LIVE NOW
Published : Mar 03, 2026, 06:35 AM ISTUpdated : Mar 03, 2026, 09:52 PM IST

Karnataka News Live: 'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty

ಸಾರಾಂಶ

ಕಲಬುರಗಿ: ಕಲಬುರಗಿಯಿಂದ ಜೇವರ್ಗಿಗೆ ಹೋಗುವ ರಸ್ತೆಯಲ್ಲಿನ ವಾಜಪೇಯಿ ಬಡಾವಣೆಯಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಲೋಕಾರ್ಪಣೆಗೊಂಡಿದ್ದ ‘ಪ್ರಬುದ್ಧ ಅಕಾಡೆಮಿ’ಯ ಕಟ್ಟಡದಲ್ಲಿದ್ದ ಉಪಾಹಾರ ಕೊಠಡಿಯಲ್ಲಿ ಚಾವಣಿ ಕುಸಿದಿದ್ದು ವಿದ್ಯಾರ್ಥಿನಿಯೋರ್ವಳು ಪಾರಾಗಿರುವ ಘಟನೆ ಸೋಮವಾರ ನಡೆದಿದೆ. ಕಳೆದ ಜನವರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಬುದ್ಧ ಅಕಾಡೆಮಿ ಕೇಂದ್ರವನ್ನು ಉದ್ಘಾಟಿಸಿದ್ದರು. ಒಂದೇ ತಿಂಗಳಲ್ಲೇ ಕುಸಿದು ಬೀಳುವ ಹಂತಕ್ಕೆ ಕಟ್ಟಡವನ್ನು ಕಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತರಬೇತಿ ಕೇಂದ್ರದ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಪ್ರತಿಕ್ರಿಯಿಸಿದ್ದು, "ಮೇಲ್ಚಾವಣಿ ಕುಸಿದಿರುವ ಬಗ್ಗೆ ಕಟ್ಟಡ ಕಂಟ್ರಾಕ್ಟರ್ ಆಗಿರುವ ಕೆಆರ್‌ ಐಡಿಎಲ್ ಇಲಾಖೆಗೆ ತಿಳಿಸಿದ್ದೇವೆ. ಉಪಾಹಾರ ಕೇಂದ್ರ ಉಪಯೋಗಿಸದ ಕಾರಣ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

09:52 PM (IST) Mar 03

'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ಇದೀಗ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ತಮ್ಮ ಅರೆಬರೆ ಕನ್ನಡದಿಂದ ನಗೆಗಡಲಲ್ಲಿ ತೇಲಿಸಿದ್ದಾರೆ. ಈ ಹಿಂದೆ ತಾವು ರೈತನ ಮಗನನ್ನು ಮದುವೆಯಾಗುವುದಾಗಿ ಹೇಳಿಕೆ ನೀಡಿ ಗಮನ ಸೆಳೆದಿದ್ದ ರಕ್ಷಿತಾ, ಸೆಲೆಬ್ರಿಟಿಯಾದ ಮೇಲೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.
Read Full Story

08:46 PM (IST) Mar 03

ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ

ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಿಂದ ಹಿರಿಯ ನಟ ಟಿ.ಎಸ್.ನಾಗಾಭರಣ ಹೊರನಡೆದಿದ್ದಾರೆ. ಅವರ ನಿರ್ಗಮನದಿಂದ ಖಾಲಿಯಾದ ಖಳನಾಯಕ ರಮೇಶ್ ಪಾತ್ರಕ್ಕೆ ಇದೀಗ ಚಂದನವನದ ಮತ್ತೋರ್ವ ಹಿರಿಯ ನಟ ಅಭಿಜಿತ್ ಎಂಟ್ರಿ ಕೊಟ್ಟಿದ್ದಾರೆ. ಈ ಅನಿರೀಕ್ಷಿತ ಬದಲಾವಣೆಯು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
Read Full Story

08:12 PM (IST) Mar 03

ಜಗತ್ತು ನಮ್ಮನ್ನು ಹೇಡಿ, ಅವಕಾಶವಾದಿಗಳ ದೇಶ ಎಂದು ಕೀಳಾಗಿ ನೋಡುವಂತೆ ಮೋದಿ ಮಾಡಿದ್ದಾರೆ - ಕಿಶೋರ್‌ ಆಕ್ರೋಶ

ನಟ ಕಿಶೋರ್ ಕುಮಾರ್, ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿಗೆ ಭಾರತದ ಮೌನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ 'ಜೀ ಹುಜೂರ್' ಸಂಸ್ಕೃತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಭಾರತವನ್ನು 'ಹೇಡಿ, ಅವಕಾಶವಾದಿಗಳ ದೇಶ' ಎಂದು ಕರೆಯುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

08:08 PM (IST) Mar 03

Premium FAR and TDR Issues - ಪ್ರೀಮಿಯಂ ಎಫ್​ಎಆರ್​, ಟಿಡಿಆರ್​​ ಕುರಿತು ಸಿಎಂ, ಡಿಸಿಎಂಗೆ ದೂರು

