ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಸೋಮವಾರ ಉತ್ತರ ಕನ್ನಡ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿ ವಿವಿಧೆಡೆ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ತೀವ್ರ ಮಳೆ ಕೊರತೆಯಾಗಿತ್ತು. ಸೋಮವಾರ ಉತ್ತಮ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 32.30 ಮಿ.ಮೀ. ಮಳೆ ಸುರಿದಿದೆ. 7 ದಿನಗಳ ಕಾಲ ಸಮುದ್ರ ಮೇಲೆ 45 - 55 ಕಿ.ಮಿ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿಧಾನಗತಿಯಿಂದ ಮಳೆ ಬಿರುಸು ಪಡೆಯುತ್ತಿದ್ದು, ಸೋಮವಾರ ಮಂಗಳೂರು ಸೇರಿದಂತೆ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ, ಮಂಗಳೂರು ತಾಲೂಕಿನ ವಿವಿಧೆಡೆ ಧಾರಕಾರ ಮಳೆಯಾಗಿದೆ. ಜೂ.30, ಜು.1ರಂದು ಜಿಲ್ಲೆಗ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶೃಂಗೇರಿ ತಾಲೂಕಿನಾದ್ಯಂತ ಮಳೆ ಮುಂದುವರಿದಿದ್ದು, ತಾಲೂಕಿನ ಕೆರೆಕಟ್ಟೆ,ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಡುವು ನೀಡದೇ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.
08:49 PM (IST) Jun 30
Mugilpete Actress: ಕಯಾದು ಲೋಹರ್ ತಮ್ಮ ಶಾಲಾ ದಿನಗಳಲ್ಲಿ ಎದುರಿಸಿದ್ದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದು, ಅವರ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
08:19 PM (IST) Jun 30
ಬೆಂಗಳೂರು ರೇಸ್‌ಕೋರ್ಸ್ ಅನ್ನು ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
07:25 PM (IST) Jun 30
Monsoon Failure: ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ.
06:29 PM (IST) Jun 30
Gangavathi: ಕನಕಗಿರಿ ರಸ್ತೆಯ ಮಾರ್ಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಐತಿಹಾಸಿಕ ಹಂಪೆಯ ಸ್ಮಾರಕಗಳ ಮಾದರಿಯಲ್ಲಿ ಬಸ್ ನಿಲ್ದಾಣ ಚಿತ್ರಣಗೊಳ್ಳಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
06:19 PM (IST) Jun 30
06:12 PM (IST) Jun 30
VTU Results 2026: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 6ನೇ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷದೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
05:55 PM (IST) Jun 30
Kodagu: ಟೂರಿಸಂ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ರಾಜೀವ್ ಎಂಬುವರ ಪತ್ನಿಯನ್ನು ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಕೇರಳಂ ಮೂಲದ ಸಲೀಂ ಎಂಬಾತ ಮೇ ತಿಂಗಳ ಆರಂಭದಲ್ಲಿಯೇ ಕರೆದೊಯ್ದು ವಿವಾಹವಾಗಿದ್ದಾನೆ.
05:39 PM (IST) Jun 30
Bhavya Gowda: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಸಾಮಾನ್ಯವಾಗಿದೆ. ತಮ್ಮ ನೆಚ್ಚಿನ ನಟ-ನಟಿಯರ ಬಾಲ್ಯದ ನೆನಪುಗಳನ್ನು ನೋಡಲು ಅಭಿಮಾನಿಗಳು ಯಾವಾಗಲೂ ಕಾತರರಾಗಿರುತ್ತಾರೆ.
05:38 PM (IST) Jun 30
ಇರಾನ್-ಅಮೆರಿಕ ಯುದ್ಧದಂತಹ ಬಿಕ್ಕಟ್ಟುಗಳಿಂದಾಗುವ ಇಂಧನ ಕೊರತೆ ತಡೆಯಲು ಭಾರತ ಮಹಾ ಯೋಜನೆಯೊಂದನ್ನು ರೂಪಿಸಿದೆ. ಇದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದ್ದು, ಸಂಗ್ರಹಣೆಯ ಸವಾಲುಗಳನ್ನು ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ.
05:12 PM (IST) Jun 30
Mahaan: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಹಾನ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ವಿಭಿನ್ನ ಕಥಾಹಂದರ ಮತ್ತು ಬಲಿಷ್ಠ..
