ಧರ್ಮಸ್ಥಳ: ಬಂಗ್ಲೆಗುಡ್ಡೆ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಭೂಮಿಯ ಮೇಲ್ಮೈಯಲ್ಲಿ ಒಂದು ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಈ ಅಸ್ಥಿಪಂಜರವು ದೂರುದಾರ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದಲ್ಲಿ ಸಿಗದೆ ಬೇರೆ ಪಾಯಿಂಟ್‌ನಲ್ಲಿ ಪತ್ತೆಯಾಗಿದೆ. ಈ ಅಸ್ಥಿಪಂಜರದ ಬಳಿಯಲ್ಲಿ ಗಂಡಸಿನ ಉಡುಪುಗಳು ಮತ್ತು ಹಗ್ಗವೂ ಪತ್ತೆಯಾದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

11:37 PM (IST) Aug 05
ಸೋಶಿಯಲ್ ಮೀಡಿಯಾದಲ್ಲಿ ಕೊಳಕು ಕಮೆಂಟ್ ಮಾಡುತ್ತಿರುವವರ ವಿರುದ್ಧ ಸಮರ ಸಾರಿರುವ ನಟಿ ರಮ್ಯಾಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಸಿನಿಮಾ ಮಾಡುತ್ತಿದ್ದೀರಾ? ಸ್ಟೈಲಿಶ್ ಫೋಟೋ ಹಂಚಿಕೊಂಡಿರುವ ರಮ್ಯಾ ಕಮೆಂಟ್ ನಿರ್ಬಂಧಿಸಿದ್ದಾರೆ.
11:14 PM (IST) Aug 05
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕೈಗೊಳ್ಳಬೇಕಿದ್ದ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ರದ್ದಾಗಿದೆ.
10:40 PM (IST) Aug 05
ರಾಜ್ಯದ ಕೆಲೆವೆಡೆ ಭಾರಿ ಮಳೆಯಾಗುತ್ತಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ (ಆ.06) ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.
10:02 PM (IST) Aug 05
ತಾಯಿ ಮೃತಪಟ್ಟ 2 ತಿಂಗಳಿಗೆ ಖಾತೆಗೆ ಬಂತು 1.13 ಲಕ್ಷ ಕೋಟಿ ರೂಪಾಯಿ. ಮೆಸೇಜ್ ನೋಡಿದ ಮಗ ಬೆಚ್ಚಿ ಬಿದ್ದಿದ್ದಾನೆ. ಕೆಲವೇ ಹೊತ್ತಲ್ಲಿ ಮಗನ ಫೋನ್ ಸ್ವಿಚ್ ಆಫ್ ಆಗಿದ್ದರೆ, ಇತ್ತ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.
08:57 PM (IST) Aug 05
ಉತ್ತರಖಂಡದ ಭೀಕರ ಮೇಘಸ್ಪೋಟದಲ್ಲಿ ಇಡೀ ಗ್ರಾಮವೇ ಕೊಚ್ಚಿಹೋಗಿದೆ ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೇಘಸ್ಫೋಟದಲ್ಲಿ 8 ರಿಂದ 10 ಭಾರತೀಯ ಯೋಧರು ನಾಪತ್ತೆಯಾಗಿದ್ದಾರೆ.
08:29 PM (IST) Aug 05
08:18 PM (IST) Aug 05
ಟಿಸಿಎಸ್ 12000 ಉದ್ಯೋಗ ಕಡಿತಕ್ಕೆ ಮುಂದಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಮೇಜಾನ್ ಉದ್ಯೋಗ ಕಡಿತ ಮಾಡುತ್ತಿದೆ. ಇದರ ಪರಿಣಾಮ ಸಿಇಒ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ.
08:06 PM (IST) Aug 05
07:51 PM (IST) Aug 05
07:40 PM (IST) Aug 05
07:39 PM (IST) Aug 05
07:16 PM (IST) Aug 05
ಬೆಂಗಳೂರಿನ ಸದಾಶಿವನಗರದಲ್ಲಿರುವ ಒಂದು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭೂಮಿಯ ಮಾಲೀಕತ್ವ ಮತ್ತು ಬಳಕೆಯ ಕುರಿತು ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಈ ತೀರ್ಪು ಮಹತ್ವದ ತಿರುವು ನೀಡಿದೆ.
