Published : Sep 10, 2026, 05:29 AM ISTUpdated : Sep 10, 2026, 10:41 PM IST

Karnataka News Live: Yash - 100 ಕೋಟಿ ಆಫರ್ ಬದಿಗೊತ್ತಿ 'ಮಾಸ್ಟರ್ ಗೇಮ್' ಆಡಿದ ಯಶ್! 'ರಾಮಾಯಣ' ಚಿತ್ರದಿಂದ ರಾಕಿ ಭಾಯ್ ಕಲೆಕ್ಟ್ ಮಾಡೋ ಪ್ಲಾನ್ ಇಲ್ಲಿದೆ ನೋಡಿ!

ಸಾರಾಂಶ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಆಡಳಿತ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ‘ದೃಢ ಕರ್ನಾಟಕದ ಸಂಕಲ್ಪ-ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗ್ಯಾರಂಟಿ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.

ಸಹನೆ, ಛಲ ಹಾಗೂ ಹೋರಾಟದ ಮೂಲಕ ತಮ್ಮ ಕನಸಿನ ಹುದ್ದೆಗೇರಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇವಲ 100 ದಿನಗಳಲ್ಲೇ ತಮ್ಮ ಪರಿಶ್ರಮದ ಉದ್ದೇಶ ಹಾಗೂ ಗುರಿಯೇನಾಗಿತ್ತು ಎಂಬುದನ್ನು ಸಾಬೀತುಪಡಿಸುವೆಡೆಗೆ ದಾಪುಗಾಲು ಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಳಸುವ ಹಿಂದು ಮಂತ್ರಕ್ಕೆ ಮೃದು ಹಿಂದುತ್ವದ ತಿರುಮಂತ್ರ, ಅಹಿಂದ ವರ್ಗವನ್ನು ಜತೆಗೆ ಒಯ್ಯುವ ಜೊತೆಗೆ ಮೇಲ್ವರ್ಗವನ್ನು ಸಂತೃಪ್ತಿಗೊಳಿಸುವ ಪ್ರಯತ್ನ, ಜೆನ್‌-ಝೀಗೆ ಅತಿ ಹೆಚ್ಚಿನ ಆದ್ಯತೆ ಹಾಗೂ ಕೇಂದ್ರ ಹಾಗೂ ನೆರೆಯ ರಾಜ್ಯ ಸರ್ಕಾರಗಳ ಜತೆಗೆ ಸಂಘರ್ಷಕ್ಕಿಂತ ಸಹಕಾರ ತಮ್ಮ ಆಡಳಿತದ ಮೂಲ ತತ್ವ ಎಂಬುದನ್ನು ನಿರೂಪಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನು ತಾವು ಆಡಳಿತದಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ನಿರೂಪಿಸಲು ಪ್ರತಿಯೊಂದು ವಿಚಾರದಲ್ಲೂ ವೇಗ ಹಾಗೂ ದೃಢ ನಿರ್ಧಾರಗಳ ಮೂಲಕ ಭರವಸೆ ಮೂಡಿಸಿದ್ದಾರೆ

10:41 PM (IST) Sep 10

Yash - 100 ಕೋಟಿ ಆಫರ್ ಬದಿಗೊತ್ತಿ 'ಮಾಸ್ಟರ್ ಗೇಮ್' ಆಡಿದ ಯಶ್! 'ರಾಮಾಯಣ' ಚಿತ್ರದಿಂದ ರಾಕಿ ಭಾಯ್ ಕಲೆಕ್ಟ್ ಮಾಡೋ ಪ್ಲಾನ್ ಇಲ್ಲಿದೆ ನೋಡಿ!

'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರಕ್ಕಾಗಿ ನಟ ಯಶ್ ₹100 ಕೋಟಿ ಸಂಭಾವನೆಯನ್ನು ತಿರಸ್ಕರಿಸಿದ್ದಾರೆ. ಅದರ ಬದಲಾಗಿ, ದಕ್ಷಿಣ ಭಾರತದ ವಿತರಣಾ ಹಕ್ಕುಗಳನ್ನು ಪಡೆದು, ಲಾಭದಲ್ಲಿ ಪಾಲುದಾರರಾಗುವ ಮೂಲಕ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಈ 'ಮಾಸ್ಟರ್ ಗೇಮ್' ಅವರನ್ನು ಚಿತ್ರದ ಸಹ-ನಿರ್ಮಾಪಕರನ್ನಾಗಿಯೂ ಮಾಡಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

10:05 PM (IST) Sep 10

Cricket - ಭಾರತ-ಅಫ್ಘಾನಿಸ್ತಾನ್ 1ನೇ ಟಿ20 ಪಂದ್ಯ ರದ್ದು? - ಆ ಒಂದು ಪತ್ರದ ಗೊಂದಲ, ಬಿಬಿಸಿಐ ಕೊಟ್ಟ ಸ್ಪಷ್ಟನೆ ಏನು?

ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಭದ್ರತಾ ಕಾರಣಗಳಿಂದಾಗಿ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿಯನ್ನೊಮ್ಮೆ ನೋಡೋಣ ಬನ್ನಿ.

Read Full Story

09:59 PM (IST) Sep 10

ಸರ್ಕಾರದ ಹಣ ಉಳಿಸಲು ಪೊಲೀಸ್ ಇಲಾಖೆಗೆ ಇನ್ನುಂದೆ ಗುತ್ತಿಗೆ ವಾಹನ - ಲೀಸ್ ಮಾದರಿಯಲ್ಲಿ 1,000 ವಾಹನಕ್ಕೆ ಸರ್ಕಾರ ಪ್ಲಾನ್

ಕರ್ನಾಟಕ ಪೊಲೀಸ್ ಇಲಾಖೆಗೆ ನೇರವಾಗಿ ವಾಹನಗಳನ್ನು ಖರೀದಿಸುವ ಬದಲು ಲೀಸ್ ಮಾದರಿಯಲ್ಲಿ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೊಸ ಯೋಜನೆಯು ಖರೀದಿ ವೆಚ್ಚವನ್ನು ಉಳಿಸಿ, ಕಾರ್ಯಾಚರಣೆ ಹೆಚ್ಚಿಸಲು ಮತ್ತು ದಟ್ಟಣೆಯ ನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸಲು ನೆರವಾಗಲಿದೆ ಎಂದಿದ್ದಾರೆ.

Read Full Story

09:33 PM (IST) Sep 10

ಥ್ರಿಲ್ಲರ್ ಪ್ರಿಯರೇ.. OTTಯಲ್ಲಿ ಸದ್ದು ಮಾಡ್ತಿದೆ ಮೇಘನಾ ರಾಜ್ ಸಿನಿಮಾ - ಸೀನ್‌ ಸೀನ್‌ಗೂ ಊಹಿಸಲಾಗದ ಟ್ವಿಸ್ಟ್!

ಓಟಿಟಿಯಲ್ಲಿ ವಿಶಾಲ್ ಆತ್ರೇಯ ನಿರ್ದೇಶನದ ‘ತತ್ಸಮ ತದ್ಭವ’ ಸಖತ್ ಸದ್ದು ಮಾಡುತ್ತಿದೆ. ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ ಈ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಒಂದರ ಹಿಂದೆ ಮತ್ತೊಂದು ಊಹಿಸಲಾಗದ ಟ್ವಿಸ್ಟ್‌ಗಳು!

Read Full Story

09:15 PM (IST) Sep 10

BJP - ಬಿವೈವಿಯಿಂದ ವಾರದ ಡೆಡ್‌ಲೈನ್‌; ದಾವಣಗೆರೆ ಅಂಗಳದಿಂದ ಶುರುವಾದ ಈ ಕಿಚ್ಚು ಕಾಂಗ್ರೆಸ್‌ಗೆ ತರಲಿದೆಯೇ ಹೊಸ ಕಂಟಕ?

BJP: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅಸಂವಿಧಾನಾತ್ಮಕ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಚಿವರು ಬೇಷರತ್ ಕ್ಷಮೆಯಾಚಿಸಲು ಒಂದು ವಾರದ ಗಡುವು ನೀಡಿದ್ದು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Read Full Story

09:06 PM (IST) Sep 10

ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ, ಸಹೋದರನ ಪರ ನಿಂತ ಬಾಲಚಂದ್ರ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಇಡಿ ದಾಳಿ ವಿಚಾರ ಭಾರೀ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ ಸಹೋದರ ಬಾಲಚಂದ್ರ ಜಾರಕಿಹೊಳಿ, ಸತೀಶ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಏನಂದ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

08:43 PM (IST) Sep 10

ಸೈಟ್‌ಗಾಗಿ ಅರ್ಜಿ ಸಲ್ಲಿಸಿದವ ಆಕಾಶ ನೋಡುತ್ತಿರುವಾಗಲೇ ಸುಸ್ಥಿತಿಯಲ್ಲಿರುವ BDA ಕಚೇರಿ ಕೆಡವಿ ಗಗನಚುಂಬಿ ಕಟ್ಟಡ ಕಟ್ಟಲು ಮೆಗಾಪ್ಲ್ಯಾನ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತನ್ನ 20 ವರ್ಷ ಹಳೆಯ, ಸುಸ್ಥಿತಿಯಲ್ಲಿರುವ ಪ್ರಧಾನ ಕಚೇರಿಯನ್ನು ನೆಲಸಮಗೊಳಿಸಿ, ಹೊಸ ಬಹುಮಹಡಿ ಸಂಕೀರ್ಣ ನಿರ್ಮಿಸಲು ಯೋಜಿಸಿದೆ.

