LIVE NOW
Published : Dec 07, 2025, 06:56 AM ISTUpdated : Dec 07, 2025, 06:07 PM IST

Karnataka News Live: ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!

ಸಾರಾಂಶ

ಬೆಂಗಳೂರು: ಆಪ್ತರ ಮದುವೆಯಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಚಿವ ಸತೀಶ್‌ ಜಾರಕಿಹೊಳಿ ಮತ್ತು ನಾವು ಸಹೋದ್ಯೋಗಿಗಳು. ನಾವು ಭೇಟಿ ಮಾಡಿದಾಗ ರಾಜ್ಯ ಮತ್ತು ಪಕ್ಷದ ವಿಚಾರ ಮಾತನಾಡಿದ್ದೇವೆ. ನಮ್ಮನ್ನು ವೈರಿಗಳಂತೆ ಏಕೆ ನೋಡುತ್ತೀರಿ? ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಜತೆಗೆ ಇರುತ್ತೇವೆ. ಬೆಳಗ್ಗೆ ತಿಂಡಿಗೆ, ರಾತ್ರಿ ಊಟಕ್ಕೆ ಸೇರುತ್ತೇವೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ತನ ಇದ್ದೇ ಇರುತ್ತದೆ ಎಂದು ಹೇಳಿದರು.

Chanakya Niti

06:07 PM (IST) Dec 07

ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!

ಜೀವನದಲ್ಲಿ ಉತ್ತಮ ಸಂಗಾತಿ ಬಂದರೆ ಅವರ ಜೀವನ ಸ್ವರ್ಗದಂತಿರುತ್ತದೆ. ಮೌಲ್ಯಗಳಿಲ್ಲದ ಸಂಗಾತಿ ಬಂದರೆ ಕಷ್ಟಗಳಿಂದ ತುಂಬಿರುತ್ತದೆ. ಚಾಣಕ್ಯನ ಪ್ರಕಾರ, ಜೀವನ ಸಂಗಾತಿ ಹೇಗಿದ್ದರೆ ಕಷ್ಟಗಳು ತಪ್ಪುವುದಿಲ್ಲ ಎಂದು ನೋಡೋಣ.

Read Full Story

05:51 PM (IST) Dec 07

ಕಥೆ ಇರಲ್ಲ, ಆದ್ರೆ ಮೂರೂವರೆ ಗಂಟೆ ಸಿನಿಮಾ.. ಸುಕುಮಾರ್, ಸಂದೀಪ್ ವಂಗಾ, ರಾಜಮೌಳಿಗೆ ಬಾಲಯ್ಯ ಟಾಂಗ್!

ನಂದಮೂರಿ ಬಾಲಕೃಷ್ಣ ಅವರು ಸ್ಟಾರ್ ನಿರ್ದೇಶಕರಾದ ರಾಜಮೌಳಿ, ಸುಕುಮಾರ್, ಸಂದೀಪ್ ರೆಡ್ಡಿ ವಂಗಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಸಿನಿಮಾದ ಅವಧಿಯ ಬಗ್ಗೆ ಅವರು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

Read Full Story

05:41 PM (IST) Dec 07

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ - ಛಲವಾದಿ ನಾರಾಯಣಸ್ವಾಮಿ

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ. ರಸ್ತೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಜನರ ಸಮಸ್ಯೆಗೆ ಪರಿಹಾರ ನೀಡಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

Read Full Story

05:15 PM (IST) Dec 07

Amruthadhaare - ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಅಜ್ಜಿ ಭಾಗ್ಯಮ್ಮ ಮೊಮ್ಮಕ್ಕಳನ್ನು ಹುಡುಕಿ ಬಂದಿದ್ದಾರೆ. ಭೂಮಿಕಾಳ ಹಠದಿಂದ ದೂರವಾಗಿರುವ ಗೌತಮ್-ಭೂಮಿಕಾಳನ್ನು ಒಂದು ಮಾಡಲು ಅಜ್ಜಿ ಪಣತೊಟ್ಟಿದ್ದು, ವಠಾರದಲ್ಲಿ ಮೊಮ್ಮಕ್ಕಳನ್ನು ಭೇಟಿಯಾಗಿ ಮುದ್ದಾಡಿದ್ದಾರೆ. ಆದರೆ, ಜೈದೇವ್ ಕಥೆ ಇನ್ನೂ ನಿಗೂಢವಾಗಿಯೇ ಉಳಿದಿದೆ.
Read Full Story

05:13 PM (IST) Dec 07

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ - ಅಷ್ಟಕ್ಕೂ ಯಾರು ಆ ಹೀರೋ?

