Published : Sep 11, 2026, 07:00 AM ISTUpdated : Sep 11, 2026, 11:19 PM IST

Karnataka News Live: Bangladesh - ಚಿನ್ಮಯ ಕೃಷ್ಣ ದಾಸ್ ಬಂಧನ; ಬಾಂಗ್ಲಾದಲ್ಲಿ ನಡೆದ ಮಹಾಪಾಪಕ್ಕೆ ಉತ್ತರ ನೀಡಬೇಕಿದೆ ತಾರಿಕ್ ರಹಮಾನ್!

ಸಾರಾಂಶ

ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ಟನಲ್ ರಸ್ತೆ ಮಾಡೇ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಟನಲ್ ರಸ್ತೆ, ಬ್ಯೂಸಿನೆಸ್ ಕಾರಿಡಾರ್, ಡಬಲ್ ಡೆಕ್ಕರ್ ರಸ್ತೆ ಸೇರಿದಂತೆ ಪ್ರಮುಖ ಯೋಜನೆಗಳು ನನ್ನ ಅವಧಿಯಲ್ಲಿ ನಡೆಯಲಿದೆ. ನ್ಯಾಯಾಲಯದಿಂದ ಯಾವುದೇ ಕಾನೂನಾತ್ಮಕ ತೊಡಕು ಬರದಿದ್ದರೆ ಎಲ್ಲಾ ಯೋಜನೆಗಳು ಕಾರ್ಯಾರಂಭಗೊಳ್ಳಲಿದೆ ಎಂದಿದ್ದಾರೆ. ರಾಜ್ಯದ ಕ್ಷಣ ಕ್ಷಣದ ಅಪ್‌ಡೇಟ್ ಸುದ್ದಿ ಇಲ್ಲಿದೆ

Chinmoy Das

11:19 PM (IST) Sep 11

Bangladesh - ಚಿನ್ಮಯ ಕೃಷ್ಣ ದಾಸ್ ಬಂಧನ; ಬಾಂಗ್ಲಾದಲ್ಲಿ ನಡೆದ ಮಹಾಪಾಪಕ್ಕೆ ಉತ್ತರ ನೀಡಬೇಕಿದೆ ತಾರಿಕ್ ರಹಮಾನ್!

ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಹಕ್ಕುಗಳ ಹೋರಾಟಗಾರ ಸಂತ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ಅನಾರೋಗ್ಯ ಪೀಡಿತ ತಾಯಿ ನೋಡಲು ಪೆರೋಲ್ ನಿರಾಕರಿಸಲಾಯಿತು. ತಾಯಿಯ ಮರಣಾನಂತರ ಅಂತ್ಯಕ್ರಿಯೆಗೆ ಕೇವಲ ಐದು ಗಂಟೆಗಳ ಪೆರೋಲ್ ನೀಡಿದ ಅಮಾನವೀಯ ಘಟನೆ, ತಾರಿಕ್ ರಹಮಾನ್ ಉತ್ತರಿಸಬೇಕಿದೆ. ಅಷ್ಟೇ ಅಲ್ಲ ಅವರ ಮೇಲಿರುವ ಕೇಸ್‌ ಯಾವವು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story

11:14 PM (IST) Sep 11

15 ವರ್ಷಗಳಲ್ಲಿ 96 ಕಿ.ಮೀ ಬೆಳೆದ ನಮ್ಮ ' ದುಬಾರಿ' ಮೆಟ್ರೋ, ನಿರೀಕ್ಷಿತ ಮಟ್ಟಕ್ಕೆ ಮುಟ್ಟದ ಪ್ರಯಾಣಿಕರ ಸಂಖ್ಯೆ

ಬೆಂಗಳೂರಿನ 'ನಮ್ಮ ಮೆಟ್ರೋ' 96 ಕಿ.ಮೀ.ಗೆ ವಿಸ್ತರಿಸಿದರೂ, ನಿರೀಕ್ಷಿತ 30 ಲಕ್ಷದ ಬದಲು ಕೇವಲ 10 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಿದೆ. ಈ ಹಿನ್ನಡೆಗೆ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' ಕೊರತೆಯೇ ಪ್ರಮುಖ ಕಾರಣವಾಗಿದೆ.

