LIVE NOW
Published : Feb 26, 2026, 07:10 AM ISTUpdated : Feb 26, 2026, 09:22 PM IST

Karnataka News Live: ಧಾರವಾಡ ಹೋರಾಟ ಬೆನ್ನಲ್ಲೇ 56,432 ಹುದ್ದೆ ನೇಮಕಾರಿಗೆ ಸರ್ಕಾರ ಗ್ರೀನ್ ಸಿಗ್ನಲ್; ಆದ್ರೆ ಎಸ್ಸಿ ಒಳಮೀಸಲಾತಿ ಗೋವಿಂದ!

ಸಾರಾಂಶ

ಬೆಂಗಳೂರು: ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಜಾರಿ ನಿರ್ದೇಶನಾಲಯ(ಇ.ಡಿ.)ವು ತನಿಖೆ ನಡೆಸಿ ಪ್ರಮುಖ ಆರೋಪಿ, ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ ಹಾಗೂ ಸಹ ಆರೋಪಿಗಳಾದ ತರುಣ್‌ ಕೊಂಡೂರು ಮತ್ತು ಸಾಹಿಲ್‌ ಸಕಾರಿಯಾ ಜೈನ್‌ ವಿರುದ್ಧ ನಗರದ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.

 

09:23 PM (IST) Feb 26

ಧಾರವಾಡ ಹೋರಾಟ ಬೆನ್ನಲ್ಲೇ 56,432 ಹುದ್ದೆ ನೇಮಕಾರಿಗೆ ಸರ್ಕಾರ ಗ್ರೀನ್ ಸಿಗ್ನಲ್; ಆದ್ರೆ ಎಸ್ಸಿ ಒಳಮೀಸಲಾತಿ ಗೋವಿಂದ!

ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲು ನಿರ್ಧರಿಸಿದೆ. ಮೀಸಲಾತಿ ಗೊಂದಲವನ್ನು ತಪ್ಪಿಸಲು ಸದ್ಯಕ್ಕೆ 50% ಮೀಸಲಾತಿ ಮಿತಿಯಲ್ಲೇ ನೇಮಕಾತಿ ನಡೆಸಲು ಸಂಪುಟ ತೀರ್ಮಾನಿಸಿದ್ದು, ಇದು ಎಸ್‌ಸಿ ಒಳ ಮೀಸಲಾತಿ ಹಂಚಿಕೆ ಕುರಿತು ಸಚಿವರಲ್ಲೇ ಚರ್ಚೆಗೆ ಕಾರಣವಾಗಿದೆ.

Read Full Story

08:49 PM (IST) Feb 26

ಚಿಕ್ಕಮಗಳೂರು - ಬಿಸಿಯೂಟದ ಕೋಣೆಯಲ್ಲಿ ಬೆಂಕಿ, ಮಕ್ಕಳ ಪ್ರಾಣ ಉಳಿಸಲು ಹೋಗಿ ಅಸ್ವಸ್ಥನಾದ ತೋಟದ ಕಾರ್ಮಿಕ!

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಸರ್ಕಾರಿ ಶಾಲೆಯ ಬಿಸಿಯೂಟದ ಕೋಣೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದ 33 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಮಕ್ಕಳ ರಕ್ಷಣೆಗೆ ಧಾವಿಸಿದ ಕಾರ್ಮಿಕರೊಬ್ಬರು ಅಸ್ವಸ್ಥಗೊಂಡಿದ್ದಾರೆ.
Read Full Story

08:17 PM (IST) Feb 26

ಪುತ್ತೂರು - ಕಾಮಗಾರಿ ದೂಳಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಕ್ಕೆ ಪ್ರಾಂಶುಪಾಲೆಗೆ ಸಸ್ಪೆಂಡ್ ಶಿಕ್ಷೆ!

ಪುತ್ತೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕಟ್ಟಡ ಕಾಮಗಾರಿಯ ದೂಳಿನ ವಿರುದ್ಧ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಾಸಕ ಅಶೋಕ್ ರೈ ಮತ್ತು ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ನಡುವೆ ವಾಗ್ವಾದ ಬೆನ್ನಲ್ಲೇ ಮೇಲೆ ಪ್ರಾಂಶುಪಾಲೆಯನ್ನ ಸರ್ಕಾರ ಅಮಾನತು ಮಾಡಿದೆ.

Read Full Story

07:31 PM (IST) Feb 26

BGS ಕಾಲೇಜು ವಿದ್ಯಾರ್ಥಿಯ ಅದ್ಭುತ ಸಂಶೋಧನೆ - 'HybridEcoISA' ತಂತ್ರಜ್ಞಾನಕ್ಕೆ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿ!

