Published : Aug 31, 2026, 05:04 AM ISTUpdated : Aug 31, 2026, 11:15 PM IST

Karnataka News Live 31 August 2026: ಯುವಿ ಅಂತೆಯೇ ಸೇಮ್ ಟು ಸೇಮ್ - ಸೂರ್ಯವಂಶಿ ಬೌಲಿಂಗ್ ಸ್ಟೈಲ್‌ಗೆ ಸಿಕ್ಸರ್ ಕಿಂಗ್ ಕಾಮೆಂಟ್

ಸಾರಾಂಶ

ವಿಜಯಪುರ: ಪಾದಯಾತ್ರೆ ಬಿಜೆಪಿಯ ನಿರ್ಧಾರವಾಗಿದೆ. ನಾಗೇಂದ್ರ ರಾಜೀನಾಮೆಗೆ ಅವರೂ ಕಾರಣವಾಗಿರಬಹುದು, ಜೊತೆಗೆ ರಾಜೀನಾಮೆ ನಮ್ಮ ಪಕ್ಷದ ನಿರ್ಧಾರವೂ ಆಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಟಾಂಗ್ ನೀಡಿದರು.

ಸಚಿವ ನಾಗೇಂದ್ರ ರಾಜೀನಾಮೆ ಬಳಿಕವೂ ಬಿಜೆಪಿ ಪಾದಯಾತ್ರೆ ಮಾಡುತ್ತಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅಷ್ಟೇ ಅಲ್ಲ ವಾಲ್ಮೀಕಿ ಹಗರಣದ ಹಣ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನೆ ಮಾಡಿದ್ದು, ಹಣದ ಕುರಿತು ಸದನದಲ್ಲೇ ಮಾಹಿತಿ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಾಗೂ ಈಗ ಸಿಎಂ ಆಗಿರುವ ಡಿ.ಕೆ.ಶಿವಕುಮಾರ್‌ ಅವರು ಸಹ ಹೇಳಿದ್ದಾರೆ ಎಂದರು.

ಎರಡು ಸಚಿವ ಸ್ಥಾನ ಖಾಲಿ ಹಾಗೂ ಮಹಿಳೆಯರಿಗೆ ಅವಕಾಶ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಯಾರಿಗೆ ಏನು ಕೊಡಬೇಕೆಂದು ತೀರ್ಮಾನಿಸಲಾಗುತ್ತದೆ ಎಂದರು. ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯದ ವಿಚಾರವಾಗಿ ಮಾತನಾಡಿ, ಹಿಂದೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಒಂದು ಸಚಿವ ಸ್ಥಾನ ಮಾತ್ರ‌ ನೀಡಲಾಗಿದೆ. ಇನ್ನೊಂದು ಸಚಿವ ಸ್ಥಾನ ಸಿಗಬೇಕಿತ್ತು, ಕಾರಣಾಂತರಗಳಿಂದ ನೀಡಿಲ್ಲ. ಎಲ್ಲದಕ್ಕೂ ಕಾಯಬೇಕಾಗುತ್ತದೆ, ಸಮಯ ಬಂದಾಗ ಅವಕಾಶ ಸಿಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

11:15 PM (IST) Aug 31

ಯುವಿ ಅಂತೆಯೇ ಸೇಮ್ ಟು ಸೇಮ್ - ಸೂರ್ಯವಂಶಿ ಬೌಲಿಂಗ್ ಸ್ಟೈಲ್‌ಗೆ ಸಿಕ್ಸರ್ ಕಿಂಗ್ ಕಾಮೆಂಟ್

ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬೌಲಿಂಗ್ ಶೈಲಿಯನ್ನು ಕಂಡು ದಿಗ್ಗಜ ಯುವರಾಜ್ ಸಿಂಗ್ ಫಿದಾ ಆಗಿದ್ದಾರೆ. "ನನಗಿಂತ ನಿನ್ನ ಬೌಲಿಂಗ್ ಆಕ್ಷನ್ ಬೆಟರ್" ಎಂದು ಯುವಿ ಕಾಮೆಂಟ್ ಮಾಡಿದ್ದು, ವೈಭವ್ ಬ್ಯಾಟಿಂಗ್‌ನಲ್ಲಿ 92 ರನ್ ಸಿಡಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ.

Read Full Story

10:49 PM (IST) Aug 31

Success Story; ಚಿಕಿತ್ಸೆಗೆ ಹಣವಿಲ್ಲದೆ ತತ್ತರಿಸಿದ್ದ ಬಡ ಕಾರ್ಮಿಕನ ಮಗ - ಫುಟ್‌ಬಾಲ್ ದಂತಕಥೆ ಮೆಸ್ಸಿಯ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಬಾಲ್ಯದಲ್ಲಿ ಬೆಳವಣಿಗೆಯ ಹಾರ್ಮೋನ್ ಕೊರತೆಯಿಂದ ಬಳಲಿ, ಚಿಕಿತ್ಸೆಗೂ ಹಣವಿಲ್ಲದೆ ಪರದಾಡುತ್ತಿದ್ದ ಲಿಯೋನೆಲ್ ಮೆಸ್ಸಿ, ಬಾರ್ಸಿಲೋನಾ ಕ್ಲಬ್‌ನ ಸಹಾಯದಿಂದ ಫುಟ್‌ಬಾಲ್ ಜಗತ್ತನ್ನು ಆಳಿದರು. ಇಂದು ಅವರು ತಮ್ಮ ಪರಿಶ್ರಮದಿಂದ $1.1 ಬಿಲಿಯನ್ ಮೌಲ್ಯದ ಆಸ್ತಿ ಗಳಿಸಿ, ವಿಶ್ವದ ಎರಡನೇ ಶ್ರೀಮಂತ ಫುಟ್‌ಬಾಲ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
Read Full Story

