Published : Jun 20, 2026, 07:25 AM ISTUpdated : Jun 20, 2026, 11:03 PM IST

State News Live: Karnataka Police - ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ - ಕಾರಣ ₹3 ಲಕ್ಷ ಹಣ!

ಸಾರಾಂಶ

ಬೆಂಗಳೂರು (ಜೂ.19): ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಶಾಸಕರ ಅಡ್ಡಮತದಾನ ಬಿಜೆಪಿ ಪಾಳೆಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಅಡ್ಡಮತದಾನದ ಸತ್ಯಾಸತ್ಯತೆ ಮತ್ತು ವಾಸ್ತವ ತಿಳಿಯಲು ಮೂವರು ಮುಖಂಡರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದು, ಈ ತಿಂಗಳ 25ರೊಳಗಾಗಿ ಸಮಗ್ರ ನೀಡುವಂತೆ ಸೂಚಿಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:03 PM (IST) Jun 20

Karnataka Police - ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ - ಕಾರಣ ₹3 ಲಕ್ಷ ಹಣ!

Begur Police: ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್‌ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.

Read Full Story

10:22 PM (IST) Jun 20

Sullia - ಆಟವಾಡುತ್ತಿದ್ದ ಅವಳಿ ಮಕ್ಕಳ ಮೇಲೆ ಯಮನ ಕಣ್ಣು - ಕೆರೆಗೆ ಬಿದ್ದು ಇಬ್ಬರು ಸಾವು!

Dakshina Kannada News: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದ ಅವಳಿ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯದ ಕಡೀರದಲ್ಲಿ ನಡೆದಿದೆ.

Read Full Story

09:23 PM (IST) Jun 20

Breaking News - ನಟ ವಿನೋದ್ ಪ್ರಭಾಕರ್ ಅರೋಗ್ಯದಲ್ಲಿ ಏರುಪೇರು - ಆಸ್ಪತ್ರೆಗೆ ದಾಖಲು, ಅಷ್ಟಕ್ಕೂ ಏನಾಯ್ತು?

Vinod Prabhakar Health Update: ಕನ್ನಡ ಚಿತ್ರರಂಗದ ನಟ ವಿನೋದ್ ಪ್ರಭಾಕರ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

08:55 PM (IST) Jun 20

Love Breakup - ಯುವತಿ ಮುಂದೆ ಹೊಟ್ಟೆಗೆ ಚಾಕು ಚುಚ್ಚಿಕೊಂಡ ಯುವಕ - ಆಮೇಲೆನಾಯ್ತು?

Love Breakup: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೊಬ್ಬ ತನ್ನ ಪ್ರೇಯಸಿ ಎದುರೇ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡು ಆತ್ಮ*ಹ*ತ್ಯೆಗೆ ಯತ್ನಿಸಿದ ಘಟನೆ ಆನೇಕಲ್ ವ್ಯಾಪ್ತಿಯಲ್ಲಿ ನಡೆದಿದೆ.

Read Full Story

08:25 PM (IST) Jun 20

International Yoga Day - ಡಾ.ರಾಜ್‌ಕುಮಾರ್ ಯೋಗ ಕಲಿಯಲು ಕಾರಣವಾದ ಆ ಒಂದು ಘಟನೆ ಇದೇ!

International Yoga Day 2026: ಡಾ.ರಾಜ್‌ಕುಮಾರ್ ಅವರ ಆರೋಗ್ಯ, ಫಿಟ್‌ನೆಸ್ ಮತ್ತು ದೀರ್ಘಾಯುಷ್ಯದ ಹಿಂದಿನ ರಹಸ್ಯ ಯೋಗವೇ ಆಗಿತ್ತು. ವೀರಪ್ಪನ್ ಅಪಹರಣದ 90 ದಿನಗಳಲ್ಲೂ ಯೋಗಾಭ್ಯಾಸ ಮುಂದುವರಿಸಿದ್ದ ಅಣ್ಣಾವ್ರ ಪ್ರೇರಣಾದಾಯಕ ಕಥೆ ಇಲ್ಲಿದೆ.