ಯಾವುದೇ ಹಿನ್ನೆಲೆ ಇಲ್ಲದೆ ಬೆಳೆದ ಸ್ಟಾರ್ ನಟರೊಬ್ಬರು ಚಿರಂಜೀವಿ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ. ತನಗೆ ಮಗ ಹುಟ್ಟಿದಾಗ ಚಿರಂಜೀವಿ ಜಾತಕ ಹೇಳಿದ್ದರಂತೆ. ಅಷ್ಟಕ್ಕೂ ಆ ನಟ ಯಾರು ಅನ್ನೋದನ್ನು ಈ ಸ್ಟೋರಿನಲ್ಲಿ ತಿಳಿಯಿರಿ.

Read Full Story

05:05 PM (IST) Dec 07

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ, ಹಾಲಿನ ಟ್ಯಾಂಕರ್‌ಗೆ ರೆನಾಲ್ಟ್ ಡಸ್ಟರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ದುರ್ಘಟನೆ ರಾಮನಗರದ ಸಂಗಬಸವನದೊಡ್ಡಿ ಬಳಿ ನಡೆದಿದೆ.

Read Full Story

04:54 PM (IST) Dec 07

ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ - ಸಂಸದ ಯದುವೀರ್

ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಯದುವೀರ್ ಒಡೆಯರ್ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

Read Full Story

04:49 PM (IST) Dec 07

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ

ಧಾರವಾಡದಲ್ಲಿ ಶಾಸಕ ಕೋನರೆಡ್ಡಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ಅಂತರ ಜಾತಿಯ ವಿವಾಹಗಳು ಹೆಚ್ಚಾಗಬೇಕು ಎಂದು ಕರೆ ನೀಡಿದರು. ಇದೇ ವೇಳೆ, ದೇಶದ ಜನಸಂಖ್ಯೆ ಹೆಚ್ಚಾಗಿರುವುದರಿಂದ ನವದಂಪತಿಗಳು ಎರಡು ಮಕ್ಕಳನ್ನು ಮಾಡಿಕಳ್ಳಲು ಸಲಹೆ ನೀಡಿದರು.

Read Full Story

04:38 PM (IST) Dec 07

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ - ಎಚ್.ಡಿ.ಕುಮಾರಸ್ವಾಮಿ

ಸರ್ಕಾರ ಜಾಗ ದೊರಕಿಸಿಕೊಡುವಲ್ಲಿ ವಿಫಲವಾಗಿದೆ. ಜಿಲ್ಲೆಯೊಳಗೆ ಕೈಗಾರಿಕೆ ಸ್ಥಾಪಿಸುವ ಇಚ್ಛಾಶಕ್ತಿ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Read Full Story

04:23 PM (IST) Dec 07

BBK 12 - ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಲವ್ಸ್‌ ರಘು ಎನ್ನೋ ಥರ ಇವರ ಬಂಧ ಇತ್ತು. ಆದರೆ ಈಗ ಇವರಿಬ್ಬರ ಮಧ್ಯೆ ಮನಸ್ತಾಪ ಬಂದಿದೆ. ಈ ಜೋಡಿ ದೂರ ಆಗಿದೆ. ಈಗ ಗಿಲ್ಲಿ ನಟನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರಘು ರೆಡಿಯಾಗಿದ್ದಾರೆ.