10:11 PM (IST) Aug 31

44 ವರ್ಷಗಳ ಇತಿಹಾಸವಿರೋ ಕೋನಿಗರಹಳ್ಳಿ ಬ್ರಿಡ್ಜ್ ಕುಸಿತ, 1982ರಲ್ಲಿ ಮಾಜಿ ಸಿಎಂ ಗುಂಡೂರಾವ್ ಉದ್ಘಾಟಿಸಿದ್ದರು

ಮಾಜಿ ಸಿಎಂ ದಿ. ಗುಂಡೂರಾವ್ 1982ರಲ್ಲಿ ಉದ್ಘಾಟಿಸಿದ್ದ ಚಳ್ಳಕೆರೆಯ ಕೋನಿಗರಹಳ್ಳಿ ಸೇತುವೆ ಈಗ ಕುಸಿತ ಕಂಡಿದ್ದು 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.

Read Full Story

09:44 PM (IST) Aug 31

125 ವರ್ಷಗಳ ಹಳೆಯ ದಾಖಲೆ ಉಡೀಸ್ - ಆಗಸ್ಟ್‌ನ ಕಹಿ ಸತ್ಯ ಬಿಚ್ಚಿಟ್ಟ IMD, ಸೆಪ್ಟೆಂಬರ್‌ ಕುರಿತು ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್‌

ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, 125 ವರ್ಷಗಳಲ್ಲೇ ಅತ್ಯಂತ ಬಿಸಿಯಾದ ಆಗಸ್ಟ್ ತಿಂಗಳು ದಾಖಲಾಗಿದೆ. ಎಲ್ ನಿನೊ ಪ್ರಭಾವದಿಂದಾಗಿ ಈ ತಾಪಮಾನ ಏರಿಕೆಯಾಗಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಮತ್ತು ಅಧಿಕ ತಾಪಮಾನದ ಮುನ್ಸೂಚನೆ ನೀಡಲಾಗಿದೆ.
Read Full Story

09:31 PM (IST) Aug 31

ಆಸ್ಪತ್ರೆಯಲ್ಲಿ ಕಂಡ ಸಾವು-ಬದುಕು - ನಟಿ ಶ್ರೀಲೀಲಾ ನಟನೆಯನ್ನೇ ಬದಲಿಸಿದ ಆ ಅನುಭವವೇನು?

ನಟಿ ಶ್ರೀಲೀಲಾ ಆಸ್ಪತ್ರೆಯಲ್ಲಿ ಬದುಕು-ಸಾವು, ರೋಗಿಗಳು ಮತ್ತು ಕುಟುಂಬಗಳ ಭಾವನಾತ್ಮಕ ಹೋರಾಟಗಳನ್ನು ಹತ್ತಿರದಿಂದ ಕಂಡ ಅನುಭವ ತಮ್ಮ ಸಂವೇದನೆ ಹಾಗೂ ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನು ಬದಲಿಸಿದೆ ಎಂದು ಶ್ರೀಲೀಲಾ ಹೇಳಿದ್ದಾರೆ.

Read Full Story

08:42 PM (IST) Aug 31

ಬಂಡೀಪುರ, ನಾಗರಹೊಳೆ ಸಫಾರಿ ದರ ಭಾರೀ ಏರಿಕೆ.. ಇದು ಪ್ರವಾಸೋದ್ಯಮಕ್ಕೇ ದೊಡ್ಡ ಹೊಡೆತ..!

ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇಂದಿನಿಂದ ಸಫಾರಿ ದರ ಭಾರಿ ಏರಿಕೆಯಾಗಿದೆ. ವಯಸ್ಕರ ಟಿಕೆಟ್ 1,000 ರೂ.ಗೆ ಹಾಗೂ ಜೀಪ್ ಸಫಾರಿ ದರ 1,500 ರೂ.ಗೆ ಏರಿಕೆಯಾಗಿದ್ದು, ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

Read Full Story

08:34 PM (IST) Aug 31

'ಇದು ಡಾರ್ಕ್‌ಫೀಲ್ಡ್‌ ಪೊಲೀಸ್‌ ಸ್ಟೇಷನ್‌' ವೈಟ್‌ಫೀಲ್ಡ್‌ ಪೊಲೀಸ್ ಸ್ಟೇಷನ್‌ಗೆ ಮತ್ತೊಮ್ಮೆ ಹೈಕೋರ್ಟ್‌ ಚಾಟಿ

ಸಿವಿಲ್ ವಿವಾದದಲ್ಲಿ ಮಧ್ಯಪ್ರವೇಶಿಸಿ ಕಾಂಪೌಂಡ್ ಕೆಡವಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್‌ ವೈಟ್‌ಫೀಲ್ಡ್ ಪೊಲೀಸ್ ಠಾಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಠಾಣೆಯನ್ನು 'ಡಾರ್ಕ್ ಫೀಲ್ಡ್' ಎಂದು ಹಿಂದಿನ ಪೀಠ ಕರೆದಿದ್ದನ್ನು ಕೋರ್ಟ್‌ ಉಲ್ಲೇಖಿಸಿದೆ.

