Published : Sep 03, 2025, 06:53 AM ISTUpdated : Sep 04, 2025, 12:17 AM IST

Karnataka News Live: ಜಗತ್ತಿಗೆ ಬೆದರಿಕೆ ಹಾಕಿದ ಅಮೆರಿಕ ಆರ್ಥಿಕತೆಯೇ ಪ್ರಪಾತಕ್ಕೆ ಅಂಚಿನಲ್ಲಿ, ಮೂಡೀಸ್ ವರದಿಯಲ್ಲಿ ಟ್ರಂಪ್ ಟೊಳ್ಳು ನೀತಿ ಬಯಲು!

ಸಾರಾಂಶ

ಮಂಡ್ಯ: ಕಲ್ಲಕ ಕಾರಣಕ್ಕೆ ಪತಿ, ಪತ್ನಿ ಜಗಳವಾಡಿದ್ದಕ್ಕೆ ಊರಿನ ಮುಖಂಡರು ದಂಪತಿಯ ತಲೆ ಬೋಳಿಸಿ, 5000 ರ. ದಂಡ ವಿಧಿಸಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಡ ಬಾಂಬ್ ಸ್ಫೋಟಿಸಿ ಹಸುವಿನ ದವಡೆ ಛಿದ್ರ

ನಾಡಬಾಂಬ್‌ ಸ್ಪೋಟಗೊಂಡು ಹಸುವಿನ ದವಡೆ ಛಿದ್ರಗೊಂಡ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡದ ಹೊಸ್ಮನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಡು ಪ್ರಾಣಿಗಳನ್ನು ಕೊಲ್ಲಲು ಅಪರಿಚಿತರು ನಾಡ ಬಾಂಬ್ ಇಟ್ಟಿದ್ದರು. ಮಂಗಳವಾರ ಬೆಳಗ್ಗೆ ಹಸು ಹುಲ್ಲು ಮೇಯಲು ಹೋಗಿ ನಾಡ ಬಾಂಬನ್ನು ಬಾಯಲ್ಲಿ ಕಚ್ಚಿದಾಗ ಗಾಯವಾಗಿದೆ.

12:17 AM (IST) Sep 04

ಜಗತ್ತಿಗೆ ಬೆದರಿಕೆ ಹಾಕಿದ ಅಮೆರಿಕ ಆರ್ಥಿಕತೆಯೇ ಪ್ರಪಾತಕ್ಕೆ ಅಂಚಿನಲ್ಲಿ, ಮೂಡೀಸ್ ವರದಿಯಲ್ಲಿ ಟ್ರಂಪ್ ಟೊಳ್ಳು ನೀತಿ ಬಯಲು!

ಅಮೆರಿಕಾ ಆರ್ಥಿಕತೆ ತೀವ್ರ ಹಿಂಜರಿತದ ಅಂಚಿನಲ್ಲಿದೆ ಎಂದು ಮೂಡೀಸ್ ವರದಿ ಎಚ್ಚರಿಸಿದೆ. ಟ್ರಂಪ್‌ರ ನೀತಿಗಳು ಈ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಉದ್ಯೋಗ, ವಸತಿ, ಗ್ರಾಹಕ ಬೆಲೆಗಳಲ್ಲಿ ಕೆಂಪು ಸಂಕೇತಗಳು ಕಾಣಿಸಿಕೊಂಡಿವೆ.
Read Full Story

11:46 PM (IST) Sep 03

ಬಾತ್ರೂಮ್‌ನಲ್ಲಿ ಮಹಿಳೆ ಅಸಹ್ಯಕರ ಕೃತ್ಯ; ಪ್ರಸಿದ್ಧ ಟಿವಿ ನಟ ಬಂಧನ! ಏನಿದು ಘಟನೆ?

ಟಿವಿ ನಟ ಆಶೀಷ್ ಕಪೂರ್‌ರನ್ನ ಪುಣೆಯಲ್ಲಿ ಅತ್ಯಾ1ಚಾರ ಆರೋಪದ ಮೇಲೆ ಬಂಧಿಸಲಾಗಿದೆ. ದೆಹಲಿಯಲ್ಲಿ ನಡೆದ ಪಾರ್ಟಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

Read Full Story

11:24 PM (IST) Sep 03

ಎಸ್‌ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ; ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್‌ಐಆರ್

ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಾಸಕ ಬಿಪಿ ಹರೀಶ್ ವಿರುದ್ಧ ಎಫ್‌ಐಆರ್ ದಾಖಲು. ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ಘಟನೆ ದಾವಣಗೆರೆಯಲ್ಲಿ ತೀವ್ರ ಚರ್ಚೆಗೆ ಗ್ರಾಸ.
Read Full Story

