LIVE NOW
Published : Jul 05, 2026, 07:03 AM ISTUpdated : Jul 05, 2026, 11:50 PM IST

Karnataka News Live: ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ - ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ ಶನಿವಾರ ವಿವಿಧೆಡೆ ಉತ್ತಮ ಮಳೆಯಾಗಿದೆ. ಶೃಂಗೇರಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಅಪಾಯದ ಮಟ್ಟ ಮೀರಿ ತುಂಗಾ ನದಿ ಹರಿಯುತ್ತಿದ್ದೆ.

ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಬೃಹತ್ ಗಿಡಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿವೆ. ನಗರದ ರಾಣಿ ಚನ್ನಮ್ಮ ವೃತ್ತ ಸೇರಿ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ನ್ಯಾಯಾಲಯದ ಆವರಣ ಸಂಪೂರ್ಣ ಕೆರೆಯಂತಾಗಿದೆ. ಜೋಡಕುರುಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌ 7 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶೃಂಗೇರಿ ತಾಲೂಕಿನಾದ್ಯಂತ ಅಬ್ಬರದ ಮಳೆಯಾಗಿದೆ. ತುಂಗಾನದಿ ಉಗಮಸ್ಥಳ ಪಶ್ಚಿಮಘಟ್ಟಗಳ ತಪ್ಪಲು ಸುತ್ತಮುತ್ತಲ ಪ್ರದೇಶಗಳಲ್ಲಿ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇನ್ನು ಜು.5ರಂದು ಭಾನುವಾರ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಜು.6ರ ನಂತರ 3 ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಇರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

11:50 PM (IST) Jul 05

ಗದಗದಲ್ಲಿ ವೀರೇಶ್ವರ ಪುಣ್ಯಾಶ್ರಮ ಜಾತ್ರೆ ಸಂಭ್ರಮ - ಮಳೆಯ ನಡುವೆ ರಥೋತ್ಸವಕ್ಕೆ ಭಕ್ತರ ಜಯಘೋಷ

Gadag: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದ ಜಾತ್ರೆ ಅಂದ್ರೆ ಅದು ಬರೀ ಜನ ಜಂಗುಳಿಯ ಜಾತ್ರೆಯಲ್ಲ. ಅದು ಸಂಗೀತದ ಜಾತ್ರೆ. ಕಲಾವಿದರ, ಕಲೆಯ ಸಂಭ್ರಮದ ಉತ್ಸವ‌. ಹೌದು! ಐದು ದಿನಗಳ ಕಾಲ ನಡೆಯುವ..

Read Full Story

11:24 PM (IST) Jul 05

Laya - 20 ವರ್ಷದ ಬಳಿಕ ಕನ್ನಡಕ್ಕೆ ಮತ್ತೆ ಬಂದ 'ಗಂಡುಗಲಿ ಕುಮಾರರಾಮ' ನಟಿ ಲಯ..!

ಎರಡು ದಶಕಗಳ ಹಿಂದೆ ನಟ ಶಿವರಾಜ್‌ಕುಮಾರ್ ಅಭಿನಯದ 'ಗಂಡುಗಲಿ ಕುಮಾರರಾಮ' ಚಿತ್ರದಲ್ಲಿ ಮಿಂಚಿದ್ದ ಈ ತೆಲುಗು ನಟಿ ಲಯ, ಈಗ ಮತ್ತೆ ಧ್ಯಾನ್ ಯೋಗೇಶ್ವರ್ ನಟನೆಯ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ.

Read Full Story

11:13 PM (IST) Jul 05

SIR ನಡೆಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲ - ಎಚ್‌ಡಿಕೆಗೆ ಸಚಿವ ಯು.ಟಿ. ಖಾದರ್ ತಿರುಗೇಟು

SIR ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅಕ್ರಮ ನಡೆಯುತ್ತಿವೆ. ಹೀಗಾಗಿ ಈಗ ಆಗಿರುವ ಪ್ರಕ್ರಿಯೆಯನ್ನು ರದ್ದು ಮಾಡಿ, ಹೊರರಾಜ್ಯದ ದಕ್ಷ ಅಧಿಕಾರಿಗೆ ಉಸ್ತುವಾರಿ ನೀಡಲಿ ಎಂದು ಸಚಿವ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ.