Read Full Story

10:48 PM (IST) Sep 11

ಬಾಯಲ್ಲಿ ಸಿಮ್ ಕಾರ್ಡ್ ಅಡಗಿಸಿ ಪ್ರಜ್ವಲ್‌ಗೆ ನೀಡಿದ್ದ ಡಿಜೆ ಹಳ್ಳಿ ಆರೋಪಿ! - ಫೋನ್‌ಗಾಗಿ 70 ಸಾವಿರ, ಸಿಮ್‌ಗೆ 30 ಸಾವಿರ ರೂ. ಲಂಚ!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನುಬಾಹಿರವಾಗಿ ಮೊಬೈಲ್ ತಲುಪಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಜೈಲು ವಾರ್ಡನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

Read Full Story

10:29 PM (IST) Sep 11

Cricket - ವೈಭವ್ ಸೂರ್ಯವಂಶಿಯನ್ನು ಆಡಿಸಬೇಡಿ’! ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ದಿಗ್ಗಜರ ಖಡಕ್‌ ಮಾತು!

ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಟಿ20 ಸರಣಿಗೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ಅವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಹಿರಿಯ ಆಟಗಾರ ಆಗ್ರಹಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಮೇಲೆ ನಂಬಿಕೆ ಇಡಬೇಕು ಮತ್ತು ಕೆಲವೇ ಪಂದ್ಯಗಳ ವೈಫಲ್ಯಕ್ಕೆ ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story

09:49 PM (IST) Sep 11

BRICS - ಟಾಲ್‌ಸ್ಟಾಯ್ ಬರೆದ ಪತ್ರ, ಗಾಂಧೀಜಿಗೆ ಸಿಕ್ಕ 'ಖಜಾನೆ' ಇಂದು ಪುಟಿನ್‌ಗೆ ಮೋದಿ ಸರ್ಪ್ರೈಸ್ ಗಿಫ್ಟ್!

ಲಿಯೋ ಟಾಲ್‌ಸ್ಟಾಯ್ ಅವರ 'ಹಿಂದೂಗೆ ಪತ್ರ' ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಸ್ಪೂರ್ತಿ ನೀಡಿತು. ಈ ಪತ್ರದ ಮೂಲಕ ಗಾಂಧೀಜಿಗೆ ಪರಿಚಯವಾದ 'ತಿರುಕ್ಕುರಲ್' ತಮಿಳು ಮಹಾಕಾವ್ಯ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧಾಂತಕ್ಕೆ ಬುನಾದಿಯಾಯಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

09:36 PM (IST) Sep 11

'ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ' - ಗಣೇಶ ಹಬ್ಬಕ್ಕೂ ಮುನ್ನ ಎಸ್‌ಪಿ ಸಾಹಿಲ್ ಖಡಕ್ ಸೂಚನೆ!

ಗಂಗಾವತಿಯಲ್ಲಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ. ಗಣೇಶ ಹಬ್ಬದ ಮುನ್ನ ಎಸ್‌ಪಿ ಸಾಹಿಲ್ ಬಾಗ್ಲಾ ಸೌಹಾರ್ದತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಬ್ಬದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

Read Full Story

08:29 PM (IST) Sep 11

'ಸ್ಟಾರ್ ಹೀರೋಗಳಿಗಿಂತ ನನಗೆ ಪಾತ್ರವೇ ಮುಖ್ಯ' - ಕ್ಯೂಟ್ ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ದೇಕೆ?

ಕನ್ನಡ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಸಂಖ್ಯೆಯಿಗಿಂತ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

Read Full Story

08:01 PM (IST) Sep 11

Bribe - ಕಾಮಗಾರಿಗೆ 30% ಲಂಚದ ಕಮಿಷನ್ ಬೇಡಿಕೆ; ಲಂಚ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಬಿದ್ದ RFO!

ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಂಜೂರಾದ ಕಾಮಗಾರಿಗೆ ಗುತ್ತಿಗೆದಾರನಿಂದ 30% ಕಮಿಷನ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, RFO ಹಾಗೂ ಅವರ ಸಹವರ್ತಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

Read Full Story

07:52 PM (IST) Sep 11

'ನಾನು ಸಿಂಪಲ್ ನನ್ನ ಪೆನ್ನು ತುಂಬಾ ಪವರ್ ಫುಲ್' - ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಗುಡುಗು

‘ನಾನು ಸಿಂಪಲ್, ನನ್ನ ಪೆನ್ನು ಪವರ್‌ಫುಲ್’ ಎಂದು ಬೆಳ್ಳೂರಿನಲ್ಲಿ ಗುಡುಗಿದ ಉಪಲೋಕಾಯುಕ್ತ ಬಿ.ವೀರಪ್ಪ. ಡಾಟಾ ಆಪರೇಟರ್ ವಹಿವಾಟು, ಎಫ್‌ಸಿ ಮುಗಿದ ಶಾಲಾ ಬಸ್‌ಗಳು, ಆಸ್ಪತ್ರೆ ಹಾಗೂ ಹಾಸ್ಟೆಲ್ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story

07:48 PM (IST) Sep 11

ವೃಷಭಾವತಿ ಆಯ್ತು, ಈಗ ಕಾವೇರಿಗೂ ಕಂಟಕ; ಜೀವನದಿಗೆ ಸೇರುತ್ತಿದೆ ಬೆಂಗಳೂರಿನ ಶೇ. 50ರಷ್ಟು ಕೊಳಚೆ ನೀರು

ಬೆಂಗಳೂರಿನಿಂದ ಉತ್ಪತ್ತಿಯಾಗುವ ಶೇ. 47ರಷ್ಟು ಕೊಳಚೆ ನೀರು ಯಾವುದೇ ಶುದ್ಧೀಕರಣವಿಲ್ಲದೆ ನೇರವಾಗಿ ಕಾವೇರಿ ನದಿ ಸೇರುತ್ತಿದ್ದು, ಇದು ತಮಿಳುನಾಡಿನವರೆಗೂ ಮಾಲಿನ್ಯ ಉಂಟುಮಾಡುತ್ತಿದೆ. .

Read Full Story

07:18 PM (IST) Sep 11

ಕೋಟಿ ಹಣಕ್ಕಿಂತ ಬಡ ಜನರು ಕೊಟ್ಟ ₹10, ₹20 ಬೆಲೆ ಹೆಚ್ಚು - ಮೋಹಕ ತಾರೆ ರಮ್ಯಾ ಹೇಳಿದ್ದೇನು?

ಸ್ಯಾಂಡಲ್‌ವುಡ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಹಣ, ಖ್ಯಾತಿ ಶಾಶ್ವತವಲ್ಲ ಎಂದು ಹೇಳಿದ್ದಾರೆ. ಮಂಡ್ಯ ರಾಜಕೀಯ ಪ್ರಚಾರದ ವೇಳೆ ಜನರು ನೀಡಿದ ₹10, ₹20, ₹50 ನೆನಪಿಸಿಕೊಂಡ ರಮ್ಯಾ ಮಾತುಗಳು ಇದೀಗ ವೈರಲ್ ಆಗಿವೆ.

Read Full Story

07:14 PM (IST) Sep 11

ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌

ಆಪಲ್‌ನ ಹೊಸ 'ಐಫೋನ್ ಡ್ಯುಯೋ' ಬೆಲೆಯು ಭಾರತದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್‌ನ ಫ್ರೆಷರ್ಸ್ ವಾರ್ಷಿಕ ಸಂಬಳಕ್ಕೆ ಸಮನಾಗಿದೆ ಎಂದು 'ಎಕ್ಸ್'ನಲ್ಲಿ ವೈರಲ್ ಆದ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.

Read Full Story

07:10 PM (IST) Sep 11

Viral News - ನೆಟ್‌ವರ್ಕ್ ಸಿಗಲಿಲ್ಲವೆಂದು Jio ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು! ಎಂಪ್ಲಾಯ್‌ ಸ್ಥಿತಿ ಅಯೋಮಯ

ಉತ್ತರ ಪ್ರದೇಶದ ಫತೇಪುರ್‌ನಲ್ಲಿ 5G ನೆಟ್‌ವರ್ಕ್ ಸಮಸ್ಯೆಯಿಂದ ಕೋಪಗೊಂಡ ಗ್ರಾಮಸ್ಥರು, ಜಿಯೋ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೌಕರನನ್ನು ರಕ್ಷಿಸಿ, ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Read Full Story

06:16 PM (IST) Sep 11

ತಿಂಗಳಿಗೆ 64 ಲಕ್ಷ ರೂಪಾಯಿ ಬಾಡಿಗೆ, ಬಿಎಂಟಿಸಿ ಕಚೇರಿಗೆ ಶಿಫ್ಟ್‌ ಆಗುವ ಪ್ಲ್ಯಾನ್‌ ಡ್ರಾಪ್‌ ಮಾಡಿದ ಬಿಡಿಎ

ತನ್ನ ಪ್ರಧಾನ ಕಚೇರಿಯ ಮರುಅಭಿವೃದ್ಧಿಗಾಗಿ, ಮೂರು ಬಿಎಂಟಿಸಿ ಸಂಕೀರ್ಣಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವ ಯೋಜನೆಯನ್ನು ಬಿಡಿಎ ಕೈಬಿಟ್ಟಿದೆ. ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದೀಗ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ.