10:30 PM (IST) Sep 03

'ತಾಯಿ ಭುವನೇಶ್ವರಿಗೆ ಬುರ್ಖಾ ಹಾಕೋದಕ್ಕೆ ಆಗುತ್ತೇನ್ರೀ?..' ಸಿಂಧನೂರು ಹಿಂದೂ ಗಣಪತಿ ಉತ್ಸವದಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಹಿಂದೂ ಮಹಾ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

10:26 PM (IST) Sep 03

ಖ್ಯಾತ ಟಿವಿ ನಟ ಆಶೀಶ್ ಕಪೂರ್ ಬಂಧನ, ಅತ್ಯಾ*ರ ಆರೋಪದಡಿ ಜೈಲು ಪಾಲು

ಖ್ಯಾತ ಟಿವಿ ನಟ ಆಶೀಶ್ ಕಪೂರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಅಶೀಶ್ ಕಪೂರ್ ಅರೆಸ್ಟ್ ಮಾಡಿದ್ದಾರೆ.

Read Full Story

09:57 PM (IST) Sep 03

ಎಸ್ಸಿ ಒಳಮೀಸಲಾತಿ ಬಳಿಕ, ಶಿಕ್ಷಣ & ಉದ್ಯೋಗ ನೇಮಕಾತಿಗೆ ರೋಸ್ಟರ್ ಬಿಂದು ಹಂಚಿಕೆ ಮಾಡಿ ಆದೇಶ!

ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿದ್ದು, ಎಡಗೈ, ಬಲಗೈ ಮತ್ತು ಇತರೆ ಎಸ್ಸಿ ಸಮುದಾಯಗಳಿಗೆ ಮೀಸಲಾತಿ ನೀಡಿದೆ. ಇದೀಗ ಎಸ್ಸಿ, ಎಸ್‌ಟಿ, ಒಬಿಸಿ, ಜನರಲ್ ಕೆಟಗರಿ ಮೀಸಲಾತಿ ಹಂಚಿಕೆ ಪಟ್ಟಿ ಬಿಡುಗಡೆ ಮಾಡಿದ್ದು, ಶಿಕ್ಷಣ ಮತ್ತು ಉದ್ಯೋಗಗಳಿಗೆ ಇದೇ ಮೀಸಲಾತಿ ಅನ್ವಯವಾಗಲಿದೆ

Read Full Story

09:33 PM (IST) Sep 03

ಚೀನಾ, ಉತ್ತರ ಕೊರಿಯಾ ಜೊತೆ ಸೇರಿ ಅಮೆರಿಕ ವಿರುದ್ಧ ರಷ್ಯಾ ಪಿತೂರಿಗೆ ಟ್ರಂಪ್‌ ಶಾಂತಿ ಮಂತ್ರ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾದ ನಾಯಕರು ಅಮೆರಿಕ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವು ಜಾಗತಿಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

09:19 PM (IST) Sep 03

ಜಿಯೋಗೆ 10 ವರ್ಷದ ಸಂಭ್ರಮ, ಅನ್‌ಲಿಮಿಟೆಡ್ ಡೇಟಾ ಸೇರಿ ಮೆಘಾ ಆಫರ್ ಘೋಷಣೆ

ರಿಲಯನ್ಸ್ ಜಿಯೋ 10ನೇ ವರ್ಷದ ಸಂಭ್ರಮದಲ್ಲಿ ಭರ್ಜರಿ ಆಫರ್ ಘೋಷಿಸಿದೆ.ತಿಂಗಳ ಉಚಿತ ಸೇವೆ, 3,000 ರೂಪಾಯಿ ವೋಚರ್ ಗಿಫ್ಟ್ ಸೇರಿದಂತೆ ಹಲವು ಭರ್ಜರಿ ಆಫರ್ ಘೋಷಿಸಲಾಗಿದೆ.

Read Full Story

09:18 PM (IST) Sep 03

ಇಫ್ತಾರ್‌ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? ಬಾನು ಮುಷ್ತಾಕ್ ಕುಂಕುಮ ಹಚ್ಚಬಾರದೇಕೆ? ಪ್ರಹ್ಲಾದ್ ಜೋಶಿ!