Read Full Story

10:44 PM (IST) Jul 05

Central - ರೈತರಿಗೆ ಬಂಪರ್ ಜಾಕಪಾಟ್; ಕೇಂದ್ರದಿಂದ ಬಿಗ್ ಮೇಸೇಜ್, ಇನ್ಮುಂದೆ ಇಲ್ಲ ಅದರ ಕೊರತೆ!

Big message from the Centre: ಮಿಡಲ್‌ ಈಸ್ಟ್‌ನನಲ್ಲಿ ಹೆಚ್ಚಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಅನಿಶ್ಚಿತತೆಯು ವಿಶ್ವಾದ್ಯಂತ ವಿವಿಧ ವಸ್ತುಗಳ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ರೈತರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

09:42 PM (IST) Jul 05

ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ - ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.

Read Full Story

09:12 PM (IST) Jul 05

BBK13 - ಕನ್ನಡದ ಬಿಗ್‌ ಬಾಸ್ ಮನೆಗೆ ಹೋಗ್ತಾರಾ ಕರ್ನಾಟಕದ ಸ್ಟಾರ್ ಕ್ರಿಕೆಟರ್ ಪತ್ನಿ - ನಟಿ ಕೊಟ್ಟ ಸ್ಪಷ್ಟನೆ ವೈರಲ್

ಬಿಗ್‌ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿವೆ.

Read Full Story

07:53 PM (IST) Jul 05

Entertainment - ಕೇವಲ 3 ದಿನದಲ್ಲಿ ಹೀರೋಯಿನ್ ಫಿಕ್ಸ್, ರಿಜೆಕ್ಟ್ ಆದ ಹಾಡುಗಳೇ ಸೂಪರ್ ಹಿಟ್; ಮುಡಿಗೇರಿಸಿಕೊಂಡಿದ್ದು 92 ಅವಾರ್ಡ್ಸ್!

movie with 92 awards: 2000ರಲ್ಲಿ ಬಿಡುಗಡೆಯಾದ ಈ ಚಿತ್ರ ಒಬ್ಬ ಹೀರೋವನ್ನು ರಾತ್ರೋರಾತ್ರಿ ಸೂಪರ್‌ಸ್ಟಾರ್ ಮಾಡಿತು. ತಿರಸ್ಕೃತ ರಾಗಗಳಿಂದ ಹಿಟ್ ಹಾಡುಗಳು ಸೃಷ್ಟಿಯಾಗಿದ್ದು ಮತ್ತು 92 ಪ್ರಶಸ್ತಿಗಳನ್ನು ಗೆದ್ದು ಗಿನ್ನೆಸ್ ದಾಖಲೆ ಬರೆದಿದ್ದು ಈ ಚಿತ್ರದ ವಿಶೇಷತೆ.

Read Full Story

07:15 PM (IST) Jul 05

ಕೋಮಲ್ 53ನೇ ಹುಟ್ಟುಹಬ್ಬಕ್ಕೆ ಜಗ್ಗೇಶ್ ಮನಮುಟ್ಟುವ ಶುಭಾಶಯ - ಅಣ್ಣ-ತಮ್ಮನ ಬಾಂಧವ್ಯಕ್ಕೆ ಉದಾಹರಣೆ

Jaggesh Wishes Komal Kumar: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಹಾಗೂ ನಾಯಕ ನಟ ಕೋಮಲ್‌ ಕುಮಾರ್ ಅವರು ಜುಲೈ 4ರಂದು ತಮ್ಮ 53ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

Read Full Story

06:45 PM (IST) Jul 05

Dhyan Yogeshwar - ಶಾಸಕ ಸಿ ಪಿ ಯೋಗೇಶ್ವರ್ ಪುತ್ರ ಧ್ಯಾನ್‌ ಸಿನಿಮಾಗೆ ಎಂಟ್ರಿ; ಸಿಎಂ ಡಿಕೆ ಶಿವಕುಮಾರ್‌ ಆಶೀರ್ವಾದ

ಈ ಎರಡೂ ಬಹುನಿರೀಕ್ಷಿತ ಚಿತ್ರಗಳ ಜಂಟಿ ಮುಹೂರ್ತ ಸಮಾರಂಭವು ಇಂದು ಭಾನುವಾರ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿ ಚಿತ್ರದ ಮುುಹೂರ್ತಕ್ಕೆ ಚಾಲನೆ ನೀಡಿ ಹೀರೋ ಧ್ಯಾನ್ ಅವರಿಗೆ ಶುಭ ಹಾರೈಸಿದರು.

Read Full Story

06:28 PM (IST) Jul 05

ಬೆಂಗಳೂರಲ್ಲಿ 31 ಕಿ.ಮೀ ಪ್ರಯಾಣಿಸಿದ ಬಳಿಕ ಇನ್ಫೋಸಿಸ್ ಸಹ ಸಂಸ್ಥಾಪಕನ ಪೋಸ್ಟ್‌, ಎಲ್ಲವೂ ಟ್ರಾಫಿಕ್ ಮಹಿಮೆ

ಬೆಂಗಳೂರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ 31 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಪ್ರಯಾಣದ ಬಳಿಕ 3 ಪ್ರಮುಖ ವಿಚಾರಗಳನ್ನಿಟ್ಟುಕೊಂಡು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಗೋಪಾಲಕೃಷ್ಣನ್ ಹೇಳಿದ್ದೇನು?

Read Full Story

06:27 PM (IST) Jul 05

ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರವೇಶ ಪರೀಕ್ಷೆ ಯಶಸ್ವಿ - 870 ಅಭ್ಯರ್ಥಿಗಳ ಹಾಜರಾತಿ

ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 1,299 ಅರ್ಜಿಗಳು ಅನುಮೋದನೆಗೊಂಡಿದ್ದು, 870 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.

Read Full Story

06:25 PM (IST) Jul 05

ತಪ್ಪು ವಿಳಾಸಕ್ಕೆ ಆರ್ಡರ್, ನಕಲಿ ರಿಟರ್ನ್; ಲಕ್ಷಾಂತರ ರೂ. ದೋಚುತ್ತಿದ್ದ ಖದೀಮರು ಸಿಕ್ಕಿ ಬಿದ್ದದ್ದು ಅದೊಂದು ತಪ್ಪಿನಿಂದ!

ರಾಜಸ್ಥಾನದಲ್ಲಿ ಆನ್‌ಲೈನ್‌ ಆರ್ಡರ್‌ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದುಬಾರಿ ವಸ್ತುಗಳನ್ನು ತಪ್ಪು ವಿಳಾಸಕ್ಕೆ ಆರ್ಡರ್ ಮಾಡಿ, ರಿಟರ್ನ್ ಪ್ರಕ್ರಿಯೆಯಲ್ಲಿ ಅಸಲಿ ವಸ್ತುಗಳನ್ನು ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

Read Full Story

06:08 PM (IST) Jul 05

41ರಲ್ಲೂ ಅದೇ ಗ್ಲಾಮರ್ - ಜ್ಯೋತಿ ರೈ ಹುಟ್ಟುಹಬ್ಬಕ್ಕೆ ಪತಿ ಸುಕು ಪೂರ್ವಜ್ ಸ್ಪೆಷಲ್ ವಿಶ್ ವೈರಲ್

Jyothi Rai 41st Birthday: ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಕನ್ನಡಿಗರ ಮನ ಗೆದ್ದಿದ್ದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

Read Full Story

05:21 PM (IST) Jul 05

India Vs Eng - ನಿನ್ನೆಯ ಸೋಲಿಗೆ ಬಿಷ್ಣೋಯಿ ಅಲ್ಲ, ಶ್ರೇಯಸ್‌ ಕಾರಣ ಎಂದ ಫ್ಯಾನ್ಸ್; ಆ ಹುಡಗನನ್ನ ಬಳಿಕೊಳ್ಳಲಿಲ್ವಾ ಅಯ್ಯರ್!

Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್‌ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್‌ ಮಾಡಲಾಗುತ್ತಿದೆ. ಆದರೆ ಅಯ್ಯರ್‌ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.