Read Full Story

08:29 PM (IST) Aug 31

Cyber - ಕಲಬುರಗಿಯಲ್ಲಿ ಭೀಕರ ಸೈಬರ್ ವಂಚನೆ; 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೈದ್ಯನಿಗೆ 1.79 ಕೋಟಿ ರೂ. ಟೋಪಿ!

ಕಲಬುರಗಿಯ ನಿವೃತ್ತ ವೈದ್ಯರೊಬ್ಬರು 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ನಕಲಿ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಬೆದರಿಸಿ ದಂಪತಿಯಿಂದ 1.79 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಬೆಂಗಳೂರಿನಲ್ಲಿದ್ದ ಮಗ ಮನೆಗೆ ಬಂದಾಗ ಈ ಬೃಹತ್ ವಂಚನೆಯ ಜಾಲ ಬಯಲಾಗಿದೆ.
Read Full Story

08:06 PM (IST) Aug 31

ಹುಟ್ಟುಹಬ್ಬಕ್ಕೆ ʻಕಿಂಗ್‌-ಸೈಜ್ʼ ಗಿಫ್ಟ್ - ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಕಿಚ್ಚ ಸುದೀಪ್‌?

ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಅಧಿಕೃತ ಘೋಷಣೆ ನಡೆಯಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ‘ಕಿಂಗ್‌-ಸೈಜ್’ ಪ್ರಾಜೆಕ್ಟ್‌ನಲ್ಲಿ ಸುದೀಪ್ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read Full Story

07:21 PM (IST) Aug 31

'ಸಿನಿಮಾ ತಡವಾದ್ರೆ ಏನಾಗುತ್ತೆ?' ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಹೇಳಿಕೊಂಡ ಸೀಕ್ರೆಟ್ ಇಲ್ಲಿದೆ ನೋಡಿ!

"ಸಿನಿಮಾ ಕೊಟ್ಟೇ ತೀರಬೇಕು ಎಂಬ ಹಠಕ್ಕೆ ಬಿದ್ದು, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿದ್ದೇನೆ. ಕಳೆದ 120 ದಿನಗಳ ಕಾಲ 80 ಲೊಕೇಶನ್‌ಗಳು ಮತ್ತು 22 ಸೆಟ್‌ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ.' ಎಂದಿದ್ದಾರೆ ಸುದೀಪ್. ಇನ್ನೇನು ಹೇಳಿದ್ದಾರೆ ನೋಡಿ..

Read Full Story

07:08 PM (IST) Aug 31

ವಿಧಾನಸೌಧದಿಂದ ತೆರಳಲು ಕಾರಿನ ಡ್ರೈವರ್‌ಗಾಗಿ ಕಾದು ನಿಂತ ಸಿಎಂ ಡಿಕೆಶಿ, ಸಿಂಪಲ್ ನಡೆಗೆ ಮೆಚ್ಚುಗೆ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನ ಸೌಧದಿಂದ ತೆರಳಲು ಹೊರಗೆ ಆಗಮಿಸಿದ್ದಾರೆ.ಕಾರಿನತ್ತ ಬಂದು ಡಿಕೆ ಶಿವಕುಮಾರ್ ಕಾರಿನ ಡ್ರೈವರ್‌ಗದಾಗಿ ಕಾದು ನಿಂತ ಘಟನೆ ನಡೆದಿದೆ. ಮುಂದೇನಾಯಿತು?

Read Full Story

06:29 PM (IST) Aug 31

12ನೇ ವಯಸ್ಸಿಗೆ ಹುಡುಗರಾಗಿ ಬದಲಾಗೋ ಹುಡುಗಿಯರು - ಈ ಹಳ್ಳಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!

ಡೊಮಿನಿಕನ್ ರಿಪಬ್ಲಿಕ್ ದೇಶದ ಲಾಸ್ ಸಲಿನಾಸ್ ಅನ್ನೋ ಹಳ್ಳಿಯೊಂದು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಲ್ಲಿ ಹುಟ್ಟುವ ಕೆಲವು ಮಕ್ಕಳು ನೋಡೋಕೆ ಹೆಣ್ಣುಮಕ್ಕಳಂತೆ ಇರ್ತಾರೆ, ಹಾಗೇ ಬೆಳೀತಾರೆ. ಆದ್ರೆ 12 ವರ್ಷ ತುಂಬುತ್ತಿದ್ದಂತೆ ಹುಡುಗರಾಗಿ ಬದಲಾಗಿಬಿಡ್ತಾರೆ.

Read Full Story

06:17 PM (IST) Aug 31

Love Failure - ಮನವೊಲಿಸಿದರೂ ಕೇಳ್ತಿಲ್ಲ, ಒನ್‌ಸೈಡ್‌ ಲವ್‌ ಸಿಗದೇ ಇಳಿಯಲ್ಲ; ಟವರ್ ಏರಿ ಕುಳಿತ ಭಗ್ನ ಪ್ರೇಮಿ!