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಕುಂಕುಮ ಧರಿಸಬೇಕಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಇಫ್ತಾರ್ ಕೂಟಗಳಲ್ಲಿ ಮುಸ್ಲಿಂ ಉಡುಗೆ ತೊಡುವ ಸಿಎಂ, ಹಿಂದೂ ಹಬ್ಬದಲ್ಲಿ ಕುಂಕುಮಕ್ಕೆ ಆಕ್ಷೇಪಿಸುವುದು ಹಾಸ್ಯಾಸ್ಪದ ಎಂದ ಜೋಶಿ ಪ್ರಶ್ನಿಸಿದ್ದಾರೆ.

Read Full Story

09:03 PM (IST) Sep 03

ಗ್ರೇಟರ್ ಬೆಂಗಳೂರು ಜನರೇ ನಿಮ್ಮ ನಗರಪಾಲಿಕೆ, ವಿಧಾನಸಭಾ ಕ್ಷೇತ್ರ, ವಾರ್ಡ್ ಯಾವುದೆಂದು ಈಗಲೇ ಚೆಕ್ ಮಾಡಿ!

ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಆಗಿ ಪರಿವರ್ತಿಸಿ, ಪ್ರದೇಶಗಳನ್ನು ಮರುವಿಂಗಡಿಸಲಾಗಿದೆ. ನಿಮ್ಮ ವಾರ್ಡ್, ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ನಗರ ಪಾಲಿಕೆಯನ್ನು ತಿಳಿದುಕೊಳ್ಳಿ. ಆಯುಕ್ತರು ಮತ್ತು ಕಚೇರಿಗಳ ವಿಳಾಸವೂ ಇಲ್ಲಿದೆ ನೋಡಿ..

Read Full Story

08:55 PM (IST) Sep 03

ಪಾಕ್ ಕದನ ವಿರಾಮಕ್ಕೆ ಅಂಗಲಾಚಿದ್ದೇಕೆ? ಸಿಂದೂರ್ ವಿಡಿಯೋ ಬಿಡುಗಡೆ ಮಾಡಿದ ಭಾರತೀಯ ಸೇನೆ

ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಆರಂಭಿಸದ ಕೆಲವೇ ದಿನದಲ್ಲಿ ಪಾಕಿಸ್ತಾನ ಕದನ ವಿರಾಮಕ್ಕೆ ಅಂಗಲಾಚಿತ್ತು. ಇದಕ್ಕೆ ಕಾರಣವೇನು? ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.

Read Full Story

08:42 PM (IST) Sep 03

ವರ್ಷಕ್ಕೆ 7 ದಿನ ಮಾತ್ರ ದರ್ಶನ ನೀಡುವ ಸಾತೇರಿ ದೇವಿ ಜಾತ್ರಾ ಸಂಭ್ರಮ!

ಉತ್ತರ ಕನ್ನಡ ಜಿಲ್ಲೆಯ ಹಣಕೋಣ ಗ್ರಾಮದ ಸಾತೇರಿ ದೇವಿಯ ದರ್ಶನ ವರ್ಷಕ್ಕೆ ಕೇವಲ ಏಳು ದಿನ ಮಾತ್ರ ಲಭ್ಯ. ಈ ಏಳು ದಿನಗಳ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ದೇವಿಯ ಪೌರಾಣಿಕ ಹಿನ್ನೆಲೆ ಮತ್ತು ಈ ವಿಶಿಷ್ಟ ಪದ್ಧತಿಯ ಕುರಿತು ತಿಳಿಯಿರಿ.
Read Full Story

08:23 PM (IST) Sep 03

ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ, ಮನೆಯಲ್ಲಿದ್ದ ಒಂದೂವರೆ ವರ್ಷದ ಮಗು ಸಾವು!

ಬೆಂಗಳೂರಿನ ಸ್ಯಾಂಕಿ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿಯಲ್ಲಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಪೋಷಕರು ಕೆಲಸಕ್ಕೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ.
Read Full Story

08:08 PM (IST) Sep 03

ಮಲೆನಾಡ ಜನರಿಗೆ ಬಿಗ್‌ ನ್ಯೂಸ್‌, ಶಿವಮೊಗ್ಗದಿಂದ ಮತ್ತೊಂದು ವಿಶೇಷ ರೈಲು!

ಶಿವಮೊಗ್ಗದಿಂದ ತಮಿಳುನಾಡಿನ ತಿರುನೆಲ್ವೇಲಿಗೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಸೆಪ್ಟೆಂಬರ್ 7 ರಿಂದ ಪ್ರಾಯೋಗಿಕವಾಗಿ ಎಂಟು ವಾರಗಳ ಕಾಲ ಈ ರೈಲು ಸಂಚರಿಸಲಿದ್ದು, ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಾರ್ವಜನಿಕರ ಬೇಡಿಕೆ ಮೇರೆಗೆ ಈ ರೈಲು ಸಂಚಾರ ಆರಂಭಿಸಲಾಗುತ್ತಿದೆ.
Read Full Story

08:06 PM (IST) Sep 03

ಗ್ರೇಟರ್ ಬೆಂಗಳೂರು 5 ಹೊಸ ನಗರ ಪಾಲಿಕೆಗಳಿಗೆ ₹300 ಕೋಟಿ ಅನುದಾನ, 500 ವಾರ್ಡ್‌ಗಳ ರಚನೆ!