Read Full Story

08:05 PM (IST) Jun 20

Ayogya 2 Movie - ಎಂಟು ವರ್ಷದ ಬಳಿಕ ಹಾಡು ರಿಲೀಸ್‌ ಮಾಡಿ, ತೆರೆ ಕಾಣಲು ಸಜ್ಜಾದ ಅಯೋಗ್ಯ 2 ಸಿನಿಮಾ

Ayogya 2 Movie: ಸತೀಶ್‌ ನಿನಾಸಂ, ರಚಿತಾ ರಾಮ್‌ ಅಭಿನಯದ ‘ಅಯೋಗ್ಯ 2’ ಸಿನಿಮಾದ ಮೊದಲ ರೊಮ್ಯಾಂಟಿಕ್‌ ಹಾಡು ಬಿಡುಗಡೆ ಆಗಿದೆ. ನಟ ಸತೀಶ್‌ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ. ರಚಿತಾ, ಸತೀಶ್ ಇಬ್ಬರು ಒಟ್ಟಿಗೆ ಮತ್ತೆ ‘ಅಯೋಗ್ಯ 2’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 

 

Read Full Story

07:51 PM (IST) Jun 20

Chanakya Niti - ಈ 5 ಬಗೆಯ ಜನರನ್ನು ಪ್ರೀತಿಸಿದರೆ ಸುಖ ಸಿಗೋದಿಲ್ಲ ಅಂತಾರೆ ಚಾಣಕ್ಯ!

Chanakya Relationship Tips: ಆಚಾರ್ಯ ಚಾಣಕ್ಯರ ಪ್ರಕಾರ, ಪ್ರೀತಿ ಮಾಡುವಾಗ ಕೆಲವರಿಂದ ದೂರ ಇರಬೇಕು. ಸ್ವಾರ್ಥಿಗಳು, ಸುಳ್ಳು ಹೇಳುವವರು, ಕೋಪಿಷ್ಟರು ಸೇರಿದಂತೆ 5 ಬಗೆಯ ಜನರನ್ನು ಪ್ರೀತಿಸಿದರೆ..

Read Full Story

07:46 PM (IST) Jun 20

ಆರೋಗ್ಯಕರ ಅಗಸೆಬೀಜದಿಂದ ಚಟ್ನಿ ಪುಡಿ ಮಾಡಿ, ಹೀಗೆ ಸ್ಟೋರ್ ಮಾಡಿದ್ರೆ 6 ತಿಂಗಳು ಏನೂ ಆಗಲ್ಲ

ಅಗಸೆಬೀಜವನ್ನು ನೇರವಾಗಿ ತಿನ್ನಲು ಕಷ್ಟಪಡುವವರಿಗಾಗಿ, ಉತ್ತರ ಕರ್ನಾಟಕ ಶೈಲಿಯ ರುಚಿಕರ ಚಟ್ನಿ ಪುಡಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಮತ್ತು ಸರಳ ಕ್ರಮಗಳನ್ನು ಅನುಸರಿಸಿ, ಆರೋಗ್ಯಕರ ಅಗಸೆಬೀಜ ಚಟ್ನಿ ಪುಡಿಯನ್ನು ತಯಾರಿಸಿ ಆರು ತಿಂಗಳವರೆಗೆ ಸಂಗ್ರಹಿಸಬಹುದು.
Read Full Story

07:44 PM (IST) Jun 20

Amruthadhaare Serial - ಮಲ್ಲಿ, ಸುನೀಲ್‌ ಪಾತ್ರ ಮುಗಿದೋಯ್ತಾ? ಅಧಿಕೃತ ಮಾಹಿತಿ ಕೊಟ್ಟ‌ ನಟ ಯಶವಂತ್

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಮಿಂಚು ನಿಜಕ್ಕೂ ಯಾರ ಮಗಳು ಎನ್ನುವ ಪ್ರಶ್ನೆ ಸುತ್ತವೇ ಇಷ್ಟುದಿನ ಎಪಿಸೋಡ್‌ ಪ್ರಸಾರ ಆಗುತ್ತಿತ್ತು. ಮಲ್ಲಿ, ಸುನೀಲ್‌ ಪಾತ್ರದ ಕಥೆ ಏನು ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟ ಯಶವಂತ್ ಉತ್ತರ ಕೊಟ್ಟಿದ್ದಾರೆ.