IoT in hybrid vehicles ಬೆಂಗಳೂರಿನ BGS ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಗೌಡ ಎಸ್ ಮತ್ತು ಅವರ ತಂಡವು, ಐಓಟಿ ತಂತ್ರಜ್ಞಾನ ಆಧಾರಿತ ಸಂಶೋಧನೆಗಾಗಿ ಕಿರಿಯ ವಿಜ್ಞಾನಿಗಳ ಸಾಧನೆಗೆ ನೀಡುವ ಪ್ರತಿಷ್ಠಿತ ಡಾ. ಎಸ್. ಕೆ. ಶಿವಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

Read Full Story

07:27 PM (IST) Feb 26

ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ?

ಪತಿ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಒಂದೇ ಪೋಸ್ಟ್‌ನಲ್ಲಿ ಮದ್ವೆ ಸಂಭ್ರಮ ಜೊತೆ ಟೀಕೆಗೂ ಉತ್ರರಿಸಿದ್ರಾ? ವಿಜಯ್ ದೇವರಕೊಂಡ ಪತ್ನಿಯಾಗಿರುವ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ರಶ್ಮಿಕಾ ಬರಹ ಹಲವು ಪ್ರಶ್ನೆಗಳಿಗೂ ಉತ್ತರಿಸಿದಂತಿದೆ.

 

Read Full Story

07:21 PM (IST) Feb 26

Photos - ರಶ್ಮಿಕಾ ಮಂದಣ್ಣರನ್ನೇ ಯಾಕೆ ಮದುವೆಯಾದೆ? ವಿವಾಹವಾಗಿ ಕ್ಲಾರಿಟಿ ಕೊಟ್ಟ Vijay Deverakonda

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರ ಏಳು ವರ್ಷಗಳ ಸ್ನೇಹ, ಪ್ರೀತಿ ಈಗ ದಾಂಪತ್ಯ ಜೀವನದ ತಿರುವು ಪಡೆದಿದೆ. ಇವರಿಬ್ಬರು ಫೆಬ್ರವರಿ 27ರಂದು ಮದುವೆ ಆಗಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಯಾಕೆ ಮದುವೆ ಆದೆ ಎಂದು ವಿಜಯ್‌ ದೇವರಕೊಂಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story

07:03 PM (IST) Feb 26

ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ಕೋರ್ಟ್; ರೈತನಿಗೆ ಅನ್ಯಾಯವಾಗುವುದನ್ನ ಸಹಿಸದ ನ್ಯಾಯಾಲಯ!

ಕಲಬುರಗಿಯಲ್ಲಿ ಭೂಸ್ವಾಧೀನ ಪರಿಹಾರ ವಿಳಂಬವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಸರ್ಕಾರಿ ಕಾರನ್ನು ಜಪ್ತಿ ಮಾಡಲು ಆದೇಶಿಸಿದೆ. 19 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದ ನಂದಿಕೂರ ಗ್ರಾಮದ ರೈತರಿಗೆ ನ್ಯಾಯ ಒದಗಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. 

Read Full Story

07:02 PM (IST) Feb 26

ರಾಜ ರಾಣಿ ಸ್ಟೈಲ್‌ನಲ್ಲಿ ಮದುವೆಯಾದ Rashmika Mandanna - ಫಸ್ಟ್‌ ರಿಯಾಕ್ಷನ್‌ ಕೊಟ್ಟ ವಿಜಯ್‌ ದೇವರಕೊಂಡ ಪತ್ನಿ

ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್‌ ದೇವರಕೊಂಡ ಜೊತೆ ಮದುವೆ ಆಗಿದ್ದಾರೆ. ಅಂದಹಾಗೆ ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದಯಪುರದಲ್ಲಿ ಈ ಜೋಡಿ ಮದುವೆ ಆಗಿದೆ. ಫೆಬ್ರವರಿ 26ರಂದು ಬೆಳಗ್ಗೆಯ ಮುಹೂರ್ತದಲ್ಲಿ ಮದುವೆ ನಡೆದಿದೆ.

 

Read Full Story

06:26 PM (IST) Feb 26

ಉದ್ಯಾನ ನಗರಿ ಬೆಂಗಳೂರಿನ ಹಸಿರು ಕ್ರಾಂತಿ, ಪಿಂಕ್ ಹೂವುಗಳ ಆಕರ್ಷಣೆಗೆ ಕಾರಣ ಧಾರವಾಢದ ಈ ಮೇರು ವ್ಯಕ್ತಿ!