Read Full Story

05:48 PM (IST) Sep 11

90s Kids.. ನಿಮ್ಮ ಬಾಲ್ಯದ ಈ ಕಾರ್ಟೂನ್ ನೆನಪಿದೆಯಾ? ಜಿಪುಣ ಅಂಕಲ್ ಸ್ಕ್ರೂಜ್ ಕಥೆಯಿದು!

90s Kids DuckTales Cartoon Nostalgia
90ರ ದಶಕದ ಮಕ್ಕಳಾ ನೀವು? ಹಾಗಿದ್ರೆ ದೂರದರ್ಶನದಲ್ಲಿ ಬರ್ತಿದ್ದ ಡೊನಾಲ್ಡ್ ಡಕ್ ಕಾರ್ಟೂನ್ ನೆನಪಿದೆಯಾ? ಅಂಕಲ್ ಸ್ಕ್ರೂಜ್, ಹ್ಯೂಯಿ, ಡ್ಯೂಯಿ, ಲೂಯಿ ಎಲ್ಲ ನೆನಪಿದ್ದಾರಾ? ಬನ್ನಿ, ಆ ಕಾಮಿಡಿ ಸೀರಿಸ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.

Read Full Story

05:21 PM (IST) Sep 11

ಈ ನಟ ಡ್ಯಾನ್ಸ್ ಮಾಡ್ತಿದ್ರೆ ಕಣ್ಣು ಮಿಟುಕಿಸೋಕೆ ಆಗಲ್ಲ.. ಮೈಕೇಲ್ ಜಾಕ್ಸನ್‌ಗಿಂತ ಬೆಸ್ಟ್ - ನಟಿ ರಂಭಾ

ನಟಿ ರಂಭಾ ಜೂ.ಎನ್‌ಟಿಆರ್ ಅವರ ಡ್ಯಾನ್ಸ್ ಬಗ್ಗೆ ಮನಸಾರೆ ಹೊಗಳಿದ್ದಾರೆ. ‘ನಾಚೋರೆ ನಾಚೋರೆ’ ಹಾಡಿನಲ್ಲಿನ ತಾರಕ್ ಡ್ಯಾನ್ಸ್‌ನ್ನು ಮೆಚ್ಚಿಕೊಂಡಿರುವ ರಂಭಾ, ತಮ್ಮ ದೃಷ್ಟಿಯಲ್ಲಿ ಮೈಕೇಲ್ ಜಾಕ್ಸನ್‌ಗಿಂತಲೂ ತಾರಕ್ ಬೆಸ್ಟ್ ಡ್ಯಾನ್ಸರ್ ಎಂದು ಹೇಳಿದ್ದಾರೆ.

Read Full Story

04:54 PM (IST) Sep 11

ರಾಜ್ ಬಿ. ಶೆಟ್ಟಿಗೆ ಕಾಡ್ತಿದೆ ಆ ನಿಗೂಢ ರಹಸ್ಯ.. 'ರಕ್ಕಸಪುರದೊಳ್' ಪೊಲೀಸ್‌ಗೆ ಕಂಡ ಅತೀಂದ್ರಿಯ ತಿರುವು!

ನಟ ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಸಿನಿಮಾ ಇದೀಗ Amazon Prime Videoನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ರೈಂ, ಮಿಸ್ಟರಿ ಮತ್ತು ಅತೀಂದ್ರಿಯ ಅಂಶಗಳ ಈ ಥ್ರಿಲ್ಲರ್ ಸಿನಿಮಾವನ್ನು ಮನೆಯಲ್ಲೇ ವೀಕ್ಷಿಸಿ.

Read Full Story

04:32 PM (IST) Sep 11

20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!

