Published : May 28, 2025, 07:21 AM ISTUpdated : May 28, 2025, 10:26 PM IST

Karnataka News Live: ಯಾವ ವೃತ್ತಿಯ ಗಂಡಂದಿರು ಮೋಸ ಮಾಡ್ತಾರೆ?

ಸಾರಾಂಶ

ಬೆಂಗಳೂರು (ಮೇ.26): ರಾಜ್ಯದಲ್ಲಿ ಮುಂಗಾರು ರಣಾರ್ಭಟ ತೋರಿರುವ ನಡುವೆ ದಕ್ಷಿಣ ಕನ್ನಡದ ಮಂಗಳೂರಲ್ಲಿ ಮತ್ತೊಮ್ಮೆ ನೆತ್ತರು ಹರಿದಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಬೆನ್ನಲ್ಲಿಯೇ ಇದೀಗ ಪಿಕಪ್‌ ವಾಹನ ಚಾಲಕನಾಗಿದ್ದ ಹಾಗೂ ಮಸೀದಿ ಸಮಿತಿಯೊಂದರ ಕಾರ್ಯದರ್ಶಿ ಆಗಿದ್ದ ರಹೀಮ್‌ ಎನ್ನುವವರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

10:26 PM (IST) May 28

ಯಾವ ವೃತ್ತಿಯ ಗಂಡಂದಿರು ಮೋಸ ಮಾಡ್ತಾರೆ?

ಹೆಂಡತಿಗೆ ಮೋಸ ಮಾಡುವ ಗಂಡಂದಿರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾರೆ ಅನ್ನೋದನ್ನ ನಿಜವಾದ ಮಾಹಿತಿಯೊಂದಿಗೆ ಈ ಪೋಸ್ಟ್‌ನಲ್ಲಿ ನೋಡಬಹುದು.

Read Full Story

08:37 PM (IST) May 28

ಮಸಲಾ ದೃಶ್ಯ ಇಲ್ಲ, ಬಿಗ್ ಬಜೆಟ್ ಕೂಡ ಇಲ್ಲ… ಹೃದಯಸ್ಪರ್ಶಿ ಕಥೆಗಳಿಂದಲೇ ಗೆದ್ದ ಸಿನಿಮಾಗಳಿವು

ತನ್ನ ಸರಳ ಕಥೆಯಿಂದಲೇ ಚಿತ್ರಮಂದಿರದಲ್ಲಿ ಧೂಳಿಬ್ಬೆಸಿದ ಸಿನಿಮಾಗಳು ಹಲವು. ಅವುಗಳಲ್ಲಿ ಕೆಲವು ನೀವು ನೋಡಲೇಬೇಕಾದ ಸಿನಿಮಾಗಳಿವೆ. ಇದರಲ್ಲಿ ಕನ್ನಡ ಸಿನಿಮಾ ಕೂಡ ಸೇರಿದೆ..

Read Full Story

06:48 PM (IST) May 28

ಪಾಂಡಿಚೇರಿಯಲ್ಲೂ ಮದ್ಯದ ದರ ಏರಿಕೆ - ಪ್ರವಾಸಿ ಕುಡುಕರಿಗೆ ಬಿಗ್ ಶಾಕ್!

ಸರ್ಕಾರಕ್ಕೆ ದೊಡ್ಡ ಆದಾಯ ತರುವುದೇ ಮದ್ಯ ಮಾರಾಟ. ಪಾಂಡಿಚೇರಿಯಲ್ಲಿ ಮದ್ಯ ಮಾರಾಟ ಮುಖ್ಯ ಆದಾಯದ ಮೂಲವಾಗಿದ್ದು, ಅಬಕಾರಿ ಇಲಾಖೆ ಮದ್ಯದ ಬೆಲೆಯನ್ನು ಹೆಚ್ಚಿಸಿ ಪ್ರವಾಸಿ ಯುವಕರಿಗೆ ಆಘಾತ ನೀಡಿದೆ.

Read Full Story

06:26 PM (IST) May 28

ಬೆಂಗಳೂರು ಜನರ ಕಸಕ್ಕೆ ಡಬಲ್ ತೆರಿಗೆ; ಅನಾಗರಿಕ ನಿರ್ಧಾರ ಹಿಂಪಡೆಯಲು ಆರ್.ಅಶೋಕ ಆಗ್ರಹ!

ಬೆಂಗಳೂರಿನಲ್ಲಿ ಕಸದ ಸೆಸ್ ಜೊತೆಗೆ ಬಳಕೆದಾರರ ಶುಲ್ಕ ವಿಧಿಸುವುದನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ಖಂಡಿಸಿದ್ದಾರೆ. ಡಬಲ್ ತೆರಿಗೆಯನ್ನು ಅನಾಗರಿಕ ಎಂದು ಕರೆದ ಅವರು, ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಚದರ ಅಡಿಗೆ ತಕ್ಕಂತೆ ಶುಲ್ಕ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

Read Full Story

06:19 PM (IST) May 28

ಬಾಲಿವುಡ್ ನಟ ಹೃತಿಕ್ ರೋಶನ್‌ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ; ಬಜೆಟ್ ಎಷ್ಟು, ನಾಯಕಿ ಯಾರು..?

ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ..

Read Full Story

06:14 PM (IST) May 28

ಹ್ಯಾಪಿ ಬರ್ತ್​ಡೇ ಶನೈಶ್ಚರ ಎನ್ನುತ್ತಾ ಕೇಕ್ ಕತ್ತರಿಸಿ ಹುಟ್ಟುಹಬ್ಬ! ಅಪ್ಪ,ಮಾವ ಗೈರು; ಅಮ್ಮ ಹಾಜರ್​!

ಶನೈಶ್ಚರ ದೇವರಿಗೆ ಕೇಕ್​ ಕತ್ತರಿಸಿ ಹ್ಯಾಪಿ ಬರ್ತ್​ಡೇ ಎನ್ನುತ್ತಾ ಹುಟ್ಟುಹಬ್ಬ ಆಚರಿಸಲಾಗಿದೆ! ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನಿದು ವಿಷ್ಯ?

Read Full Story

05:59 PM (IST) May 28

ಪ್ರೀತಿಸಿ ಮದುವೆಯಾದ ಪತ್ನಿಗೆ ಚಾಕು ಇರಿತ; ಸಹಾಯಕ್ಕಾಗಿ ಬೇಡಿ ಪ್ರಾಣಬಿಟ್ಟ ಹೆಂಡತಿ!

ಚಿಕ್ಕಮಗಳೂರಿನಲ್ಲಿ ಕಳೆದ 4 ವರ್ಷದ ಹಿಂದೆ  ಪತಿಯೊಬ್ಬ ತನ್ನ ಪತ್ನಿಯನ್ನು 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕಳೆದೊಂದು ವರ್ಷದಿಂದ ದಂಪತಿಗಳ ಮಧ್ಯೆ ಜಗಳ ನಡೆಯುತ್ತಿದ್ದು, ಪತಿಯು ಪತ್ನಿಗೆ ಡಿವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

Read Full Story

05:58 PM (IST) May 28

ಸಿಕ್‌ ಲೀವ್‌ ಅಪ್ಲೈ ಮಾಡಿ ಮಡಿಕೇರಿಯಲ್ಲಿ ಜಾಲಿ ಟ್ರಿಪ್‌, ರೆಡ್‌ ಹ್ಯಾಂಡ್‌ ಆಗಿ ಎಚ್‌ಆರ್‌ಗೆ ಸಿಕ್ಕಿಬಿದ್ದ!

ವಾರಾಂತ್ಯದ ಟ್ರಿಪ್‌ಗಾಗಿ ಸುಳ್ಳು ಕಾರಣ ನೀಡಿ ರಜೆ ಪಡೆದ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವಿಡಿಯೋದಿಂದಾಗಿ ಎಚ್‌ಆರ್‌ ಬಳಿ ಸಿಕ್ಕಿಬಿದ್ದ ಘಟನೆ ನಡೆದಿದೆ. 

Read Full Story

05:53 PM (IST) May 28

ಬಾಲನಟರಾಗಿ ಸಿನಿಮಾಗೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಗಳಾಗಿ ಮಿಂಚಿದ ನಟರು

ಬಾಲಿವುಡ್ ನ ಅದೆಷ್ಟೋ ಸ್ಟಾರ್ ನಟರು ತಾವು ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಬಾಲನಟರಾಗಿ ವೀಕ್ಷಕರ ಮನ ಗೆದ್ದಿದ್ದರು.

Read Full Story

05:23 PM (IST) May 28

ಭಾರತದಲ್ಲಿ ಐಸ್ ಕ್ರೀಮ್ ಮಾರುತ್ತಿರುವ ಪಾಕಿಸ್ತಾನದ ಮಾಜಿ ಸಂಸದ... ಯಾಕೆ ಗೊತ್ತಾ?