ಬೆಂಗಳೂರಿನಲ್ಲಿ ಜಾರಿಗೆ ತಂದಿರುವ ಹೊಸ 'ಪ್ರೀಮಿಯಂ ಎಫ್‌ಎಆರ್' ಮತ್ತು 'ಟಿಡಿಆರ್' ನೀತಿಗೆ ವಿರೋಧ ವ್ಯಕ್ತವಾಗಿದೆ. ಇದು ಡೆವಲಪರ್‌ಗಳಿಗೆ ಮಾತ್ರ ಲಾಭದಾಯಕವಾಗಿದ್ದು, ಭೂಮಾಲೀಕರಿಗೆ ಅನ್ಯಾಯ ಮಾಡುತ್ತದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಲಾಗಿದೆ.

Read Full Story

07:51 PM (IST) Mar 03

ದುಡಿಯೋ ಹೆಣ್ಮಕ್ಕಳಿಗೆ 'ಗೋಲ್ಡ್‌ ಡಿಗ್ಗರ್‌' 'ಹನಿ ಟ್ರ್ಯಾಪರ್‌' ಪಟ್ಟ; ಯಾರಿಗೆ ಟಾಂಗ್‌ ಕೊಟ್ಟರು ಶ್ರೀದೇವಿ ಬೈರಪ್ಪ?

ಯುವರಾಜ್‌ ಕುಮಾರ್‌ ಜೊತೆಗಿನ ವಿಚ್ಛೇದನ ಪ್ರಕರಣದ ನಡುವೆ, ಶ್ರೀದೇವಿ ಬೈರಪ್ಪ ಅವರು ಹಂಚಿಕೊಂಡಿರುವ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕುತೂಹಲ ಮೂಡಿಸಿದೆ. ಮಹಿಳೆಯರನ್ನು 'ಗೋಲ್ಡ್ ಡಿಗ್ಗರ್' ಎಂದು ಕರೆಯುವುದರ ವಿರುದ್ಧ ಅವರ ಪೋಸ್ಟ್, ತಮ್ಮ ವೈಯಕ್ತಿಕ ಜೀವನದ ಸನ್ನಿವೇಶಗಳಿಗೆ ಉತ್ತರ ಎಂದು ಚರ್ಚೆಯಾಗುತ್ತಿದೆ.

Read Full Story

07:34 PM (IST) Mar 03

ಮೋದಿ ವಿರುದ್ಧ ತೊಡೆ ತಟ್ಟಿದ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಸಾಥ್ ನೀಡಿ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!

ಕೇಂದ್ರ-ರಾಜ್ಯ ಸಂಬಂಧಗಳ ಕುರಿತ ತಮಿಳುನಾಡು ಸರ್ಕಾರದ ವರದಿ ಬೆಂಬಲಿಸಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ಗೆ ಪತ್ರ ಬರೆದಿದ್ದಾರೆ. ಒಕ್ಕೂಟ ವ್ಯವಸ್ಥೆ 'ಸಹಕಾರ'ದಿಂದ 'ಬಲಾತ್ಕಾರ'ದತ್ತ ಸಾಗುತ್ತಿದ್ದು, ರಾಜ್ಯಗಳ ಹಣಕಾಸು ಸ್ವಾಯತ್ತತೆಗೆ ಧಕ್ಕೆಯಾಗುತ್ತಿದೆ ಎಂದಿದ್ದಾರೆ.

Read Full Story

06:23 PM (IST) Mar 03

'ಗ್ರಾಮೀಣ ಜ್ಞಾನ ಸಮುಚ್ಚಯ' ಪುಸ್ತಕ ಲೋಕಾರ್ಪಣೆ - ರಾಜೇಂದ್ರಕುಮಾರ್ ಆಡಳಿತದ ಸಾಧನೆ ಕೊಂಡಾಡಿದ ಹೊರಟ್ಟಿ

ಡಾ.ಪಿ.ವೈ.ರಾಜೇಂದ್ರಕುಮಾರ್ ಅವರ 'ಗ್ರಾಮೀಣ ಜ್ಞಾನ ಸಮುಚ್ಚಯಗಳು' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ಗ್ರಂಥಾಲಯಗಳಿಗೆ ಸರ್ಕಾರದ ಪುಸ್ತಕ ಖರೀದಿ ಸ್ಥಗಿತಗೊಂಡಿರುವ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು. 