ಕೊಪ್ಪಳದ ಗಂಗಾವತಿಯಲ್ಲಿ ಯುವತಿಯೊಬ್ಬಳನ್ನು ಒನ್‌ಸೈಡ್ ಪ್ರೀತಿಸುತ್ತಿದ್ದ ರಾಜು ಎಂಬ ಯುವಕ, ಆಕೆ ಪ್ರೀತಿ ನಿರಾಕರಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಮುಂದೆ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story

05:52 PM (IST) Aug 31

ರಾಯರ ಮಧ್ಯಾರಾಧನೆಗೆ ಮಂತ್ರಾಲಯದಲ್ಲಿ ಭಕ್ತಿಯ ಮಹಾಪೂರ - ಚಿನ್ನದ ರಥೋತ್ಸವ ಕಣ್ತುಂಬಿಕೊಂಡ ಭಕ್ತರು

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಧ್ಯಾರಾಧನೆಯನ್ನು ವೈಭವದಿಂದ ಆಚರಿಸಲಾಯಿತು. ಮಹಾ ಪಂಚಾಮೃತಾಭಿಷೇಕ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Read Full Story

05:38 PM (IST) Aug 31

Bigg Boss ಹಿಸ್ಟರಿಯಲ್ಲೇ ಬಿಗ್ ಅಪ್‌ಡೇಟ್ಸ್‌.. ಸೇತುಪತಿ, ಮೋಹನ್ ಲಾಲ್, ನಾಗಾರ್ಜುನ ಜೊತೆ ಕಿಚ್ಚನ ಜುಗಲ್‌ಬಂದಿ..! VIDEO

ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಾದ ಕಿಚ್ಚ ಸುದೀಪ್, ಮೋಹನ್ ಲಾಲ್, ವಿಜಯ್ ಸೇತುಪತಿ ಮತ್ತು ನಾಗಾರ್ಜುನ ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 6 ರಂದು ನಾಲ್ಕು ಭಾಷೆಗಳ ಸೀಸನ್‌ಗಳ ಜೊತೆಗೆ ಸಲ್ಮಾನ್ ಖಾನ್ ಅವರ ಹಿಂದಿ ಬಿಗ್ ಬಾಸ್ ಕೂಡ ಏಕಕಾಲದಲ್ಲಿ ಭರ್ಜರಿಯಾಗಿ ಲಾಂಚ್ ಆಗಲಿದೆ. ಈ ಕುರಿತ ಸ್ಟೋರಿ ಇಲ್ಲಿದೆ.

Read Full Story

05:23 PM (IST) Aug 31

Nepal - ಭಾರತದ ಎಚ್ಚರಿಕೆ ಕಡೆಗಣಿಸಿ ಚೀನಾ ಬಲೆಗೆ ಬಿದ್ದ ನೇಪಾಳ; ಭಾರತೀಯ ರಾಜತಾಂತ್ರಿಕ ದೂರದೃಷ್ಟಿಗೆ ಸಾಟಿಯೇ ಇಲ್ಲ ಎನ್ನುವುದಕ್ಕೆ ಆ ಒಂದು ಕಾರಣವೇ ಸಾಕ್ಷಿ!

ಭಾರತದ ಎಚ್ಚರಿಕೆಯನ್ನು ಕಡೆಗಣಿಸಿ ಚೀನಾದ 'ಬೆಲ್ಟ್ ಅಂಡ್ ರೋಡ್' ಯೋಜನೆಗೆ ನೇಪಾಳ ಕೈಹಾಕಿತ್ತು. ಆದರೆ, ಇತ್ತೀಚಿನ ಪ್ರಕೃತಿ ವಿಕೋಪದಿಂದ ಚೀನಾ ನಿರ್ಮಿತ ಹೆದ್ದಾರಿ ನಾಶವಾಗಿದ್ದು, ಇದು ಭಾರತದ ರಾಜತಾಂತ್ರಿಕ ದೂರದೃಷ್ಟಿ ಮತ್ತು ಚೀನಾದ ಕಳಪೆ ಯೋಜನೆಗೆ ಸಾಕ್ಷಿಯಾಗಿದೆ.
Read Full Story

04:57 PM (IST) Aug 31

ಇದ್ದಕ್ಕಿದ್ದಂತೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್.. 'ಟಾಕ್ಸಿಕ್' ಬಗ್ಗೆ ಹೀಗ್ಯಾಕೆ ಅಂದ್ರು?

ಇಡೀ ಚಿತ್ರವು ಒಂದು ದೃಶ್ಯ ವೈಭವವಾಗಿದೆ ಮತ್ತು ನಿಸ್ಸಂದೇಹವಾಗಿ ಇದು ನಿಮಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಒಂದು ಮಹತ್ವದ ಮೈಲಿಗಲ್ಲು. ಆದರೆ ಪ್ರತಿಯೊಂದು ಫ್ರೇಮ್‌ನಲ್ಲೂ ನೀವು ನಿಮ್ಮನ್ನೇ ಮೀರಿಸಿರುವುದನ್ನು ಕಂಡು ನನಗೆ ಎಷ್ಟು ಹೆಮ್ಮೆ ಎನಿಸಿತು ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ನಟನಾಗಿ ನೀವು ತುಂಬಾ ಬೆಳೆದಿದ್ದೀರಿ ಮತ್ತು ಪ್ರಬುದ್ಧರಾಗಿದ್ದೀರಿ…