ವಿಪ್ರೋ ಸಂಸ್ಥೆಯು ತನ್ನ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ಮೂಲಕ ಸುಮಾರು 20,000 ಉದ್ಯೋಗಿಗಳ ಕೆಲಸದ ಸಾಮರ್ಥ್ಯಕ್ಕೆ ಸಮನಾದ ಉತ್ಪಾದಕತೆಯನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಉಳಿತಾಯವಾದ ಮಾನವ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ.

Read Full Story

04:28 PM (IST) Sep 11

Election - ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ; ಕಾಲೇಜು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ! ಗೆದ್ದು ಬೀಗಿದ ಎಬಿವಿಪಿ!

ಕಾಲೇಜು ಚುನಾವಣೆಯಲ್ಲಿ, ಕೊನೆ ಕ್ಷಣದಲ್ಲಿ ಸರ್ಕಾರ ಹೊರಡಿಸಿದ ನೇರ ಚುನಾವಣೆ ಆದೇಶವನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತು. ನಿಗದಿಯಂತೆ ನಡೆದ ಪರೋಕ್ಷ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

Read Full Story

04:25 PM (IST) Sep 11

ಆಫ್ರಿಕಾದಲ್ಲಿ ಇನ್ನೂ ವಹಿವಾಟು ಶುರುವಾಗಿಲ್ಲ, ವಿದೇಶಿ ಹೂಡಿಕೆ, ₹2 ಕೋಟಿ ಹಣದ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕರೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಹಣಕ್ಕೆ ಮತ್ತು ವಿದೇಶಿ ಕಂಪನಿ ನೋಂದಣಿಗೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಬೆಂಬಲವಿದೆ ಎಂದು ತಿಳಿಸಿದ್ದಾರೆ.
Read Full Story

04:03 PM (IST) Sep 11

Cricket - ಭಾರತದಲ್ಲಿ ಪತ್ನಿ ಸಾವು, ಕೊನೆಯ ಮಾತು ನೆನೆದು ಕಣ್ಣೀರು ಸುರಿಸಿದ ವಾಸಿಂ ಅಕ್ರಮ್!

ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್, ತಮ್ಮ ಮೊದಲ ಪತ್ನಿ ಹುಮಾ ಅವರ ಸಾವಿನ ನೋವನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಚಿಕಿತ್ಸೆಗಾಗಿ ಭಾರತದ ಚೆನ್ನೈಗೆ ಬಂದಾಗ ಪತ್ನಿ ಕೊನೆಯುಸಿರೆಳೆದಿದ್ದು, ವೀಸಾ ಇಲ್ಲದಿದ್ದರೂ ಭಾರತೀಯ ಅಧಿಕಾರಿಗಳು ತೋರಿದ ಮಾನವೀಯತೆಯನ್ನು ಅವರು ಸ್ಮರಿಸಿದ್ದಾರೆ. ಪತ್ನಿಯ ಕೊನೆಯ ಮಾತುಗಳನ್ನು ನೆನೆದು ಅವರು ಭಾವುಕರಾಗಿದ್ದಾರೆ.

Read Full Story

03:05 PM (IST) Sep 11

ಬೆಂಗಳೂರು - ಕಡಿಮೆ ಬೆಲೆಗೆ ಸಿಗುತ್ತೆ ಅಂತ ಈ ಔಷಧಿ ತಗೊಳ್ತಿದ್ದೀರಾ? ಬಯಲಾಯ್ತು ದಂಧೆ, ಕ್ಯಾನ್ಸರ್ ಮಾತ್ರೆಗಳೇ ನಕಲಿ!

ಕರ್ನಾಟಕ ಸರ್ಕಾರದ ಎಸ್‌ಐಟಿ ಮತ್ತು ಔಷಧ ನಿಯಂತ್ರಣ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಿ, 6 ರಾಜ್ಯಗಳಲ್ಲಿ ವ್ಯಾಪಿಸಿದ್ದ ಬೃಹತ್ ನಕಲಿ ಔಷಧಿ ಜಾಲವನ್ನು ಭೇದಿಸಿದೆ. ಬೆಂಗಳೂರಿನ 'ಕೃಪಾ ಫಾರ್ಮಾ' ಮಾಲೀಕನನ್ನು ಬಂಧಿಸಿದ್ದು, ಈ ಜಾಲವು ಕ್ಯಾನ್ಸರ್ ಹಾಗೂ ಇತರೆ ಜೀವ ರಕ್ಷಕ ಔಷಧಿಗಳನ್ನು ನಕಲಿಯಾಗಿ ತಯಾರಿಸಿ ಆಸ್ಪತ್ರೆಗಳಿಗೆ ಪೂರೈಸುತ್ತಿತ್ತು.
Read Full Story

