ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ 2-ಬಿ ಪ್ರವರ್ಗದವರಿಗೆ (ಮುಸ್ಲಿಮರಿಗೆ) ಶೇ.4ರಷ್ಟು ಮೀಸಲಾತಿ ಕಲಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮ ಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಬುಧವಾರ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಅಲ್ಲದೆ, ಏ.15 ರಂದು ರಾಜ್ಯ ಸರ್ಕಾರಕ್ಕೆ ವಿಧೇ ಯಕ ವಾಪಸ್ ಕಳುಹಿಸಿ ನಾನು ತಿಳಿಸಿದ್ದ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ವಿಧೇಯಕವು ಸಾಂವಿಧಾನಿಕ ಬಿಕಟ್ಟು ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಮುಸ್ಲಿಮರಿಗೆ 2 ಕೋಟಿ ರು.ವರೆಗಿನ ಕಾಮಗಾರಿಗಳಲ್ಲಿ ಹಾಗೂ ವಿವಿಧ ಇಲಾಖೆ, ನಿಗಮ-ಮಂಡಳಿಗಳಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ 1 ಕೋಟಿ ರು.ವರೆಗೆ ಮೀಸಲಾತಿ ಕಲ್ಪಿಸಲು ತಿದ್ದುಪಡಿ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು.
09:00 PM (IST) May 29
ಗೋವಾಗೆ ಒಮ್ಮೆಯಾದರೂ ಹೋಗಬೇಕೆಂದು ಬಹಳಷ್ಟು ಜನರು ಆಸೆಪಡುತ್ತಾರೆ. ವಿಶೇಷವಾಗಿ ಯುವಕರು ಗೋವಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಗೋವಾದಲ್ಲಿ ಪ್ರವಾಸಿಗರಿಗೆ ಎದುರಾಗುವ ಪ್ರಮುಖ ಸಮಸ್ಯೆಗಳಲ್ಲಿ ಪ್ರಯಾಣವೂ ಒಂದು.
08:59 PM (IST) May 29
ನಫೀಸಾ ಜೋಸೆಫ್ 1997 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಬೆಂಗಳೂರಿನ ಬೆಡಗಿ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದರು.
08:56 PM (IST) May 29
08:25 PM (IST) May 29
08:20 PM (IST) May 29
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗೊಂದಿಬಸವನಹಳ್ಳಿಯ ರೊಂಡೆಕೆರೆಯ ಏರಿ ಒಡೆದು ಹೋಗುವ ಸ್ಥಿತಿ ತಲುಪಿದೆ. 15 ಮೀಟರ್ ನಷ್ಟು ಉದ್ದಕ್ಕೆ ಏರಿ ಬಿರುಕು ಬಿಟ್ಟಿದ್ದು, ಕೆರೆ ತುಂಬಿದಂತೆ ಯಾವುದೇ ಕ್ಷಣದಲ್ಲಿ ಏರಿ ಒಡೆದು ಹೋಗುವ ಆತಂಕ ಎದುರಾಗಿದೆ.
07:50 PM (IST) May 29
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಮಾರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗ ಇಬ್ಬರು ಕಾನ್ಸ್‌ಟೇಬಲ್‌ಗಳು ಸಿಕ್ಕಿಬಿದ್ದಿದ್ದು,ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
07:42 PM (IST) May 29
07:34 PM (IST) May 29
ಐಪಿಎಲ್ 2025 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವ ಉದಯೋನ್ಮುಖ ತಾರೆಯರನ್ನು ನೋಡೋಣ; ಪ್ರಸ್ತುತ ಸೀಸನ್ನಿನಲ್ಲಿ ಐಪಿಎಲ್-ಗೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ:
07:28 PM (IST) May 29
07:19 PM (IST) May 29
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಎರಡು ದಿನದ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅನುಮಾನದ ಮೇರೆಗೆ ಪೊಲೀಸರು ತನಿಖೆ ನಡೆಸಿ ದಂಪತಿಗಳು ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ.
07:05 PM (IST) May 29
2025ರ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಕೆಲ ಮಹತ್ವದ ಬದಲಾವಣೆಯಾಗಿದೆ.
06:49 PM (IST) May 29
06:41 PM (IST) May 29
ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮೊದಲು ಇದೀಗ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ಲೇ ಆಫ್ ಚಿಂತೆ ಕಾಡುತ್ತಿದೆಯಾ? ಇದುವರೆಗಿನ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಹೇಗಿದೆ? ಪ್ಲೇ ಅಫ್ ಸುತ್ತು ಆರ್‌ಸಿಬಿಗೆ ಕಠಿಣವಾಗುತ್ತಾ?