ಫೋಟೋ ಕ್ರೆಡಿಟ್: ವೀರಮಣಿ ಕನ್ನಡ ಪ್ರಭ

ಬೆಂಗಳೂರನ್ನು "ಉದ್ಯಾನ ನಗರಿ"ಯಾಗಿ ರೂಪಿಸಿದ ಪ್ರಮುಖ ರೂವಾರಿ ಧಾರವಾಡದ ಈ ವ್ಯಕ್ತಿ. 1980ರ ದಶಕದಲ್ಲಿ, ಅವರು ಕಡಿಮೆ ವೆಚ್ಚದ ತಂತ್ರಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದ ಮೂಲಕ 15 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟು, ನಗರಕ್ಕೆ ಹಸಿರು ಹೊದಿಕೆ ನೀಡಿದರು.  

Read Full Story

06:01 PM (IST) Feb 26

ಮಗಳ ಮದುವೆ, ಬೋರ್‌ವೆಲ್‌ಗಾಗಿ ಮಾಡಿದ ಸಾಲ, 120 ಅಡಿ ಟವರ್ ಏರಿ ಸಾಯಲು ಯತ್ನಿಸಿದ ರೈತನ ರಕ್ಷಣೆ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಾಲಬಾಧೆಯಿಂದ ನೊಂದ ರೈತನೊಬ್ಬ 120 ಅಡಿ ಎತ್ತರದ ಹೈಟೆನ್ಶನ್ ಟವರ್ ಏರಿ ಆತ್ಮ೧ಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ರೈತನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

Read Full Story

05:39 PM (IST) Feb 26

ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ

ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಮತ್ತು ಭಾರೀ ಪೊಲೀಸ್ ಭದ್ರತೆಯ ನಡುವೆಯೂ ಕೋಣವನ್ನು ಬಲಿ ಕೊಡಲಾಗಿದೆ. ಈ ಘಟನೆಯ ಜೊತೆಗೆ, ಬರಿಮೈಯಲ್ಲಿ ಬೇವಿನುಡುಗೆ ತೊಡುವುದನ್ನು ಅಧಿಕಾರಿಗಳು ತಡೆದಿದ್ದು, ಆದರೆ ಜಿಲ್ಲಾಡಳಿತವು ಯಾವುದೇ ಬಲಿ ನಡೆದಿಲ್ಲ ಎಂದು ಹೇಳಿಕೆ ನೀಡಿದೆ.
Read Full Story

05:28 PM (IST) Feb 26

Internal Reservation Row - ಸಿಎಂ ನೇತೃತ್ವದಲ್ಲಿ ದಲಿತ ಸಚಿವರ ಮಹತ್ವದ ಸಭೆ, ಮೂರು ಮಹತ್ವದ ನಿರ್ಧಾರ, ರಾಜಭವನಕ್ಕೆ ಸಚಿವರ ನಿಯೋಗ ದೌಡು!

Karnataka Internal Reservation Row ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ತಡೆ! ಸಿಎಂ ಸಿದ್ದರಾಮಯ್ಯ ನೇತೃತ್ವದ ದಲಿತ ಸಚಿವರ ಸಭೆಯ 3 ಪ್ರಮುಖ ತೀರ್ಮಾನಗಳೇನು? ನೇಮಕಾತಿ ಪ್ರಕ್ರಿಯೆ ಯಾವಾಗ ಶುರು? ತಿಳಿಯಲು ಓದಿ.

Read Full Story

05:10 PM (IST) Feb 26

ಬೆಂಗಳೂರು - ಡ್ರಿಪ್ಸ್ ತೆಗೆಯುವಾಗ ದಾದಿಯಿಂದ 6 ತಿಂಗಳ ಮಗುವಿನ ಬೆರಳು ಕಟ್‌! ಆಸ್ಪತ್ರೆಯಲ್ಲಿ ಕಂದನ ಚೀತ್ಕಾರ!

ಬೆಂಗಳೂರಿನ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ, ಡಿಸ್ಚಾರ್ಜ್‌ ವೇಳೆ ಡ್ರಿಪ್ಸ್ ತೆಗೆಯುವಾಗ ನರ್ಸ್‌ವೊಬ್ಬರು ಆರು ತಿಂಗಳ ಮಗುವಿನ ಬೆರಳನ್ನು ಕತ್ತರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ದೂರು ನೀಡಿದ್ದು, ನಿರ್ಲಕ್ಷ್ಯ ತೋರಿದ ನರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

05:01 PM (IST) Feb 26

ತುಮಕೂರು - ಪಾವಗಡದಲ್ಲಿ ಮಟ್ಕಾ ಕಿಂಗ್‌ಪಿನ್ ಬಂಧಿಸಿ, ಬೀದಿಗಳಲ್ಲಿ ಮೆರವಣಿಗೆ ಮಾಡಿದ ಪೊಲೀಸರು!

