ಮಂಡ್ಯ: ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದೆ. 3 ವರ್ಷಗಳ ಹಿಂದೆ ಜೂನ್‌ನಲ್ಲಿ ಅಣೆಕಟ್ಟೆಯೊಳಗೆ ಈ ಪ್ರಮಾಣದ ನೀರಿನ ಮಟ್ಟ ದಾಖಲಾಗಿತ್ತು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 107.68 ಅಡಿ ನೀರು ಸಂಗ್ರಹವಾಗಿತ್ತು. ಆ ವೇಳೆ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿ ಸುರಿದಿತ್ತು. ಜೊತೆಗೆ ಮುಂಗಾರು ಮಳೆಯೂ ನಿರೀಕ್ಷೆಯಂತೆ ಆಗಮನವಾಗಿದ್ದರಿಂದ ಅಂದು ಜಲಾಶಯಕ್ಕೆ ೬೫೧೩ ಕ್ಯುಸೆಕ್ ನೀರು ಹರಿದುಬರುತ್ತಿತ್ತು. ಅಂದು ಜಲಾಶಯದಲ್ಲಿ 29.543 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಪ್ರಸ್ತುತ ಜಲಾಶಯದಲ್ಲಿ 81.36 ಅಡಿ ನೀರಿದ್ದು, ಅಣೆಕಟ್ಟೆಗೆ 528 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ನದಿ ಮತ್ತು ನಾಲೆ ಸೇರಿ 852 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 11.399 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟ ಪರಿಣಾಮ ಜಲಾಶಯದಿಂದ ಬೇಸಿಗೆ ಬೆಳೆಗಳಿಗೆ ನೀರು ಹರಿಸಲಾಯಿತು.
ಹಲವು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಯಿತು. ಇದರಿಂದ ಅಣೆಕಟ್ಟೆಯಲ್ಲಿ ನೀರನ್ನು ಕಾಯ್ದಿರಿಸಲು ಸಾಧ್ಯವಾಗಲಿಲ್ಲ. ಮಳೆ ಬಾರದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಜಲಾಶಯದಲ್ಲಿ ನೀರು ಕಡಿಮೆ ಆಗುತ್ತಿರುವುದರಿಂದ ನೀರೊಳಗೆ ಮುಳುಗಿದ್ದ ದೇಗುಲಗಳು ಗೋಚರಿಸಲಾರಂಭಿಸಿವೆ.
10:17 PM (IST) Jun 07
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900 ರಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
09:53 PM (IST) Jun 07
ಕಬ್ಬಾಳು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದ್ದು, ತಾಯಿ ಕಬ್ಬಾಳಮ್ಮನಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿ ಜನರ ಆಶೀರ್ವಾದವೇ ತಮ್ಮ ರಾಜಕೀಯ ಶಕ್ತಿಯ ಮೂಲ ಎಂದು ಹೇಳಿದ್ದಾರೆ.
08:46 PM (IST) Jun 07
ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..
06:58 PM (IST) Jun 07
ಟೈಗರ್ ಪ್ರಭಾಕರ್ ತಮ್ಮ ತಂದೆಯಲ್ಲ ಎಂದು ನಟಿ ಅನು ಪ್ರಭಾಕರ್ ಸ್ಪಷ್ಟಪಡಿಸಿದ್ದಾರೆ. ತಂದೆ ಎಂ.ವಿ. ಪ್ರಭಾಕರ್ ಅವರ ವ್ಯಕ್ತಿತ್ವ, ಕನ್ನಡದ ಮೇಲಿನ ಪ್ರೀತಿ ಹಾಗೂ ಅವರ ಸಾವಿನ ಹಿಂದಿನ ಆಘಾತಕಾರಿ ಕಾರಣದ ಬಗ್ಗೆ ಅನು ಭಾವುಕರಾಗಿ ಮಾತನಾಡಿದ್ದಾರೆ.
05:18 PM (IST) Jun 07
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ಸಿಲಿಂಡರ್..
