ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿ ಮೂಲದ ನಿಂಗರಾಜ್ ಗುಳ್ಳಪ್ಪ ತಳವಾರ(23) ಮತ್ತು ಧಾರವಾಡ ಮೂಲದ ಪ್ರಶಾಂತ್ ತಳವಾರ(23) ಬಂಧಿತರು. ಆರೋಪಿಗಳ ಪೈಕಿ ನಿಂಗರಾಜ್ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ಪ್ರಶಾಂತ್ ಧಾರವಾಡದಲ್ಲಿ ಆಡಿಟರ್ ಆಗಿದ್ದಾನೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಶೇಖರ್ ಹಾಗೂ ನಿತಿನ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು

09:52 PM (IST) Jan 05
ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಎಸ್ಕಾರ್ಟ್ ಸೇವೆಗಳ ಹಣ ಪಾವತಿ ವಿವಾದದ ಹಿನ್ನೆಲೆಯಲ್ಲಿ, ಟ್ರಾನ್ಸ್‌ಜೆಂಡರ್ ಮಹಿಳೆಯರ ಗುಂಪು 52 ವರ್ಷದ ಭಾರತೀಯ ಪ್ರಜೆ ರಾಜ್ ಜಸುಜಾ ಅವರ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
08:58 PM (IST) Jan 05
ಕುಂದಾಪುರ ತಾಲೂಕಿನ ತಲ್ಲೂರು-ನೇರಳಕಟ್ಟೆ ರಸ್ತೆಯ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಏಳು ವಿದ್ಯಾರ್ಥಿಗಳು ಸೇರಿದಂತೆ ಹದಿನೈದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
08:57 PM (IST) Jan 05
08:20 PM (IST) Jan 05
'ತಿಥಿ' ಸಿನಿಮಾದ ಸೆಂಚುರಿ ಗೌಡ ಖ್ಯಾತಿಯ ಸಿಂಗ್ರಿ ಗೌಡ ಅವರು ನೂರಕ್ಕೂ ಹೆಚ್ಚು ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದಕ್ಕೂ ಒಂದೂವರೆ ತಿಂಗಳ ಹಿಂದೆ ಅದೇ ಚಿತ್ರದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಕೂಡ ನಿಧನರಾಗಿದ್ದರು.
07:57 PM (IST) Jan 05
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಘೋಷಿಸಿದ್ದಾರೆ.
07:17 PM (IST) Jan 05
ಕನ್ನಡ ಭಾಷೆ ಮಾತನಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ಕಾಲೇಜೊಂದರ ಹಾಸ್ಟೆಲ್ ವಾರ್ಡನ್ ಒಬ್ಬರನ್ನು ಕೆಲಸದಿಂದ ವಜಾ ಮಾಡಿ ಮನೆಗೆ ಕಳುಹಿಸಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ.
06:46 PM (IST) Jan 05
05:20 PM (IST) Jan 05
ಕೋಗಿಲು ಕ್ರಾಸ್ ನಿರಾಶ್ರಿತರಿಗೆ ಮನೆ ನೀಡುವ ಕುರಿತು ರಾಜ್ಯ ಸರ್ಕಾರವು ಕಾನೂನುಬದ್ಧ ಹಾಗೂ ಮಾನವೀಯ ಕ್ರಮಗಳನ್ನು ಅನುಸರಿಸಲು ನಿರ್ಧರಿಸಿದೆ. ಸಚಿವ ಸಭೆಯಲ್ಲಿ, ಅರ್ಹತೆ ಪರಿಶೀಲಿಸಿ, ಐದು ವರ್ಷಕ್ಕೂ ಹೆಚ್ಚು ಕಾಲ ವಾಸವಿರುವ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.
04:30 PM (IST) Jan 05
ಕೊಪ್ಪಳದ ಹಿಟ್ನಾಳ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಶಂಕುಸ್ಥಾಪನೆ ವೇಳೆ ಪ್ರೋಟೋಕಾಲ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆಯಿತು. ಈ ಗದ್ದಲದಿಂದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಕ್ರಮವನ್ನು ಮೊಟಕುಗೊಳಿಸಿ ನಿರ್ಗಮಿಸಿದರು.