ಪಾಕಿಸ್ತಾನದ ಮಾಜಿ ಸಂಸದರೊಬ್ಬರು ಭಾರತದಲ್ಲಿ ಐಸ್‌ಕ್ರೀಮ್‌ ಮಾರುತ್ತಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ, ಆಸ್ತಿಪಾಸ್ತಿ ಬಿಟ್ಟು ಭಾರತದಲ್ಲಿ ಏಕೆ ವಾಸಿಸುತ್ತಿದ್ದಾರೆ? ಅವರು ಐಸ್ ಕ್ರೀಮ್ ಮಾರುತ್ತಿರುವುದು ಏಕೆ? ಇಲ್ಲಿ ತಿಳಿದುಕೊಳ್ಳೋಣ.

Read Full Story

05:07 PM (IST) May 28

ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹69 ರಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

2025-26ರ ಮಾರುಕಟ್ಟೆ ಋತುವಿನಲ್ಲಿ ವಿವಿಧ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಾಮಾನ್ಯ ಭತ್ತ, ತೊಗರಿ, ಉದ್ದಿನ ಬೇಳೆ ಮತ್ತು ಹೆಸರುಕಾಳು ಸೇರಿದಂತೆ ಹಲವಾರು ಬೆಳೆಗಳ MSP ಹೆಚ್ಚಳವಾಗಿದೆ.
Read Full Story

04:59 PM (IST) May 28

ಮಕ್ಕಳ ಪ್ರಾಣವನ್ನೇ ತೆಗೆಯಬಹುದು ಚಾಕೋಲೆಟ್​! ಪಾಲಕರಿಗೆ ಪಾಠ ಕಲಿಸೋ ವಿಡಿಯೋ

ಮಕ್ಕಳಿಗೆ ಇಷ್ಟ ಎಂದು ಚಾಕೋಲೆಟ್​, ಪೆಪ್ಪರ್​ಮಿಂಟ್​ ಕೊಟ್ಟು ಸುಮ್ಮನಾಗುತ್ತೀರಾ? ಇಲ್ಲಿದೆ ನೋಡಿ ಆಘಾತಕಾರಿ ವಿಡಿಯೋ. ಪ್ರತಿಯೊಬ್ಬ ಪಾಲಕರೂ ತಿಳಿಯಲೇಬೇಕಾದ ವಿಡಿಯೋ ಇದು.

Read Full Story

04:54 PM (IST) May 28

ಪ್ಲೇ ಆಫ್‌ ಮ್ಯಾಚ್‌ನಲ್ಲಿ ಸಪ್ರೈಸ್‌ಗೆ ರೆಡಿಯಾಗಿ - ಜಿತೇಶ್ ಶರ್ಮಾ ಹೀಗಂದಿದ್ದೇಕೆ?

ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಪ್ಲೇ ಆಫ್‌ಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

Read Full Story

04:30 PM (IST) May 28

ಮಾನವ ಮೂಳೆಯಿಂದ ನಿರ್ಮಿತವಾದ 28 ಕೋಟಿ ಮೌಲ್ಯದ ಡ್ರಗ್ ಜೊತೆ ಸಿಕ್ಕಿಬಿದ್ದ 21ರ ಯುವತಿ

ಮಾನವ ಮೂಳೆಯಿಂದ ನಿರ್ಮಿತವಾದ ಭಯಾನಕ ಮಾದಕ ದ್ರವ್ಯವೊಂದನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಶ್ರೀಲಂಕಾದ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ

Read Full Story

04:15 PM (IST) May 28

ಲಿಫ್ಟ್‌ನಲ್ಲಿ ಸಿಲುಕಿಕೊಂಡ 8 ವರ್ಷದ ಪುತ್ರ - ಶಾಕ್‌ನಿಂದಾಗಿ ಅಪ್ಪನಿಗೆ ಹಾರ್ಟ್‌ ಅಟ್ಯಾಕ್‌, ಸ್ಥಳದಲ್ಲೇ ಸಾವು!