ಗ್ರೇಟರ್ ಬೆಂಗಳೂರಿನ 5 ಹೊಸ ನಗರ ಪಾಲಿಕೆಗಳಿಗೆ ₹300 ಕೋಟಿ ಅನುದಾನ ಕೊಲಾಗುತ್ತದೆ. ಬಿಬಿಎಂಪಿಯಲ್ಲಿದ್ದ 198 ವಾರ್ಡ್‌ಗಳನ್ನು 500ಕ್ಕೆ ಹೆಚ್ಚಿಸಲಾಗುತ್ತದೆ. ಎಲ್ಲ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಗ್ರೇಟರ್ ಬೆಂಗಳೂರಿಗೆ ಮಹೇಶ್ವರ ರಾವ್ ಮುಖ್ಯ ಆಯುಕ್ತರು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Read Full Story

08:03 PM (IST) Sep 03

ಭಾರಿ ಮಳೆ ಪ್ರವಾಹಕ್ಕೆ ತತ್ತರ, ಸೆ.7ರ ವರೆಗೆ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ರಜೆ

ದೇಶದ ಹಲವು ಭಾಗದಲ್ಲಿ ಭಾರಿ ಮಳೆ, ಮೇಘಸ್ಫೋಟ, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಎರಡು ರಾಜ್ಯಗಳ ಶಾಲಾ ಕಾಲೇಜಿಗೆ ಸೆಪ್ಟೆಂಬರ್ 7ರ ವರೆಗೆ ರಜೆ ಘೋಷಿಸಲಾಗಿದೆ.

Read Full Story

07:32 PM (IST) Sep 03

ವಿಮಾನದಲ್ಲಿ ಬಂದ ತನ್ನ ಪೋಷಕರಿಗೆ ಪೈಲಟ್‌ ಮಗಳ ಭಾವುಕ ಸ್ವಾಗತ - ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!

ಮಕ್ಕಳ ಸಾಧನೆ ಪೋಷಕರಿಗೆ ದೊಡ್ಡ ವಿಚಾರ ಹಾಗೆಯೇ ಇಲ್ಲೊಬ್ಬರು ಅಪ್ಪಅಮ್ಮ ಪೈಲಟ್ ಮಗಳ ಸಾಧನೆ ನೋಡಿ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ. ಅವರ ವೀಡಿಯೋ ವೈರಲ್ ಆಗಿದೆ.

Read Full Story

07:22 PM (IST) Sep 03

ಬೆಂಗಳೂರು ಟೆಕ್ಕಿ ಮಗನ ಗಾಯದ ಪೋಸ್ಟ್‌ಗೆ ಹೃದಯಸ್ಪರ್ಶಿ ಪ್ರತಿಕ್ರಿಯೆ ಕೊಟ್ಟ ಗೂಗಲ್ ಸಿಇಒ ಪಿಚೈ

ಬೆಂಗಳೂರು ಟೆಕ್ಕಿಯ ಮಗನ ಮಹಡಿಯಿಂದ ಬಿದ್ದು ಆಸ್ಪತ್ರೆ ದಾಖಲಾಗಿದ್ದ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಬಾಲಕನ ಕುರಿತು ಟೆಕ್ಕಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಗೂಗಲ್ ಸಿಇಒ ಸುಂದರ್ ಪಿಚೈ ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿದ್ದಾರೆ.

 

Read Full Story

06:57 PM (IST) Sep 03

ಜೈಲಲ್ಲಿ ಭಾರೀ ಶೀತ, ದರ್ಶನ್‌ಗೆ ಕೈ ಅಲ್ಲಾಡಿಸಲು ಸಾಧ್ಯವಾಗ್ತಿಲ್ಲ - ನಟನ ನೋವು ಬಿಚ್ಚಿಟ್ಟ ವಕೀಲ