Read Full Story

06:07 PM (IST) Mar 03

ಚಂದ್ರ ಗ್ರಹಣದ ದಿನವೇ ಚಿಕ್ಕಮಗಳೂರಿನಲ್ಲಿ ಹೊತ್ತಿ ಉರಿದ ಸರ್ಕಾರಿ ಬಸ್ - 32 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಚಿಕ್ಕಮಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಡೀಸೆಲ್ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 32 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

Read Full Story

05:41 PM (IST) Mar 03

ದೇಶಾದ್ಯಂತ ದೇಗುಲಗಳು ಬಾಗಿಲು ಮುಚ್ಚಿದ್ರೂ, ಮಂತ್ರಾಲಯದ ರಾಯರ ಮಠಕ್ಕೆ ಗ್ರಹಣ ದೋಷವಿಲ್ಲ ಏಕೆ? ಎಂದಿನಂತೆ ಸಿಗಲಿದೆ ಭಕ್ತರಿಗೆ ದರ್ಶನ

ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದಂದು, ದೇಶದ ಹಲವು ದೇಗುಲಗಳು ಮುಚ್ಚಿದರೆ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಭಕ್ತರ ದರ್ಶನಕ್ಕೆ ತೆರೆದಿರುತ್ತದೆ. ಕೇವಲ 21 ನಿಮಿಷಗಳ ಕಾಲ ಗ್ರಹಣದ ಅನುಷ್ಠಾನವಿದ್ದು,  ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲದಿದ್ದರೂ, ಕೆಲವು ವಿಶೇಷ ಸೇವೆ ಬದಲಾವಣೆಯಾಗಿದೆ.

Read Full Story

05:18 PM (IST) Mar 03

Breaking - ಚಿನ್ನಸ್ವಾಮಿಗೆ ಐಪಿಎಲ್‌, ಬೆಂಗಳೂರಲ್ಲಿ ಐದು ಪಂದ್ಯ ಆಡಲು ಕೊನೆಗೂ ಒಪ್ಪಿದ RCB!

ಐಪಿಎಲ್‌ನ ಹಾಲಿ ಚಾಂಪಿಯನ್ಸ್ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' (RCB) ತಂಡವು ತನ್ನ 5 ತವರು ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಮತ್ತು ಪೊಲೀಸರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದಿದೆ.

Read Full Story

05:17 PM (IST) Mar 03

ಏಕಕಾಲಕ್ಕೆ ಇಬ್ಬರೊಂದಿಗೆ ಡೇಟಿಂಗ್, ಒಂದೇ ಮಂಟಪದಲ್ಲಿ ಇಬ್ಬರ ಮದುವೆಯಾದ ಮಹಿಳೆ - ಸಿಕ್ತು 29 ಲಕ್ಷ ರೂ ವಧುದಕ್ಷಿಣೆ

ಥೈಲ್ಯಾಂಡ್‌ನ 37 ವರ್ಷದ ಮಹಿಳೆಯೊಬ್ಬರು ಒಂದೇ ಮಂಟಪದಲ್ಲಿ ಇಬ್ಬರು ಆಸ್ಟ್ರೇಲಿಯಾದ ಪುರುಷರನ್ನು ವಿವಾಹವಾಗಿದ್ದಾರೆ. ಹಲವು ವರ್ಷಗಳ ಸಂಬಂಧದ ನಂತರ, ಕುಟುಂಬದವರ ಒಪ್ಪಿಗೆಯೊಂದಿಗೆ ಸ್ಥಳೀಯ ಸಂಪ್ರದಾಯದಂತೆ ಈ ಮದುವೆ ನಡೆದಿದೆ. ಆದರೆ ಥಾಯ್ ಕಾನೂನಿನಡಿ ಇದಕ್ಕೆ ಮಾನ್ಯತೆ ಇಲ್ಲ.

Read Full Story

05:02 PM (IST) Mar 03

Phone Tapping - ದೇವರಾಣೆ ಮಾಡಿ, ಡಿಕೆಶಿ ಫೋನ್ ಟ್ಯಾಪ್ ಮಾಡಿಲ್ಲವ? ಸಿಎಂಗೆ ಚಲವಾದಿ ಸವಾಲು, ಕಲಬುರಗಿ ಪ್ರಬುದ್ಧರ ಮೇಲೂ ವಾಗ್ದಾಳಿ!

ಫೋನ್ ಟ್ಯಾಪಿಂಗ್ ಆರೋಪದ ಕುರಿತು ಸಿಎಂ ಸಿದ್ದರಾಮಯ್ಯಗೆ ಚಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ. ತಾವು ಫೋನ್ ಟ್ಯಾಪ್ ಮಾಡಿಲ್ಲವೆಂದು ದೇವರ ಮೇಲೆ ಪ್ರಮಾಣ ಮಾಡುವಂತೆ ಆಗ್ರಹಿಸಿದ್ದು, ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಗುತ್ತಿಗೆದಾರರ ಸಮಸ್ಯೆ ಮತ್ತು ಕಟ್ಟಡ ಕುಸಿತದ ವಿಚಾರವಾಗಿ ವಾಗ್ದಾಳಿ 

Read Full Story

04:55 PM (IST) Mar 03

ಸಿಲಿಂಡರ್‌ನಲ್ಲಿನ ಗ್ಯಾಸ್‌ ಎಷ್ಟು ಖಾಲಿಯಾಗಿದೆ ಅಂತಾ ಗೊತ್ತಾಗೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್‌ ಟಿಪ್ಸ್‌!