ಪಾವಗಡ ಪಟ್ಟಣದ ಮಟ್ಕಾ ಕಿಂಗ್‌ಪಿನ್ ಅಶ್ವಥ್ ಮನೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಆತನಿಗೆ ಸಾಥ್ ನೀಡುತ್ತಿದ್ದ ಸೊಸೆ ಶಿಲ್ಪಾಳನ್ನ ಸಹ ಬಂಧಿಸಿದ್ದಾರೆ,

Read Full Story

04:46 PM (IST) Feb 26

ಮಲ್ಲಿಕಾರ್ಜುನ ಮುತ್ಯಾ ಕೇಸ್‌ಗೆ ಬಿಗ್ ಟ್ವಿಸ್ಟ್ - 'ಅಪ್ಪಾಜಿ ನಮಗೆ ದೇವರು' ಎಂದು ಕಣ್ಣೀರಿಟ್ಟ ಬಾಲಕಿ ಪೋಷಕರು!

ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಂತ್ರಸ್ತ ಬಾಲಕಿಯ ಪೋಷಕರೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಮುತ್ಯಾ ಅವರು ತಮ್ಮ ಮಗಳಿಗೆ ಆಶೀರ್ವಾದ ಮಾಡುತ್ತಿದ್ದ ವಿಡಿಯೋವನ್ನು ಕಿಡಿಗೇಡಿಗಳು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ.

Read Full Story

04:39 PM (IST) Feb 26

ರಾಮನಗರದಲ್ಲಿ 1.55 ಕೋಟಿ ರುಪಾಯಿ ಮೌಲ್ಯದ ಡ್ರಗ್ಸ್ ವಶ, 235 ಮಂದಿ ಬಂಧನ!

ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರು ಕಳೆದ 3 ವರ್ಷಗಳಲ್ಲಿ 1.55 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು 235 ಮಂದಿಯನ್ನು ಬಂಧಿಸಿದ್ದಾರೆ. ಆನ್‌ಲೈನ್ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಈ ದಂಧೆಯ ಹಿಂದೆ ಅಂತರರಾಷ್ಟ್ರೀಯ ಜಾಲದ ಶಂಕೆ ವ್ಯಕ್ತವಾದೆ.

Read Full Story

04:30 PM (IST) Feb 26

ರಾಜ್ಯ ಬಜೆಟ್‌ ಬಳಿಕ ಆಟೋಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ - ಸಚಿವ ರಾಮಲಿಂಗಾರೆಡ್ಡಿ

ಬಿ.ಪ್ಯಾಕ್‌ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಉಚಿತ ಆಟೋ ಚಾಲನಾ ತರಬೇತಿ ನೀಡಲಾಗುತ್ತಿದೆ. ಸಚಿವ ರಾಮಲಿಂಗಾರೆಡ್ಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದಿದ್ದಾರೆ.

Read Full Story

03:34 PM (IST) Feb 26

ಮಲ್ಲಿಕಾರ್ಜುನ ಮುತ್ಯಾನ ಮತ್ತೊಂದು ಆಡಿಯೋ ವೈರಲ್; ಗೂಟದ ಕಾರು ನಂಬಿಕೆಟ್ಟ ಮಾಜಿ ಶಾಸಕ ಚಿಂಚನಸೂರು!

ಪೋಕ್ಸೋ ಪ್ರಕರಣದಡಿ ತಲೆಮರೆಸಿಕೊಂಡಿರುವ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾನ ಹಳೆಯ ಆಡಿಯೋವೊಂದು ವೈರಲ್ ಆಗಿದೆ. 2023ರ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಗೆಲುವಿನ ಭರವಸೆ ನೀಡಿ ವಿಫಲವಾಗಿದ್ದ ಈ ಆಡಿಯೋ, ಮುತ್ಯಾನ ದೈವಶಕ್ತಿಯ ಡೋಂಗಿತನವನ್ನು ಬಯಲು ಮಾಡಿದೆ.