Read Full Story

04:49 PM (IST) Aug 31

ಸುರಂಗ ರಸ್ತೆ ಬಳಿಕ ಸಬರ್ಬನ್‌ ರೈಲು - ಬೆಂಗಳೂರಿನಲ್ಲಿ ಅದಾನಿ ಕಂಪನಿಗೆ ಮತ್ತೊಂದು ಬೃಹತ್‌ ಟೆಂಡರ್‌ ಸಾಧ್ಯತೆ

ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಚುರುಕು ಸಿಕ್ಕಿದ್ದು, ಅದಾನಿ ಗ್ರೂಪ್ ಬೆಂಬಲಿತ 'ಸೆಮಿಂಡಿಯಾ ಪ್ರಾಜೆಕ್ಟ್ಸ್' 665.61 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದೆ.

Read Full Story

04:34 PM (IST) Aug 31

KPSC ಅಕ್ರಮ; ಜಿಪಂ ಮಾಜಿ ಸಿಇಒ ಜ್ಞಾನೇಂದ್ರಕುಮಾರ್ ಅರೆಸ್ಟ್ ಬೆನ್ನಲ್ಲೇ, ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದ CID!

ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎಂಬ ಆರೋಪವಿದೆ.

Read Full Story

04:26 PM (IST) Aug 31

ಶಿವರಾಮ ಕಾರಂತ ಲೇಔಟ್ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್, ಸೈಟ್ ಬೆಲೆ ಇಳಿಸಿದ ಡಿಕೆ ಶಿವಕುಮಾರ್

ಶಿವರಾಮ ಕಾರಂತ ಬಡಾವಣೆ ಮಾಡಲು ಜಾಗ ಕೊಟ್ಟ ರೈತರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟ್ ನೀಡಲು ಸಿಎಂ ಸೂಚಿಸಿದ್ದಾರೆ.

Read Full Story

04:19 PM (IST) Aug 31

ತುಂಬಾ ಅಹಂಕಾರದಿಂದ ವರ್ತಿಸುತ್ತಿದ್ದೆ, ಯಾರನ್ನೂ ಲೆಕ್ಕಿಸಿರಲಿಲ್ಲ - 'ನೀಲಕಂಠ' ನಟಿ ನಮಿತಾ

ಒಂದು ಕಾಲದಲ್ಲಿ ಸೌತ್ ಚಿತ್ರರಂಗದ ಜನಪ್ರಿಯ ನಟಿಯಾಗಿದ್ದ ನಮಿತಾ ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯಶಸ್ಸು ಮತ್ತು ಖ್ಯಾತಿ ತಲೆಗೇರಿದ್ದರಿಂದ ಅಹಂಕಾರದಿಂದ ವರ್ತಿಸುತ್ತಿದ್ದೆ, ಯಾರನ್ನೂ ಲೆಕ್ಕಿಸುತ್ತಿರಲಿಲ್ಲ ಎಂದು ನಮಿತಾ ಹೇಳಿದ್ದಾರೆ.

Read Full Story

04:01 PM (IST) Aug 31

ನೇಪಾಳ ಪೊಲೀಸರ ಯಡವಟ್ಟು.. ಕರ್ನಾಟಕದ ಇಬ್ಬರು ಪೊಲೀಸರನ್ನ ಬಂಧಿಸಿ ತನಿಖೆ.. ಅಸಲಿಗೆ ಆಗಿದ್ದೇನು?

ಕರ್ನಾಟಕ ತನಿಖಾಧಿಕಾರಿಗಳಿಗೆ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ಯಾವುದೇ ಪೂರ್ವಾನುಮತಿ ಪಡೆಯದೆ ನೇಪಾಳದ ಗಡಿ ಗ್ರಾಮಕ್ಕೆ ಪ್ರವೇಶಿಸಿದ್ದ ಕರ್ನಾಟಕದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾದಾ ಉಡುಪಿನಲ್ಲಿದ್ದ ಈ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸದ ಕಾರಣ, ಸ್ಥಳೀಯರೇ ಇವರನ್ನು ಹಿಡಿದು ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

Read Full Story

03:53 PM (IST) Aug 31

ಆಂಧ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಉದ್ಯಮಿ, 300ಕ್ಕೂ ಹೆಚ್ಚು ವಿಂಟೇಜ್ ಕಾರಿನ ಮಾಲೀಕನ ಬಂಧನ; ಕಾರಣವೇನು?

300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಮಾಲೀಕ, ಬೆಂಗಳೂರಿನ ಉದ್ಯಮಿ ಡಾ. ರವಿಪ್ರಕಾಶ್ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಆದರೆ, ಇದು ಜಮೀನು ವ್ಯಾಜ್ಯಕ್ಕಾಗಿ ಆಂಧ್ರ ಶಾಸಕರು ಮಾಡಿಸಿದ ಕಿಡ್ನಾಪ್ ಎಂದು ಕುಟುಂಬಸ್ಥರು ಆರೋಪಿಸಿ, ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

03:47 PM (IST) Aug 31

Chicken Farm Attack - ದ್ವೇಷಕ್ಕೆ ಬಲಿಯಾದವಾ ಮೂಕ ಪ್ರಾಣಿಗಳು? 830 ಕೋಳಿಗಳಿಗೆ ವಿಷವಿಕ್ಕಿದ ಕಿಡಿಗೇಡಿಗಳು! ಕಂಗಾಲಾದ ರೈತ!