04:44 PM (IST) Jun 07
04:41 PM (IST) Jun 07
ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
04:15 PM (IST) Jun 07
BB Kannada 13 Starting Date: ಬಿಗ್ ಬಾಸ್ ಕನ್ನಡ ಸೀಸನ್ 13 ಶೋ ಆದಷ್ಟು ಬೇಗ ಶುರು ಆಗಲಿದೆ. ಕಲರ್ಸ್ ಕನ್ನಡ ವಾಹಿನಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಈಗಾಗಲೇ ಬಿಗ್ ಬಾಸ್ ಶೋಗೆ ಸಂಬಂಧಪಟ್ಟಂತೆ ಪೂರ್ವ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೂರು ಧಾರಾವಾಹಿಗಳು ಅಂತ್ಯ ಆಗಬೇಕು.
02:49 PM (IST) Jun 07
Kottiyoor temple opening date 2026 for public: ಕೇರಳದ ಕಣ್ಣೂರಿನ ಬಾವಲಿ ನದಿಯ ದಂಡೆಯ ಮೇಲೆ ಕೊಟ್ಟಿಯೂರು ಮಹಾದೇವ ದೇವಸ್ಥಾನವಿದೆ. ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಈಗ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತಿದ್ದು ಲಕ್ಷಾಂತರ ಜನರು ಹೋಗುತ್ತಿದ್ದಾರೆ.
02:27 PM (IST) Jun 07
ಸಾಮಾನ್ಯವಾಗಿ ಇಂದಿನ ಜನರೇಷನ್ ನಟಿಯರನ್ನು "ನಿಮ್ಮ ಫೇವರಿಟ್ ನಟ ಯಾರು?" ಎಂದು ಕೇಳಿದರೆ, ಅವರು ತಮ್ಮ ಸಮಕಾಲೀನ ಸ್ಟಾರ್ ನಟರಾದ ಮಹೇಶ್ ಬಾಬು, ಪ್ರಭಾಸ್ ಅಥವಾ ಅಲ್ಲು ಅರ್ಜುನ್ ಹೆಸರನ್ನು ಹೇಳುತ್ತಾರೆ. ಆದರೆ ಸಾಯಿ ಪಲ್ಲವಿ ಈ ನಟನ ಹೆಸರನ್ನು ಹೇಳಿ ಶಾಕ್ ಸೃಷ್ಟಿಸಿದ್ದಾರೆ.
01:21 PM (IST) Jun 07
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮುಗಿದು ಕೆಲವೇ ತಿಂಗಳುಗಳು ಕಳೆದಿವೆ. ವೀಕ್ಷಕರು ಈ ಶೋ ಹ್ಯಾಂಗ್‌ಓವರ್‌ನಲ್ಲಿರುವಾಗ ಈಗ ಸೀಸನ್ 13 ಆರಂಭ ಆಗ್ತಿದೆ. ಹೌದು, ಕಲರ್ಸ್ ಕನ್ನಡವೇ ಅಧಿಕೃತವಾಗಿ ಹೇಳಿಕೆ ನೀಡಿದೆ. ಹಾಗಾದರೆ ಯಾರು ಯಾರು ಭಾಗವಹಿಸಲಿದ್ದಾರೆ?
01:20 PM (IST) Jun 07
ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ರೈಲು ಬೆಂಗಳೂರಿಗೆ ಬಂದಿದೆ. ಚಾಲಕ ರಹಿತ ತಂತ್ರಜ್ಞಾನ ಮತ್ತು ವಿಶೇಷ ಲಗೇಜ್ ಸೌಲಭ್ಯ ಹೊಂದಿರುವ ಈ ಮಾರ್ಗವು ಇದೇ ವರ್ಷದ ಡಿಸೆಂಬರ್ನಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
01:19 PM (IST) Jun 07
ಬೆಳಗಾವಿಯ ಶಿವಂ ಅಸೋಸಿಯೇಟ್ ಕಂಪನಿಯು ಸಾವಿರಾರು ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಹೆಚ್ಚಿನ ಲಾಭದ ಆಮಿಷವೊಡ್ಡಿ 2,400 ಕೋಟಿ ಸಂಗ್ರಹಿಸಿ, ಹೊಸಬರ ಹಣವನ್ನು ಹಳಬರಿಗೆ ಬಡ್ಡಿಯಾಗಿ ನೀಡುತ್ತಿದ್ದ ವಂಚನೆಯ ಜಾಲವನ್ನು ಸಿಐಡಿ ವಿವರಿಸಿದೆ.