Read Full Story

04:22 PM (IST) Dec 07

ರೈತರಿಗೆ ಅನುಕೂಲ ಮಾಡುವುದೇ ಗುರಿ - ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್

ರೈತರಿಗೆ ಅನುಕೂಲ ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು. ತಾಲೂಕಿನ ಕೆಂಪಸಾಗರ ಗ್ರಾಮದಲ್ಲಿ ಡೈರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

Read Full Story

04:19 PM (IST) Dec 07

Bigg Boss - 'ಜುಂ ಜುಂ ಮಾಯಾ, ಪ್ರಾಯ ಬಂದ್ರೆ..' ಗಿಲ್ಲಿ- ಅಶ್ವಿನಿ ರೊಮಾನ್ಸ್​, ಕಾವ್ಯಾನ ಕಣ್ಣು ಮುಚ್ರಪ್ಪೋ ಪ್ಲೀಸ್​

ಬಿಗ್‌ಬಾಸ್ ಮನೆಯಲ್ಲಿ ಹಾವು-ಮುಂಗುಸಿಗಳಂತಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಇದೀಗ 'ಜುಂ ಜುಂ ಮಾಯಾ' ಹಾಡಿಗೆ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಸಮಯದಲ್ಲಿ ಕಾವ್ಯಾ ಶೈವ ಅವರ ಮುಖಭಾವ ಬದಲಾಗಿರುವುದನ್ನು ನೋಡಬಹುದು.

Read Full Story

03:44 PM (IST) Dec 07

ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ

ದಾವಣಗೆರೆಯಲ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ, ನಾಯಿಗಳನ್ನು ಬಿಟ್ಟುಹೋಗಿದ್ದ ಮಾಲೀಕ ಶೈಲೇಶಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸಿದ್ದ ಎರಡೂ ನಾಯಿಗಳು ಸೆರೆ ಕಾರ್ಯಾಚರಣೆ ವೇಳೆ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿವೆ.
Read Full Story

03:44 PM (IST) Dec 07

BBK 12 - ಗಿಲ್ಲಿ ನಟ ನನ್ನ ಪಾಲಿಗೆ ಹಾವು- ಕಿಚ್ಚ ಸುದೀಪ್‌ ಮುಂದೆಯೇ ತಿರುಗಿ ಬಿದ್ದ ಕಾವ್ಯ ಶೈವ

Bigg Boss Kannada Season 12: ಸೂಪರ್‌ ಸಂಡೇ ವಿಥ್‌ ಸುದೀಪ ಎಪಿಸೋಡ್‌ನಲ್ಲಿ ನನ್ನ ಜರ್ನಿಯಲ್ಲಿ ಒಬ್ಬರು ಹಾವಾಗಿದ್ದಾರೆ, ಏಣಿಯಾಗಿದ್ದಾರೆ ಎನ್ನೋದನ್ನು ಹೇಳಬೇಕು ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ಆಗ ಬಹುತೇಕರು ಗಿಲ್ಲಿಗೆ ಹಾವಿನ ಸ್ಥಾನವನ್ನು ಕೊಟ್ಟಿದ್ದಾರೆ. ಅದರಲ್ಲಿ ಕಾವ್ಯ ನೀಡಿರೋದು ವಿಶೇಷ.

 

Read Full Story

03:43 PM (IST) Dec 07

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ ಮಾಡಿದ್ದಾರೆ. ಮಕ್ಕಳು ವಯಸ್ಸ 6 ವರ್ಷ ಕಡ್ಡಾಯ ಮಾಡಿರುವುದು ಇಂಗ್ಲೀಷ್ ಶಾಲೆಗಳ ಪೋಷಕರಲ್ಲಿ ಆತಂಕ ತರಿಸಿದೆ.

Read Full Story

01:37 PM (IST) Dec 07

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಕೆಎಸ್‌ಸಿಎ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ ಚಲಾಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಮರಳಿ ತರುವ ಭರವಸೆ ನೀಡಿದ್ದಾರೆ. 2026ರ ಐಪಿಎಲ್ ಪಂದ್ಯಗಳನ್ನೂ ಇಲ್ಲಿಯೇ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

01:17 PM (IST) Dec 07

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ - ಹೆಚ್.ಡಿ.ಕುಮಾರಸ್ವಾಮಿ!