Read Full Story

07:40 PM (IST) Jun 20

ಬೆಂಗಳೂರಲ್ಲಿ ಇಡಿ ಭಾರಿ ಬೇಟೆ - ಡಿಜಿಟಲ್ ಮೂಲಕ ಅಕ್ರಮ ಹಣ ವರ್ಗಾವಣೆ, 5 ಪ್ರತಿಷ್ಠಿತ ಕಂಪನಿಗಳ 6 ಕೋಟಿ ರೂ. ಜಪ್ತಿ!

ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) 5 ಟೆಕ್ ಕಂಪನಿಗಳ ಮೇಲೆ ದಾಳಿ ನಡೆಸಿ, ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೂಲಕ ಅಕ್ರಮವಾಗಿ ವಿದೇಶಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದೆ. ಈ ಕಾರ್ಯಾಚರಣೆಯಲ್ಲಿ, ಕಂಪನಿಗಳಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿದ್ದ 6 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಫೆಮಾ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ತನಿಖೆ ಮುಂದುವರೆದಿದೆ.
Read Full Story

07:36 PM (IST) Jun 20

Illegal Occupation - ಮಡಿಕೇರಿಯ ಈ ಸರ್ಕಾರಿ ಕಟ್ಟಡದಲ್ಲಿ ರಾತ್ರಿ ಏನಾಗುತ್ತಿದೆ ಗೊತ್ತಾ?

Kodagu News: ರಂಗ ಮಂದಿರದ ಪಕ್ಕದಲ್ಲಿಯೇ ಶೌಚಾಲಯವಿದ್ದು ಅದೇ ಕಟ್ಟಡದಲ್ಲಿ ಸಣ್ಣದೊಂದು ಕೋಣೆಯೂ ಇದೆ. ಇವೆಲ್ಲವುಗಳಲ್ಲಿ ನಾಲ್ಕೈದು ಜನರು ಅನಧಿಕೃತವಾಗಿ ತಂಗಿರುವುದು ಬೆಳಕಿಗೆ ಬಂದಿದೆ.

Read Full Story

07:12 PM (IST) Jun 20

Love Types - ಪ್ರೀತಿ ಅಂದ್ರೆ ಒಂದೇ ಅಲ್ಲ, 8 ತರ! ಇದರಲ್ಲಿ ನೀವು ಅನುಭವಿಸಿದ್ದು ಎಷ್ಟು?

Love Types: ಪ್ರೀತಿಯಲ್ಲಿ 8 ವಿಧಗಳಿವೆ ಅಂತ ಗ್ರೀಕ್ ತತ್ವಜ್ಞಾನ ಹೇಳುತ್ತೆ. ಹಾಗಾದ್ರೆ ಈ ಇರೋಸ್, ಫಿಲಿಯಾ, ಅಗಾಪೆ ಅಂದ್ರೇನು? ನಮ್ಮ ಸಂಬಂಧಗಳಿಗೆ ಫಿಲೌಟಿಯಾ (ಸ್ವಯಂ-ಪ್ರೀತಿ) ಮತ್ತು ಪ್ರಾಗ್ಮಾ (ವ್ಯಾವಹಾರಿಕ ಪ್ರೀತಿ) ಯಾಕೆ ಮುಖ್ಯ? ಇಲ್ಲಿದೆ ವಿವರ.

Read Full Story

06:28 PM (IST) Jun 20

'ಎಲ್ಲರೂ ಸ್ವಲ್ಪ ಸಾಹಿತ್ಯ ಪಾಹಿತ್ಯ ಓದಿಕೊಳ್ರಪ್ಪ/ಮ್ಮ'.. ಯೋಗರಾಜ್ ಭಟ್ ಪೋಸ್ಟ್ ವೈರಲ್; ಕಾಮೆಂಟ್ಸ್‌ ಏನ್ ಗೊತ್ತಾ?