ನಟ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವ ಕುರಿತು ವಿಚಾರಣೆ ನಡೆಸಿದ 64ನೇ ಸೆಷನ್ಸ್ ಕೋರ್ಟ್ ತನ್ನ ತೀರ್ಪನ್ನು ಸೆ. 9ಕ್ಕೆ ಕಾಯ್ದಿರಿಸಿದೆ. ದರ್ಶನ್ ಪರ ವಕೀಲರು ಜೈಲಿನಲ್ಲಿ ದರ್ಶನ್‌ಗೆ ಸೂಕ್ತ ಸೌಲಭ್ಯಗಳಿಲ್ಲ ಎಂದು ವಾದಿಸಿದ್ದಾರೆ.
Read Full Story

06:44 PM (IST) Sep 03

ಕೆನಡಾದಲ್ಲಿ ಗುಜರಾತಿಗಳ ಕಾರುಬಾರು - ಕೆನಡಿಯನ್ ಮಹಿಳೆಗೆ ಫ್ಲಾಟ್ ಕೊಡಲು ನಿರಾಕರಣೆ

ಕೆನಡಾದಲ್ಲಿ ಗುಜರಾತಿ ಮೂಲದ ಮನೆ ಮಾಲೀಕರು ಸ್ಥಳೀಯ ನಿವಾಸಿಗಳಿಗೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ ಎಂದು ಕೆನಡಿಯನ್ ಮಹಿಳೆ ಆರೋಪಿಸಿದ್ದಾರೆ. ವಸತಿ ಬಿಕ್ಕಟ್ಟಿಗೆ ಭಾರತೀಯ ವಲಸಿಗರೇ ಕಾರಣ ಎಂದು ಆಕೆ ದೂರಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read Full Story

06:23 PM (IST) Sep 03

ನಟ ದರ್ಶನ್‌ಗೆ ಗಲ್ಲು ಶಿಕ್ಷೆ ಕೊಡುವಂತೆ ಅರ್ಜಿ ಹಾಕಿದ ಅನಾಮಿಕ; ಕೋರ್ಟ್‌ನಲ್ಲಿ ಮಹಾ ತಿರುವು!

ರೇಣುಕಾಸ್ವಾಮಿ ಕೊಲೆ ಕೇಸಿನ ಆರೋಪಿಗಳಾದ ನಟ ದರ್ಶನ್ ತೂಗುದೀಪ ಸೇರಿದಂತೆ  17 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿ ಅಪರಿಚಿತ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಯತ್ನಿಸಿದ ಘಟನೆ ನಡೆದಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಅರ್ಜಿ ಸಲ್ಲಿಕೆ ತಿರುವು ಪಡೆದಿದೆ.

Read Full Story

06:22 PM (IST) Sep 03

ಹಿಂದೂ ಮುಸ್ಲಿಂ ಒಟ್ಟಾಗಿ ಗಣೇಶ ಹಬ್ಬ ಆಚರಣೆ; ಭಾವೈಕ್ಯತೆಯ ಸಂದೇಶ ಸಾರಿದ ಬಾಗಲಕೋಟೆ ಮಂದಿ

ಜಮಖಂಡಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಜಂಟಿಯಾಗಿ ಗಣೇಶನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನೆರವೇರಿಸಿದ್ದಾರೆ.
Read Full Story

05:53 PM (IST) Sep 03

ಕಿಡ್ನಿ ಸಮಸ್ಯೆ ಇರೋರಿಗೆ ಈ 5 ಹಣ್ಣುಗಳು ಉತ್ತಮ ಆಹಾರ

ಈ ಐದು ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ, ವೃಕ್ಕಗಳನ್ನು ಕಾಪಾಡಿಕೊಳ್ಳಿ.

Read Full Story

05:52 PM (IST) Sep 03

ಬೆಂಗ್ಳೂರಾ, ಬಳ್ಳಾರಿನಾ? ಕಿಲ್ಲಿಂಗ್‌ ಸ್ಟಾರ್‌ 'ಜೈಲು ಭವಿಷ್ಯ' ಬಗ್ಗೆ ಸೆ.9ಕ್ಕೆ ತೀರ್ಪು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸುವ ಕುರಿತು ಸೆಷನ್ಸ್ ಕೋರ್ಟ್‌ ಸೆ.9ಕ್ಕೆ ತೀರ್ಪು ಕಾಯ್ದಿರಿಸಿದೆ. ದರ್ಶನ್‌ ಪರ ವಕೀಲರು ವರ್ಗಾವಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story