06:26 PM (IST) May 29
ಚಾಲಕರಿಗೆ ಹೃದಯಘಾತವಾಗುತ್ತಿರುವ ಘಟನೆಗಳೂ ಹೆಚ್ಚುತ್ತಿದ್ದು, ಬಸ್ ಪ್ರಯಾಣವೂ ಭಯಪಡುವಂತಾಗಿದೆ. ಇದೀಗ ಇನ್ನೊಂದು ಘಟನೆಯಲ್ಲಿ ವಾಹನ ಚಲಾಯಿಸುವಾಗಲೇ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ!
06:05 PM (IST) May 29
WhatsApp ಉಚಿತ ಬಳಕೆ ಇನ್ನಿಲ್ಲ! ಪ್ರತಿ ಮೆಸೇಜ್‌ಗೂ ದುಬಾರಿ ಶುಲ್ಕ ತೆರಬೇಕು! ಉಚಿತ ದಿನಗಳು ಮುಗಿದವು! ಹೌದು, ಮೆಟಾ ಒಡೆತನದ WhatsApp ತಮ್ಮ ಪ್ಲಾಟ್‌ಫಾರ್ಮ್ ಬಳಕೆಗೆ ಶುಲ್ಕ ಘೋಷಿಸಿದೆ. ಪ್ರತಿ ಮೆಸೇಜ್‌ಗೆ ಎಷ್ಟು ಖರ್ಚಾಗುತ್ತದೆ?
05:50 PM (IST) May 29
05:46 PM (IST) May 29
05:44 PM (IST) May 29
ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರು ಪಂದ್ಯದ ನಡುವೆ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ಇಬ್ಬರು ನೂಕಾಟ, ತಳ್ಳಾಟ ನಡೆಸಿದ್ದಾರೆ. ಲೈವ್ ಪಂದ್ಯದಲ್ಲೇ ಈ ಘಟನೆ ನಡೆದಿದೆ.
05:43 PM (IST) May 29
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಕಮಲ್ ಹಾಸನ್ ಅವರ ಕನ್ನಡ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ.
05:41 PM (IST) May 29
ಭಾರತದಲ್ಲಿ ಒಂದು ಸಣ್ಣ ಸ್ಟಾರ್ಟ್‌ಅಪ್ ಆಗಿ ಶುರುವಾದ OYO ಈಗ ಜಾಗತಿಕವಾಗಿ ಬೆಳೆದಿದೆ. ಭಾರಿ ಲಾಭ ಗಳಿಸುತ್ತಿರುವ OYO ಶೀಘ್ರದಲ್ಲೇ IPOಗೆ ಹೋಗಲು ಸಿದ್ಧವಾಗುತ್ತಿದೆ. ಈ ಹೊತ್ತಿನಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
05:32 PM (IST) May 29
ಪ್ರಕೃತಿಯೇ ವಿಸ್ಮಯಗಳಲ್ಲಿ ಒಂದು ಮಹಾಬಲಿ ಕಪ್ಪೆ. ನೇರಳೆ ಕಪ್ಪೆ ಎಂದೂ ಕರೆಯುವ ಇದು ವರ್ಷಕ್ಕೊಮ್ಮೆ ಮಾತ್ರ ಭೂಮಿಯಿಂದ ಮೇಲೆ ಬರುತ್ತದೆ. ಕೇರಳದ ಈ ಕಪ್ಪೆಯ ರೋಚಕ ಸ್ಟೋರಿ ಇಲ್ಲಿದೆ...
05:06 PM (IST) May 29
05:04 PM (IST) May 29
ಮಗುವಾದ ಮೇಲೆ ಇನ್ನಷ್ಟು ಹಾಟ್ ಆಗಿರುವ ನಟಿ ಆಲಿಯಾ ಭಟ್ ತಮ್ಮ ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಟಿ ಹೇಳಿದ್ದೇನು?
04:55 PM (IST) May 29
04:47 PM (IST) May 29
ಮುಂಬೈನ ಗೂಂಡಾ ಜಗತ್ತನ್ನು ನಡುಗಿಸಿದ್ದ ಪ್ರಸಿದ್ಧ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತ (ACP) ಹುದ್ದೆಗೆ ಬಡ್ತಿ ದೊರೆತಿದೆ. ನಾಯಕ್, 85ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಿ ಮುಂಬೈನ ಅನೇಕ ಕುಖ್ಯಾತ ಗೂಂಡಾಗಳನ್ನು ಶಾಶ್ವತವಾಗಿ ತಡೆದಿದ್ದಾರೆ.
04:44 PM (IST) May 29
ಹೊಸ ಖರೀದಿಗಳು, ಅಮೂಲ್ಯ ಲೋಹದ ಬೆಲೆಯಲ್ಲಿ ಶೇ. 30 ರಷ್ಟು ಹೆಚ್ಚಳ ಮತ್ತು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಇವೆಲ್ಲವೂ ಬೆಲೆ ಏರಿಕೆಗೆ ಕಾರಣವಾಯಿತು.