Read Full Story

04:48 PM (IST) Jul 05

ಸೀರಿಯಲ್​ಗಳಲ್ಲಿ ನಟಿಸುವ ಆಸೆಯೆ? ನಿಮಗಾಗಿ ಬಂದಿದೆ ಬಿಗ್​ ಆಫರ್​ - ಡಿಟೇಲ್ಸ್​ ಇಲ್ಲಿದೆ

ಕಲರ್ಸ್ ಕನ್ನಡ ವಾಹಿನಿಯು 'ನಂದ ಗೋಕುಲ' ಸೀರಿಯಲ್ ತಂಡದಿಂದ ನಿರ್ಮಾಣವಾಗುತ್ತಿರುವ ಹೊಸ ಧಾರಾವಾಹಿಗಾಗಿ ಹೊಸ ಮತ್ತು ಅನುಭವಿ ಪ್ರತಿಭೆಗಳನ್ನು ಆಹ್ವಾನಿಸಿದೆ. 18 ರಿಂದ 60 ವರ್ಷ ವಯಸ್ಸಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ ಆಸಕ್ತ ಕಲಾವಿದರು ತಮ್ಮ ವಿವರಗಳನ್ನು ನೀಡಿರುವ ವಾಟ್ಸ್​ಆ್ಯಪ್​ ಸಂಖ್ಯೆಗೆ ಕಳುಹಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು.
Read Full Story

04:12 PM (IST) Jul 05

Postal Scheme - 1 ರೂ, ಕಳೆದುಕೊಳ್ಳದೆ, ಬಡ್ಡಿ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟಲ್‌ ನ್ಯೂವ್‌ ಸ್ಕೀಮ್‌! ಮಧ್ಯಮ ವರ್ಗದವರಿಗೆ ಜಾಕಪಾಟ್!

New Postal Scheme 2026 ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

Read Full Story

03:04 PM (IST) Jul 05

DK Shivakumar Rishab Shetty Meet - ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ; ಸಿಎಂ ಜೊತೆ ಮಹತ್ವದ ಚರ್ಚೆ ನಡೆಸಿದ ನಟ

ಇತ್ತಿಚಿಗಷ್ಟೇ ಕರಾವಳಿ, ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿರುವ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿಯವರು ಸಿಎಂ ಡಿಕೆ ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

Read Full Story

02:57 PM (IST) Jul 05

33 ದಿನಗಳ ಬಳಿಕ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ; 775 ಗಂಟೆಯ ಯೋಗಸಮಾಧಿ

ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.
Read Full Story

02:21 PM (IST) Jul 05

ಶ್ರೇಯಸ್ ಅಯ್ಯರ್‍‌ಗೆ ದೊಡ್ಡ ಅವಮಾನ.. ಸೋಲಿಗೆ ಹೊಣೆ ಮಾಡಿದ್ದು ಯಾರನ್ನ?

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸೋತಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 17ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಹೇಳಿದ್ದಾರೆ. ಸೋಲಿನ ನಡುವೆಯೂ ಅವರು ಯುವ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದರು.
Read Full Story

02:16 PM (IST) Jul 05

ಕೃಷ್ಣಾ ನದಿಗೆ ಹರಿದು ಬರುತ್ತಿದೆ 60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿನ ಭಾರಿ ಮಳೆಯಿಂದಾಗಿ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Read Full Story

01:22 PM (IST) Jul 05

ಜೈಲು ಸೇರಿದ್ರೂ ಪ್ರೇಯಸಿ ಕೈಕೊಡಲಿಲ್ಲ; 3 ಕೊಲೆ ಮಾಡಿದ್ರೂ ಅದೃಷ್ಟ ಕೈಬಿಡಲಿಲ್ಲ - ರಾಜ್ಯದಲ್ಲಿ ಬಿಡುಗಡೆ ಭಾಗ್ಯ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ 24 ಜೀವಾವಧಿ ಸಜಾ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ, 15 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಪ್ರೇಯಸಿ ಕೈಬಿಡದ ಮಣಿಕಂಠ ಹಾಗೂ ಮೂರು ಕೊಲೆಗಳಿಗಾಗಿ 37 ವರ್ಷ ಶಿಕ್ಷೆ ಅನುಭವಿಸಿದ ಸಾಯಿಬಣ್ಣ ಎಂಬುವರ ಕಥೆಗಳು ಗಮನ ಸೆಳೆಯುತ್ತವೆ.
Read Full Story