How to Check LPG Gas Level at Home? Simple Cylinder Tricks ಎಲ್‌ಪಿಜಿ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂದು ತಿಳಿಯಲು ಯಾವುದೇ ಯಂತ್ರದ ಅಗತ್ಯವಿಲ್ಲ. ಒದ್ದೆ ಬಟ್ಟೆ, ಗ್ಯಾಸ್ ಜ್ವಾಲೆಯ ಬಣ್ಣ ಮತ್ತು ಸಿಲಿಂಡರ್ ಅಲ್ಲಾಡಿಸುವಂತಹ ಟ್ರಿಕ್ ಬಳಸಿ ಇದನ್ನ ಅಂದಾಜಿಸಬಹುದು.

Read Full Story

04:24 PM (IST) Mar 03

ಸತ್ಯನಾರಾಯಣ ಪೂಜೆ ಬೆನ್ನಲ್ಲೇ ಮಾಂಸದೂಟದ ಭರ್ಜರಿ ಔತಣ; ರಶ್ಮಿಕಾ-ವಿಜಯ್ ವಿರುದ್ಧ ನೆಟ್ಟಿಗರ ಗರಂ!

ಖ್ಯಾತ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಹೊಸ ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ನೆರವೇರಿಸಿದ್ದಾರೆ. ಆದರೆ, ಪೂಜೆಯ ದಿನದಂದೇ ಊರಿನವರಿಗೆ ಮಾಂಸದೂಟದ ಔತಣಕೂಟ ಏರ್ಪಡಿಸಿದ್ದು, ಇದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವೆಂದು ನೆಟ್ಟಿಗರಿಂದ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

04:19 PM (IST) Mar 03

ಫೋನ್ ಟ್ಯಾಪಿಂಗ್ ವಿವಾದ - ಅಂದಿನ ಸಿಎಂ ರಾಮಕೃಷ್ಣ ಹೆಗಡೆ ರಾಜೀನಾಮೆಯನ್ನು ಹೆಚ್‌ಡಿಕೆಗೆ ನೆನಪಿಸಿದ ಪೊನ್ನಣ್ಣ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದು,  ಈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕಾನೂನು ಸಲಹೆಗಾರ ಪೊನ್ನಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆಧಾರ ನೀಡಿದರೆ ತನಿಖೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ.  

Read Full Story

03:41 PM (IST) Mar 03

ಮಗನಿಗೆ ನಾನೇ ಅಪ್ಪನೂ ಆಗ್ತೇನೆಂದು ಆಗ ಹೇಳಿಬಿಟ್ಟೆ, ಆದ್ರೆ ಆಗಿದ್ದೇ ಬೇರೆ - Meghana Raj ನೋವಿನ ನುಡಿ

ಪತಿ ಚಿರು ಸರ್ಜಾ ನಿಧನದ ನಂತರ ಐದೂವರೆ ವರ್ಷಗಳಿಂದ ಮಗ ರಾಯನ್‌ಗೆ ತಂದೆ-ತಾಯಿಯಾಗಿರುವ ನಟಿ ಮೇಘನಾ ರಾಜ್, ಇದೀಗ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಸಿಂಗಲ್ ಮದರ್ ಆಗಿ ಪಡುವ ಕಷ್ಟ ಹಾಗೂ ಮರುಮದುವೆಯ ಕುರಿತು ತಮ್ಮ ತಂದೆ ಸುಂದರ್ ರಾಜ್ ಅವರ ಅಭಿಪ್ರಾಯವನ್ನು ಸಹ ಹಂಚಿಕೊಂಡಿದ್ದಾರೆ.
Read Full Story

03:39 PM (IST) Mar 03

Phone Tapping - ಡಿಕೆಶಿ ಮೇಲೆ ಕಣ್ಣಿಟ್ಟಿಲ್ಲ, ಇದೆಲ್ಲಾ ವಿಪಕ್ಷಗಳ ಹತಾಶೆಯ ಹೇಳಿಕೆ - ಸಿದ್ದರಾಮಯ್ಯ ಗರಂ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಮಾಡಿದ ಫೋನ್ ಟ್ಯಾಪಿಂಗ್ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬುದು 'ಹತಾಶೆಯ ಹೇಳಿಕೆ' ಎಂದರು.

Read Full Story

03:38 PM (IST) Mar 03

ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಕೆಂಡಾಮಂಡಲ, ಅಂಕಿಅಂಶ ಸಹಿತ ಸುದೀರ್ಫ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಿದ್ದರಾಮಯ್ಯ!

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ಆರೋಪವನ್ನು ತಳ್ಳಿಹಾಕಿದ CM ಸಿದ್ದರಾಮಯ್ಯ, ಇದು ವಿಪಕ್ಷಗಳ ಹತಾಶ ಹೇಳಿಕೆಯಾಗಿದ್ದು, ತಮ್ಮ ಹಿಂದಿನ ಅನುಭವದಿಂದಲೇ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ,  HDK ಸ್ವಾಮೀಜಿಗಳ ಫೋನ್ ಕದ್ದಾಲಿಸಿದ್ದರು ಎಂದು ಆರೋಪಿಸಿದ್ದಾರೆ.