05:48 PM (IST) Sep 03

ಗ್ರೇಟರ್ ಬೆಂಗಳೂರಿಗೆ ಮೊದಲ ಬಲಿ; ಮಳೆ ಹಾಗೂ ಹದಗೆಟ್ಟ ರಸ್ತೆಯಲ್ಲಿ ಜಾರಿಬಿದ್ದು ವೃದ್ಧನ ಸಾವು

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಕೆಸರಿನಲ್ಲಿ ಜಾರಿ ಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಜಲಾವೃತ ಉಂಟಾಗಿ ಸಂಚಾರ ವ್ಯತ್ಯಯವಾಗಿದೆ. ಈ ಘಟನೆ ನಗರದ ರಸ್ತೆಗಳ ದುಸ್ಥಿತಿಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
Read Full Story

05:35 PM (IST) Sep 03

'ನಮ್ಮ ಜಿಲ್ಲೆ ಜೈಲಿಗೆ ದರ್ಶನ್‌ ಕಳಿಸ್ಬೇಡಿ..' ಅಂತಾ ಜೈಲಧಿಕಾರಿಗಳೇ ಬೇಡಿಕೊಳ್ತಿದ್ದಾರೆ - ಕಿಲ್ಲಿಂಗ್‌ ಸ್ಟಾರ್‌ ವಕೀಲರ ಸ್ಪೋಟಕ ಹೇಳಿಕೆ

ನಟ ದರ್ಶನ್‌ರವರ ಬಳ್ಳಾರಿ ಜೈಲು ವರ್ಗಾವಣೆಗೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ, ಅವರ ಪರ ವಕೀಲರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜೈಲು ಅಧಿಕಾರಿಗಳ ಒತ್ತಡ ಹಾಗೂ ಕಾನೂನು ದುರುಪಯೋಗದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವರ್ಗಾವಣೆಯ ಹಿಂದಿನ ನಿಜವಾದ ಉದ್ದೇಶವೇನು?
Read Full Story

05:25 PM (IST) Sep 03

ಕಾಕನೂರು ಎಸ್‌ಬಿಐ ಬ್ಯಾಂಕ್ ದರೋಡೆ - ಸಿನಿಮೀಯ ರೀತಿಯಲ್ಲಿ 10 ಲಕ್ಷಕ್ಕೂ ಅಧಿಕ ಹಣ ದೋಚಿ ಕಳ್ಳರು ಪರಾರಿ!

ಕಾಕನೂರಿನ ಎಸ್‌ಬಿಐ ಬ್ಯಾಂಕ್‌ನಲ್ಲಿ ಗ್ಯಾಸ್ ಕಟ್ಟರ್ ಬಳಸಿ ದರೋಡೆಕೋರರು 10 ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಿಗೆ ಪೇಂಟ್ ಸ್ಪ್ರೇ ಮಾಡಿ ದೃಶ್ಯಗಳನ್ನು ಮರೆಮಾಚಿದ ಕಳ್ಳರು ಲಾಕರ್‌ಗಳನ್ನು ಗುರಿಯಾಗಿಸಿಕೊಂಡಿದ್ದರು. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
Read Full Story

05:18 PM (IST) Sep 03

ಹುಡುಗಿಯಂತೆ ಕಾಣಲು ಇನ್‌ಸ್ಟಾಗ್ರಾಂ ಫಿಲ್ಟರ್ ಬಳಕೆ, 52ರ ಹರೆಯದ ಲವರ್ ಹತ್ಯೆಗೈದ 26ರ ಯುವಕ

ಯುವತಿಯಂತೆ ಕಾಣಲು 52ರ ಹರೆಯದ ಮಹಿಳೆಯೊಬ್ಬಳು ಇನ್‌ಸ್ಟಾಗ್ರಾಂ ಫಿಲ್ಟರ್ ಬಳಸಿ ಪೋಟೋ ಪೋಸ್ಟ್ ಮಾಡಿದ್ದಾಳೆ. ಬಳಿಕ 26ರ ಯುವಕನ ಮೋಹದ ಬಲೆಗೆ ಬೀಳಿಸಿದ್ದಾಳೆ. ಈಕೆ 52ರ ಹರೆಯದ ಮಹಿಳೆ ಅನ್ನೋದು ಗೊತ್ತಾಗುತ್ತಿದ್ದಂತೆ ಯುವಕ ತನ್ನ ಲವರ್ ಕತೆ ಮುಗಿಸಿದ ಘಟನೆ ನಡೆದಿದೆ.

Read Full Story

05:05 PM (IST) Sep 03

ಧರ್ಮಸ್ಥಳ ಕೇಸ್‌ - ವಿದೇಶಿ ಹಣದ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿದ ಇಡಿ!