ಭೋಪಾಲ್‌ನಲ್ಲಿ 8 ವರ್ಷದ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಬೆನ್ನಲ್ಲೇ ಆತನ 51 ವರ್ಷದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಡಿತದ ನಂತರ ಮಗ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂಬ ಚಿಂತೆಯಿಂದ ತಂದೆಗೆ ಹೃದಯಾಘಾತವಾಗಿದೆ.
Read Full Story

04:12 PM (IST) May 28

ಧಾರಾವಾಹಿಗಳ ಖಳನಾಯಕರೇ ಹೀರೋಗಳಿಗಿಂತ ಅಟ್ರಾಕ್ಟಿವ್ ಆಂಡ್ ಹ್ಯಾಂಡ್‌ಸಮ್!

ಕನ್ನಡ ಧಾರಾವಾಹಿಗಳಲ್ಲಿ ಖಳನಾಯಕರ ಪಾತ್ರಗಳು ಹೀರೋಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿವೆ. ಈ ಲೇಖನದಲ್ಲಿ ಕೆಲವು ಜನಪ್ರಿಯ ಧಾರಾವಾಹಿಗಳ ಖಳನಾಯಕರ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story

04:00 PM (IST) May 28

WhatsApp ಬಳಸ್ತೀರಾ? ಹೀಗೊಂದು ಮೆಸೇಜ್‌ ಡೌನ್‌ಲೌಡ್‌ ಮಾಡಿದ್ರೆ ಮಾತ್ರ ದಿವಾಳಿಯಾಗ್ತೀರಾ!

WhatsApp ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ಮೋಸ ನಡೆಯುತ್ತಿದೆ. ಪರಿಚಯವಿಲ್ಲದ ನಂಬರ್‌ಗಳಿಂದ ಬರುವ ಚಿತ್ರ ತೆರೆದರೆ, ಮೊಬೈಲ್‌ನಲ್ಲಿ ಮಾಲ್‌ವೇರ್ ಹರಡಿ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಂದು SBI ಬ್ಯಾಂಕ್ ಎಚ್ಚರಿಸಿದೆ.
Read Full Story

03:54 PM (IST) May 28

ರೈತರ ಸಾಲದ ಮೇಲಿನ ಬಡ್ಡಿ ಸಬ್ಸಿಡಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

ಕೇಂದ್ರ ಸಚಿವ ಸಂಪುಟವು 2025-26ನೇ ಸಾಲಿಗೆ ಮಾರ್ಪಡಿಸಿದ ಬಡ್ಡಿ ಸಬ್ಸಿಡಿ ಯೋಜನೆಯನ್ನು ವಿಸ್ತರಿಸಿದೆ, ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ರೈತರ ಸಾಲಗಳ ಮೇಲೆ 1.5% ಸಬ್ಸಿಡಿಯನ್ನು ಉಳಿಸಿಕೊಂಡಿದೆ.

Read Full Story

03:50 PM (IST) May 28

ಮದುವೆಗೆ ಬಂದ ಸುಂದರ ಮಹಿಳೆಯನ್ನು ವಾರಗಟ್ಟಲೆ ಕೂಡಿಹಾಕಿ ಪಾಳಿಯಲ್ಲಿ ಸಾಮೂಹಿಕ ಅತ್ಯಾ*ಚಾರ!

ಸಂಬಂಧಿಕರ ಮದುವೆಗೆ ಬಂದಿದ್ದ ಮಹಿಳೆಯನ್ನು ದೂರದ ಸಂಬಂಧಿಯೊಬ್ಬ ಪುಸಲಾಯಿಸಿ ಕರೆದೊಯ್ದು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿ ಆಭರಣಗಳನ್ನು ಕಿತ್ತುಕೊಂಡಿದ್ದಾರೆ. ಮತ್ತೆ ಆಭರಣ ವಾಪಸ್ ಕೊಡುವ ನೆಪದಲ್ಲಿ ಕರೆಸಿ ಜೋಧ್‌ಪುರದಲ್ಲಿ ಡ್ರಗ್ಸ್ ನೀಡಿ ಪಾಳಿ ಸರದಿಯಲ್ಲಿ ಅತ್ಯಾಚಾರ ಮಾಡಿದ್ದಾರೆ.