Read Full Story

08:39 PM (IST) Sep 10

'ಅಮೆರಿಕಾ ಅಮೆರಿಕಾ'ದ ಲೆಗಸಿಯ ಭಾರ ನನ್ನ ಮೇಲಿರಲಿಲ್ಲ - ನಟ ಪೃಥ್ವಿ ಅಂಬಾರ್ ಸಂದರ್ಶನ

‘ಅಮೆರಿಕಾ ಅಮೆರಿಕಾ 2’ ಕುರಿತು ಪೃಥ್ವಿ ಅಂಬಾರ್ ಮಾತು: ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಜೊತೆಗಿನ ಕೆಮಿಸ್ಟ್ರಿ, ಪ್ರೇಕ್ಷಕರನ್ನು ಸಿನಿಮಾ ಇಷ್ಟಪಡುವಂತೆ ಲಾಬಿ ಮಾಡಲು ಸಾಧ್ಯವಿಲ್ಲ ಎನ್ನುವ ತಮ್ಮ ನಂಬಿಕೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡ ನಟ.

Read Full Story

08:39 PM (IST) Sep 10

Vande Mataram - ಸರ್ಕಾರಿ ಕಾರ್ಯಕ್ರಮಗಳಿಗೆ ಹೊಸ ಶಿಷ್ಟಾಚಾರ; ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳ ಗಾಯನಕ್ಕೆ ಗ್ರೀನ್ ಸಿಗ್ನಲ್!

ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಅಧಿಕೃತ ಸರ್ಕಾರಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ನಿಯಮದ ಪ್ರಕಾರ, ಕಾರ್ಯಕ್ರಮಗಳಲ್ಲಿ ಏಕರೂಪತೆ ಮತ್ತು ಗೌರವ ಕಾಪಾಡಲು ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು.

Read Full Story

08:12 PM (IST) Sep 10

'ನಾನು ಡಿಜಿಟಲ್ ಜಗತ್ತಿನ ಅನಲಾಗ್ ವ್ಯಕ್ತಿ' - ಅಮೆರಿಕಾ ಅಮೆರಿಕಾ 2 ಕುರಿತು ನಿರೂಪ್ ಭಂಡಾರಿ ಸಂದರ್ಶನ

‘ಅಮೆರಿಕಾ ಅಮೆರಿಕಾ 2’ ಬಿಡುಗಡೆಗೂ ಮುನ್ನ ನಟ ನಿರೂಪ್ ಭಂಡಾರಿ ಮಾತು: ‘ರಂಗಿತರಂಗ’ದ ದಿನಗಳಿಂದ ಇಂದಿನ ಆಧುನಿಕ ಪ್ರೇಮ ಸಂಬಂಧಗಳವರೆಗೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ನಟ.

Read Full Story

08:12 PM (IST) Sep 10

ಬೆಂಗಳೂರಿಗರಿಗೆ ಗುಡ್ ನ್ಯೂಸ್ - ನಮ್ಮ ಮೆಟ್ರೋ, BMTC ಬಸ್‌ಗಳಲ್ಲಿ ಇನ್ಮುಂದೆ ಒಂದೇ ಕಾರ್ಡ್, ಒಂದೇ ಆಪ್‌ನಲ್ಲಿ ಪಯಣ!

ಬೆಂಗಳೂರಿನಲ್ಲಿ ಇನ್ನು ಮುಂದೆ 'ನಮ್ಮ ಮೆಟ್ರೋ'ದ NCMC ಕಾರ್ಡ್‌ ಬಳಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಇದರ ಜೊತೆಗೆ, ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಒಂದೇ ವೇದಿಕೆಯಲ್ಲಿ ತರುವ 'ನಮ್ಮ ಬಿಎಂಟಿಸಿ 2.0' ಮೊಬೈಲ್ ಆಪ್ ಅನ್ನು ಲೋಕಾರ್ಪಣೆ ಮಾಡಲಾಗಿದೆ.

Read Full Story

08:00 PM (IST) Sep 10

Pak - ಮಕ್ಕಾ ಒಪ್ಪಂದದಲ್ಲಿದೆ ಬಿಗ್ ಲೂಪ್‌ಹೋಲ್; ಮುಸ್ಸಿಂ ಒಕ್ಕೂಟದ ಬೆನ್ನಿಗೆ ಇರಿದು ಕಳ್ಳದಾರಿ ಹಿಡಿದ ಪಾಕ್! ರಣಭೂಮಿಯಲ್ಲಿ ಏಕಾಂಗಿಯಾದ ಸೌದಿ!