07:16 PM (IST) Aug 05
ಚಿತ್ರದುರ್ಗದ ಬಸ್ ನಿಲ್ದಾಣದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜಾಗಿದೆ. ಐವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
07:12 PM (IST) Aug 05
ಉತ್ತರಖಂಡದ ಧಾರಾಲಿ ಗ್ರಾಮ ಮೇಘಸ್ಫೋಟಕ್ಕೆ ಕೊಚ್ಚಿ ಹೋಗಿದೆ. ಇದರ ಬೆನ್ನಲ್ಲೇ ಸುಖಿ ಬೆಟ್ಟದಲ್ಲಿ ಮೇಘಸ್ಫೋಟಗೊಂಡಿದೆ. ಹಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕಟ್ಟಡಗಳು, ಮನೆಗಳು ನೆಲೆಸಮಗೊಂಡಿದೆ.
06:34 PM (IST) Aug 05
06:14 PM (IST) Aug 05
06:12 PM (IST) Aug 05
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ, ಮುಂದಿನ ಮೆಟ್ರೋ ಯೋಜನೆಗಳು, ಡಬಲ್ ಡೆಕ್ಕರ್ ಮೆಟ್ರೋ ಯೋಜನೆ ಮತ್ತು ಹೊಸ ಟನಲ್ ರಸ್ತೆ ಕುರಿತು ಮಾಹಿತಿ ನೀಡಿದರು. ಹಳದಿ ಮಾರ್ಗವು 19.5 ಕಿ.ಮೀ ಉದ್ದವಿದ್ದು, 16 ನಿಲ್ದಾಣಗಳನ್ನು ಹೊಂದಿದೆ.
05:51 PM (IST) Aug 05
ಉತ್ತರಖಂಡ ಮೇಘಸ್ಫೋಟದ ವಿಡಿಯೋ ಬಹಿರಂಗವಾಗಿದೆ. ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರವಾಹ ಇಡೀ ಗ್ರಾಮವನ್ನೇ ಮುಗಿಸಿಬಿಟ್ಟಿದೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ ಸಮಾಧಿಯಾಗಿರುವ ಭೀಕರ ವಿಡಿಯೋ ಹೊರಬಂದಿದೆ.
05:07 PM (IST) Aug 05
ಎಸ್ಮಾ ಜಾರಿಯಾದರೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮಾಡುತ್ತಿದ್ದ ನೌಕರರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಜಂಟಿ ಕ್ರಿಯಾ ಸಮಿತಿ ಚಿಂತನೆ ನಡೆಸುತ್ತಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
04:39 PM (IST) Aug 05
04:36 PM (IST) Aug 05
04:20 PM (IST) Aug 05
ಕೇವಲ ಒಂದು ಬೆಡ್ ರೂಂ ಮನೆ, ಬಾಡಿಗೆ ಬರೋಬ್ಬರಿ 42,000 ರೂಪಾಯಿ. ಬೆಂಗಳೂರು ಸೇರಿದಂತೆ ಎಲ್ಲಾ ನಗರದ ಮನೆ ಬಾಡಿಗೆಯನ್ನು ಹಿಂದಿಕ್ಕಿದ ಭಾರತದ ಈ ನಗರ ಯಾವುದು?
03:34 PM (IST) Aug 05
03:30 PM (IST) Aug 05
ಸಂಜಯ್ ದತ್ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ರೀತಿಯಲ್ಲೇ ಇಲ್ಲೊಬ್ಬ ಮಾರ್ಡರ್ನ್ ಮುನ್ನಾ ಭಾಯ್ ಇದ್ದಾನೆ. ಈತ ಬರೋಬ್ಬರಿ 50 ಸಿ ಸೆಕ್ಷನ್ ಸರ್ಜರಿ ಮಾಡಿದ್ದಾನೆ. 51ನೇ ಸರ್ಜರಿ ಮಾಡುತ್ತಿರುವಾಗಲೇ ಪೊಲೀಸರು ಈತನ ಅರೆಸ್ಟ್ ಮಾಡಿದ್ದಾರೆ.