04:03 PM (IST) Jan 05
Vegetable And Fruits Store: ಫ್ರಿಡ್ಜ್ ಇಲ್ಲದೆಯೂ ಕೂಡ ಹಣ್ಣುಗಳು, ತರಕಾರಿಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಹಿರಿಯರು ಅನುಸರಿಸುತ್ತಿದ್ದ ಅದ್ಭುತವಾದ ಮತ್ತು ಸುಲಭವಾದ ವಿಧಾನಗಳು ಇಲ್ಲಿವೆ.
03:57 PM (IST) Jan 05
ಮೂರು ವರ್ಷದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಸಂಗ್ರವಾದ ಟೋಲ್ ಎಷ್ಟು?, ನೀವು ಎಕ್ಸ್‌ಪ್ರೆವೇ ಮೂಲಕ ಸಂಚಾರ ಮಾಡುವಾಗ ಕಟ್ಟಿದ ಟೋಲ್ ಒಟ್ಟು ಮೊತ್ತ ಹೊಸ ದಾಖಲೆ ಬರೆದಿದೆ.
03:30 PM (IST) Jan 05
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣವು ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಘಟನಾ ಸ್ಥಳದಲ್ಲಿ ಬುಲೆಟ್ ಪತ್ತೆಯಾಗಿದ್ದು, ರಾಜಶೇಖರ ಎಂಬುವವರ ಸಾವಿನ ಕುರಿತು ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
03:23 PM (IST) Jan 05
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಅಶ್ವಿನಿ ಗೌಡ ಅವರು ಕೆಲವೊಮ್ಮೆ ಜನರ ಹೃದಯ ಗೆದ್ದರೆ, ಇನ್ನೂ ಕೆಲವೊಮ್ಮೆ ಹೃದಯವನ್ನು ಕಳೆದುಕೊಳ್ತಾರೆ. ಹೀಗೆ ಆಗುತ್ತಿರೋಕೆ ಕಾರಣ ಏನು? ನಿಜಕ್ಕೂ ಅವರ ಆಟ ಹೇಗಿದೆ? ಕಂಪೆನಿ HR ಹೇಳಿದ್ದೇನು?
02:57 PM (IST) Jan 05
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರನ್ನು ವೀಕ್ಷಕರು ಹೊಗಳೋಕೆ ಆರಂಭಿಸಿದರು ಎನ್ನುವಷ್ಟರಲ್ಲಿ, ರಾಶಿಕಾ ಶೆಟ್ಟಿ ಬಗ್ಗೆ ಮಾತನಾಡಿರೋದು ದೊಡ್ಡ ಅಲೆ ಎಬ್ಬಿಸಿದೆ. ಹಾಗಾದರೆ ಏನಾಯ್ತು?
02:56 PM (IST) Jan 05
02:36 PM (IST) Jan 05
ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರಾಜ ಅರಸ್ ಅವರ ದೀರ್ಘಾವಧಿ ಆಡಳಿತದ ದಾಖಲೆಯನ್ನು ಮುರಿಯುತ್ತಿರುವ ಬಗ್ಗೆ, ತಮ್ಮ ರಾಜಕೀಯ ಪಯಣ, ಬಳ್ಳಾರಿ ಗಲಾಟೆ ಮತ್ತು ಮೈಸೂರು ಭಾಗದ ಹುಲಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದರು.
02:23 PM (IST) Jan 05
01:26 PM (IST) Jan 05
ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ. ರೋಗಿ ಸ್ಟ್ರೇಚ್ಚರ್ ಮೇಲೆ ನರಳುತ್ತಿದ್ದರೂ, ವೈದ್ಯರು ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ನಂತರ ಆಕ್ರೋಶಕ್ಕೆ ಕಾರಣವಾಗಿದೆ.