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ಕೇಂದ್ರಕ್ಕೆ ಪತ್ರ ಬರೆದಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಸಿದ್ದರಾಮಯ್ಯ 'ಮನುವಾದಿ' ಎಂದು ಟೀಕಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ತಾವು ಕೃಷ್ಣತತ್ತ್ವವನ್ನು ನಂಬಿದವರು, ಕಂಸ ಹಿಂಸೆಯನ್ನಲ್ಲ ಎಂದರು.

Read Full Story

01:01 PM (IST) Dec 07

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!

ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಗಣೇಶ್ ಕೊಲೆ ಪ್ರಕರಣದಲ್ಲಿ, ಪೊಲೀಸರು ಆರು ಆರೋಪಿಗಳ ಪೈಕಿ ಮೂವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಮೂವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

Read Full Story

12:32 PM (IST) Dec 07

ರಾಮನಗರದ ರೇವಣಸಿದ್ದೇಶ್ವರ ಬೆಟ್ಟದಲ್ಲಿ ದುರಂತ - ದೇವರ ದರ್ಶನಕ್ಕೂ ಮುನ್ನವೇ ಕಂದಕ ಸೇರಿದ ಭಕ್ತ!

ರಾಮನಗರದ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟದಲ್ಲಿ (SRS ಬೆಟ್ಟ) ದೇವರ ದರ್ಶನಕ್ಕೆಂದು ಬಂದಿದ್ದ 65 ವರ್ಷದ ವೃದ್ಧರೊಬ್ಬರು ಮೆಟ್ಟಿಲು ಹತ್ತುವಾಗ ಕಾಲು ಜಾರಿ ಕಂದಕಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಎದುರೇ ಈ ದುರ್ಘಟನೆ ಸಂಭವಿಸಿದೆ.

Read Full Story

12:01 PM (IST) Dec 07

Bengaluru - ಬೆಂಗಳೂರಿನಲ್ಲಿ 7ನೇ ಕ್ಲಾಸ್ ವಿದ್ಯಾರ್ಥಿ ಕಪಾಳಕ್ಕೆ ಹೊಡೆದ ಶಿಕ್ಷಕನ ಬಂಧನ

ಹುಳಿಮಾವು ಠಾಣೆಯಲ್ಲಿ ಶಿಕ್ಷಕ ರಾಜೇಶ್ ವಿರುದ್ಧ ದೂರು ದಾಖಲಿಸಿದ್ದಾರೆ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ . ವಿದ್ಯಾರ್ಥಿಗೆ ಶಿಕ್ಷೆ ನೀಡಿದ್ಯಾಕೆ?

Read Full Story

11:58 AM (IST) Dec 07

Amruthadhaare Serial - ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್-ಭೂಮಿಕಾರನ್ನು ಹತ್ತಿರ ಮಾಡೋಕೆ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಜಯದೇವ್‌ ತಾನೇ ತೋಡಿಕೊಂಡ ಗುಂಡಿಗೆ ಬೀಳುತ್ತಿದ್ದಾನೆ. ಅಧರ್ಮಕ್ಕೆ ಎಂದಿಗೂ ಗೆಲುವು ಸಿಗೋದಿಲ್ಲ ಎನ್ನೋದು ಸಾಬೀತಾಗಿದೆ.

Read Full Story

11:14 AM (IST) Dec 07

ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?

ಮೊಳಕೆ ಬಂದ ಆಲೂಗಡ್ಡೆಗಳು ಗ್ಲೈಕೋಲ್ಕಲಾಯ್ಡ್ಸ್ ಎಂಬ ವಿಷಕಾರಿ ಅಂಶವನ್ನು ಹೊಂದಿರುತ್ತವೆ. ಇವುಗಳ ಸೇವನೆಯಿಂದ ಅಸಿಡಿಟಿ, ಹೊಟ್ಟೆನೋವಿನಂತಹ ಸಮಸ್ಯೆಗಳು ಉಂಟಾಗಬಹುದು. ಅದರಲ್ಲೂ ಗರ್ಭಿಣಿಯರು ಇಂತಹ ಆಲೂಗಡ್ಡೆಗಳನ್ನು ತಿನ್ನುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ.
Read Full Story