01:07 PM (IST) Jul 05

Kwatle Kitchen - ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ

ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಸೀಸನ್ 2 ಶೋನಲ್ಲಿ, ಗಾಯಕ ಹನುಮಂತ 'ಅರುಂಧತಿ' ಸಿನಿಮಾದ ಪಶುಪತಿ ಪಾತ್ರದಲ್ಲಿ ಕಾಣಿಸಿಕೊಂಡು ನಗೆಗಡಲಲ್ಲಿ ತೇಲಿಸಿದ್ದಾರೆ. ಅವರ ತಮಾಷೆಯ ಸಂಭಾಷಣೆಗಳು, ತುಕಾಲಿ ಸಂತೋಷ್ ಅವರ ಅನ್ನಾಬೆಲ್ಲಾ ಗೆಟಪ್ ಮತ್ತು ಇತರ ಸ್ಪರ್ಧಿಗಳ ಕ್ವಾಟ್ಲೆಗಳು ಸಂಚಿಕೆಯನ್ನು ರಂಜನೀಯವಾಗಿಸಿವೆ.

Read Full Story

01:02 PM (IST) Jul 05

ಆಂಬುಲೆನ್ಸ್ ವಿಳಂಬಕ್ಕೆ ಬ್ರೇಕ್! ಚಾಲಕನಿಗೆ ಸಮಯದ ನಿಗದಿ, ತಪ್ಪಿದ್ರೆ 5000 ರೂ. ದಂಡ

ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ವಿಳಂಬದಿಂದಾಗುತ್ತಿರುವ ಸಾವುಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕರೆ ಮಾಡಿದ 15 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ ಚಾಲಕನಿಗೆ ₹5,000 ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಹೈಟೆಕ್ ಕಂಟ್ರೋಲ್ ರೂಮ್, ಹೊಸ ವಾಹನಗಳು ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
Read Full Story

12:16 PM (IST) Jul 05

ಸೇಮ್ ಸೇಮ್ ಬಟ್ ಡಿಫರೆಂಟ್; ಬೆಂಗಳೂರಿನ ಪ್ರಸಿದ್ಧ ಏರಿಯಾದ ವೀಕೆಂಡ್‌ನ ರಾತ್ರಿ ಕತೆ

ಬೆಂಗಳೂರಿನ ಈ  ಪ್ರದೇಶಗಳು ವೀಕೆಂಡ್‌ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಪಬ್‌ಗಳು ಮತ್ತು ಬಣ್ಣಬಣ್ಣದ ಲೈಟ್‌ಗಳಿಂದ ಕಂಗೊಳಿಸುತ್ತವೆ. ಈ ನೈಟ್‌ಲೈಫ್, ಸ್ಟ್ರೀಟ್ ಫುಡ್ ಮತ್ತು ಜನಜಂಗುಳಿಯಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರದೇಶವನ್ನು 'ಮಿನಿ ಥೈಲ್ಯಾಂಡ್' ಎಂದು ಕರೆಯಲಾಗುತ್ತಿದೆ.

Read Full Story

12:06 PM (IST) Jul 05

ಅಣ್ಣ-ತಮ್ಮ ಜೋಡಿ.. ಪ್ರಣಮ್‌ ಚಿತ್ರದಲ್ಲಿ ಪ್ರಧಾನ ಪಾತ್ರಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್!

ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತವನ್ನು ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚಿತ್ರದ ಸಂಗೀತ ನಿರ್ದೇಶಕ ಶೇಖರ್‌ ಚಂದ್ರ ಎನ್ನುವ ಸತ್ಯವೂ ಅರಿವಾಗಿದೆ.

Read Full Story

11:14 AM (IST) Jul 05

ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಪೋಕ್ಸೋ ಕೇಸ್‌ನಲ್ಲಿ ಹೊನ್ನಾವರ ಮಂಕಿ ಠಾಣೆ PSI ಅರೆಸ್ಟ್

ಭಟ್ಕಳದ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಸಂತ್ರಸ್ತೆಯ ದೂರಿನ ಅನ್ವಯ ಭಟ್ಕಳ ನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

10:32 AM (IST) Jul 05

ಉಳೀತು ಬಡಪಾಯಿ ಜೀವ! ಭಾರೀ ಮಳೆ-ಗಾಳಿಗೆ ಪುಟ್ಟ ಮನೆ ಮೇಲೆಯೇ ಬಿದ್ದ ಬೃಹತ್ ಮರ!

ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ>

Read Full Story

10:24 AM (IST) Jul 05

ಸಿಂಧನೂರು ಕೆರೆ ನೀರಿನ ಪ್ರಮಾಣ ಕುಸಿತ - ನಗರಕ್ಕೆ ಕುಡಿಯುವ ನೀರಿಗೆ ಎದುರಾಗುತ್ತಾ ಸಂಕಷ್ಟ?

ಸಿಂಧನೂರು ನಗರದ ಜೀವನಾಡಿಯಾದ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ತುರ್ವಿಹಾಳ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಇನ್ನೂ ಮೂರು ತಿಂಗಳಿಗಾಗುವಷ್ಟು ಸಂಗ್ರಹವಿದೆ. ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
Read Full Story

10:11 AM (IST) Jul 05

ಬೆಳಗಾವಿಯಲ್ಲಿ ಭಾರೀ ಅನಾಹುತ; ಹುಣಸೆ ಮರ ದುರಂತದಿಂದ 4 ಕುಟುಂಬ ಪಾರಾಗಿದ್ದೇ ಪವಾಡ

ಬೆಳಗಾವಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಖಾಸಬಾಗ ಪ್ರದೇಶದಲ್ಲಿ ಬೃಹತ್ ಹುಣಸೆ ಮರವೊಂದು ನಾಲ್ಕು ಮನೆಗಳ ಮೇಲೆ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read Full Story

08:50 AM (IST) Jul 05

ಕುಡಿಯುವ ಗುಟುಕು ನೀರಿಗೆ ಕಠಿಣ ನಿಯಮ ಜಾರಿ! ಬೆಂಗಳೂರು ಜನರು ಓದಲೇಬೇಕಾದ ಸ್ಟೋರಿ

ಮುಂಗಾರು ಕೊರತೆಯಿಂದ ಬೆಂಗಳೂರಿನಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ತಡೆಯಲು ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ವಾಹನ ತೊಳೆಯುವುದು, ಈಜುಕೊಳ ಸೇರಿದಂತೆ ಹಲವು ಚಟುವಟಿಕೆಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ ₹5,000 ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಎಲ್ಲಾ ಕಟ್ಟಡಗಳಲ್ಲಿ ಏರೇಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
Read Full Story

08:36 AM (IST) Jul 05

ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು! ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪಾಸಾದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಸೂಕ್ತ ವ್ಯವಸ್ಥೆ, ಪಠ್ಯಪುಸ್ತಕಗಳು ಮತ್ತು ಶಿಕ್ಷಕರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಉಳಿದವರು ಕನ್ನಡ ಮಾಧ್ಯಮದಲ್ಲಿಯೇ ಮುಂದುವರಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
Read Full Story

08:24 AM (IST) Jul 05

Abhimanyu - ಮರದ ದಿಮ್ಮಿ ಸಾಗಿಸುವಾಗ ದಸರಾ ಆನೆ ಅಭಿಮನ್ಯು ದಂತ ಭಗ್ನ!

ಮೈಸೂರು ದಸರಾದ ಅಂಬಾರಿ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.

Read Full Story

08:08 AM (IST) Jul 05

ಜಾಕ್‌ವೆಲ್‌ ಮೂಲಕ ಹಿರಣ್ಯಕೇಶಿ ನದಿಯಿಂದ 33 ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ

ಶಾಸಕ ನಿಖಿಲ್ ಕತ್ತಿ ಅವರು ಹುಕ್ಕೇರಿ ಹಾಗೂ ನೆರೆಯ ತಾಲೂಕುಗಳ 33 ಕೆರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯು ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ. ಇದೇ ವೇಳೆ, ಅವರು ಸಂಕೇಶ್ವರ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಸೇರಿದಂತೆ ಇತರ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಮಾತನಾಡಿದರು.
Read Full Story

07:58 AM (IST) Jul 05

ಹಾವೇರಿ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಚಿಂತನೆ; ಮಳೆ ಕೊರತೆ

ಜಿಲ್ಲೆಯಲ್ಲಿ ಶೇ.29ರಷ್ಟು ಮಳೆ ಕೊರತೆಯಾಗಿದ್ದರೂ, ಇತ್ತೀಚಿನ ಮಳೆಯಿಂದ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಮಳೆ ಕೈಕೊಟ್ಟರೆ ಸರ್ಕಾರದ ಮಟ್ಟದಲ್ಲಿ ಮೋಡ ಬಿತ್ತನೆ ಬಗ್ಗೆ ತೀರ್ಮಾನಿಸಲಾಗುವುದು ಹಾಗೂ ನಗರದ ರಸ್ತೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.