ರಾಮಗೊಂಡನಹಳ್ಳಿ ಗ್ರಾಮದ ರೈತ ಪ್ರಕಾಶ್ ಅವರು ಸಾಕಿದ್ದ 830 ನಾಟಿ ಕೋಳಿಗಳಿಗೆ ಕಿಡಿಗೇಡಿಗಳು ವಿಷವಿಕ್ಕಿ ಕೊಂದಿದ್ದಾರೆ. ಈ ಘಟನೆಯಿಂದಾಗಿ ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತನಿಗೆ ಎರಡೂವರೆ ಲಕ್ಷಕ್ಕೂ ಅಧಿಕ ನಷ್ಟವಾಗಿದ್ದು, ಜೀವನೋಪಾಯಕ್ಕೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

03:37 PM (IST) Aug 31

Love Breakup - ಪ್ರಿಯತಮೆ ದೂರವಾದ ಕೋಪಕ್ಕೆ ಇಂಥಾ ಕೃತ್ಯ? ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿ ಬಂಧನ

ಬ್ರೇಕ್‌ಅಪ್ ಬಳಿಕವೂ ಶಿವಮೊಗ್ಗದಲ್ಲಿ ಮಾಜಿ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಆರೋಪ. ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಜಯನಗರ ಠಾಣೆ ಪೊಲೀಸರು ಮಣಿಯನ್ನು ಬಂಧಿಸಿದ್ದಾರೆ.

Read Full Story

12:49 PM (IST) Aug 31

ಬೆಂಗಳೂರಿಗೆ ಶಿಫ್ಟ್ ಆದ ಐಟಿ ಉದ್ಯೋಗಿ - 21 ದಿನಗಳ ಕಾಲ 5 ಸ್ಟಾರ್ ಹೋಟೆಲ್‌ನಲ್ಲಿ ಐಷಾರಾಮಿ ಆತಿಥ್ಯ ಒದಗಿಸಿದ ಕಂಪನಿ!

ಪತಿಯ ಕಂಪನಿಯು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, 'ದಿ ಲೀಲಾ ಪ್ಯಾಲೇಸ್' ಹೋಟೆಲ್‌ನಲ್ಲಿ 21 ದಿನಗಳ ಐಷಾರಾಮಿ ವಾಸ್ತವ್ಯವನ್ನು ಒದಗಿಸಿತು. ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಆದ ಅವರ ಪತ್ನಿ ಶಿವಾಂಗಿ, ತಮಗೆ ದೊರೆತ ರಾಜೋಪಚಾರ ಮತ್ತು 'ಟವರ್ ಸೂಟ್'ನ ಅದ್ಭುತ ಸೌಲಭ್ಯಗಳ ಅನುಭವವನ್ನು ಹಂಚಿಕೊಂಡಿದ್ದಾರೆ.
Read Full Story

12:43 PM (IST) Aug 31

'ಬಿಗ್ ಬಾಸ್ ಕನ್ನಡ-13' ಗ್ರ್ಯಾಂಡ್ ಓಪನಿಂಗ್‌ ಯಾವಾಗ, ಎಷ್ಟು ಗಂಟೆಗೆ ಶುರು..? ಈ ಸೀಸನ್‌ ಸ್ಪೆಷಾಲಿಟಿ ಬೇರೇನೇ ಇದೆ!

ಈ ಬಾರಿಯ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಪ್ರಕ್ರಿಯೆ ಹೇಗಿರಲಿದೆ? ಬರೀ ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಈ ವೇದಿಕೆಯಲ್ಲಿ ಸಮಾನ ಅವಕಾಶ ಕಲ್ಪಿಸಿರುವುದು ಈ ಬಾರಿಯ ಮತ್ತೊಂದು ವಿಶೇಷ. ನಿಮ್ಮ ಪಕ್ಕದ ಮನೆಯವರು ಕೂಡ ಈ ಸಲ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ!

Read Full Story

12:22 PM (IST) Aug 31

ಇದೊಂದು ದಾಖಲೆ ಇಲ್ಲದಿದ್ದರೆ ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಆಗಲಿದೆ ನಿಮ್ಮ ಹೆಸರು!

ಗೃಹಲಕ್ಷ್ಮಿ ಯೋಜನೆಯ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸರ್ಕಾರವು ಬಯೋಮೆಟ್ರಿಕ್ ಮತ್ತು ಫೇಶಿಯಲ್ ಅಥೆಂಟಿಕೇಷನ್ ಮೂಲಕ ಮರುಪರಿಶೀಲನೆ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ, ಮತದಾರರ ಗುರುತಿನ ಚೀಟಿ ಇಲ್ಲದ ಫಲಾನುಭವಿಗಳ ಹೆಸರನ್ನು ಯೋಜನೆಯಿಂದ ತೆಗೆದುಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read Full Story

11:55 AM (IST) Aug 31

ಕೊನೆಗೂ ಸಂಭಾವನೆ ಗುಟ್ಟು ಬಿಚ್ಚಿಟ್ಟ ಕಿಚ್ಚ ಸುದೀಪ್.. 'ಬಿಗ್ ಬಾಸ್ ಕನ್ನಡ ಶೋ'ಗೆ ಈ ನಟ ಪಡೆಯೋದೆಷ್ಟು ಗೊತ್ತಾ?