10:17 AM (IST) Dec 07

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭಾಗಿಯಾಗಿದ್ದ ಕಾರ್ತಿಕ್‌ ಮಹೇಶ್‌ ಹಾಗೂ ನಮ್ರತಾ ಗೌಡ ಅವರು ಈಗಲೂ ಒಳ್ಳೆಯ ಸ್ನೇಹ ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ನಮ್ರತಾ ಜೊತೆಗೆ ಕಾರ್ತಿಕ್‌ ಕೂಡ ವಿದೇಶಕ್ಕೆ ಹೋಗಿದ್ದರು ಎನ್ನಲಾಗಿರುವ ಗಾಸಿಪ್‌ಗೆ ಕಾರ್ತಿಕ್‌ ಹೇಳಿದ್ದೇನು?

Read Full Story

09:50 AM (IST) Dec 07

BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ

Bigg Boss Kannada 12: ಮೊನ್ನೆಯಿಂದ ಗಿಲ್ಲಿ ನಟ ಅವರು ಧ್ರುವಂತ್‌ಗೆ, “ನಾ ಕಂಡ ಧ್ರುವಂತ, ಮನೆಯಿಂದ ಹೊರಹೋಗ್ತೀಯ ಜೀವಂತ” ಎಂದು ಹೇಳುತ್ತಿದ್ದರು. ಈಗ ಕಿಚ್ಚ ಸುದೀಪ್‌ ಅವರು ಸೂಪರ್‌ ಸಂಡೇ ವಿಥ್‌ ಸುದೀಪ ಶೋನಲ್ಲಿ ಗಿಲ್ಲಿ ನಟನಿಗೆ ಯಾರ ಮೇಲೆ ಯಾವ ಪುಸ್ತಕ ಬರೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.

Read Full Story

09:03 AM (IST) Dec 07

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ಗೆ ಬೆನ್ನುನೋವಿನ ಕಾರಣಕ್ಕೆ ನೀಡಲಾಗುತ್ತಿದ್ದ ಫಿಸಿಯೋಥೆರಪಿ ಚಿಕಿತ್ಸೆಯನ್ನು ವೈದ್ಯರು ಸ್ಥಗಿತಗೊಳಿಸಿದ್ದಾರೆ. ದರ್ಶನ್‌ಗೆ ಬೆನ್ನುನೋವಿನ ಯಾವುದೇ ಲಕ್ಷಣಗಳಿಲ್ಲ ಎಂದು ವರದಿ ನೀಡಿದ್ದಾರೆ.

Read Full Story

08:41 AM (IST) Dec 07

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು - Shiva Rajkumar

Gummadi Narsaiah Movie: ನಟ ಶಿವರಾಜ್‌ಕುಮಾರ್‌ ಅವರು ತೆಲುಗು ಭಾಷೆಯ ‘ಗುಮ್ಮಡಿ ನರಸಯ್ಯ’ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈ ಸಿನಿಮಾದ ಮುಹೂರ್ತದಲ್ಲಿ ಅವರು ಭಾಗಿಯಾಗಿದ್ದರು. ಗುಮ್ಮಡಿ ನರಸಯ್ಯ ಅವರ ಬಗ್ಗೆ ಮಾಹಿತಿ ಇಲ್ಲಿದೆ.