Read Full Story

03:39 PM (IST) May 28

ಲಖನೌ ಎದುರು ಗೆಲ್ಲುತ್ತಿದ್ದಂತೆಯೇ ಅನುಷ್ಕಾಗೆ ವಿರಾಟ್ ಪ್ಲೈಯಿಂಗ್ ಕಿಸ್! ವಿಡಿಯೋ ವೈರಲ್

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದ ಬಳಿಕ, ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೊತೆಗೆ ಪಂದ್ಯದ ರೋಚಕ ಕ್ಷಣಗಳು ಮತ್ತು ಪ್ಲೇ-ಆಫ್‌ ವೇಳಾಪಟ್ಟಿಯನ್ನು ಒಳಗೊಂಡಿದೆ.
Read Full Story

03:31 PM (IST) May 28

ಆಪರೇಷನ್‌ ಸಿಂದೂರ್‌ ನಡೆದ ವಾರಗಳ ಬಳಿಕ ದೇಶದ ನಾಲ್ಕು ರಾಜ್ಯಗಳಲ್ಲಿ ನಾಳೆ ನಡೆಯಲಿದೆ ಮಾಕ್‌ ಡ್ರಿಲ್‌!

ಪಾಕಿಸ್ತಾನದ ಗಡಿಯಲ್ಲಿರುವ ರಾಜ್ಯಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಜಮ್ಮು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಹಾಗೂ ಗುಜರಾತ್‌ ರಾಜ್ಯಗಳಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ.

Read Full Story

03:20 PM (IST) May 28

ಲಂಚ ಸ್ವೀಕರಿಸುವ ವೇಳೆ ದಾಳಿ - 500 ರೂ 4 ನೋಟು ನುಂಗಿದ ವಿಲೇಜ್ ಅಕೌಂಟೆಂಟ್

ಡೆಹ್ರಾಡೂನ್‌ನಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದ ವಿಲೇಜ್ ಅಕೌಂಟೆಂಟ್ 500 ರೂಪಾಯಿಯ ನಾಲ್ಕು ನೋಟುಗಳನ್ನು ನುಂಗಿದ ಘಟನೆ ನಡೆದಿದೆ.

Read Full Story

03:00 PM (IST) May 28

ದೇಶದ ಮೊಟ್ಟ ಮೊದಲ ಮಹಿಳಾ ಸಿಜೆಐ ಆಗಲಿದ್ದಾರೆ ಕರ್ನಾಟಕದ ನ್ಯಾಯಮೂರ್ತಿ ಬಿವಿ ನಾಗರತ್ನ!

ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಸೇರ್ಪಡೆಯಾದ ಮೊದಲ ಮಹಿಳಾ ನ್ಯಾಯಾಧೀಶೆ. 2027ರಲ್ಲಿ, ಅವರು ಭಾರತದ 50ನೇ ಮತ್ತು ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
Read Full Story

02:47 PM (IST) May 28

ರಾಮಾಚಾರಿನ ಮುಗಿಸೋಕೆ ಒಂದಾದ ವಿಲನ್ಸ್... ಅಯ್ಯೋ ಡೈರೆಕ್ಟರ್ರೇ ಸೀರಿಯಲ್ ಮುಗಿಸ್ಬಿಡಿ ಸಾಕು ಎಂದ ವೀಕ್ಷಕರು

ರಾಮಾಚಾರಿ ಧಾರಾವಾಹಿಯಲ್ಲಿ ಇದೀಗ ಮೂರು ಜನ ಖಳನಾಯಕಿಯರು ಒಂದಾಗಿದ್ದು, ರಾಮಾಚಾರಿಯನ್ನು ಮುಗಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ವೀಕ್ಷಕರು ಮಾತ್ರ ಸೀರಿಯಲ್ ವಿರುದ್ಧ ಕಿಡಿ ಕಾರಿದ್ದಾರೆ.

Read Full Story

02:45 PM (IST) May 28

ಸೈನಿಕರ ಕ್ಯಾಂಟಿನ್‌ಗಳಿಗೆ ಅಬಕಾರಿ ಸುಂಕ ವಿಧಿಸಲ್ಲ; ಸಿಎಂ ಸಿದ್ದರಾಮಯ್ಯ

ಸೈನಿಕರ ಕ್ಯಾಂಟಿನ್‌ಗಳಿಗೆ ಅಬಕಾರಿ ಸುಂಕ ವಿಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹುತಾತ್ಮ ಸೈನಿಕರ ಕುಟುಂಬಗಳನ್ನು ಸನ್ಮಾನಿಸಿ, ಸೈನಿಕರ ಕಲ್ಯಾಣಕ್ಕೆ ಸರ್ಕಾರ ಬದ್ಧ ಎಂದು ಹೇಳಿದರು.
Read Full Story

02:28 PM (IST) May 28

ಲಖನೌ ಸೋಲಿಸಲು ಕಾರಣವಾಗಿದ್ದು ಡಿಕೆಯ ಆ ಒಂದು ಮಾತು! ಗುರುವನ್ನು ಸ್ಮರಿಸಿದ ಜಿತೇಶ್ ಶರ್ಮಾ!

ಲಖನೌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ರಹಸ್ಯವನ್ನು ನಾಯಕ ಜಿತೇಶ್ ಶರ್ಮಾ ಬಿಚ್ಚಿಟ್ಟಿದ್ದಾರೆ. ದಿನೇಶ್ ಕಾರ್ತಿಕ್ ಅವರ ಪ್ರೋತ್ಸಾಹದ ಮಾತುಗಳು ತಮ್ಮ ಆತ್ಮವಿಶ್ವಾಸ ಹೆಚ್ಚಿಸಿದವು ಎಂದು ಹೇಳಿದ್ದಾರೆ. 

Read Full Story

02:28 PM (IST) May 28

ಭಾರತ-ಪಾಕ್‌ ಸಂಘರ್ಷದ ನಡುವೆ ಭವಿಷ್ಯದ ಸೇನಾ ಕಾರ್ಯಾಚರಣೆಗೆ ಮಹತ್ವದ ಬದಲಾವಣೆ ತಂದ ಮೋದಿ ಸರ್ಕಾರ!

ಭಾರತ-ಪಾಕ್ ಉದ್ವಿಗ್ನತೆಯ ಮಧ್ಯೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಏಕೀಕೃತ ಮಿಲಿಟರಿ ಕಮಾಂಡ್‌ಗಾಗಿ ನಿಯಮಗಳನ್ನು ಕೇಂದ್ರವು ಬದಲಾವಣೆ ಮಾಡಿದೆ.

Read Full Story

01:38 PM (IST) May 28

ಸೀರೆ, ಲಂಗ- ದಾವಣಿ ಹಾಕ್ಕೊಂಡ್ರೆ ದರ್ಶನ್​ ಅವ್ರು ಬೈತಾರೆ ಎಂದ ನಟಿ ಸೋನಲ್ - ಕಾರಣ ಏನು ಕೇಳಿ...

ಸೀರೆ ಮತ್ತು ಲಂಗ-ದಾವಣಿ ಹಾಕಿಕೊಂಡರೆ ದರ್ಶನ್​ ಸರ್​ ಬೈತಾರೆ ಎನ್ನುವ ಮೂಲಕ ನಟಿ ಸೋನಲ್​ ಮೊಂಥೆರೋ ಕುತೂಹಲದ ಕಾರಣವನ್ನು ತೆರೆದಿಟ್ಟಿದ್ದಾರೆ.

Read Full Story

01:35 PM (IST) May 28

HAL ಸ್ಥಾಪನೆಯ ಹಿಂದಿನ ನಿಜವಾದ ರಹಸ್ಯ

ಎಚ್‌ಎಎಲ್‌ ಘಟಕವನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಆಂಧ್ರ ಸಿಎಂ ರಕ್ಷಣಾ ಸಚಿವರಿಗೆ ಮನವಿ ಮಾಡಿದ ಬೆನ್ನಲ್ಲಿಯೇ ರಾಜ್ಯ ರಾಜಕಾರಣಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 

Read Full Story

01:16 PM (IST) May 28

ಆಫ್ಘಾನಿಸ್ತಾನ ನಾಗರಿಕರಿಗೆ ಭಾರತದಿಂದ ವೀಸಾ ಸೇವೆ ಪುನರಾರಂಭ; ವ್ಯಾಪಾರ, ವಿದ್ಯಾರ್ಥಿ, ವೈದ್ಯಕೀಯ ವೀಸಾ ಲಭ್ಯ

ಆಫ್ಘಾನಿಸ್ತಾನದ ನಾಗರಿಕರಿಗೆ ಭಾರತವು ವೀಸಾ ಸೇವೆಗಳನ್ನು ಪುನರಾರಂಭಿಸಿದೆ. ವ್ಯಾಪಾರ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಲು ಬಯಸುವವರು ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿ, ವ್ಯಾಪಾರ, ವೈದ್ಯಕೀಯ ಮತ್ತು ಇತರ ವೀಸಾಗಳನ್ನು ನೀಡಲಾಗುತ್ತಿದೆ.
Read Full Story