Read Full Story

07:54 AM (IST) Jul 05

KPSC - ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಸುಳ್ಳು ಪತ್ರ ಕೇಸ್ ಈಗ ರಾಜ್ಯಪಾಲರ ಅಂಗಳದಲ್ಲಿ! ರಾಜೀನಾಮೆ ನೀಡ್ತಾರಾ ಸಾಹುಕಾರ್‌?

ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಭವಿಷ್ಯ ರಾಜ್ಯಪಾಲರು ನಿರ್ಧರಿಸುವ ನಿರ್ಣಾಯಕ ಹಂತ ತಲುಪಿದೆ. ರಾಜ್ಯಪಾಲರ ನಿರ್ಧಾರವೇನು?

Read Full Story

07:44 AM (IST) Jul 05

Ilakal - ಅಂಧ ಅನಾಥ ಯುವತಿ ಹುಲಿಗೆಮ್ಮಾಳ ಬಾಳಿಗೆ ಬೆಳಕಾದ ನಾಗರಾಜ್; ಅಪರೂಪದ ಮದುವೆ

ಹುಟ್ಟು ಕುರುಡಿಯಾದ ಅನಾಥ ಯುವತಿ ಹುಲಿಗೆಮ್ಮಳನ್ನು, ತಾನೂ ಅನಾಥನಾದ ನಾಗರಾಜ ಎಂಬ ಯುವಕ ಮದುವೆಯಾಗಿದ್ದಾನೆ. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಈ ಮದುವೆಯ ಸಂಪೂರ್ಣ ಖರ್ಚು ವಹಿಸಿ, ನವ ದಂಪತಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

Read Full Story

07:35 AM (IST) Jul 05

11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ; ಚಿಕ್ಕರೂಗಿ ರೈತನ ಬೆರಗುಗೊಳಿಸಿದ ಸಾಧನೆ!

ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಗಳಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗೌರವಿಸಿ, ಗ್ರಾಮಸ್ಥರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ಘಟನೆಯು ಕೃಷಿಯಿಂದ ವಿಮುಖರಾಗುತ್ತಿರುವ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಪ್ರಗತಿಪರ ರೈತರು ಶ್ಲಾಘಿಸಿದ್ದಾರೆ.

Read Full Story

07:23 AM (IST) Jul 05

ಯುವ ಉದ್ಯಮಿಗಳಲ್ಲಿ ಬೆಂಗಳೂರು ನಂ.1 ಯಾರ್‍ಯಾರಿದ್ದಾರೆ ಪಟ್ಟಿಯಲ್ಲಿ?

Avendus Wealth Hurun U30 List ಅವೆಂಡಸ್‌ ವೆಲ್ತ್‌ ಹುರೂನ್‌ ಇಂಡಿಯಾ ಲಿ. ಬಿಡುಗಡೆ ಮಾಡಿದ 2026ನೇ ಸಾಲಿನ 30 ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂಬೈ ಹಿಂದಕ್ಕಿ ಬೆಂಗಳೂರು ಈ ಸ್ಥಾನ ಪಡೆದಿದೆ.

Read Full Story

07:23 AM (IST) Jul 05

Bengaluru - 4 ದಿನದಲ್ಲಿ ಫುಟ್‌ಪಾತ್ ತೆರವುಗೊಳಿಸಿದ್ದೆಷ್ಟು? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರಿನಲ್ಲಿ ಬಿಬಿಎಂಪಿ ಬೃಹತ್ ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿದೆ. ಈ ಕ್ರಮಕ್ಕೆ ಬೀದಿ ಬದಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದ್ದು, ಪಾದಚಾರಿಗಳ ಸುರಕ್ಷತೆಗಾಗಿ ಇದು ಅನಿವಾರ್ಯ ಮತ್ತು ಫುಟ್‌ಪಾತ್ ದುರಸ್ತಿಗೆ ₹70 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

Read Full Story

More Trending News