Read Full Story

03:25 PM (IST) Feb 26

ಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ಪ್ರತ್ಯಕ್ಷ - 'ನಾನು ಓಡಿ ಹೋಗಿಲ್ಲ, ಪೊಲೀಸರು ಕರೆದಾಗ ಬರ್ತೀನಿ'

ಯಾದಗಿರಿಯ ಪೋಕ್ಸೋ ಪ್ರಕರಣದ ಆರೋಪಿ 'ಪವಾಡ ಪುರುಷ' ಮಲ್ಲಿಕಾರ್ಜುನ ಮುತ್ಯಾ, ತಲೆಮರೆಸಿಕೊಂಡ ನಂತರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾನು ಎಲ್ಲೂ ಹೋಗಿಲ್ಲ, ಮಠದ ಸಾಮೂಹಿಕ ವಿವಾಹದ ಲಗ್ನ ಪತ್ರಿಕೆ ಹಂಚಲು ಹೊರಗೆ ಬಂದಿದ್ದೇನೆ. ಪೊಲೀಸರ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ.

Read Full Story

02:38 PM (IST) Feb 26

ಕನ್ನಡದ ನಿರ್ದೇಶಕನ ಕಿಡ್ನಾಪ್, ದುನಿಯಾ ವಿಜಯ್ ಸಿನೆಮಾದ ನಟಿ ಐಶ್ವರ್ಯಾ ಸೇರಿ 11 ಮಂದಿ ಅರೆಸ್ಟ್!

ನಿರ್ದೇಶಕ ಅನೀಶ್ ಅವರನ್ನು ಕಾರು ಖರೀದಿಸುವ ನೆಪದಲ್ಲಿ ಮುಂಬೈನಿಂದ ಕರೆಸಿ ಅಪಹರಿಸಲಾಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ನಟಿಯೊಬ್ಬಳ ಸಹಾಯದಿಂದ ಈ ಕೃತ್ಯ ಎಸಗಲಾಗಿದ್ದು, ನಿರ್ದೇಶಕನ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ಈ ಸಂಬಂಧ ನಟಿ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

02:08 PM (IST) Feb 26

ರಶ್ಮಿಕಾ ಮಂದಣ್ಣ ಟ್ರೋಲಿಂಗ್ ನಿಲ್ಲಿಸಿ - ಅವಳ ಬದುಕು, ಅವಳ ಆಯ್ಕೆ, ಅವಳ ಸಾಧನೆ!

ರಶ್ಮಿಕಾ ಮಂದಣ್ಣ ಅವರ ಮುರಿದುಬಿದ್ದ ನಿಶ್ಚಿತಾರ್ಥವನ್ನು ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಟ್ರೋಲ್ ಮಾಡುವುದನ್ನು ಈ ಲೇಖನ ಪ್ರಶ್ನಿಸುತ್ತದೆ. ಆಕೆಯ ವೈಯಕ್ತಿಕ ಆಯ್ಕೆಗಳನ್ನು ಗೌರವಿಸಬೇಕು. ಆಕೆಯ ಮೇಲಿನ ಟ್ರೋಲ್‌ಗಳನ್ನು ನಿಲ್ಲಿಸುವಂತೆ ಲೇಖನವು ಬೆಳಕು ಚೆಲ್ಲುತ್ತದೆ.

Read Full Story

01:16 PM (IST) Feb 26

ಶಿಲ್ಪಾ ಶೆಟ್ಟಿಯ ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಫುಡ್ ಸೇರಿ ಎಲ್ಲವೂ ಕನ್ನಡ ಮಯ

ಶಿಲ್ಪಾ ಶೆಟ್ಟಿಯ ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಫುಡ್ ಸೇರಿ ಎಲ್ಲವೂ ಕನ್ನಡ ಮಯ, ಕರ್ನಾಟಕದ ಪ್ರಸಿದ್ಧ ಬೆಣ್ಣೆ ದೋಸೆ, ಮಸಾಲೆ ದೋಸೆ, ಕರಾವಳಿಯ ವಿಷೇಷ ಖಾದ್ಯಗಳು ಅದೆ ಕನ್ನಡ ಹೆಸರಿನಲ್ಲೇ ಇದೆ. ಜೊತೆಗೆ ಕರ್ನಾಟಕ ಭೂಪಟವೂ ಇದೆ.

 

Read Full Story

12:37 PM (IST) Feb 26

ನೀನೇ ಖುಷಿಯಾಗಿರು, ಈ ಪ್ರಪಂಚನೇ ಬಿಟ್ಟು ಹೋಗ್ತಿದಿನಿ ಬಾಯ್, ವಾಟ್ಸಾಪ್ ಸ್ಟೇಟಸ್ ಹಾಕಿ ವಿದ್ಯಾರ್ಥಿ ಸಾವಿಗೆ ಶರಣು!