ಧರ್ಮಸ್ಥಳ ಪ್ರಕರಣದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸಲು ವಿದೇಶಿ ಹಣ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆ ಆರಂಭಿಸಿದೆ. ಕೇರಳದ ಯೂಟ್ಯೂಬರ್‌ನ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ.
Read Full Story

05:03 PM (IST) Sep 03

ಭೀಮಾತೀರದಲ್ಲಿ ಭೀಮನಗೌಡ ಹತ್ಯೆಗೆ ಅಸಲಿ ಕಾರಣ ಬಿಚ್ಚಿಟ್ಟ ಪೊಲೀಸ್; ಮನೇಲಿ ಗನ್ ಬಿಟ್ಟು ಬಂದಿದ್ದೇ ತಪ್ಪಾಯ್ತು!

ದೇವರ ನಿಂಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಅವರನ್ನು ಗುಂಡಿಕ್ಕಿ ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ರಾಜಕೀಯ ವೈಷಮ್ಯ, ವೈಯಕ್ತಿಕ ದ್ವೇಷ, ಮತ್ತು ಆರ್ಥಿಕ ತೊಂದರೆಗಳು ಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. 4 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

Read Full Story

04:12 PM (IST) Sep 03

ಗಾರೆ ಕೆಲಸದ ಹುಡುಗ ಸಿಮೆಂಟ್ ಕಲಸುತ್ತಲೇ, 'ಅಪ್ಪಾ ನಾನೀಗ ಡಾಕ್ಟರ್ ಆಗ್ತಿದ್ದೇನೆ' ಎಂದ ಯಶಸ್ಸಿನ ಕಥೆ!

ಕಡುಬಡತನದ ಹುಡುಗ ಗಾರೆ ಕೆಲಸದ ವೇಳೆ ಸಿಮೆಂಟ್ ಕಲಸುತ್ತಲೇ, ‘ಅಪ್ಪಾ ನಾನು ಡಾಕ್ಟರ್ ಆಗ್ತಿದ್ದೇನೆ’ ಎಂದು ಹೇಳಿದ ಶುಭಂನ ಯಶಸ್ಸಿನ ಕಥೆಯನ್ನೊಮ್ಮೆ ಕೇಳಿ. ಶಿಕ್ಷಕರ ಫೋನ್ ಕರೆಯ ಮೂಲಕ ಈ ಸಿಹಿ ಸುದ್ದಿ ತಿಳಿದ ಶುಭಂ, ತನ್ನ ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಿದ್ದಾನೆ. ಈ ಸಾಧನೆಯು ಇತರರಿಗೆ ಸ್ಫೂರ್ತಿಯಾಗಲಿ.

Read Full Story

03:42 PM (IST) Sep 03

ಕರಾವಳಿ ಕರ್ನಾಟಕಕ್ಕೆ ಭಾರಿ ಮಳೆ, ಕಾಶ್ಮೀರ ಸೇರಿ ಹಲವು ರಾಜ್ಯಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ

ಕರಾವಳಿ ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ಭಾರಿ ಮಳೆ, ಇತ್ತ ಜಮ್ಮು ಕಾಶ್ಮೀರ, ಪಂಜಾಬ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Read Full Story

03:21 PM (IST) Sep 03

ಹುಬ್ಬಳ್ಳಿ ಹುಡುಗಿ ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ!

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠವು ವಜಾಗೊಳಿಸಿದೆ. ಫಯಾಜ್ ಪರ ವಕೀಲರು ಬಂಧನ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಮತ್ತು ಸಾಕ್ಷ್ಯಾಧಾರಗಳ ಕೊರತೆಯನ್ನು ಪ್ರಶ್ನಿಸಿದ್ದರು. ಆದರೆ, ನ್ಯಾಯಾಲಯವು ಅವರ ವಾದವನ್ನು ತಿರಸ್ಕರಿಸಿದೆ.

Read Full Story

03:10 PM (IST) Sep 03

ಕೈಯಲ್ಲಿ ಬಳೆ ಹಿಡ್ಕೊಂಡು ಎಲ್ಲಿ ಹಾಕ್ಲಿ ಅಂತಾ ಕೇಳಿದ ಅನುಶ್ರೀ ಗಂಡ, ಅತ್ತೆ ಕೊಟ್ರು ಸಖತ್‌ ಕೌಂಟರ್‌!

ನಿರೂಪಕಿ ಅನುಶ್ರೀ ಮತ್ತು ರೋಶನ್‌ ರಾಮಮೂರ್ತಿ ಅವರ ಮದುವೆ ಸಮಾರಂಭದಲ್ಲಿ ನಡೆದ ಮುದ್ದಾದ ಒಂದು ಕ್ಷಣ ವೈರಲ್‌ ಆಗಿದೆ. ಊಟದ ವೇಳೆ ರೋಶನ್‌ ಅವರು ಅನುಶ್ರೀ ಅವರಿಗೆ ಚಿನ್ನದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.