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವಿನ 'ಮಕ್ಕಾ ಒಪ್ಪಂದ'ದ ಅನ್ವಯ, ಸೌದಿಯ ರಕ್ಷಣೆಗೆ ಪಾಕಿಸ್ತಾನ ಬದ್ಧವಾಗಿತ್ತು. ಆದರೆ, ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಮೇಲೆ ದಾಳಿ ನಡೆಸಿದಾಗ, ಪಾಕಿಸ್ತಾನವು ಒಪ್ಪಂದದ ಲೋಪದೋಷಗಳನ್ನು ಬಳಸಿ ಸೇನಾ ನೆರವು ನೀಡಲು ನಿರಾಕರಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

07:46 PM (IST) Sep 10

KPSCಯಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ - ಸರ್ಕಾರಕ್ಕೆ ಯುವ ಸಂಘಟನೆಯ ಎಚ್ಚರಿಕೆ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆಯುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದ ಲೋಪಗಳು ಮತ್ತು ನೇಮಕಾತಿ ವಿಳಂಬದ ವಿರುದ್ಧ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಸರ್ಕಾರಕ್ಕೆ ತಕ್ಷಣ ಸಮಗ್ರ ಸುಧಾರಣೆ ಕೈಗೊಳ್ಳುವಂತೆ ಆಗ್ರಹಿಸಿದೆ.

Read Full Story

07:35 PM (IST) Sep 10

BBK 13 - ನನಗೆ ಆಗ್ತಿಲ್ಲ, ತುಂಬಾ ಕಿರಿಕಿರಿ ಆಗ್ತಿದೆ - ಕಣ್ಣೀರಿಟ್ಟ ಸೌಂದರ್ಯಗೆ ಮಂಜನಿಂದ ಆಗಿದ್ದೇನು?

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಮಾಡ್ರನ್ ಮಹಾಕವಿ ಮಂಜನ ಕಿರಿಕಿರಿಗೆ ಸೌಂದರ್ಯ ಶೆಟ್ಟಿ ತಾಳ್ಮೆ ಕಳೆದುಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ ನಾಮಿನೇಷನ್ ವಿಚಾರದಲ್ಲಿ ಮಂಜ ಸಹ-ಸ್ಪರ್ಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

07:04 PM (IST) Sep 10

Science - ಸೌರಮಂಡಲದ ಅತಿದೊಡ್ಡ ರಹಸ್ಯ ಭೇದಿಸಿದ ವಿಜ್ಞಾನಿಗಳು - ಕೇವಲ 5 ಗಂಟೆಗಳ ಮಹಾ ಘಟನೆಯಲ್ಲಿ ಚಂದ್ರನ ಜನನ!

ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, 'ಥಿಯಾ' ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ನಂತರ ಚಂದ್ರನು ವರ್ಷಗಳ ಕಾಲಾವಧಿಯಲ್ಲಿ ರೂಪುಗೊಳ್ಳಲಿಲ್ಲ. ಬದಲಿಗೆ, ಸೂಪರ್‌ಕಂಪ್ಯೂಟರ್ ಸಿಮ್ಯುಲೇಶನ್‌ಗಳು ತೋರಿಸುವಂತೆ, 5 ಗಂಟೆಗಳ ಅಲ್ಪಾವಧಿಯಲ್ಲಿ ಚಂದ್ರನ ಬಹುಪಾಲು ಆಕಾರ ರೂಪುಗೊಂಡಿತು. ಈ ಕುರಿತು ಕಂಪ್ಟೀಟ್‌ ಸ್ಟೋರಿ ಇಲ್ಲಿದೆ.

Read Full Story

06:55 PM (IST) Sep 10

ದೇವನಹಳ್ಳಿ MSME ತಂತ್ರಜ್ಞಾನ ಕೇಂದ್ರದಿಂದ 10 ಸಾವಿರ ಮಂದಿಗೆ ಆಧುನಿಕ ಕೌಶಲ್ಯ ತರಬೇತಿ

156 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಕೇಂದ್ರದಲ್ಲಿ 10 ಸಾವಿರ ಮಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಏನಿದು MSME ತಂತ್ರಜ್ಞಾನ ಕೌಶಲ್ಯ ತರಬೇತಿ? ಯಾರೆಗೆಲ್ಲಾ ಈ ಕೌಶಲ್ಯ ತರಬೇತಿ ನೀಡಲಾಗುತ್ತದೆ?

Read Full Story

06:47 PM (IST) Sep 10

ಫ್ರಾನ್ಸ್ ಕಂಪನಿಗಳ ಜೊತೆ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಹತ್ವದ ಮಾತುಕತೆ, ಹೂಡಿಕೆ ಆಕರ್ಷಣೆ

ಸಚಿವ ಎಂ‌ ಬಿ ಪಾಟೀಲ ಫ್ರಾನ್ಸ್ ಪ್ರವಾಸದಲ್ಲಿ ಪ್ರತಿಷ್ಠಿತ ಕಂಪನಿಗಳ ಜೊತೆ ಮಹತ್ವದ ಮಾಕುಕತೆ ನಡೆಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ಫಲಪ್ರದ ಚರ್ಚೆ ನಡೆಸಿದ್ದಾರೆ.

Read Full Story

06:12 PM (IST) Sep 10

ಸಿದ್ದರಾಮಯ್ಯ ಆಪ್ತ ರಾಜಣ್ಣಗೆ ಮುಖಭಂಗ; ಎಸ್.ರವಿಗೆ ಒಲಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ

ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದೆ.