01:27 PM (IST) Sep 11

ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಮನೆ ಮುಂದೆ ಚಿರತೆ ಪ್ರತ್ಯಕ್ಷ, ನಗರದಲ್ಲಿ ಹೆಚ್ಚಿದ ಆತಂಕ

ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಜನರ ಆತಂಕ ಹೆಚ್ಚಿಸಿದೆ. ಈ ಬಾರಿ ಬನಶಂಕರಿ 6ನೇ ಸ್ಟೇಜ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ದಾಖಲಾಗಿದೆ. ಮನೆ ಮುಂದೆ, ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.

Read Full Story

12:19 PM (IST) Sep 11

ಫೋನ್,ATM ಇಲ್ಲ, ಕಾಣೆಯಾದ 18ರ ಹುಡುಗಿಯನ್ನು 7 ತಿಂಗಳ ಬಳಿಕ ಪತ್ತೆ ಹಚ್ಚಿದ ಆಧಾರ್ ಒಟಿಪಿ

ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಎಲ್ಲಾ ಕಡೆ ಹುಡುಕಿದ್ದಾರೆ. ಹೈಕೋರ್ಟ್ ಸೂಚನೆ ಮೇರೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಸುಳಿವೇ ಇರಲಿಲ್ಲ. 7 ತಿಂಗಳ ಬಳಿಕ ಒಟಿಪಿಯಿಂದ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಏನಿದು ಒಟಿಪಿ ಸ್ಟೋರಿ.

Read Full Story

10:36 AM (IST) Sep 11

ಮಳೆಗಾಲದಲ್ಲೂ ಬಿಸಿಲ ಬೇಗೆ, ಆಗಸ್ಟ್ ಜಾಗತಿಕವಾಗಿ ಅತ್ಯಂತ ಬಿಸಿಯಾದ ತಿಂಗಳು, ಕರ್ನಾಟಕದಾದ್ಯಂತ ತಾಪಮಾನ ದಿಢೀರ್ ಜಿಗಿತ!

2026ರ ಆಗಸ್ಟ್ ತಿಂಗಳು ಜಾಗತಿಕವಾಗಿ ಅತಿ ಹೆಚ್ಚು ಉಷ್ಣಾಂಶ ದಾಖಲಿಸಿದ್ದು, ಇದಕ್ಕೆ ಹಸಿರುಮನೆ ಅನಿಲಗಳು ಮತ್ತು 'ಎಲ್ ನಿನೋ' ಕಾರಣವಾಗಿವೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲಾಗಿದ್ದು, ರಾಜ್ಯದಲ್ಲಿ ತೀವ್ರ ಬರಗಾಲದ ಜೊತೆಗೆ ತಾಪಮಾನವು ಸರಾಸರಿಗಿಂತ 5.5 ಡಿಗ್ರಿಯಷ್ಟು ಹೆಚ್ಚಳವಾಗಿದೆ, ಇದು ಕೃಷಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.
Read Full Story

10:04 AM (IST) Sep 11

ತಮಿಳುನಾಡಿಗೆ ದಿಢೀರ್ ಕಾವೇರಿ ನೀರು ಹರಿಸಿದ ಸರ್ಕಾರ, ನದಿಯಲ್ಲಿ ಸಿಲುಕಿದ 6 ರಾಸುಗಳು

ಕರ್ನಾಟಕದಲ್ಲಿ ಮಳೆ ಕೊರತೆ ನಡುವೆ ಪ್ರಾಧಿಕಾರ ಆದೇಶ ರಾಜ್ಯದ ಸಂಕಷ್ಟ ಹೆಚ್ಚಿಸಿದೆ. ಇದರ ನಡುವೆ ನಿನ್ನ ಸಂಜೆ ದಿಢೀರ್ ತಮಿಳುನಾಡಿಗೆ ಕಾವೇರು ನೀರು ಹರಿಸಲಾಗಿದ್ದು, ನದಿಯಲ್ಲಿ 6 ರಾಸುಗಳು ಸಂಕಷ್ಟ ಸಿಲುಕಿದ ಘಟನೆ ನಡೆದಿದೆ.