ತುರುವೇಕೆರೆ ತಾಲ್ಲೂಕಿನಲ್ಲಿ, ಡಿಪ್ಲೊಮಾ ವಿದ್ಯಾರ್ಥಿ ಧನುಷ್ ನೀರಿನ ಕಟ್ಟೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ, ಆತ ಯುವತಿಯೊಬ್ಬಳ ಫೋಟೋದೊಂದಿಗೆ ಮೊಬೈಲ್‌ನಲ್ಲಿ "ಈ ಪ್ರಪಂಚನೇ ಬಿಟ್ಟು ಹೋಗ್ತಿದಿನಿ" ಎಂದು ವಿದಾಯದ ಸಂದೇಶವನ್ನು ಪೋಸ್ಟ್ ಮಾಡಿದ್ದ. 

Read Full Story

12:35 PM (IST) Feb 26

ಪ್ರಧಾನಿ ಮೋದಿ ಅಪಹಾಸ್ಯ ಮಾಡಿದ್ದ ಕೈ ಕಾರ್ಯಕರ್ತೆ ವಿರುದ್ಧ ದೂರು!

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ವ್ಯವಸ್ಥಿತ ಅಪಪ್ರಚಾರ ಮಾಡುತ್ತಾ ಬಂದಿರುವ ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಬಿಜೆಪಿ ನಿಯೋಗ ದೂರು ಸಲ್ಲಿಸಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

12:08 PM (IST) Feb 26

ವಾಯುಭಾರ ಕುಸಿತ - ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಂಡ್ಯ, ಕೊಡಗು ಹಾಗೂ ಹಾವೇರಿ ಜಿಲ್ಲೆಯ ವಿವಿಧೆಡೆ ಮಳೆ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ 7.6 ಮಿ.ಮೀ. ಮಳೆ ಆಗಿದೆ.

Read Full Story

12:07 PM (IST) Feb 26

Bigg Boss ಹಬ್ಬದ ಬಗ್ಗೆ ರಕ್ಷಿತಾ ಶೆಟ್ಟಿ ಕಿಡಿ - ಗಿಲ್ಲಿ-ಕಾವ್ಯಾ ಜಪ ಮಾಡ್ತಿದ್ರು; ನಾನ್ ಮಾತಾಡಿದ್ರೆ ಕಿವಿ ಮುಚ್ಕೊಂಡ್ರು!

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು 'ದೊಡ್ಮನೆ ಹಬ್ಬ' ಕಾರ್ಯಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ಆ್ಯಂಕರ್ ತಮಗೆ ಮಾತನಾಡಲು ಅವಕಾಶ ನೀಡದೆ, ಗಿಲ್ಲಿ ಮತ್ತು ಕಾವ್ಯಾ ಅವರಿಗೆ ಮಾತ್ರ ಮಣೆ ಹಾಕಿದ್ದಾರೆ ಎಂದು ರಕ್ಷಿತಾ ನೇರ ಆರೋಪ ಮಾಡಿದ್ದಾರೆ. 

Read Full Story

12:04 PM (IST) Feb 26

ರಣಜಿ ಟ್ರೋಫಿ ಫೈನಲ್ - ಜಮ್ಮು ಮತ್ತು ಕಾಶ್ಮೀರ 584ಕ್ಕೆ ಆಲೌಟ್; ಉತ್ತಮ ಆರಂಭ ಪಡೆದ ಕರ್ನಾಟಕ

2025-26ರ ರಣಜಿ ಟ್ರೋಫಿ ಫೈನಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಪ್ರತಿಯಾಗಿ, ಪ್ರಸಿದ್ದ್ ಕೃಷ್ಣ ಅವರ ಐದು ವಿಕೆಟ್‌ಗಳ ಸಾಧನೆಯ ನಂತರ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿದೆ.

Read Full Story

11:57 AM (IST) Feb 26

''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ - ಎಚ್ಡಿಕೆ 2028ಕ್ಕೆ ಸಿಎಂ''

2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಮೈತ್ರಿಕೂಟದಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

Read Full Story

11:57 AM (IST) Feb 26

ತುಮಕೂರಿನಲ್ಲಿ ಹೃದಯವಿದ್ರಾವಕ ಘಟನೆ, ಕೋತಿ ಉಳಿಸಲು ಹೋಗಿ ಪ್ರಾಣ ಬಿಟ್ಟ ಆಟೋ ಚಾಲಕ!