Read Full Story

02:12 PM (IST) Sep 03

ಅನುಪಮಾ ಪರಮೇಶ್ವರನ್ ಗರ್ಭಿಣಿ ಚಿತ್ರ ಒಟಿಟಿಯಲ್ಲಿ ಭಾರೀ ಸದ್ದು, ಅಭಿಮಾನಿಗಳಲ್ಲಿ ಕುತೂಹಲ!

ಗರ್ಭಿಣಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿರೋ ಜೆಎಸ್‌ಕೆ ಸಿನಿಮಾ ಈಗ ಒಟಿಟಿಯಲ್ಲಿ ಟ್ರೆಂಡಿಂಗ್ ಆಗಿದೆ. ಈ ಸಿನಿಮಾದಲ್ಲಿರೋ ಕುತೂಹಲಕಾರಿ ಅಂಶಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Read Full Story

01:43 PM (IST) Sep 03

Prajwal Revanna ಪೆನ್​ಡ್ರೈವ್​ನಲ್ಲಿ ಏನೇನಿತ್ತು? ಶಾಕಿಂಗ್​ ವಿಷ್ಯ ರಿವೀಲ್​ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ

ಪ್ರಜ್ವಲ್​ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದು ಗೊತ್ತೇ ಇದೆ. ಆದರೆ ನಿಜಕ್ಕೂ ಆ ಪೆನ್​ಡ್ರೈವ್​ನಲ್ಲಿ ಏನೆಲ್ಲಾ ಇತ್ತು? ಅದರ ಬಗ್ಗೆ ಸುವರ್ಣ ಪಾಡ್​ಕಾಸ್ಟ್​ನಲ್ಲಿ ರಿವೀಲ್​ ಮಾಡಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ.

 

Read Full Story

01:38 PM (IST) Sep 03

ಅಂಜನಾದ್ರಿ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಅಸ್ತು - ₹200 ಕೋಟಿ ಅನುದಾನ, ರೋಪ್‌ವೇ ಯೋಜನೆಗೆ ಒತ್ತು

ಅಂಜನಾದ್ರಿ ಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ವೃದ್ಧರಿಗೂ ಬೆಟ್ಟ ಏರುವ ವ್ಯವಸ್ಥೆ, ಡಾರ್ಮೆಟರಿ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು. ರೋಪ್‌ವೇ ನಿರ್ಮಾಣಕ್ಕೂ ಚಿಂತನೆ ನಡೆದಿದೆ.
Read Full Story

12:41 PM (IST) Sep 03

ನನ್ನ ನಿರ್ದೇಶನದ ಚಿತ್ರಕ್ಕೆ ಕತೆ ರೆಡಿ ಇದೆ - ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಕಿಚ್ಚ ಸುದೀಪ್‌

ಮಾರ್ಕ್‌’ ಹಾಗೂ ‘ಬಿಲ್ಲ ರಂಗ ಬಾಷಾ’ ಚಿತ್ರಗಳಿವೆ. ‘ಮಾರ್ಕ್‌’ ಚಿತ್ರ ಡಿ. 25ಕ್ಕೆ ತೆರೆಗೆ ಬರಲಿದೆ. ‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್‌ ಅಕ್ಟೋಬರ್‌ನಲ್ಲಿ ಶುರುವಾಗಲಿದ್ದು, 2026ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.

Read Full Story

12:18 PM (IST) Sep 03

ಮೈಸೂರು ಅರಮನೆಯಲ್ಲಿ ದೋಸೆ ಸವಿದ ಮುರ್ಮು - ಪ್ರಮೋದಾ ದೇವಿ ಒಡೆಯರ್ ಆತಿಥ್ಯ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಬೆಳಗ್ಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಮೇರೆಗೆ ಮೈಸೂರು ಅರಮನೆಗೆ ಭೇಟಿ ನೀಡಿ, ಬೆಳಗಿನ ಉಪಹಾರ ಸೇವಿಸಿದರು.

Read Full Story

11:59 AM (IST) Sep 03

ಮೋದಿ ಸಮ್ಮುಖ ಜಪಾನ್ ಸಂಸ್ಥೆ ಜತೆ ನಿರಾಣಿ ಕಂಪನಿ ಒಪ್ಪಂದ - ಜೈವಿಕ ಇಂಧನ ಉತ್ಪಾದನೆಗೆ ಉತ್ತೇಜನ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಕರ್ನಾಟಕದ ಕಂಪನಿಯೊಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

Read Full Story

More Trending News