Read Full Story

09:35 AM (IST) Sep 11

ಇತಿಹಾಸ ಬರೆಯುವುದಲ್ಲ, ಸೃಷ್ಟಿಸುವುದರಲ್ಲಿ ನನಗೆ ನಂಬಿಕೆ, ಟನಲ್ ರಸ್ತೆ ಮಾಡೇ ಮಾಡ್ತೇನೆ - ಸಿಎಂ ಡಿಕೆಶಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜಕೀಯ ವಿರೋಧ ಮತ್ತು ನ್ಯಾಯಾಂಗದ ಅಡೆತಡೆಗಳ ನಡುವೆಯೂ ಬೆಂಗಳೂರಿನ ಟನಲ್‌ ರಸ್ತೆ, ಬ್ಯುಸಿನೆಸ್‌ ಕಾರಿಡಾರ್‌ನಂತಹ ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಸಹಕರಿಸಿದರೆ ಒಂದು ವರ್ಷದಲ್ಲಿ ಮೇಕೆದಾಟು ಯೋಜನೆಗೆ ಚಾಲನೆ ನೀಡುವುದಾಗಿ ಮತ್ತು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನೀತಿ ತರುವುದಾಗಿ ಭರವಸೆ ನೀಡಿದ್ದಾರೆ.
Read Full Story

08:57 AM (IST) Sep 11

ಬೆಂಗಳೂರು-ಮಂಗಳೂರು ವಂದೇ ಭಾರತ್ 2ನೇ ಟ್ರಯಲ್ ರನ್ ಯಶಸ್ವಿ - ಪುತ್ತೂರಲ್ಲಿ ನಿಲ್ಲದೆ ನಿರಾಸೆ ಮೂಡಿಸಿದ ರೈಲು!

ಮಂಗಳೂರು-ಯಶವಂತಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ನಡೆದಿದೆ. ಆದರೆ, ತಾತ್ಕಾಲಿಕ ವೇಳಾಪಟ್ಟಿಯಲ್ಲಿ ನಿಲುಗಡೆ ನಿಗದಿಯಾಗಿದ್ದರೂ ಕಬಕ-ಪುತ್ತೂರು ನಿಲ್ದಾಣದಲ್ಲಿ ರೈಲು ನಿಲ್ಲದೆ ಸಾಗಿದ್ದು, ಸ್ವಾಗತಿಸಲು ಸೇರಿದ್ದ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಘಟನೆಯ ಹಿಂದಿನ ಕಾರಣ ನಿಗೂಢವಾಗಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆರೋಪಗಳು ಕೇಳಿಬಂದಿವೆ.
Read Full Story

08:06 AM (IST) Sep 11

ಬಿಎಂಟಿಸಿ ಬಸ್‌ ಸ್ಟೇರಿಂಗ್ ಕಿತ್ಕೊಂಡು ಬಂತು ಡ್ರೈವರ್ ಕೈಗೆ, ಪ್ರಯಾಣಿಕರ ಜೀವ ಬಂದಿತ್ತು ಬಾಯಿಗೆ!

ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಸ್ಟೇರಿಂಗ್ ವೀಲ್ ಏಕಾಏಕಿ ಕಳಚಿ ಚಾಲಕನ ಕೈಗೆ ಬಂದಿದೆ. ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು, ಈ ಘಟನೆಯು ಬಿಎಂಟಿಸಿ ನಿರ್ವಹಣಾ ಲೋಪವನ್ನು ಬಯಲು ಮಾಡಿದೆ ಮತ್ತು ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
Read Full Story

07:00 AM (IST) Sep 11

ಇತಿಹಾಸ ಸೃಷ್ಟಿಸುವಲ್ಲಿ ನಂಬಿಕೆ ಇಟ್ಟಿದ್ದೇನೆ, ಡಿಕೆಶಿ

ನಾನು ಇತಿಹಾಸ ಒದುವ ಬದಲು, ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಯೋಜನೆಗಳು ಕಾರ್ಯರೂಪಕ್ಕೆ ತರುತ್ತೇನೆ. ಸಾರ್ವಜನಿಕ ಸಾರಿಗೆ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಬಸ್‌ನಲ್ಲಿ ಓಡಾಡುತ್ತಾರಾ ಎಂದು ಡಿಕೆ ಶಿವಕುಮಾರ್ ಟನಲ್ ರಸ್ತೆ ವಿರೋಧವನ್ನು ಪ್ರಶ್ನಿಸಿದ್ದಾರೆ.


More Trending News