ಜಯಂತ್ ಸರ್ ನನ್ನ ಕನಸಿನ ಸ್ಕ್ರಿಪ್ಟ್ ಒಂದನ್ನು ನಖಶಿಖಾಂತ ಓದಿ, ಆನಂದಿಸಿ, ಬೆನ್ನು ತಟ್ಟಿದ್ದು ನನ್ನ ಪಾಲಿಗೆ ಈ ದಶಕದ ಖುಷಿ ಸಮಾಚಾರ .. ಬರಹಗಾರ ಮಾತ್ರ ಬರಹಗಾರನನ್ನು ಅರ್ಥ ಮಾಡಿಕೊಳ್ಳಬಲ್ಲ.. ಬಡವ ಮಾತ್ರ ಬಡವನನ್ನು ಅರ್ಥ ಮಾಡಿಕೊಳ್ಳಬಲ್ಲ.. ಕಲೆಗಾರ ಮಾತ್ರ ಕಲೆ ತೊಳೆಯಬಲ್ಲ..

Read Full Story

05:53 PM (IST) Jun 20

Darshan - 'ಬರ್ತಾ ಇದೀನಿ ಚಿನ್ನ..' ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!

Kannada Movie OTT Release: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ.

Read Full Story

05:39 PM (IST) Jun 20

ಬೆಂಗಳೂರಲ್ಲಿ Royal Enfield ಇವಿ ಬೈಕ್ ಫ್ಲೈಯಿಂಗ್ ಫ್ಲಿಯಾ C6 ವಿತರಣೆ, 154 ಕಿ.ಮೀ ರೇಂಜ್, ಅತ್ಯಾಧುನಿಕ ಫೀಚರ್‌!

ರಾಯಲ್ ಎನ್‌ಫೀಲ್ಡ್ ತನ್ನ ಚೊಚ್ಚಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫ್ಲಿಯಾ C6' ಅನ್ನು ಬೆಂಗಳೂರಿನಲ್ಲಿ ಅಧಿಕೃತವಾಗಿ ವಿತರಿಸಲು ಆರಂಭಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ 'ಹಬ್-ಅಂಡ್-ಸ್ಪೋಕ್' ಸೇವಾ ಜಾಲ ಮತ್ತು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ನಂತಹ ವಿಶಿಷ್ಟ ಖರೀದಿ ಆಯ್ಕೆಗಳನ್ನು ಪರಿಚಯಿಸಿದೆ.

Read Full Story

05:27 PM (IST) Jun 20

‘Rolex’ಗೆ ಮರಿ ಟೈಗರ್ ಎಂಟ್ರಿ - ಮೊದಲ ಬಾರಿಗೆ ಒಂದಾದ ಕೋಮಲ್-ವಿನೋದ್ ಪ್ರಭಾಕರ್

Rolex Movie: ವಿಶಿಷ್ಟ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಕೋಮಲ್ ಕುಮಾರ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, 'ರೋಲೆಕ್ಸ್' ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ.

Read Full Story

05:23 PM (IST) Jun 20

ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ. 

Read Full Story

05:07 PM (IST) Jun 20

ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!

ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ, ಅನಧಿಕೃತ ವ್ಯಾಪಾರವನ್ನು ಪ್ರಶ್ನಿಸಿದ್ದಕ್ಕೆ ಪ್ಯಾಂಟ್ರಿ ಸಿಬ್ಬಂದಿ ಮೇಲೆ ಅಕ್ರಮ ಮಾರಾಟಗಾರರ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದೆ. ಈ ಘೋರ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

Read Full Story

05:07 PM (IST) Jun 20

Su From So ದಿನವೇ ರಿಲೀಸ್ ಆಗುತ್ತಿರುವ ‘ಕರಾವಳಿ’ - ಇದ್ರ ಹಿಂದೆ ಇರುವ ಸೀಕ್ರೆಟ್ ಏನು?

Karavali Movie: ಪ್ರಜ್ವಲ್‌ ದೇವರಾಜ್‌ ನಟನೆ, ಗುರುದತ್ತ ಗಾಣಿಗ ನಿರ್ದೇಶನದ ‘ಕರಾವಳಿ’ ಸಿನಿಮಾ ಜುಲೈ 24ರಂದು ಬಿಡುಗಡೆಯಾಗುತ್ತಿದೆ. ರಾಜ್‌ ಬಿ ಶೆಟ್ಟಿ ಈ ಸಿನಿಮಾದಲ್ಲೂ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