01:14 PM (IST) May 28

Neem Karoli Baba - ನೀವು ಈ 5 ಶುಭ ಚಿಹ್ನೆಗಳನ್ನು ನೋಡಿದರೆ, ನೀಮ್ ಕರೋಲಿ ಬಾಬಾ ಪ್ರಕಾರ ಒಳ್ಳೆ ದಿನ ಬರಲಿವೆ ಎಂದರ್ಥ

ಬೇವಿನ ಕರೋಲಿ ಬಾಬಾ ಅವರನ್ನು ಅಲೌಕಿಕ ದೃಷ್ಟಿ ಹೊಂದಿರುವ ಮಹಾನ್ ಸಂತ ಎಂದು ಪರಿಗಣಿಸಲಾಗುತ್ತದೆ, ಅವರನ್ನು ಹನುಮಂತನ ಅವತಾರವೆಂದು ಪರಿಗಣಿಸಲಾಗುತ್ತದೆ. ಶುಭ ಸಮಯಗಳ ಆಗಮನವನ್ನು ಸೂಚಿಸುವ ಕೆಲವು ವಿಶೇಷ ಚಿಹ್ನೆಗಳನ್ನು ಅವರು ಉಲ್ಲೇಖಿಸಿದ್ದಾರೆ.

Read Full Story

12:55 PM (IST) May 28

ಬೆಂಗಳೂರಿನ 3 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು, ₹18 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ!

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮೂರು ಪ್ರಮುಖ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಮನೆಕಳ್ಳತನ, ಬೈಕ್ ಕಳ್ಳತನ ಸೇರಿದಂತೆ ₹18 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಹೆಂಡತಿಯರ ಕಳ್ಳ ಗಂಡ, ಏಡ್ಸ್ ಮುರುಘನ್ ಬಂಧನ.

Read Full Story

12:55 PM (IST) May 28

ಹಳೆಯ ರೈಲು ಬೋಗಿ ಸಂಪೂರ್ಣ ಸುಸಜ್ಜಿತ ಬ್ಯಾಚುಲರ್ ಪ್ಯಾಡ್ ಆಗಿ ರೂಪಾಂತರ ಮಾಡಿದ ರೈಲ್ವೆ ಸಿಬ್ಬಂದಿ, ವಿಡಿಯೋ ವೈರಲ್‌!

ಈ ವೀಡಿಯೊದಲ್ಲಿ ಹಳೆಯ ಭಾರತೀಯ ರೈಲ್ವೆ ಕೋಚ್ ಅನ್ನು ಸೃಜನಾತ್ಮಕವಾಗಿ ಎಲ್ಲಾ ಸೌಕರ್ಯಗಳೊಂದಿಗೆ ಪೂರ್ಣ ಪ್ರಮಾಣದ ಮನೆಯಾಗಿ ಮರುರೂಪಿಸುವುದನ್ನು ತೋರಿಸುತ್ತದೆ.

Read Full Story

12:28 PM (IST) May 28

ಬೆಂಗಳೂರು ಕಾವೇರಿ ಹಂತ 5ರ ನೀರು ಸರಬರಾಜು ತಾತ್ಕಾಲಿಕ ವ್ಯತ್ಯಯ!

ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ ಬಳಿ ಪೈಪ್‌ಲೈನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ದುರಸ್ತಿ ಕಾರ್ಯ ಆರಂಭವಾಗಿದ್ದು, ಮಧ್ಯಾಹ್ನದೊಳಗೆ ಸರಬರಾಜು ಪುನಃಸ್ಥಾಪನೆಯಾಗುವ ನಿರೀಕ್ಷೆಯಿದೆ.
Read Full Story

12:12 PM (IST) May 28

ನೆಟ್ಟಿಗರ ಸಂಭ್ರಮಕ್ಕೆ ಕಾರಣವಾದ ಹೈದರಾಬಾದ್ ಕಂಪನಿಯ ಚೀಫ್‌ ಹ್ಯಾಪಿನೆಸ್‌ ಆಫೀಸರ್‌!