04:38 PM (IST) May 29
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಟೆಕ್ಕಿ ಭರತ್ ಎಂಬಾತ, ಮದುವೆ ಆಮಿಷವೊಡ್ಡಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿದ್ದ ಯುವತಿ ಕುಟುಂಬ ಚೆನ್ನಮ್ಮನಕೆರೆ ಪೊಲೀಸ್ ಠಾಣೆಗೆ ಭರತ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ.
04:20 PM (IST) May 29
IAF ಮುಖ್ಯಸ್ಥರ ಪ್ರಕಾರ, ವಿಳಂಬವು ತೇಜಸ್ Mk1A ಯುದ್ಧ ವಿಮಾನ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳ ಮೇಲೆ ಪರಿಣಾಮ ಬೀರಿದೆ, ಮೂರು ವರ್ಷಗಳ ಹಿಂದೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ ಇವು ವಿತರಣೆಯಾಗದೆ ಉಳಿದಿವೆ.
03:59 PM (IST) May 29
ಮೇ ತಿಂಗಳು ಅಂತ್ಯಗೊಳ್ಳುತ್ತಿದೆ. ಮುಂಗಾರು ಮಳೆ ಅಬ್ಬರಿಸುತ್ತಿದೆ. ಮದುವೆ ಸಮಾರಂಭ, ಕಾರ್ಯಕ್ರಮಗಳು ಸೀಸನ್ ಮುಗಿಯುತ್ತಿದ್ದಂತೆ ಇತ್ತ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿ ಇಂದು(ಮೇ.29) ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
03:54 PM (IST) May 29
03:50 PM (IST) May 29
03:25 PM (IST) May 29
03:16 PM (IST) May 29
ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಲೈಫ್ ಸ್ಟೈಲ್ ತುಂಬಾನೆ ದುಬಾರಿಯಾಗಿದೆ. ಆಕೆ ಧರಿಸುವ ಬಟ್ಟೆ, ಕ್ಯಾರಿ ಮಾಡೋ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ.
03:07 PM (IST) May 29
03:06 PM (IST) May 29
ವೀರ್ಯ ದಾನ ಮಾಡಿ ಮಕ್ಕಳನ್ನು ಪಡೆಯುವುದು ಭಾರತದಲ್ಲಿಯೂ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ವ್ಯಕ್ತಿಯ ವೀರ್ಯದಿಂದ ಹುಟ್ಟಿದ 10 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ!
02:54 PM (IST) May 29
02:48 PM (IST) May 29
ಸುಪ್ರೀಂ ಕೋರ್ಟ್ ಜಸ್ಟೀಸ್ ಅರ್ಜಿ ವಿಚಾರಣೆ ವೇಳೆ ಲಾಯರ್‌ಗೆ ನೀಡಿದ ಸಲಹೆ ಇದೀಗ ಚರ್ಚೆಯಾಗುತ್ತಿದೆ. ಕೋರ್ಟ್‌ನಲ್ಲಿ ನೀವು ಇಷ್ಟು ಪ್ರಾಮಾಣಿಕರಾಗಿ ಇರಬೇಡಿ, ಸಣ್ಣ ಸಣ್ಣ ಸುಳ್ಳು ಹೇಳಬಹುದು ಎಂದಿದ್ದಾರೆ. ಅಷ್ಟಕ್ಕೂ ಲಾಯರ್‌ಗೆ ಸುಳ್ಳು ಹೇಳಿ ಎಂದಿದ್ದೇಕೆ?
02:00 PM (IST) May 29
2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿದ್ದು, ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಸಲಿವೆ. ಮುಲ್ಲಾನಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆಯೇ ಎಂಬ ಆತಂಕ ಮನೆಮಾಡಿದೆ.
02:00 PM (IST) May 29
ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್, ತಮ್ಮ ನಿರ್ದೇಶನಕ್ಕೆ ಕೊಂಚ ಬ್ರೇಕ್ ಕೊಟ್ಟು ತಮ್ಮ ಬಾಯ್ ಫ್ರೆಂಡ್ ಜೊತೆ ಈ ಕೂಲ್ ವೆದರ್’ನಲ್ಲಿ ಜಾಲಿ ರೈಡ್ ಮಾಡ್ತಿದ್ದಾರೆ.
01:56 PM (IST) May 29
ಎಂಎಲ್‌ಸಿ ಕವಿತಾ ಅವರ ವರ್ತನೆ ತೆಲಂಗಾಣ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಆರ್‌ಎಸ್-ಬಿಜೆಪಿ ವಿಲೀನ ಮಾಡಲು ಕುತಂತ್ರ ನಡೆದಿವೆ ಎಂಬ ಅವರ ಹೊಸ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿವೆ.