸಲು ಯುವಕರು ಸಜ್ಜಾಗಿದ್ದಾರೆ.
11:16 AM (IST) Apr 14
ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಸಂಪರ್ಕದ ಶಂಕೆ ವ್ಯಕ್ತವಾಗಿದೆ. ಯುವತಿಯರ ಖಾಸಗಿ ವೀಡಿಯೋ, ಫೋಟೋಗಳಿರುವ ಆತನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
11:06 AM (IST) Apr 14
11:00 AM (IST) Apr 14
karna serial: ಕರ್ಣ ಧಾರಾವಾಹಿ ಆರಂಭವಾಗಿ 200 ಸಂಚಿಕೆಗಳು ಪ್ರಸಾರ ಆಗಿವೆ. ಕರ್ಣ, ನಿತ್ಯಾ, ನಿಧಿ ಪಾತ್ರದ ಸುತ್ತವೇ ಈ ಸೀರಿಯಲ್ ಕತೆ ಸಾಗುತ್ತಿದೆ. ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ. ಈಗ ಸೀರಿಯಲ್ ಬಗ್ಗೆ ಭವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
10:56 AM (IST) Apr 14