Read Full Story

04:47 PM (IST) Jun 20

7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು

ಜೋಡೆತ್ತುಗಳು, ಮೂರು ದಿನಗಳಲ್ಲಿ ಮಾಡುವ ಕೃಷಿ ಕೆಲಸವನ್ನು ಕೇವಲ ಏಳು ಗಂಟೆಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿವೆ. ರೈತರು ಸುಸ್ತಾಗಿ ಬದಲಾದರೂ, ಎತ್ತುಗಳು ನಿರಂತರವಾಗಿ ಆರೂವರೆ ಎಕರೆ ಭೂಮಿಯನ್ನು ಹದಗೊಳಿಸಿವೆ. ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಎತ್ತುಗಳಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.

Read Full Story

04:40 PM (IST) Jun 20

ಏರ್​ಟೆಲ್​ ಸಿಮ್​ ಇದ್ದೋರಿಗೆ ಬರುತ್ತಿಲ್ಲ ಗೃಹಲಕ್ಷ್ಮಿ ಹಣ? ಏನಿದು ಅವ್ಯವಹಾರ- ಸರ್ಕಾರ ಹೇಳಿದ್ದೇನು

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅಕ್ರಮವನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಕರ್ನಾಟಕದ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮಾ ಮಾಡಲು ಸೂಚಿಸಿದೆ. ಅಲ್ಲದೆ, ಹಣ ಜಮೆಯಾದ ತಕ್ಷಣ ಫಲಾನುಭವಿಗಳಿಗೆ ಧ್ವನಿ ಸಂದೇಶದ ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆ ಜಾರಿಯಾಗಲಿದೆ.
Read Full Story

04:36 PM (IST) Jun 20

Censor Certificate - ಕನ್ನಡ ಚಿತ್ರರಂಗಕ್ಕೆ ಎ ಸರ್ಟಿಫಿಕೇಟ್ - ಸ್ಯಾಂಡಲ್‌ವುಡ್‌ ಬಗ್ಗೆ ಬೆಚ್ಚಿಬೀಳಿಸುವ ಸತ್ಯ ಬಯಲು!

Kannada Censor Board: ‘ಎಲ್ಲಾ ವರ್ಗದ ಪ್ರೇಕ್ಷಕರಿಗೆ ಬೇಕಾದ ಅಂಶಗಳು ನಮ್ಮ ಚಿತ್ರದಲ್ಲಿವೆ’- ಪ್ರತಿಯೊಂದು ಚಿತ್ರದವರು ಯಾವ ಕಾರಣಕ್ಕೂ ಮಿಸ್‌ ಮಾಡಿಕೊಳ್ಳದೆ ಹೇಳುವ ಮಾತುಗಳಿವು. 

Read Full Story

04:23 PM (IST) Jun 20

Urabba Movie Review - ಉಜ್ಜನಿ ಜಾತ್ರೆಯ ವೈಭವ, ಚೌಡೇಶ್ವರಿ ಲೀಲೆ, ಹೇಗಿದೆ ತನಿಷಾ ಸಿನಿಮಾ?

Urabba Film Review: ಪ್ರತೀ ವರ್ಷ ವಿಶಿಷ್ಟ ಜಾತ್ರೆ ನಡೆಯುತ್ತದೆ. ಇದರಲ್ಲಿ ಕುರುಬ ಸಮುದಾಯದವರು ಕಂಬ ಪ್ರತಿಷ್ಠಾಪನೆ ಮಾಡಿದರೆ, ದಲಿತರು ಜನಿವಾರ ಧರಿಸಿ 11 ದಿನಗಳ ಕಾಲ ಬ್ರಾಹ್ಮಣ ಸಂಪ್ರದಾಯವನ್ನು ಪಾಲನೆ ಮಾಡುತ್ತಾರೆ.

Read Full Story

04:21 PM (IST) Jun 20

ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!