ಬಿಗ್ ಬಾಸ್ ಕನ್ನಡ 13 ಶೋ ಕ್ಷಣಗಣನೆ ಆರಂಭವಾಗಿದೆ. ಈ ಶೋ ನಡೆಸಿಕೊಡುವ ನಿರೂಪಕ ನಟ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು? ಈ ಸಂಗತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ ನೋಡಿ..

Read Full Story

11:19 AM (IST) Aug 31

ಕುದುರೆಮುಖದ ಬೆಟ್ಟಗಳಲ್ಲಿ ನೀಲಕುರಿಂಜಿಯ ನೀಲಿ ಲೋಕ..! ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿರುವ ನೀಲಿ ಸುಂದರಿ

ಚಿಕ್ಕಮಗಳೂರಿನ ಕುದುರೆಮುಖದ ಚಾರಣ ಮಾರ್ಗಗಳಲ್ಲಿ ನೀಲಕುರಿಂಜಿಯಂತಹ ಅಪರೂಪದ ನೀಲಿ-ನೇರಳೆ ಹೂವುಗಳು ಅರಳಿವೆ. ಈ ನೈಸರ್ಗಿಕ ಸೌಂದರ್ಯವು ಚಾರಣಿಗರನ್ನು ಮತ್ತು ಪ್ರಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮ ಇಲಾಖೆ ಒತ್ತು ನೀಡಿದೆ.
Read Full Story

11:18 AM (IST) Aug 31

Indian Railways ಚಿಕ್ಕಜಾಜೂರು-ಬಳ್ಳಾರಿ ಹಳಿ ದ್ವಿಪಥಕ್ಕೆ ₹3340 ಕೋಟಿ - ಸೋಮಣ್ಣ

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ 33 ರೈಲ್ವೆ ಸೇತುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು

Read Full Story

11:15 AM (IST) Aug 31

ಶಸ್ತ್ರಚಿಕಿತ್ಸೆಗೆ ಬಂದವರಿಗೆ ವೈದ್ಯರು ನಿಮ್ಮ ಜಾತಿ ಕೇಳುವುದು ಏಕೆ? ಇಲ್ಲಿದೆ ಸೀಕ್ರೆಟ್!

ಶಸ್ತ್ರಚಿಕಿತ್ಸೆಯ ಮೊದಲು, ಅರಿವಳಿಕೆ ತಜ್ಞರು ರೋಗಿಯ ಸಮುದಾಯದ ಬಗ್ಗೆ ಕೇಳಬಹುದು. ಇದು ಕೆಲವು ಸಮುದಾಯಗಳಲ್ಲಿ ಸಾಮಾನ್ಯವಾಗಿರುವ ಸ್ಯೂಡೋಕೋಲಿನೆಸ್ಟರೇಸ್ ಕಿಣ್ವದ ಕೊರತೆಯನ್ನು ಪತ್ತೆಹಚ್ಚಲು ಮಾಡಲಾಗುತ್ತದೆ. ಈ ಕೊರತೆಯು ಅರಿವಳಿಕೆ ನಂತರ ರೋಗಿಯು ಸ್ವತಃ ಉಸಿರಾಡಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ.

Read Full Story

11:03 AM (IST) Aug 31

ಇಂಗು ನಿಷೇಧದ ಬೆನ್ನಲ್ಲೇ ಮಸಾಲೆ ಪ್ರಪಂಚಕ್ಕೆ ಶಾಕ್ - ರಾಸಾಯನಿಕ ಬಳಕೆಯ ವಿರುದ್ಧ ಕಠಿಣ ಕ್ರಮಕ್ಕೆ ಸಜ್ಜಾದ ಕರ್ನಾಟಕ

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು (FSSAI) ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಎವರೆಸ್ಟ್ ಮತ್ತು ಎಲ್.ಜಿ ಕಂಪನಿಗಳ ಇಂಗು ಮಾರಾಟವನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ, ಇತರೆ ಮಸಾಲೆ ಪದಾರ್ಥಗಳಲ್ಲಿನ ರಾಸಾಯನಿಕಗಳ ಬಳಕೆಯ ಬಗ್ಗೆಯೂ ತನಿಖೆ ತೀವ್ರಗೊಳಿಸಲಾಗಿದ್ದು, ರಾಜ್ಯಾದ್ಯಂತ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
Read Full Story

10:52 AM (IST) Aug 31

6-8 ವರ್ಷಗಳಿಂದ ಬಾಕಿ ಉಳಿದ ಶಿವಮೊಗ್ಗ ಹೆದ್ದಾರಿ ಕಾಮಗಾರಿ; ಅಧಿಕಾರಿಗಳಿಗೆ ರಾಘವೇಂದ್ರ ಖಡಕ್ ವಾರ್ನಿಂಗ್

ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ, ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭೂಸ್ವಾಧೀನ, ಪರಿಹಾರ ವಿತರಣೆ ಮತ್ತು ಇಲಾಖೆಗಳ ಸಮನ್ವಯ ಕೊರತೆಯಂತಹ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
Read Full Story