ತುಮಕೂರು ಜಿಲ್ಲೆಯ ಕೊರಟಗೆರೆ ಬಳಿ, ಕೋತಿಯನ್ನು ಉಳಿಸಲು ಯತ್ನಿಸಿದ ಆಟೋ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದಾರೆ. ಇದೇ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ದಾರುಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

11:37 AM (IST) Feb 26

Karna Serial ನಿಧಿಗೆ ಹುಟ್ಟುಹಬ್ಬದ ಸಂಭ್ರಮ - ನಟಿ ಭವ್ಯಾ ಗೌಡ ವಯಸ್ಸೆಷ್ಟು? ಕೈಹಿಡಿವ ಹುಡುಗ ಯಾರು?

ಕರ್ಣ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಭವ್ಯಾ, ಕಳೆದ ಐದು ವರ್ಷಗಳಿಂದ ಒಬ್ಬರನ್ನೇ ಪ್ರೀತಿಸುತ್ತಿದ್ದು, ಅವರ ಆ ರಾಜಕುಮಾರ ಯಾರು ಎಂಬ ಗುಟ್ಟು ಇನ್ನೂ ನಿಗೂಢವಾಗಿದೆ.
Read Full Story

11:30 AM (IST) Feb 26

ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು - ಹೈಕೋರ್ಟ್‌

ಮಕ್ಕಳ ಆರೈಕೆ ರಜೆ (ಸಿಸಿಎಲ್‌) ಮಗುವಿನ ಹಕ್ಕಾಗಿದ್ದು, ಸಿಸಿಎಲ್‌ ಕೋರಿಕೆ ಬಂದಾಗ ನಿರಾಕರಿಸದೆ ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

Read Full Story

11:23 AM (IST) Feb 26

ಅದೊಂದು ಕಾರಣಕ್ಕಾಗಿ ವಿಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಗೆಲ್ಲಲಿ ಅಂತ ಪ್ರಾರ್ಥಿಸುತ್ತಿದೆ ಟೀಂ ಇಂಡಿಯಾ!

ಅಹಮದಾಬಾದ್‌: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿಂದು ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಕಣ್ಣಿಟ್ಟಿದೆ. ಈ ಮ್ಯಾಚ್ ಹರಿಣಗಳು ಗೆಲ್ಲಲಿ ಎಂದು ಭಾರತ ಪ್ರಾರ್ಥಿಸುತ್ತಿದೆ.

 

Read Full Story

11:07 AM (IST) Feb 26

ಹಾಸನ - ಜೀತಕ್ಕಿದ್ದ 18ಮಂದಿ ರಕ್ಷಣೆ, ಕೂಡಿ ಹಾಕಿದ್ದ ಶೆಡ್‌ನಿಂದ ಓರ್ವ ತಪ್ಪಿಸಿಕೊಂಡಿದ್ದರಿಂದ ಬಯಲಾಯ್ತು ಕರಾಳ ಸತ್ಯ!

ಹಾಸನದಲ್ಲಿ, ಜೀತ ಪದ್ಧತಿಯಡಿ ಅಕ್ರಮವಾಗಿ ಬಂಧಿಸಿ ದುಡಿಸಿಕೊಳ್ಳುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ವಿಜಯಪುರದ ವೃದ್ಧೆಯೊಬ್ಬರು ತಮ್ಮ ಮಗನನ್ನು ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಮಾಧ್ಯಮಕ್ಕೆ ದೂರು ನೀಡಿದ ನಂತರ ಈ ಕಾರ್ಯಾಚರಣೆ ನಡೆದಿದೆ.

Read Full Story

10:37 AM (IST) Feb 26

ಹೊಯ್ಸಳರ ಬೇಲೂರು ದೇವಸ್ಥಾನಕ್ಕೂ ಲೂಯಿ ವಿಟಾನ್ ಲಾಂಛನಕ್ಕೂ ಇದೆ ನಂಟು? ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ!

ವಿಶ್ವವಿಖ್ಯಾತ 'ಲೂಯಿ ವಿಟಾನ್' ಬ್ರ್ಯಾಂಡ್‌ನ ಲಾಂಛನಕ್ಕೂ ಮತ್ತು ಕರ್ನಾಟಕದ ಬೇಲೂರಿನ 12ನೇ ಶತಮಾನದ ಹೊಯ್ಸಳ ಶಿಲ್ಪಕಲೆಗೂ ಇರುವ ಅಚ್ಚರಿಯ ಸಾಮ್ಯತೆ ಜಾಗತಿಕ ಚರ್ಚೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಒಬ್ಬರು ಹಂಚಿಕೊಂಡ ವಿಡಿಯೋ ಈ ಚರ್ಚೆಗೆ ನಾಂದಿ ಹಾಡಿದೆ.