ಈ ವರ್ಷ  ಮುಂಗಾರು ದುರ್ಬಲಗೊಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಪ್ರಮಾಣದಲ್ಲಿ ಶೇ.54ರಷ್ಟು ಭಾರೀ ಕುಸಿತ ಕಂಡಿದೆ. ಇದರಿಂದಾಗಿ ನದಿಗಳು ಬತ್ತುತ್ತಿದ್ದು, ಡ್ಯಾಂ ಗೇಟ್ ತೆರೆದ ನಂತರ ನೀರಿನ ಸಮಸ್ಯೆ ಉಂಟಾಗಿದೆ ಹಾಗೂ ಭತ್ತದ ಕೃಷಿಕರು ನಾಟಿ ಮಾಡಲು ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Read Full Story

04:08 PM (IST) Jun 20

ಮುಂದಿನ 3 ಗಂಟೆಯಲ್ಲಿ ಬೆಂಗ್ಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಮಳೆ; ಮಧ್ಯಾಹ್ನವೇ ಕತ್ತಲಾಯ್ತು

ಹವಾಮಾನ ಇಲಾಖೆಯು ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Read Full Story

03:25 PM (IST) Jun 20

2028ರ ಮಾರ್ಚ್‌ಗೆ 175 ಕಿಮೀಗೆ ನಮ್ಮ ಮೆಟ್ರೋ ಜಾಲ ವಿಸ್ತರಣೆ, ಆಗಸ್ಟ್ 15ಕ್ಕೆ ಪಿಂಕ್ ಲೈನ್, ನೀಲ ಮಾರ್ಗ ಟ್ರಯಲ್ ರನ್!

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, 'ನಮ್ಮ ಮೆಟ್ರೋ' ಜಾಲವು ಮಾರ್ಚ್ 2028ರ ವೇಳೆಗೆ 175 ಕಿಲೋಮೀಟರ್‌ಗೆ ವಿಸ್ತರಣೆಯಾಗಲಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದ್ದು, 3ನೇ ಹಂತದ ಯೋಜನೆಗೂ ಕೇಂದ್ರದ ಅನುಮೋದನೆ ನಿರೀಕ್ಷೆ.

Read Full Story

02:39 PM (IST) Jun 20

ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!

ಪುತ್ತೂರು-ಸುಬ್ರಹ್ಮಣ್ಯ ರೈಲು ಮಾರ್ಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹18 ಕೋಟಿ ಅನುದಾನದಲ್ಲಿ ಮೂರು ಹೊಸ ರೈಲ್ವೇ ಮೇಲ್ಸೇತುವೆಗಳನ್ನು ಮಂಜೂರು ಮಾಡಿದೆ. ಇದರೊಂದಿಗೆ, ಕಬಕ ಪುತ್ತೂರು ನಿಲ್ದಾಣದಲ್ಲಿ ವಿಸ್ತರಿತ ಶೆಲ್ಟರ್ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ 'ಕೋಚ್ ವಾಟರಿಂಗ್' ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
Read Full Story

02:22 PM (IST) Jun 20

ಬಸ್ ದರದ ಮಾಹಿತಿ ನೀಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ನೀಡಿದ ಸಿಎಂ

ಸಂಪುಟ ಸಭೆಯಲ್ಲಿ ಹೊಸ ಬಸ್‌ಗಳ ಖರೀದಿ, 'ಪ್ರಜಾಸೇವೆ' ಎಂಬ ಹೊಸ ಇಲಾಖೆ ಸ್ಥಾಪನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಇದೇ ವೇಳೆ ಬಸ್ ದರ ಏರಿಕೆ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ.

Read Full Story

02:17 PM (IST) Jun 20

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಮಣಿಸಲು ಹೆಚ್‌ಡಿಕೆ Gen-Z ಮಾಸ್ಟರ್ ಪ್ಲಾನ್! ಮೈತ್ರಿ ಅಭ್ಯರ್ಥಿ ಕವೀಶ್ ಗೌಡ?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ನಡೆಗೆ ಅಸಮಾಧಾನಗೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, ಅವರಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಯುವ ನಾಯಕ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ.
Read Full Story

01:14 PM (IST) Jun 20

ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ - ಹೈಟೆಕ್ ಪದವೀದರರ ಬಂಧನ, 20 ಲಕ್ಷ ಸಂಬಳದ ಟೆಕ್ಕಿ, ಸಿಎ ಉದ್ಯೋಗಿ, ಯೂಟ್ಯೂಬರ್!