Read Full Story

03:07 PM (IST) Mar 03

ಫುಟ್‌ಬಾಲ್ ಅಂಗಳಕ್ಕೆ ತಟ್ಟಿದ ಯುದ್ಧದ ಬಿಸಿ; ಅಮೆರಿಕದ ಮಣ್ಣಿನಲ್ಲಿ ಫಿಫಾ ವಿಶ್ವಕಪ್ ಆಡಲ್ಲ ಎಂದ ಇರಾನ್?

Iran Likely to Boycott FIFA World Cup 2026 ಅಮೆರಿಕ ಆತಿಥ್ಯದ 2026ರ ಫಿಫಾ ವಿಶ್ವಕಪ್‌ನಿಂದ ಹಿಂದೆ ಸರಿಯಲು ಇರಾನ್ ಚಿಂತನೆ ನಡೆಸಿದೆ. ಅಮೆರಿಕ-ಇಸ್ರೇಲ್ ದಾಳಿ ಮತ್ತು ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಉಂಟಾದ ರಾಜಕೀಯ ಉದ್ವಿಗ್ನತೆಯೇ ಇದಕ್ಕೆ ಕಾರಣ. 

Read Full Story

02:40 PM (IST) Mar 03

'ಆಂಟಿ ಲವರ್'​ ಎಂದೇ ಫೇಮಸ್​ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?

ಅಮೃತಧಾರೆ ಸೀರಿಯಲ್‌ನಲ್ಲಿ ಮಲ್ಲಿಗಿಂತ ಚಿಕ್ಕವನಾದ ಸುನಿ ಪಾತ್ರಧಾರಿ ಯಶ್ವಂತ್, ನಿಜ ಜೀವನದಲ್ಲೂ ಅನ್ವಿತಾ ಅವರಿಗಿಂತ ಚಿಕ್ಕವರು. ಈ ಕಾರಣಕ್ಕೆ 'ಆಂಟಿ ಲವರ್' ಎಂದು ಟ್ರೋಲ್ ಆಗುತ್ತಿರುವ ಯಶ್ವಂತ್, ಇದೀಗ ತಮ್ಮ ಸ್ನೇಹಿತೆಯೊಂದಿಗೆ ಮಾಡಿದ ಹಳೆಯ ರೀಲ್ಸ್‌ನಿಂದಾಗಿ ಮತ್ತೆ ವೈರಲ್ ಆಗಿದ್ದಾರೆ.
Read Full Story

02:14 PM (IST) Mar 03

ಸದಸ್ಯರ ತೀವ್ರ ವಿರೋಧದ ನಡುವೆಯೂ ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ಪಾಲಿಕೆ ನಿರ್ಧಾರ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ, ಸದಸ್ಯರ ವಿರೋಧದ ನಡುವೆಯೂ ಶೇ.3ರಷ್ಟು ತೆರಿಗೆ ಹೆಚ್ಚಳಕ್ಕೆ ನಿರ್ಧರಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ವಿಳಂಬ ಮತ್ತು ಅಧಿಕಾರಿಗಳು ಮಾಹಿತಿ ನೀಡದಿರುವ ಬಗ್ಗೆಯೂ ತೀವ್ರ ಚರ್ಚೆ ನಡೆಯಿತು.

Read Full Story

02:12 PM (IST) Mar 03

ಶರಾವತಿ ಮುಳುಗಡೆ ಸಂತ್ರಸ್ತರು, ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ - ಸಿಗಂದೂರು ಸೇತುವೆ ಮೇಲೆ ಪ್ರತಿಭಟನೆ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸೇತುವೆ ಮೇಲೆ ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ಅರಣ್ಯ ಭೂಮಿ ಸಾಗುವಳಿದಾರರು ತಮ್ಮ ಭೂಮಿಯ ಹಕ್ಕಿಗಾಗಿ ಪ್ರತಿಭಟನೆ ನಡೆಸಿದರು. ಮದನ್ ಗೋಪಾಲ್ ಸಮಿತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿದರು.

Read Full Story

02:12 PM (IST) Mar 03

ಹೊಳೆನರಸೀಪುರ ದೇಗುಲದ ರಥದ ಬಟ್ಟೆ ವಿಚಾರಕ್ಕೆ ಕಿತ್ತಾಡಿಕೊಂಡ ರೇವಣ್ಣ-ಶ್ರೇಯಸ್ ಪಟೇಲ್, ಬರೇ ಹೂವಿನ ಅಲಂಕಾರದಲ್ಲೇ ಸಂಪನ್ನಗೊಂಡ ರಥೋತ್ಸವ

ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವದಲ್ಲಿ ರಥದ ಬಟ್ಟೆಯ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಜಿಲ್ಲಾಡಳಿತದ ಮಧ್ಯಪ್ರವೇಶದಿಂದ, ಯಾವುದೇ ಬಟ್ಟೆ ಬಳಸದೆ ರಥವನ್ನು ಸಂಪೂರ್ಣವಾಗಿ ಹೂವುಗಳಿಂದ ಅಲಂಕರಿಸಿ ಉತ್ಸವವನ್ನು ಶಾಂತಿಯುತವಾಗಿ ನಡೆಸಲಾಯಿತು.  

Read Full Story

02:01 PM (IST) Mar 03

ಅಲಿಪ್ತ ನೀತಿ ಶಾಶ್ವತವಲ್ಲ - ನಮಗೆ ದೇಶದ ಹಿತಾಸಕ್ತಿ ಮೊದಲು, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಮುಖ್ಯ - ಸಿಟಿ ರವಿ ತಿರುಗೇಟು

ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ, ವಿದೇಶಾಂಗ ನೀತಿಯ ಕುರಿತು ಕಾಂಗ್ರೆಸ್‌ನ ಟೀಕೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರದ ಹಿತಾಸಕ್ತಿಯೇ ಮುಖ್ಯವಾಗಿದ್ದು, ಹಳೆಯ ಅಲಿಪ್ತ ನೀತಿಗೆ ಅಂಟಿಕೊಳ್ಳುವ ಅಗತ್ಯವಿಲ್ಲ ಎಂದರು..

Read Full Story

01:49 PM (IST) Mar 03

ಚಂದ್ರಗ್ರಹಣಕ್ಕಾಗಿ ರಥೋತ್ಸವದ ಸಮಯ ಬದಲಾದ್ರೂ ಕಾಣಿಸಿಕೊಂಡ ಗರುಡ; ಭಕ್ತರ ಹರ್ಷೋದ್ಘಾರ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೆಚ್ ಡಿ ಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯವನ್ನು ಬದಲಾಯಿಸಲಾಗಿತ್ತು. ಸಮಯ ಬದಲಾದರೂ, ರಥೋತ್ಸವದ ವೇಳೆ ಗರುಡ ಪಕ್ಷಿ ಕಾಣಿಸಿಕೊಂಡಿದ್ದು, ಇದನ್ನು ಪವಾಡವೆಂದು ಭಾವಿಸಿದ ಸಾವಿರಾರು ಭಕ್ತರು ಸಂತಸ ವ್ಯಕ್ತಪಡಿಸಿದರು.
Read Full Story

01:46 PM (IST) Mar 03

ಮೊದಲ ಬಾರಿಗೆ ಮಗನ ಜೊತೆ ಇನ್​ಸ್ಟಾದಲ್ಲಿ ಕಾಣಿಸಿಕೊಂಡ Sushma K. Rao - ಫ್ಯಾನ್ಸ್​ ಖುಷ್​

ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಪಾತ್ರದ ಮೂಲಕ ಮನೆಮಾತಾಗಿರುವ ನಟಿ ಸುಷ್ಮಾ ಕೆ. ರಾವ್, ಇತ್ತೀಚೆಗೆ ತಮ್ಮ ಪತಿ ಮತ್ತು ಮಗನನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಗನ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Read Full Story

01:12 PM (IST) Mar 03

ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ - 4 ಲಕ್ಷ ಕೇಳಿ 1 ಲಕ್ಷ ವಸೂಲಿ ವೇಳೆ ರೆಡ್‌ಹ್ಯಾಂಡಾಗಿ ಸೆರೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎ.ಕೆ.ನಾಗೇಂದ್ರಪ್ಪ ಹಾಗೂ ಮಧ್ಯವರ್ತಿಯೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 1 ಲಕ್ಷ ರೂ. ಪಡೆಯುವಾಗ ರೆಡ್‌ ಹ್ಯಾಂಡ್ ಆಗಿ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

Read Full Story

01:07 PM (IST) Mar 03

ನೆತನ್ಯಾಹು ದೊಡ್ಡ ಕೊಲೆಗಡುಕ - ಖಮೇನಿ ಸಾವಿಗೆ ಸಂತಾಪ ಸೂಚಿಸದ ಪ್ರಧಾನಿ ಮೋದಿ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದು, ಇದು ರಾಷ್ಟ್ರದ ಘನತೆಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ. 'ಎಪ್‌ಸ್ಟೀನ್ ಫೈಲ್' ಮೂಲಕ ಅಮೆರಿಕ ಇಸ್ರೇಲ್ ಪ್ರಧಾನಿ ಮೋದಿಯವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.

Read Full Story

01:05 PM (IST) Mar 03

Karna Serial - ವಿಲನ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೀಗೆ ಮೋಸ ಮಾಡೋದಾ ಈ ಸೀರಿಯಲ್​ ನಟಿಯರು?

ಕರ್ಣ ಸೀರಿಯಲ್​ನಲ್ಲಿ ಜೈಲುಪಾಲಾಗಿರುವ ಕರ್ಣನ ವಿಚಾರಣೆ ನಡೆಯುತ್ತಿದೆ. ಡಾಕ್ಟರ್ ನಿಧಿ ಲಾಯರ್ ಆಗಿ ವಾದಿಸುತ್ತಿದ್ದು, ಕರ್ಣ ನೀಡಿದ ಮಾತ್ರೆಯಿಂದ ಸತ್ತಿದ್ದಾರೆ ಎನ್ನಲಾದ ಮಹಿಳೆಯರನ್ನು ಕೋರ್ಟ್‌ಗೆ ಹಾಜರುಪಡಿಸುವ ಮೂಲಕ ಕಥೆಗೆ ರೋಚಕ ತಿರುವು ನೀಡಲಾಗಿದೆ.
Read Full Story

01:04 PM (IST) Mar 03

ಸಂಚಾರ ದಟ್ಟಣೆಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಟನಲ್ ರೋಡ್, ವೆಚ್ಚ ಲೆಕ್ಕಚಾರ ಮಾತ್ರ ಬಾಕಿ!