12:24 PM (IST) Jun 07
ಬಾಬಿ ನಿರ್ದೇಶನದ 'ಮೆಗಾ 158' ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ರಾಮ್ ನಟಿಸಲಿದ್ದಾರೆ. Kannada actress Rachita Ram will be seen in the Tollywood Megastar Chiranjeevi starrer 'Mega 158', which is being directed by Bobby.
11:57 AM (IST) Jun 07
ನಟ ಕಿಚ್ಚ ಸುದೀಪ್ ಅವರು ನಿರ್ಮಾಪಕರಾದ ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ದಾಖಲಿಸಿರುವ 9 ಕೋಟಿ ರೂ. ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆದಿದೆ. ಸಿನಿಮಾ ಪ್ರಮೋಷನ್ನಲ್ಲಿ ನಿರತರಾಗಿದ್ದರಿಂದ ಸುದೀಪ್ ಅವರು ವಿಚಾರಣೆಗೆ ಗೈರುಹಾಜರಾಗಿದ್ದು, ಪ್ರಕರಣವನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.
11:37 AM (IST) Jun 07
10:39 AM (IST) Jun 07
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಆಗಿದೆ. ಕಲಾವಿದರು ಈ ಸೀರಿಯಲ್‌ನ ಕೊನೇ ದಿನದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಸುಷ್ಮಾ ರಾವ್ ಅತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
08:43 AM (IST) Jun 07
08:16 AM (IST) Jun 07
ಕಲಬುರಗಿ ಜಿಲ್ಲೆಯ ಚಿಂಚೊಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತವಾಗಿದೆ. ಸೇತುವೆ ಕುಸಿತಕ್ಕೆ ಕಳಪೆ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
08:07 AM (IST) Jun 07
07:47 AM (IST) Jun 07
07:29 AM (IST) Jun 07
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ-26 ಫಲಿತಾಂಶವನ್ನು ಪ್ರಕಟಿಸಿದೆ. ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ಎಲ್ಲಾ ಏಳು ವಿಭಾಗಗಳಲ್ಲೂ ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್ ಪಡೆದಿದ್ದು, 2.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ.
07:20 AM (IST) Jun 07
07:10 AM (IST) Jun 07
ಸಿಇಟಿ ಫಲಿತಾಂಶದಲ್ಲಿ ಸರ್ಕಾರಿ ಪಿಯು ಕಾಲೇಜು ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಧನೆ ಅತ್ಯಂತ ಕಳಪೆಯಾಗಿದೆ. ಎಂಜಿನಿಯರಿಂಗ್ ವಿಭಾಗದ ಟಾಪ್ 1000 ರ‍್ಯಾಂಕ್‌ಗಳಲ್ಲಿ ಸರ್ಕಾರಿ ಕಾಲೇಜುಗಳಿಂದ ಕೇವಲ 12 ಮತ್ತು ಕನ್ನಡ ಮಾಧ್ಯಮದಿಂದ ಕೇವಲ 9 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಯೂ ತೃಪ್ತಿಕರವಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಂಕಿ-ಅಂಶಗಳು ತಿಳಿಸಿವೆ.
07:01 AM (IST) Jun 07
06:51 AM (IST) Jun 07
06:15 AM (IST) Jun 07
ಹೊಸಪೇಟೆ ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪ್ರಕಟಿತ ದಾನ ಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ಹೊಯ್ಸಳ ನರಸಿಂಹ ಚಕ್ರವರ್ತಿಯ ಕಾಲದಲ್ಲಿ ಸ್ಥಳೀಯ ಆಡಳಿತಗಾರ ಕಾಸಿಗೌಡನು ಕೆರೆ ನಿರ್ಮಿಸಿ, ಬಡಗಿಯೊಬ್ಬನಿಗೆ ಭೂಮಿಯನ್ನು ದಾನ ನೀಡಿದ ವಿವರಗಳನ್ನು ಒಳಗೊಂಡಿದೆ. ಇದು ಜಿಲ್ಲೆಯಲ್ಲಿ ಹೊಯ್ಸಳರ ಆಳ್ವಿಕೆಯ ಕುರುಹುಗಳನ್ನು ದೃಢಪಡಿಸುತ್ತದೆ.