01:06 PM (IST) Jan 05
ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ವಿಚ್ಛೇದನದ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಮುನ್ನಲೆಗೆ ಬರುತ್ತಿರುತ್ತದೆ. ಇದೀಗ ಸಂದರ್ಶನದಲ್ಲಿ ಡಿವೋರ್ಸ್ ಬಗ್ಗೆ ರಮ್ಯಾಕೃಷ್ಣನ್ ಪತಿ ಮೊದಲ ಬಾರಿಗೆ ಮಾತನಾಡಿದ್ದಾರೆ.
12:16 PM (IST) Jan 05
12:00 PM (IST) Jan 05
11:10 AM (IST) Jan 05
ಅಮೆರಿಕ ಮೂಲದ ಸ್ಯಾನ್ಸನ್ ಗೂಪ್ ಕಂಪನಿಯು ಮಂಡ್ಯದಲ್ಲಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಸುಮಾರು 94 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ.
10:43 AM (IST) Jan 05
09:24 AM (IST) Jan 05
08:58 AM (IST) Jan 05
ಕಟ್ಟಡ ಸಾಮಗ್ರಿಗಳ ಪೂರೈಕೆಯ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ₹1464 ಕೋಟಿ ವಂಚಿಸಿದ ಅಂತರಾಜ್ಯ ಜಾಲವನ್ನು ಕರ್ನಾಟಕ ಮತ್ತು ತಮಿಳುನಾಡು ವಾಣಿಜ್ಯ ತೆರಿಗೆ ಇಲಾಖೆಗಳು ಪತ್ತೆಹಚ್ಚಿವೆ. .
08:46 AM (IST) Jan 05
Bengaluru Stone Pelting: ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂಶಕ್ತಿ ದೇವಿಯ ತೇರು ಎಳೆಯುತ್ತಿದ್ದ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
08:27 AM (IST) Jan 05
ಕಾವೇರಿ-2 ತಂತ್ರಾಂಶದ ನ್ಯಾಯಾಲಯ ಆದೇಶ ಆಧಾರಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿ ನೋಂದಣಿ ಮಾಡಿದ ಆರೋಪದ ಮೇಲೆ ಸರ್ಜಾಪುರ ಉಪ ನೋಂದಣಾಧಿಕಾರಿ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
08:01 AM (IST) Jan 05
ಬಿಡುವಿಲ್ಲದ ಜೀವನಶೈಲಿಯಿಂದಾಗಿ ರಾತ್ರಿಯೇ ಚಪಾತಿ ಹಿಟ್ಟು ಕಲಸಿ ಫ್ರಿಡ್ಜ್‌ನಲ್ಲಿಡುವುದು ಸಾಮಾನ್ಯ. ರಾತ್ರಿ ಇಟ್ಟ ಹಿಟ್ಟಿನಿಂದ ಮಾಡಿದ ಚಪಾತಿಯೂ ಹೆಚ್ಚು ಸಮಯ ಮೃದು ಮತ್ತು ಫ್ಲಫಿಯಾಗಿರುತ್ತದೆ.
07:53 AM (IST) Jan 05
ಬಿಗ್‌ಬಾಸ್ ಕನ್ನಡ ಸೀಸನ್ 12ರ 15ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ತೀವ್ರ ಜಗಳ ನಡೆದಿದೆ. ರಾಶಿಕಾ ಅವರು ರಕ್ಷಿತಾರನ್ನು ನಾಟಕಗಾರ್ತಿ ಎಂದಿದ್ದಕ್ಕೆ, ರಕ್ಷಿತಾ ಅವರು ಕುಟುಂಬದ ವಿಷಯ ಎತ್ತಿ ತಿರುಗೇಟು ನೀಡಿದ್ದಾರೆ.
07:17 AM (IST) Jan 05
ಮೊದಲೇ ಒಬ್ಬ ಪ್ರಯಾಣಿಕನಿಗೆ ವಿತರಿಸಿದ್ದ ಟಿಕೆಟ್ ಪಡೆದು ಮತ್ತೊಬ್ಬ ಪ್ರಯಾಣಿಕನಿಗೆ ಮರು ವಿತರಿಸಿ ಹಣ ಪಡೆಯುವ ನಿರ್ವಾಹಕನ ಕೃತ್ಯ ‘ಕಳ್ಳತನ’ವಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
07:05 AM (IST) Jan 05