ನಟಿ ರುಕ್ಮಿಣಿ ವಸಂತ ಅವರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ಸೃಷ್ಟಿಸಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾವಂತರನ್ನು ಬಂಧಿಸಿದ್ದಾರೆ. ವಿಕೃತ ಮಜಾ ಹಾಗೂ ಹಣದಾಸೆಗಾಗಿ ಈ ಕೃತ್ಯ ಎಸಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇರಿದಂತೆ ಮೂವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Read Full Story

01:03 PM (IST) Jun 20

Bigg Boss ಹೋಗೋ ಮುಂಚೆ 'ಮದುವೆ ಆಗ್ತಿದ್ದೀನಿ' ಎಂದ Bhavya Gowda ಅಕ್ಕ ದಿವ್ಯಾ ಗೌಡ; ಹುಡುಗ ತುಂಬ ಫೇಮಸ್

Karna Serial Actress Bhavya Gowda Sister Divya Gowda: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

12:27 PM (IST) Jun 20

ಮಂಗಳೂರು to ಬೆಂಗಳೂರು 5 ಗಂಟೆ ಜರ್ನಿ, ಶಿರಾಡಿ ಘಾಟ್ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ!

ಬೆಂಗಳೂರು-ಮಂಗಳೂರು ಪ್ರಯಾಣದ ಅವಧಿ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ   ಅಡ್ಡಿ ಎದುರಾಗಿದೆ. ರಸ್ತೆ- ರೈಲು ಮಾರ್ಗಗಳ ಸುರಕ್ಷತಾ ಮಾನದಂಡಗಳಲ್ಲಿನ ವ್ಯತ್ಯಾಸದಿಂದಾಗಿ, ಜಂಟಿ ಯೋಜನೆಯಿಂದ ರೈಲ್ವೆ ಇಲಾಖೆ  ಪ್ರತ್ಯೇಕ ಸಮೀಕ್ಷೆ ನಡೆಸಲು ನಿರ್ಧರಿಸಿವೆ.

Read Full Story

11:53 AM (IST) Jun 20

NEET-UG Re-Exam 2026 - ನಾಳೆ ರಾಜ್ಯಾದ್ಯಂತ ನೀಟ್ ಮರು ಪರೀಕ್ಷೆ, ಈ ನಿಯಮ ಉಲ್ಲಂಘಿಸಿದರೆ ಪ್ರವೇಶವಿಲ್ಲ!

NEET-ಆG Re-Exam 2026: ನಾಳೆ ಭಾನುವಾರ ಕರ್ನಾಟಕದಲ್ಲಿ ನಡೆಯಲಿರುವ ನೀಟ್ ಮರು ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  ಪರೀಕ್ಷೆಯ ಸಮಯ, ಕಡ್ಡಾಯ ಡ್ರೆಸ್ ಕೋಡ್, ಅನುಮತಿಸಲಾದ ಮತ್ತು ನಿಷೇಧಿತ ವಸ್ತುಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ

Read Full Story

11:29 AM (IST) Jun 20

ಪಿಯು ಉಪನ್ಯಾಸಕರಿಗೆ ಬಿಗ್ ಶಾಕ್ - ಇನ್ಮುಂದೆ 9 ಮತ್ತು 10ನೇ ತರಗತಿಗೂ ಬೋಧನೆ ಕಡ್ಡಾಯಗೊಳಿಸಿದ ಸರ್ಕಾರ!

ರಾಜ್ಯದ ಪ್ರೌಢಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸಲು, ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಬೋಧಿಸಬೇಕೆಂಬ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಸರ್ಕಾರದ ಈ ಕ್ರಮಕ್ಕೆ ಉಪನ್ಯಾಸಕರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
Read Full Story

10:31 AM (IST) Jun 20

ಕೇರಳದ ವ್ಯಾಪಾರಿಗಳಿಂದ 20 ಲಕ್ಷ ದರೋಡೆಗೈದ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್‌, ಪೋಲಿಸಪ್ಪನ ರಾಬರಿ ಇದೇ ಮೊದಲೇನಲ್ಲ!