Read Full Story

05:35 PM (IST) Sep 10

CSK ತಂಡದ ಫ್ಲೆಮಿಂಗ್ ಜಾಗಕ್ಕೆ ಭಾರತದ ಮಾಜಿ ಕ್ರಿಕೆಟರ್, ಕಠಿಣ ಷರತ್ತು ವಿಧಿಸಿದ ಧೋನಿ

ಸಿಎಸ್‌ಕೆ ತನ್ನ ನೂತನ ಕೋಚ್ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದೆ. ಅಧಿಕೃತಿ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ಇದೆಲ್ಲದ ನಡುವೆ ಎಂ ಎಸ್‌ ಧೋನಿ ಹೊಸ ಕೋಚ್‌ಗೆ ಕಠಿಣ ಷರತ್ತು ವಿಧಿಸಿದ್ದಾರೆ. ಆ ಷರತ್ತು ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

Read Full Story

05:21 PM (IST) Sep 10

KSP - ಖಾಕಿ ಪಡೆಯ ರಜೆ ಮತ್ತು ಕೆಲಸದ ರಹಸ್ಯ; ಇಲ್ಲಿದೆ ಕರ್ನಾಟಕ ಪೋಲಿಸ್ ಸೇವೆಯ ರಿಯಾಲಿಟಿ ಚೆಕ್!

ಕರ್ನಾಟಕ ಪೊಲೀಸ್ ಸಿಬ್ಬಂದಿ ಸಿಗುವ ರಜೆ ಎಷ್ಟು? ಹೇಗೆ ಸಾಗುಗುತ್ತದೆ ಪೇದೆಗಳ ಜೀವನ ಹೇಗಿದೆ? ದಿನದಲ್ಲಿ ಅವರಿಗೆ ಎದುರಾಗುವ ಸಮಯವೆಷ್ಟು? ಈ ಕುರಿತು ಡಿಟೇಲ್ಡ್‌ ಇನ್‌ಸೈಡ್‌ ಸ್ಟೋರಿ ನೋಡಿಕೊಂಡು ಬರೋಣ ಬನ್ನಿ.

Read Full Story

04:48 PM (IST) Sep 10

Bank Strike - ದೇಶದಾದ್ಯಂತ ನಾಳೆಯಿಂದ 4 ದಿನ ಬ್ಯಾಂಕ್ ಬಂದ್, ಇವತ್ತೇ ನಿಮ್ಮ ಕೆಲಸ ಪೂರ್ಣಗೊಳಿಸಿ!

ಸೆಪ್ಟೆಂಬರ್‌ 11ರಂದು ಬ್ಯಾಂಕ್ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿವೆ. ವಾರಕ್ಕೆ ಐದು ದಿನಗಳ ಕೆಲಸ ಮತ್ತು ಪಿಂಚಣಿ ಪರಿಷ್ಕರಣೆಯಂತಹ ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಮುಷ್ಕರ ಹಾಗೂ ಸರಣಿ ರಜೆಗಳಿಂದಾಗಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ.
Read Full Story

04:42 PM (IST) Sep 10

ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ - ವಿಚಾರಣೆಗೆ ತೆರಳಿದ ಪೊಲೀಸರಿಗೆ ಪ್ರಜ್ವಲ್ ಅವಾಜ್, ನಾನ್ಯಾರು ಗೊತ್ತಾ? ಮಾಜಿ ಸಂಸದ

ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ತೆರಳಿದ ಪೊಲೀಸರ ಮುಂದೆ ಉಡಾಫೆಯಿಂದ ವರ್ತಿಸಿದ್ದಾರೆ. 'ನಾನು ಮಾಜಿ ಸಂಸದ, ಮಾಜಿ ಪ್ರಧಾನಿ ಮೊಮ್ಮಗ' ಎಂದು ದಬಾಯಿಸಿ, ಮೌನವಾಗಿರುವ ಹಕ್ಕಿದೆ ಎಂದು ಹೇಳಿ ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ.
Read Full Story

04:40 PM (IST) Sep 10

Cricket - ಮೈಕ್ ಹೆಸ್ಸನ್ ಭಾರತದ ಏಜೆಂಟ್?" - ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ವಿಲಕ್ಷಣ ಆರೋಪ, 'ಧುರಂಧರ್' ಚಿತ್ರಕ್ಕೆ ಹೋಲಿಸಿ ಟ್ರೋಲ್!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್, ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರನ್ನು 'ಭಾರತೀಯ ಏಜೆಂಟ್' ಎಂದು ಕರೆದು ಹೊಸ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಕಾರಣವಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ,