05:59 AM (IST) Jun 07
05:49 AM (IST) Jun 07
ಹೊರ ರಾಜ್ಯದ ಉದ್ಯಮಿಗಳು ಹಣದ ಆಮಿಷವೊಡ್ಡಿ ರೈತರಿಂದ ಭೂಮಿಯನ್ನು ಗುತ್ತಿಗೆ ಪಡೆದು ಶುಂಠಿ ಬೆಳೆಯುತ್ತಿದ್ದಾರೆ. ಈ ವಾಣಿಜ್ಯ ಬೆಳೆಯು ಮಣ್ಣಿನ ಫಲವತ್ತತೆಯನ್ನು ತೀವ್ರವಾಗಿ ಕಡಿಮೆ ಮಾಡುವುದಲ್ಲದೆ, ಅತಿಯಾದ ಕೀಟನಾಶಕ ಬಳಕೆಯಿಂದ ದೀರ್ಘಕಾಲಿಕ ಹಾನಿಯನ್ನುಂಟುಮಾಡುತ್ತಿದೆ.
05:40 AM (IST) Jun 07
ರಸ್ತೆ ಅಗಲೀಕರಣದಿಂದ ಬಸ್ ಸಂಚಾರ ಮಾರ್ಗ ಬದಲಾಗಿದ್ದು ಮತ್ತು ಲೋಕಲ್ ಬಸ್ ಸೇವೆ ಆರಂಭವಾಗಿರುವುದರಿಂದ ತಮ್ಮ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಲೋಕಲ್ ಬಸ್ ಸಂಚಾರವನ್ನು ರದ್ದುಗೊಳಿಸಿ, ಎಲ್ಲಾ ಬಸ್‌ಗಳನ್ನು ಬಸ್ ನಿಲ್ದಾಣದ ಮೂಲಕವೇ ಓಡಾಟ ನಡೆಸುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
05:32 AM (IST) Jun 07
ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇನ್ನು ಮುಂದೆ ಮದುವೆ ದಿಬ್ಬಣದ (ಬಾರಾತ್) ಚಿತ್ರೀಕರಣ ಮಾಡದಿರಲು ನಿರ್ಧರಿಸಿದೆ. ತಡರಾತ್ರಿ, ಭದ್ರತಾ ಸಮಸ್ಯೆಗಳು ಮತ್ತು ಅನುಚಿತ ವರ್ತನೆಯ ಕಾರಣಗಳಿಂದ ಈ ತೀರ್ಮಾನ ಕೈಗೊಂಡಿದ್ದು, ಕೇವಲ ಮದುವೆ ಹಾಲ್‌ನಲ್ಲಿ ಮಾತ್ರ ಚಿತ್ರೀಕರಣ ನಡೆಸುವುದಾಗಿ ಸ್ಪಷ್ಟಪಡಿಸಿದೆ.
05:22 AM (IST) Jun 07
05:12 AM (IST) Jun 07
05:03 AM (IST) Jun 07
ಪ್ರಧಾನಿ ಮೋದಿ ಅವರ ಬೆಂಗಳೂರು ಭೇಟಿ ವೇಳೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿ ಲೋಹಿತ್‌ನನ್ನು ಬಂಧಿಸಲಾಗಿತ್ತು. ಮೋದಿ ಸಾಗುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಈ ಪ್ರಕರಣಕ್ಕೂ ತನಗೂ ಸಂಬಂಧವಿಲ್ಲ ಎಂದು ಆರೋಪಿ ಹೇಳಿದ್ದಾನೆ.