ಹಣದಾಸೆಗೆ ಇಲಾಖೆಯ ಜೀಪಿನಲ್ಲೇ ತೆರಳಿ ಕೇರಳ ಮೂಲದ ವ್ಯಾಪಾರಿಗೆ ಬೆದರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಇಬ್ಬರು ಸಹಚರರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಸುಲಿಗೆಯ ಸಂಪೂರ್ಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

10:30 AM (IST) Jun 20

ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ! ಚಿತಾಗಾರಕ್ಕೆ ಬರುವ ಮುನ್ನ ಯಾವೆಲ್ಲ ದಾಖಲೆ ಇರಬೇಕು?

ಬೆಂಗಳೂರು ನಗರದಲ್ಲಿ ಚಿತಾಗಾರ ಶುಲ್ಕ ಹೆಚ್ಚು ವಸೂಲಿಯಾಗುತ್ತಿದ್ದ ಹಿನ್ನೆಲೆ ಜಿಬಿಎ ಹೊಸ ನಿಯಮಗಳನ್ನ ರೂಪಿಸಿದ್ದು ಶವ ಸಂಸ್ಕಾರ ಮಾಡುವವರು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ಶುಲ್ಕ ಎಷ್ಟು? ನಿಯಮಗಳೇನು ವಿವರಗಳಿಗೆ ಪೂರ್ಣವಾಗಿ ಓದಿ.

Read Full Story

10:28 AM (IST) Jun 20

ಏಡ್ಸ್ ರೋಗಿ ಎಂದು ಸುಳ್ಳು ಹೇಳಿ ಹಣ ಸುಲಿಗೆ - ಚಾಲಾಕಿ ಪತ್ನಿ ವಿರುದ್ಧ ಕೇಸ್‌

ಬೆಂಗಳೂರಿನ ಉದ್ಯಮಿಯೊಬ್ಬರು, ತಮ್ಮ ಪತ್ನಿ ತನಗೆ ಏಡ್ಸ್ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಕಾರನ್ನು ಕದ್ದೊಯ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದು, ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Read Full Story

09:56 AM (IST) Jun 20

ಬೆಂಗಳೂರಿಗರೇ ಗಮನಿಸಿ, ಇಂದು ನಗರದ ಹಲವೆಡೆ 7 ಗಂಟೆ ಪವರ್ ಕಟ್!; ನಿಮ್ಮ ಏರಿಯಾ ಲಿಸ್ಟಲ್ಲಿದ್ಯಾ ಚೆಕ್ ಮಾಡಿ

KPTCL ಮತ್ತು BESCOM ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದ್ದು, ಮಧ್ಯ, ಪೂರ್ವ, ಈಶಾನ್ಯ ಮತ್ತು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

Read Full Story

09:50 AM (IST) Jun 20

Karnataka HC - ಆರೋಪ ಇರೋದು ಎಸ್‌ಐ ಮೇಲೆ, ಬಂಧಿಸಿದ್ದು ಸಹೋದರನನ್ನ - ಪೊಲೀಸರಿಗೆ ಹೈಕೋರ್ಟ್ ತರಾಟೆ! ಏನಿದು ಪ್ರಕರಣ?

ಚಿತ್ರದುರ್ಗ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಕರಣದಲ್ಲಿ ಆರೋಪವಿರುವುದು ಎಸ್‌ಐ ಮೇಲೆ ಮಾತ್ರ. ಆದರೆ ಇಡೀ ಕುಟುಂಬದವರ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರು ಆಧರಿಸಿ ಆರೋಪಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ! ಪ್ರಕರಣವೇನು?

Read Full Story

09:42 AM (IST) Jun 20

ಬೆಂಗಳೂರು ನಗರದಲ್ಲಿ ಶವ ಸಂಸ್ಕಾರಕ್ಕೆ ನೋಂದಣಿ, 250 ರು. ಕಡ್ಡಾಯ

ಬೆಂಗಳೂರು ಪಶ್ಚಿಮ ಮತ್ತು ಉತ್ತರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಇನ್ನು ಮುಂದೆ ಅಧಿಕೃತ ಬಿಬಿಎಂಪಿ ಜಾಲತಾಣದಲ್ಲಿ ₹250 ಶುಲ್ಕ ಪಾವತಿಸಿ ಸ್ಲಾಟ್ ಕಾಯ್ದಿರಿಸಬೇಕಿದೆ.

Read Full Story

More Trending News