 

Read Full Story

08:36 AM (IST) Dec 07

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ - ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್

ಕಾರವಾರ ಜೈಲಿನಲ್ಲಿ ಡ್ರಗ್ಸ್ ಪೂರೈಕೆ ತಡೆದಿದ್ದಕ್ಕೆ ಕೈದಿಗಳು ಜೈಲರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸಿಗರೇಟು ಸಾಗಿಸಲು ಯತ್ನಿಸಿದ ವಾರ್ಡನ್‌ನನ್ನು ಬಂಧಿಸಲಾಗಿದೆ.
Read Full Story

08:17 AM (IST) Dec 07

BBK 12 - ಸ್ಪಂದನಾ ಸೋಮಣ್ಣ ಮುಂದೆ ರಜತ್‌ ಅಸಭ್ಯ ವರ್ತನೆ ಮಾಡಿದ್ರು - ಧ್ರುವಂತ್‌ ವಿರುದ್ಧ ರಜತ್‌ ಆರೋಪ

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌ ಅವರು ಕಿಚ್ಚ ಸುದೀಪ್‌ ಮುಂದೆಯೂ, ಕ್ಯಾಮರಾ ಮುಂದೆ ಹೋಗಿ ಮನೆಗೆ ಹೋಗಬೇಕು, ಶೋ ಬಿಡ್ತೀನಿ ಎಂದು ಹೇಳುತ್ತಲೇ ಇದ್ದರು. ಈಗ ಅವರ ವಿರುದ್ಧ ರಜತ್‌ ಗಂಭೀರ ಆರೋಪವನ್ನು ಮಾಡಿದ್ದಾರೆ.

 

Read Full Story

08:06 AM (IST) Dec 07

ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು

ಕೆಲವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತರಾದ್ರೆ, ಒಂದಿಷ್ಟು ದಟ್ಟವಾದ ಹೊಗೆಯಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೇ ಉಸಿರುಗಟ್ಟಿ ಮೃತರಾಗಿದ್ದಾರೆ. ಕ್ಲಬ್‌ನ ಕೆಳಮಹಡಿಯಲ್ಲಿ ಈ ಸ್ಪೋಟ ಸಂಭವಿಸಿದೆ

Read Full Story

07:56 AM (IST) Dec 07

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ

ಚಿಕ್ಕಮಗಳೂರಿನಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್ ಸೇರಿ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

Read Full Story

07:48 AM (IST) Dec 07

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ

ರಾಜಧಾನಿ ಬೆಂಗಳೂರಿನ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತುತ 4,808 ಕೋಟಿ ರು. ವೆಚ್ಚ ಮಾಡಲಾಗುತ್ತಿದ್ದು, ಮಳೆಗಾಲ ಆರಂಭಕ್ಕೂ ಮೊದಲು ವೈಟ್‌ಟಾಪಿಂಗ್‌ ಕಾಮಗಾರಿ ಹೊರತು ಪಡಿಸಿ ಉಳಿದೆಲ್ಲ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸಲಾಗುವುದು

Read Full Story

07:30 AM (IST) Dec 07

ಮಧುಗಿರಿ - ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು

ಎಟಿಎಂನಲ್ಲಿನ ಹಣ ಕದಿಯಲು ಯತ್ನಿಸಿದ್ದ ದರೋಡೆಕೋರರ ತಂಡವೊಂದು ಮಷಿನ್ ಎತ್ತಿಕೊಂಡು ಹೋಗುವಾಗ ಅದು ಭಾರ ಇದೆ ಎನ್ನುವ ಕಾರಣ ಅದನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.

Read Full Story

07:26 AM (IST) Dec 07

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ

ವಿಶ್ವಮಟ್ಟದಲ್ಲಿ ‘ಮಾಹಿತಿ ತಂತ್ರಜ್ಞಾನ’ ವಿಸ್ತರಣೆಗೆ ಭೂಮಿಕೆ ಕಲ್ಪಿಸಿ ಖ್ಯಾತಿ ಪಡೆದಿರುವ ಕರುನಾಡು ಈಗ ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾಗೂ ‘ಬೃಹತ್ ಮಾರುಕಟ್ಟೆ’ಯಾಗಿ ರೂಪುಗೊಳ್ಳುತ್ತಿರುವ ಆತಂಕ ಶುರುವಾಗಿದೆ. ರಾಜ್ಯಕ್ಕೆ 10ಕ್ಕೂ ಹೆಚ್ಚು ದೇಶಗಳಿಂದ ಡ್ರಗ್ಸ್‌ ಪ್ರವಾಹವೇ ಬರುತ್ತಿದೆ.

Read Full Story

More Trending News