Read Full Story

04:40 PM (IST) Sep 10

ಜಯಲಲಿತಾ ಮಾದರಿಯಲ್ಲೇ ದರ್ಶನ್ ವಿಚಾರಣೆ? ಖುದ್ದು ಹಾಜರಾತಿ ಅರ್ಜಿಗೆ ಹೈಕೋರ್ಟ್ ಮಹತ್ವದ ಸಲಹೆ

ಸಾಕ್ಷ್ಯಗಳ ವಿಚಾರಣೆಗೆ ತಾವು ಖುದ್ದು ಹಾಜರಿರಲು ಅವಕಾಶ ಮಾಡಿಕೊಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇವತ್ತು ಹೈಕೋರ್ಟ್‌ ನಡೆಸಿತು. ಈ ವೇಳೆ ಪ್ರತಿದಿನ ಖುದ್ದು ಹಾಜರಿಗೆ ಅವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯ, ಮಧ್ಯಂತರ ಪರಿಹಾರದ ರೂಪದಲ್ಲಿ ಕೆಲ ಮಾರ್ಗಸೂಚಿಗಳನ್ನು ನೀಡಿತು. ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ 3 ದಿನ ಖುದ್ದು ಹಾಜರಿಗೆ ಅವಕಾಶ ನೀಡೋಣ ಎಂದಿದೆ.

Read Full Story

04:39 PM (IST) Sep 10

ಕಿಚ್ಚನ ಶೋಗೆ ಸಿಕ್ಕಿದ್ದು ಭರ್ಜರಿ ರೆಸ್ಪಾನ್ಸ್ - ‘ಬಿಗ್‌ಬಾಸ್ ಕನ್ನಡ 13’ ನಂ.1 ಆಗಿದ್ದು ಹೇಗೆ?

‘ಬಿಗ್‌ಬಾಸ್ ಕನ್ನಡ 13’ ಆರಂಭವಾದ ಮೊದಲ ವಾರದಲ್ಲೇ ಭರ್ಜರಿ ಸದ್ದು ಮಾಡಿದೆ. ಕಿಚ್ಚ ಸುದೀಪ್ ನಿರೂಪಣೆಯ ಈ ಶೋ JioHotstarನ ಕನ್ನಡ ವಿಭಾಗದ ದೈನಂದಿನ ಟ್ರೆಂಡಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.

Read Full Story

04:14 PM (IST) Sep 10

ರೇಣುಕಾಸ್ವಾಮಿ ಪ್ರಕರಣ - ಖುದ್ದು ಹಾಜರಾತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ, ಕೋರ್ಟ್ ಹೇಳಿದ್ದಿಷ್ಟು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಸಾಕ್ಷ್ಯ ವಿಚಾರಣೆ ವೇಳೆ ಖುದ್ದು ಹಾಜರಿಗೆ ಅವಕಾಶ ಕೋರಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಿಗೆ ಅವಕಾಶ ನೀಡುವುದನ್ನು ಪರಿಗಣಿಸುವುದಾಗಿ ತಿಳಿಸಿ, ವಿಚಾರಣೆಯನ್ನು ಸೆ.16ಕ್ಕೆ ಮುಂದೂಡಿದೆ.
Read Full Story

04:06 PM (IST) Sep 10

Shivamogga - ಶಿಕಾರಿಪುರದ ಪ್ರಸಿದ್ಧ ಹುಚ್ಚರಾಯಸ್ವಾಮಿ ಕೆರೆಗೆ ಹಾರಿದ BCA ವಿದ್ಯಾರ್ಥಿನಿ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯಲ್ಲಿ ಬಿಸಿಎ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ. ಈ ಸಂಬಂಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

04:06 PM (IST) Sep 10

'ಆ ಆಸೆ ಕೊನೆಗೂ ಈಡೇರಲಿಲ್ಲ' - ಸಿಲ್ಕ್ ಸ್ಮಿತಾ ಅಕಾಲಿಕ ಮರಣ ನೆನೆದು ಭಾವುಕರಾದ ನಟಿ ಊರ್ವಶಿ

ನಟಿ ಊರ್ವಶಿ ಸಿಲ್ಕ್ ಸ್ಮಿತಾ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಸ್ಮಿತಾ ಅವರನ್ನು ಅಕ್ಕನಂತೆ ನೋಡುತ್ತಿದ್ದೆ ಎಂದಿರುವ ಊರ್ವಶಿ, ಅವರ ಕಾಸ್ಟ್ಯೂಮ್ ಸೆನ್ಸ್ ಹಾಗೂ ತಮ್ಮ ಕಾಸ್ಟ್ಯೂಮ್ ಡಿಸೈನ್ ಮಾಡಬೇಕೆಂಬ ಸಿಲ್ಕ್ ಸ್ಮಿತಾ ಅವರ ಆಸೆಯನ್ನು ಹಂಚಿಕೊಂಡಿದ್ದಾರೆ.