09:54 AM (IST) Aug 31

ರಾಜ್ಯದಲ್ಲಿ ಅಡಕೆ ಇಳುವರಿಯಲ್ಲಿ 34% ಕುಸಿತ - ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ

ಶಿವಮೊಗ್ಗದಲ್ಲಿ ನಡೆದ ಮಾಮ್‌ಕೋಸ್‌ 86ನೇ ವಾರ್ಷಿಕ ಸಭೆಯಲ್ಲಿ, ದೇಶದ ಜಿಎಸ್‌ಟಿಗೆ ಅಡಕೆಯಿಂದ ₹19,220 ಕೋಟಿ ಕೊಡುಗೆ ಬಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಇದೇ ವೇಳೆ, ಸದಸ್ಯರಿಗೆ ಗುಂಪು ವಿಮಾ ಮೊತ್ತವನ್ನು ₹7 ಲಕ್ಷಕ್ಕೆ ಮತ್ತು ಆಸ್ಪತ್ರೆ ವೆಚ್ಚವನ್ನು ₹2 ಲಕ್ಷಕ್ಕೆ ಹೆಚ್ಚಿಸಲಾಗಿದೆ ಹಾಗೂ ಅಡಕೆ ರೋಗ ಸಂಶೋಧನೆಗೆ ₹21 ಲಕ್ಷ ನೀಡುವುದಾಗಿ ಘೋಷಿಸಲಾಯಿತು.
Read Full Story

09:10 AM (IST) Aug 31

ಬೆಂಗಳೂರಿನ BEL ನಲ್ಲಿ ಉದ್ಯೋಗ ಅವಕಾಶ - ಸೆಪ್ಟೆಂಬರ್ 10ರಂದು ನೇರ ಸಂದರ್ಶನ, ಹುದ್ದೆಗೆ ಯಾರು ಅರ್ಹರು?

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಬೆಂಗಳೂರು ಘಟಕದಲ್ಲಿ 'ಮ್ಯಾನೇಜ್‌ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ' ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಿದೆ. CA ಇಂಟರ್ ಅಥವಾ CMA ಇಂಟರ್ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 10, 2026 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.
Read Full Story

09:02 AM (IST) Aug 31

1919 ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿ

ಕರ್ನಾಟಕ ಸರ್ಕಾರವು ರಾಜ್ಯದ 1,919 ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ಆರಂಭಿಸುತ್ತಿದೆ. ಆರು ತಿಂಗಳ ಈ ಕಾರ್ಯಕ್ರಮದಡಿ, ಅತಿಥಿ ಶಿಕ್ಷಕರ ಮೂಲಕ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಆತ್ಮವಿಶ್ವಾಸದಿಂದ ಮಾತನಾಡಲು ತರಬೇತಿ ನೀಡಲಾಗುತ್ತದೆ.
Read Full Story

08:31 AM (IST) Aug 31

ನಿಲ್ದಾಣದ ಉಳಿವಿಗಾಗಿ ಬಾಗಲಕೋಟೆಯಿಂದ ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು ಆರಂಭಿಸಿ

Bagalkote To Kudachi: ಚರಂತಿಮಠದ ಪ್ರಭು ಸ್ವಾಮೀಜಿಗಳು ಸೂಳಿಕೇರಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಿರ್ಮಾಣದಷ್ಟೇ ಸಂರಕ್ಷಣೆಯೂ ಮುಖ್ಯ ಎಂದು ಒತ್ತಿ ಹೇಳಿದರು.

Read Full Story

07:03 AM (IST) Aug 31

Bengaluru - 5 ಫ್ಲೈಓವರ್‌ಗಳಿಗೆ ಹೊಸ ನಿಯಮ; ಇನ್ಮುಂದೆ ಈ ವಾಹನಗಳಿಗೆ ಸಂಚಾರ ನಿಷೇಧ!

ರಸ್ತೆ ಸುರಕ್ಷತೆ ಹೆಚ್ಚಿಸಲು ಮತ್ತು ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು, ಬೆಂಗಳೂರು ಸಂಚಾರ ಪೊಲೀಸರು ನಗರದ 5 ಪ್ರಮುಖ ಫ್ಲೈಓವರ್‌ಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ನಿಯಮಗಳ ಅಡಿಯಲ್ಲಿ, ಕೆಲವು ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Read Full Story

06:44 AM (IST) Aug 31

5 ವಿಧಾನ ಪರಿಷತ್‌, 2 ಸಂಪುಟ ಹೆಸರು ಫೈನಲ್‌ಗೆ ಕಸರತ್ತು; ರವಿಚಂದ್ರನ್‌ಗೆ MLC ಸ್ಥಾನ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ವಿಧಾನ ಪರಿಷತ್‌ನ ಐದು ನಾಮನಿರ್ದೇಶನ ಸ್ಥಾನಗಳು ಮತ್ತು ಎರಡು ಸಚಿವ ಸ್ಥಾನಗಳ ಭರ್ತಿ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಎಂಎಲ್ಸಿ ಸ್ಥಾನಕ್ಕೆ ನಟ ರವಿಚಂದ್ರನ್ ಹಾಗೂ ಸಚಿವ ಸ್ಥಾನಕ್ಕೆ ಅನ್ನಪೂರ್ಣ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರ ಹೆಸರುಗಳು ಚರ್ಚೆಯಲ್ಲಿವೆ.
Read Full Story

More Trending News