ಬೆಂಗಳೂರಿನ ಗೋರಗುಂಟೆಪಾಳ್ಯ ಜಂಕ್ಷನ್‌ನಲ್ಲಿನ ತೀವ್ರ ಸಂಚಾರ ದಟ್ಟಣೆಯನ್ನು ನಿವಾರಿಸಲು, ನಗರ ನಿಗಮವು ಸಣ್ಣ ಸುರಂಗ ರಸ್ತೆ ನಿರ್ಮಾಣದ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ದೀರ್ಘಾವಧಿ ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಅಧ್ಯಯನ ನಡೆಯುತ್ತಿದೆ.  

Read Full Story

12:28 PM (IST) Mar 03

CCB raid on apartment - ದೇವತೆಗಳ ಫೋಟೋ ಬಳಸಿ ಡ್ರಗ್ಸ್ ದಂಧೆ, ಕೇರಳ ಖದೀಮರು ಬಂಧನ, ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!

ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 10 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಕೇರಳ ಮೂಲದ ಯುವಕ-ಯುವತಿಯನ್ನು ಬಂಧಿಸಲಾಗಿದೆ.

Read Full Story

12:02 PM (IST) Mar 03

Shivamogga - ರಂಜಾನ್ ದೇಣಿಗೆಗಾಗಿ ಬೀದಿ ಕಾಳಗ; ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಂಜಾನ್ ಹಬ್ಬದ ದೇಣಿಗೆ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿದೆ. ಪ್ರತಿ ಕುಟುಂಬಕ್ಕೆ ₹1000 ದೇಣಿಗೆ ನಿಗದಿಪಡಿಸಿದ್ದನ್ನು ವಿರೋಧಿಸಿದಾಗ ಈ ಘರ್ಷಣೆ ಉಂಟಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.

Read Full Story

11:36 AM (IST) Mar 03

Davanagere - ಕೋಟ್ಯಂತರ ರೂಪಾಯಿ ಆಸ್ತಿ, ಐಷಾರಾಮಿ ಜೀವನ ತೊರೆದು ಸನ್ಯಾಸತ್ವ ಸ್ವೀಕರಿಸಿದ ದಂಪತಿ, ಇಬ್ಬರು ಮಕ್ಕಳು!

Business couple takes sanyasa ದಾವಣಗೆರೆಯ ಪ್ರಖ್ಯಾತ  ಉದ್ಯಮಿ ದಂಪತಿ ಭರತ್ ಜೈನ್ ಆರತಿ, ಇಬ್ಬರು ಉನ್ನತ ಶಿಕ್ಷಿತ ಯುವತಿಯರೊಂದಿಗೆ ಐಷಾರಾಮಿ ಜೀವನ ತ್ಯಜಿಸಿ ಜೈನ ಸನ್ಯಾಸತ್ವ ಸ್ವೀಕಾರ. ಈಗಾಗಲೇ ಸನ್ಯಾಸ ಸ್ವೀಕರಿಸಿರುವ ತಮ್ಮ ಮಕ್ಕಳ ಹಾದಿಯಲ್ಲೇ ಸಾಗುತ್ತಿರುವ ಈ ಪೋಷಕರ ನಿರ್ಧಾರ ಗಮನ ಸೆಳೆದಿದೆ.

Read Full Story

11:31 AM (IST) Mar 03

1ನೇ ತರಗತಿ ಪ್ರವೇಶ ಬಗೆಹರಿಯದ ಗೊಂದಲ, 2.30 ಲಕ್ಷ ಮಕ್ಕಳಿಗೆ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಭೀತಿ!

ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಿರುವ 6 ವರ್ಷದ ವಯೋಮಿತಿಯಲ್ಲಿ 90 ದಿನಗಳ ಸಡಿಲಿಕೆ ನೀಡುವಂತೆ ಯುಕೆಜಿ ಪೋಷಕರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ. ಜೂನ್ 1ರ ಕಟ್-ಆಫ್ ದಿನಾಂಕದಿಂದಾಗಿ ಸುಮಾರು 2.30 ಲಕ್ಷ ಮಕ್ಕಳು ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ.