ಹೈದರಾಬಾದ್ ಮೂಲದ ಕಂಪನಿಯೊಂದು ಉದ್ಯೋಗಿಗಳ ಸಂತೋಷಕ್ಕಾಗಿ 'ಚೀಫ್ ಹ್ಯಾಪಿನೆಸ್ ಆಫೀಸರ್' ಆಗಿ ನಾಯಿಯನ್ನು ನೇಮಿಸಿಕೊಂಡಿದೆ. ಡೆನ್ವರ್ ಎಂಬ ಗೋಲ್ಡನ್ ರಿಟ್ರೈವರ್ ತನ್ನ ಮುದ್ದಾದ ನೋಟದಿಂದ ಹೃದಯಗಳನ್ನು ಕದಿಯುತ್ತಿದೆ ಮತ್ತು ಕಂಪನಿಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿದೆ.
Read Full Story

11:47 AM (IST) May 28

ಪ್ರತಿ ಮನೆಗೂ ಸಿಂದೂರ ನೀಡಲು ಮೋದಿ ಸರ್ಕಾರ ತೀರ್ಮಾನ, ಜೂ.9 ರಿಂದ ಆರಂಭವಾಗಲಿದೆ ಅಭಿಯಾನ!

ಮೋದಿ ಸರ್ಕಾರವು ಆಪರೇಷನ್ ಸಿಂದೂರ್‌ನ ಯಶಸ್ಸನ್ನು ಪ್ರತಿ ಮನೆಗೂ ತಲುಪಿಸಲು ಹೊಸ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಇದರಲ್ಲಿ ಮಹಿಳೆಯರಿಗೆ ಸಿಂದೂರವನ್ನು ಉಡುಗೊರೆಯಾಗಿ ನೀಡಲಾಗುವುದು ಮತ್ತು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.
Read Full Story

11:35 AM (IST) May 28

ಅಜ್ಜಿ ಮನೆಯಲ್ಲಿಯೇ ₹10 ಲಕ್ಷ ಹಣ ಕದ್ದ ಮೊಮ್ಮಗನ ಬಂಧನ!

ಬೆಂಗಳೂರಿನಲ್ಲಿ ಆಟೋ ಖರೀದಿಸಲು ಹಣ ಕೊಡದ ಅಜ್ಜಿಯ ಮನೆಯಿಂದ ಮೊಮ್ಮಗ 81 ಗ್ರಾಂ ಚಿನ್ನ ಮತ್ತು 9.41 ಲಕ್ಷ ರೂ. ಕದ್ದಿದ್ದಾನೆ. ನಂದಿನಿ ಲೇಔಟ್ ಪೊಲೀಸರು ಆರೋಪಿ ಮೊಮ್ಮಗನನ್ನು ಬಂಧಿಸಿದ್ದಾರೆ.
Read Full Story

11:13 AM (IST) May 28

ನಂಗೆ ಫಹಾದ್‌ ಫಾಸಿಲ್‌ ಆಕ್ಟಿಂಗ್‌ ಇಷ್ಟ - ಕಾನ್ಸ್‌ನಲ್ಲಿ ಆಲಿಯಾ ಭಟ್‌ ಹೇಳಿಕೆ

ಯಶ್‌ರಾಜ್‌ ಫಿಲಂಸ್‌ ಜೊತೆ ‘ಅಲ್ಛಾ’ ಹಾಗೂ ಸಂಜಯ್‌ ಲೀಲಾ ಬನ್ಸಾಲಿ ಅವರ ‘ಲವ್‌ ಆ್ಯಂಡ್‌ ವಾರ್‌’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ.

Read Full Story

10:48 AM (IST) May 28

'ಭಯೋತ್ಪಾದನೆಯೇ ಪಾಕಿಸ್ತಾನದ ಯುದ್ಧ ತಂತ್ರ..' ಮಹಾ ಪ್ರತೀಕಾರದ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಪರೋಕ್ಷ ಯುದ್ಧದ ಮೂಲಕ ದೇಶದ ಶಾಂತಿಗೆ ಭಂಗ ತರುವ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಯೇ ಪಾಕಿಸ್ತಾನದ ಯುದ್ಧ ತಂತ್ರ ಎಂದು ಆರೋಪಿಸಿ, ಭಾರತ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.
Read Full Story

10:43 AM (IST) May 28

ಕರಾವಳಿಯಲ್ಲಿ ಮತ್ತೆ ಒಂದು ವಾರ ಭಾರೀ ಮಳೆ ಸಾಧ್ಯತೆ - ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿಯಲ್ಲಿ ಒಂದು ವಾರ, ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಹಾಗೂ ಉತ್ತರ ಒಳನಾಡಿನಲ್ಲಿ ಎರಡು ದಿನ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read Full Story

More Trending News