Read Full Story

04:04 PM (IST) Sep 10

'ಕೆಂಗೇರಿ To ಕಬ್ಬನ್‌ ಪಾರ್ಕ್‌ ಜಸ್ಟ್‌ 35 ನಿಮಿಷ' ನಮ್ಮ ಮೆಟ್ರೋದಲ್ಲಿ ಸಿಂಪಲ್‌ ಸಂಚಾರ ಮಾಡಿದ ಟೀಮ್‌ ಇಂಡಿಯಾ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌

ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ಭೀಕರ ಸಂಚಾರ ದಟ್ಟಣೆ ತಪ್ಪಿಸಲು 'ನಮ್ಮ ಮೆಟ್ರೋ'ದಲ್ಲಿ ಕೆಂಗೇರಿಯಿಂದ ಕಬ್ಬನ್ ಪಾರ್ಕ್‌ಗೆ ಪ್ರಯಾಣಿಸಿದರು. ತಮ್ಮ ಈ ವೇಗದ ಹಾಗೂ ಸುಲಭ ಪಯಣದ ಅನುಭವವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read Full Story

03:40 PM (IST) Sep 10

ಶಿವಣ್ಣನ ಫ್ಯಾನ್ಸ್‌ಗೆ ಗುಡ್ ನ್ಯೂಸ್ - 'ಬೀರ್‌ಬಲ್ ಕೇಸ್ 2'ನಲ್ಲಿ ಘೋಸ್ಟ್ ರಿಟರ್ನ್, ಡೈಸಿ ಎಂಟ್ರಿ!

ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಬೀರ್‌ಬಲ್ ಕೇಸ್ 2’ ಸಿನಿಮಾ ಅ.23ರಂದು ಬಿಡುಗಡೆಯಾಗಲಿದೆ. ಎಂ.ಜಿ. ಶ್ರೀನಿವಾಸ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಈ ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಘೋಸ್ಟ್’ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ.

Read Full Story

03:27 PM (IST) Sep 10

ಕೊಡಗು - ರೈತರ ವಿರೋಧದ ನಡುವೆಯೂ ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ರಹಸ್ಯವಾಗಿ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ!

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ಹಿನ್ನೆಲೆಯಲ್ಲಿ, ಕೊಡಗಿನ ಹಾರಂಗಿ ಜಲಾಶಯದಿಂದ ಯಾವುದೇ ಮುನ್ಸೂಚನೆ ಇಲ್ಲದೆ ನೀರು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಈ ಕ್ರಮವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Read Full Story

03:22 PM (IST) Sep 10

Vijayapura - 12 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಅರೆಸ್ಟ್; ಕ್ರೈಂ ಥ್ರಿಲ್ಲರ್ ಮೂವಿ ಮೀರಿಸುವ ಕೇಸ್ ಇದು!

12 ವರ್ಷಗಳ ಹಿಂದೆ ವಿಜಯಪುರ ಜೈಲಿನಿಂದ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್‌ನನ್ನು ಫಿಂಗರ್‌ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸಿನಿಮೀಯ ರೀತಿಯಲ್ಲಿ ಸೆರೆಹಿಡಿಯಲಾಗಿದೆ.
Read Full Story

03:18 PM (IST) Sep 10

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಲಯಾಳಂ ನಟಿ ಅಪರ್ಣಾ ದಾಸ್ - ಜೊತೆಗೆ ಇನ್ನೊಂದು ಸರ್ಪ್ರೈಸ್

ಮಲಯಾಳಂ ನಟಿ ಅಪರ್ಣಾ ದಾಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮನೋರಂಜನ್ ರವಿಚಂದ್ರನ್ ಅಭಿನಯದ ‘ಸರ್ವೇ ಜನಾಃ ಸುಖಿನೋ ಭವಂತು’ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸಿದ್ದು, ಪೃಥ್ವಿ ಅಂಬಾರ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Read Full Story

12:28 PM (IST) Sep 10

Bengaluru ನಮ್ಮ ಮೆಟ್ರೋ - 44.65 ಕಿ.ಮೀ ಮಾರ್ಗಕ್ಕಾಗಿ ಕಟ್ಟಡ ತೆರವಿಗೆ ಟೆಂಡರ್ ಆಹ್ವಾನ

ಬಿಎಂಆರ್‌ಸಿಎಲ್ 44.65 ಕಿ.ಮೀ ಉದ್ದದ 3ನೇ ಹಂತದ ಮೆಟ್ರೋ ಯೋಜನೆಗೆ ಚಾಲನೆ ನೀಡಿದ್ದು, ಕಟ್ಟಡಗಳ ತೆರವಿಗಾಗಿ ಟೆಂಡರ್ ಕರೆದಿದೆ. ಈ ಯೋಜನೆಯು ಜೆಪಿ ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, 2032ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Read Full Story

12:27 PM (IST) Sep 10

ರಾಜ್ಯಕ್ಕೆ 'ಸೂಪರ್ ಎಲ್ ನಿನೊ' ಡಬಲ್ ಎಫೆಕ್ಟ್; ರೈತರ ಮಳೆ-ಬೆಳೆ ಮಾತ್ರವಲ್ಲ, ಆರೋಗ್ಯಕ್ಕೂ ಕಂಟಕ!

ಸೂಪರ್ ಎಲ್ ನಿನೊ ಪರಿಣಾಮದಿಂದ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಒಂದೆಡೆ ಬಿಸಿಲಿನ ತಾಪದಿಂದ ಆರೋಗ್ಯ ಸಮಸ್ಯೆಗಳು, ಮತ್ತೊಂದೆಡೆ ಡೆಂಗ್ಯೂ, ಚಿಕೂನ್‌ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಹೈ ಅಲರ್ಟ್ ಘೋಷಿಸಿ, ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದೆ.
Read Full Story

12:10 PM (IST) Sep 10

8 ಪಿಜಿ ಕೋರ್ಸ್ ರದ್ದುಗೊಳಿಸಿದ ಸರ್ಕಾರ; ಎಂಎ ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರಕ್ಕೆ ಅನುಮತಿಯೇ ಇಲ್ಲ!

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರ್ಕಾರದ ಅನುಮೋದನೆ ಇಲ್ಲದೆ 2018-19ರಿಂದ ಎಂಟು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ಉನ್ನತ ಶಿಕ್ಷಣ ಇಲಾಖೆಯು ಈ ಕೋರ್ಸ್‌ಗಳ ಪ್ರವೇಶಾತಿಯನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶಿಸಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
Read Full Story

11:50 AM (IST) Sep 10

ಮಂಗಳೂರು-ಕುವೈತ್ ನೇರ ವಿಮಾನ ಸೇವೆ 6 ತಿಂಗಳು ಸ್ಥಗಿತ, ಕರಾವಳಿ ಭಾಗದ ಪ್ರಯಾಣಿಕರಿಗೆ ಮುಗಿಯದ ಗೋಳು!

ಮಂಗಳೂರು ಮತ್ತು ಕುವೈತ್ ನಡುವಿನ ನೇರ ವಿಮಾನ ಸೇವೆ ಆರು ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿ ಭಾಗದ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ದುಬಾರಿ ಮತ್ತು ದೀರ್ಘಾವಧಿಯ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆಯನ್ನು ಪುನರಾರಂಭಿಸಬೇಕು ಅಥವಾ ಇತರ ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಬೇಕೆಂದು ಬಲವಾದ ಬೇಡಿಕೆ ವ್ಯಕ್ತವಾಗಿದೆ.
Read Full Story

11:47 AM (IST) Sep 10

ಕರ್ನಾಟಕ SIR ನೋಟಿಸ್, ದೋಷಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್ ಸೇರಿ ಹಲವು ಗಣ್ಯರ ಹೆಸರು

ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರೀಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕೆಲ ಮತದಾರರ ಹೆಸರು ದೋಷದ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಪೈಕಿ ನಟ ಶಿವರಾಜ್ ಕುಮಾರ್, ವಿಜ್ಞಾನಿ ಸಿಎನ್ಆರ್ ರಾವ್‌ಗೆ SIR ನೋಟಿಸ್ ನೀಡಲಾಗಿದೆ.

Read Full Story

11:43 AM (IST) Sep 10

ಕುಟುಂಬದ ನೆಮ್ಮದಿಗಾಗಿ ತೆಗೆದುಕೊಂಡ ನಿರ್ಧಾರ - ಮೌನ ಮುರಿದ ನಟಿ ಅಶ್ವಿನಿ ಗೌಡ

ಕಿರುತೆರೆ ನಟಿ ಅಶ್ವಿನಿ ಗೌಡ ತಮ್ಮ ವಿರುದ್ಧದ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ್ದು, ಮಾನಹಾನಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರ ಎಂದಿರುವ ಅವರು, ನ್ಯಾಯಾಲಯದ ಆದೇಶವನ್ನು ಗೌರವಿಸಿ ಅವಹೇಳನಕಾರಿ ವಿಷಯಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
Read Full Story

11:37 AM (IST) Sep 10

Bengaluru - 75 ವರ್ಷಗಳಲ್ಲಿ ಇದೇ ಮೊದಲು, ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ; ಸೆಪ್ಟೆಂಬರ್‌ನಲ್ಲೇ ಬಿರು ಬೇಸಿಗೆ!

ಬೆಂಗಳೂರಿನಲ್ಲಿ 75 ವರ್ಷಗಳ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ದಾಖಲೆಯ ತಾಪಮಾನ ವರದಿಯಾಗಿದೆ. ಎಲ್‌ ನಿನೊ ಪ್ರಭಾವದಿಂದ ಉಂಟಾಗಿರುವ ಈ ಒಣ ಹವೆಯು ರಾಜ್ಯದ ಹಲವು ತಾಲೂಕುಗಳನ್ನು ಬರಪೀಡಿತವನ್ನಾಗಿ ಮಾಡಿದ್ದು, ಮಳೆ ಕೊರತೆಯಿಂದ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದೆ.

Read Full Story

More Trending News