Read Full Story

11:19 AM (IST) Mar 03

ಪ್ರೇಯಸಿಯಿಂದ ಫೋನು ಇಲ್ಲ, ಮೆಸೇಜು ಇಲ್ಲ; ಮಂಗಳೂರಿನ ಯುವಕ ವಿದೇಶದಲ್ಲಿ ಆತ್ಮ*ಹತ್ಯೆ

ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಹೋಗಿದ್ದ ಪುನೀತ್ ಪೂಜಾರಿ , ಒಮನ್‌ನಲ್ಲಿ  ಕೆಲಸ ಮಾಡಿಕೊಂಡಿದ್ದನು. ಕಳೆದ ಕೆಲವು ದಿನಗಳಿಂದ ಯುವತಿ ಫೋನ್‌ ಕಾಲ್‌ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಮೆಸೇಜ್ ಸಹ ಕಳುಹಿಸುತ್ತಿರಲಿಲ್ಲ.

Read Full Story

10:48 AM (IST) Mar 03

ಕಲಬುರಗಿಯಲ್ಲಿ ಕಳ್ಳಿಯರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ - ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಲೇಡಿ ಗ್ಯಾಂಗ್

ಕಲಬುರಗಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ನೋಡಿ ಕಳ್ಳತನ ಮಾಡುವ ಕಳ್ಳಿಯರ ಗ್ಯಾಂಗೊಂದು ಕಾರ್ಯಾಚರಿಸುತ್ತಿದ್ದು, ಈ ಕಳ್ಳಿಯರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳಿಯರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ..

Read Full Story

10:07 AM (IST) Mar 03

ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ - ಕಾಂಗ್ರೆಸ್ ಶಾಸಕ

ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಸಿಡಿ ಬಿಡಿಸಿದ್ದೆ ಕುಮಾರಸ್ವಾಮಿ. ಎಂತೆಂತೊರೊ ಜೈಲಿಂದ ಹೊರ ಬಂದಿದ್ದಾರೆ. ಮಾಜಿ ಪ್ರಧಾನಿ ಮನಸ್ಸು ಮಾಡಿದ್ರೆ ಬಿಡಿಸಬಹುದಿತ್ತು. ಷಡ್ಯಂತ್ರ ಮಾಡಿ ಪ್ರಜ್ವ‌ಲ್‌ನ ಜೈಲಿಗೆ ಹಾಕಿಸಿದ್ದಾರೆ

Read Full Story

09:41 AM (IST) Mar 03

Tumakuru - ಸಾಲ ಪಡೆದಿದ್ದಾನೆಂದು ಊರು ತುಂಬೆಲ್ಲಾ ಪೋಸ್ಟರ್ ಅಂಟಿಸಿ ವ್ಯಕ್ತಿಗೆ ಅವಮಾನ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾಮದಲ್ಲಿ, ಸಿದ್ದರಾಜಯ್ಯ ಎಂಬುವವರು ಸಾಲ ಪಾವತಿಸಿಲ್ಲ ಎಂದು ಊರೆಲ್ಲಾ ಪೋಸ್ಟರ್ ಅಂಟಿಸಿ ಅವಮಾನಿಸಲಾಗಿದೆ. ಕೃತ್ಯದ ಹಿಂದೆ, ತಮ್ಮಿಂದ ಹಣ ಪಡೆದು ವಂಚಿಸಿದ್ದ ಚಿಟ್ಸ್ ಕಂಪನಿ ಮ್ಯಾನೇಜರ್ ಗೌತಮ್ ರಾಜ್ ಕೈವಾಡವಿದೆ ಎಂದು ಸಿದ್ದರಾಜಯ್ಯ ಆರೋಪಿಸಿದ್ದಾರೆ.

Read Full Story

09:39 AM (IST) Mar 03

ರಾಮನಗರದಲ್ಲಿ ಕುಖ್ಯಾತ ಅಂತರಾಜ್ಯ ವಾಹನ ಕಳ್ಳರ ಬಂಧನ - 2 ಗೂಡ್ಸ್, 3 ಕಾರು 10 ಬೈಕ್, ವಾಹನಗಳ ಜಪ್ತಿ

ರಾಮನಗರ ಗ್ರಾಮಾಂತರ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ, ಇಬ್ಬರು ಕುಖ್ಯಾತ ಅಂತರಾಜ್ಯ ವಾಹನ ಕಳ್ಳರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 15ಕ್ಕೂ ಹೆಚ್ಚು ಕಳವು ಮಾಡಲಾಗಿದ್ದ ವಾಹನಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

Read Full Story

09:24 AM (IST) Mar 03

ಇಲ್ಲೂ ಹಿಂಸೆ ಆದೀತು ಹುಷಾರ್‌ - ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್

ಇರಾನ್‌- ಅಮೆರಿಕ- ಇಸ್ರೇಲ್‌ ಸಂಘರ್ಷ ತೀವ್ರವಾದ ಬೆನ್ನಲ್ಲೇ ‘ಇರಾನ್‌ ಪರವಾದ ಪ್ರಚೋದನಾಕಾರಿ ಭಾಷಣ, ಹೇಳಿಕೆಗಳ ಬಗ್ಗೆ ನಿಗಾ ವಹಿಸಿ. ಇರಾನ್‌ ಪರವಾದ ವಿದೇಶಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಿ’ ಎಂದು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

Read Full Story

More Trending News