03:10 PM (IST) Aug 05
02:50 PM (IST) Aug 05
ಈ ಕಂಪನಿಗಳ ಪ್ರತಿನಿಧಿಗಳು ವಸಂತನಗರದಲ್ಲಿರುವ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ನ ಪ್ರಧಾನ ಕಚೇರಿಯಲ್ಲಿ ನಡೆದ ಪೂರ್ವ-ಬಿಡ್ ಸಭೆಯಲ್ಲಿ ಭಾಗವಹಿಸಿದ್ದರು.
01:28 PM (IST) Aug 05
ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಯಾರು ನಿಜವಾದ ಭಾರತೀಯರು ಎಂದು ನ್ಯಾಯಾಧೀಶರು ತೀರ್ಮಾನಿಸಬಾರದು ಎಂದು ಅವರು ಹೇಳಿದ್ದಾರೆ.
01:05 PM (IST) Aug 05
ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ 48 ಜನರ ಪೈಕಿ 4 ಮಂದಿ ಬಂಧಿಸಲಾಗಿದೆ. ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳು ಸಂದೇಶ ಕಳುಹಿಸಿದ್ದರು. ಕೆಲವರು ಕ್ಷಮೆ ಕೇಳಿದರೆ, ಇನ್ನು ಕೆಲವರು ಅಕೌಂಟ್ ಡಿಲೀಟ್ ಮಾಡಿ ಮನೆ, ಊರು ಬಿಟ್ಟು ಹೋಗಿದ್ದಾರೆ.
01:00 PM (IST) Aug 05
12:59 PM (IST) Aug 05
12:08 PM (IST) Aug 05
11:57 AM (IST) Aug 05
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯ ಹೊಸ ತಿರುವು ಪಡೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಮಹಜರು ನಡೆಸಿದ ಎಸಿ ಸ್ಟೆಲ್ಲಾ ವರ್ಗೀಸ್ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ. ಒಂದೂವರೆ ವರ್ಷ ಹಿಂದಿನ ಪುರುಷನ ಅಸ್ಥಿಪಂಜರ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
11:02 AM (IST) Aug 05
10:59 AM (IST) Aug 05
1 ಕೆಜಿ ಮತ್ತು 5 ಕೆಜಿ ಪ್ಯಾಕುಗಳಲ್ಲಿ ಮಾರಾಟವಾಗುವ ನಂದಿ ಗೋಧಿ ಹಿಟ್ಟಿಗೆ ಬೀದರ್ ಪಕ್ಕದ ಆಂಧ್ರಪ್ರದೇಶದ ಜಿಲ್ಲೆಯಾದ ಜಹೀರಾಬಾದ್, ಮಹಾರಾಷ್ಟ್ರದ ಜಿಲ್ಲೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದೆ.
10:06 AM (IST) Aug 05
ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ಎನ್ನುವುದು ಪುರಾತತ್ವ ಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳು ಭೂಮಿಯನ್ನು ಅಗೆಯದೆ, ನೆಲದಾಳದಲ್ಲಿ ಇರುವುದನ್ನು ಹುಡುಕುವ ವಿಧಾನವನ್ನು ಒದಗಿಸಿದೆ.
09:39 AM (IST) Aug 05
ವಾರಸುದಾರರ ನಡುವೆ ತಕರಾರಿಲ್ಲದ ಎಲ್ಲವನ್ನೂ ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್ ಒಳಗಾಗಿ ವಾರಸುದಾರರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
09:06 AM (IST) Aug 05
Former MP Prajwal Revanna: ಅತ್ಯಾ*ಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
09:04 AM (IST) Aug 05
ಕಳೆದ 2024ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿಸಿರುವ ಹೈಕೋರ್ಟ್.
08:21 AM (IST) Aug 05
ಬಿಬಿಎಂಪಿಗೆ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಮೂರು ದಿನಗಳ ಹಿಂದೆ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಅನ್ನು ನ್ಯಾಯಪೀಠ ಕೋರ್ಟ್ ಮುಂದೆ ಓದಿತು. ಬಳಿಕ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.
08:13 AM (IST) Aug 05
ಕಳೆದ ಸಂಸತ್ ಚುನಾವಣೆ ವೇಳೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮಾತನಾಡಿದ್ದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.