04:44 PM (IST) Jun 30
How to clean tiles at home easily: ಮನೆಯನ್ನು ಕ್ಲೀನ್ ಮಾಡೋದು ದೊಡ್ಡ ಟಾಸ್ಕ್ ಆಗಿದೆ. ಒಮ್ಮೊಮ್ಮೆ ಅಡುಗೆ ಮನೆ ಆಹಾರ ಪದಾರ್ಥಗಳು, ಎಣ್ಣೆ ಅಥವಾ ಇನ್ನಿತರ ದ್ರವದಿಂದ ಮನೆ ಗಲೀಜು ಆಗುವುದು. ಟೈಲ್ಸ್ ನೆಲವನ್ನು ಕ್ಲೀನ್ ಮಾಡೋದು ಹೇಗೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
04:13 PM (IST) Jun 30
Toxic: ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ದಿನದಿಂದ ದಿನಕ್ಕೆ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
04:13 PM (IST) Jun 30
ಪ್ರದೀಪ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಹೊಸ ಹಾದಿ ಹಿಡಿದಿದೆ. ಜೆಡಿಎಸ್ ಶಾಸಕರ ಸುದ್ದಿಗೋಷ್ಠಿ ನಂತರ ಸಿಎಂ ನಡೆ ಕೂತುಹಲ ಸೃಷ್ಟಸಿದೆ. ಶಾಸಕ ಪ್ರದೀಪ್ ಈಶ್ವರ ಅವರನ್ನು ಮನೆಗೆ ಕರೆಸಿದ ಸಿದ್ದು, ಕೇಳಿದ್ದೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
03:53 PM (IST) Jun 30
01:32 PM (IST) Jun 30
01:19 PM (IST) Jun 30
ಇಲಾಖಾ ಪರಿಶೀಲನೆ ಸಭೆ ವೇಳೆ ಯಾವುದೇ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಬಂದ ಅಧಿಕಾರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಲ್ಲದೇ ಸರಿಯಾದ ಉತ್ತರ ನೀಡಲು ವಿಫಲರಾದ ಅಧಿಕಾರಿಯನ್ನ ಜಿಬಿಎಂ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದರು.
12:40 PM (IST) Jun 30
12:03 PM (IST) Jun 30
ಜೂನ್ 30, 2020 ರಂದು, ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಈ ನಿರ್ಧಾರದಿಂದ Tiktok ಟಾಪ್-5 ಸ್ಟಾರ್ ಗಳ ಬದುಕು ಬದಲಾಯಿತು. ಈಗ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನೋಡಿ!
10:47 AM (IST) Jun 30
ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಬಗ್ಗೆ ಸಾಕ್ಷ್ಯ ಇರುವುದು ಕಡ್ಡಾಯ ಎಂದಿದೆ. ರೈತನಿಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸರ್ಕಾರಿ ನೌಕರ ಖುಲಾಸೆ ಪ್ರಕರಣದ ಬಗ್ಗೆ ತಿಳಿಯಿರಿ.
10:08 AM (IST) Jun 30
09:10 AM (IST) Jun 30
09:06 AM (IST) Jun 30
08:51 AM (IST) Jun 30
08:28 AM (IST) Jun 30
‘ರಾಜಕೀಯದಲ್ಲಿ ಓಡುತ್ತಲೇ ಇರಬೇಕು, ಇಲ್ಲದಿದ್ರೆ ಹಿಂದೆ ಬೀಳ್ತೀವಿ’ ಒಂದು ಕಾಲದಲ್ಲಿ ಸಿದ್ದರಾಮಯ್ಯರ ಅತ್ಯಂತ ಆಪ್ತರಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯರ ಕಡೆಗಣನೆ ಕುರಿತಂತೆ ಅಚ್ಚರಿ ಗೊಂದಲಮಯ ಹೇಳಿಕೆ ನೀಡಿದ್ದಾರೆ.ಅವರ ಮಾತಿನ ಹಿಂದಿನ ಅರ್ಥವೇನು?
08:19 AM (IST) Jun 30
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಶೃಂಗೇರಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿಯ ಕ್ರೇನ್ ಒಂದು ನದಿಯಲ್ಲಿ ಮುಳುಗಡೆಯಾಗಿದೆ.
07:49 AM (IST) Jun 30
ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪರಾರಿಯಾದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬವು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
07:44 AM (IST) Jun 30
ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ನಿರ್ಮಾಪಕ, ಸಂಘದ ನಿರ್ದೇಶಕರೂ ಆಗಿರುವ ಉಮಾಪತಿ ಶ್ರೀನಿವಾಸಗೌಡ ಮತ್ತೆ ಗಂಭೀರ ಆರೋಪ ಮಾಡಿದ್ದು, ಎಲ್ಲ ಹಗರಣಗಳ ದಾಖಲೆ ನನ್ನ ಬಳಿ ಇವೆ. ಇಂಚಿಂಚು ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಏನಿದು ಹಗರಣ?
07:30 AM (IST) Jun 30
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚನ್ನಪಟ್ಟಣದಲ್ಲಿ ಮೇಲ್ಸೇತುವೆ ಉದ್ಘಾಟಿಸಿ, ಬೆಂಗಳೂರಿನಿಂದ ಮಂಗಳೂರಿಗೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ಪ್ರಕಟಿಸಿದರು. ಇ
07:15 AM (IST) Jun 30
ರಾಜ್ಯದಲ್ಲಿ ಇಂದಿನಿಂದ ಎಸ್‌ಐಆರ್ ನಡೆಯಲಿರುವ ಹಿನ್ನೆಲೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಂದ ಭರ್ತಿ ಮಾಡಿ ಅಗತ್ಯ ದಾಖಲೆ ನೀಡುವಂತೆ ಮನವಿ ಮಾಡಿದ್ದಾರೆ. ಮತಹಕ್ಕು ಕಳೆದುಕೊಂಡರೆ ಏನಾಗುತ್ತೆ?
07:13 AM (IST) Jun 30