Read Full Story

10:15 AM (IST) Feb 26

ಪರೀಕ್ಷೆಗೂ ಮುನ್ನ ದ್ವಿತೀಯ PUC ಮತ್ತು SSLC ಪ್ರಶ್ನೆಪತ್ರಿಕೆ ಲೀಕ್ ಆಯ್ತಾ? ಹಣಕ್ಕೆ ಬೇಡಿಕೆ ಇಟ್ಟು ಇನ್ಸ್ಟಾದಲ್ಲಿ ಪೋಸ್ಟ್!

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟದ ಸುಳ್ಳು ಪೋಸ್ಟ್‌ಗಳು ಹರಿದಾಡುತ್ತಿವೆ. ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಗುರಿಯಾಗಿಸಿಕೊಂಡು ಹಣ ದೋಚುವ ಈ ಜಾಲದ ಬಗ್ಗೆ ಎಚ್ಚರದಿಂದಿರಲು ಈ ಲೇಖನವು ಎಚ್ಚರಿಸುತ್ತದೆ.

Read Full Story

09:57 AM (IST) Feb 26

BPL ಕಾರ್ಡ್ ಅನರ್ಹತೆ - ಇಲ್ಲಿದೆ ಮಹತ್ವದ ಅಪ್‌ಡೇಟ್

ನೆಲಮಂಗಲ ತಾಲೂಕಿನಲ್ಲಿ ಅರ್ಹರ ಬಿಪಿಎಲ್ ಪಡಿತರ ಚೀಟಿಗಳನ್ನು ಅನರ್ಹಗೊಳಿಸದಂತೆ ಅಧಿಕಾರಿಗಳಿಗೆ ತಿಳಿಸಿದ್ದು ಅದರಂತೆ ಸೋಲೂರು ಹೋಬಳಿಯ ರದ್ದುಗೊಳಿಸುವ ಪಟ್ಟಿಯಲ್ಲಿರುವ ಸುಮಾರು 470ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಪರಿಶೀಲಿಸಿ ಕ್ರಮ ವಹಿಸಬೇಕೆಂದು ಶಾಸಕ ಶ್ರೀನಿವಾಸ್ ಅಧಿಕಾರಿಗಳಿಗೆ ತಾಕೀತು

Read Full Story

09:30 AM (IST) Feb 26

ರಣಜಿ ಟ್ರೋಫಿ ಫೈನಲ್ - ಎರಡನೇ ದಿನವೂ ಜಮ್ಮು-ಕಾಶ್ಮೀರ ಪ್ರಾಬಲ್ಯ, 6ಕ್ಕೆ 527 ರನ್!

ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನ ಜಮ್ಮು-ಕಾಶ್ಮೀರ ತಂಡ 6 ವಿಕೆಟ್‌ಗೆ 527 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಿದೆ. ಶುಭಂ ಪುಂಡೀರ್ ಶತಕ ಹಾಗೂ ಇತರ ಬ್ಯಾಟರ್‌ಗಳ ಅರ್ಧಶತಕದ ನೆರವಿನಿಂದ ತಂಡ ಬಲಿಷ್ಠ ಸ್ಥಿತಿಯಲ್ಲಿದೆ.

Read Full Story

09:17 AM (IST) Feb 26

ಪೋಕ್ಸೋ ಕೇಸ್‌ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ತಲೆ ಮರೆಸಿಕೊಂಡ ಖ್ಯಾತ ಸ್ವಾಮೀಜಿ!

ಯಾದಗಿರಿಯ ಶಹಪುರ ತಾಲೂಕಿನ ಖ್ಯಾತ ಸ್ವಾಮೀಜಿ ಮಲ್ಲಿಕಾರ್ಜುನ ಮುತ್ಯಾ, ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಅವರ ವಿರುದ್ಧ 75(2) ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

09:16 AM (IST) Feb 26

ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ, ಹೆತ್ತ ತಾಯಿಯ ಎದುರೇ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು!

ಬೆಂಗಳೂರಿನ ಥಣಿಸಂದ್ರದಲ್ಲಿ ರೌಡಿಶೀಟರ್ ಪವನ್ ಕುಮಾರ್‌ನನ್ನು ಆತನ ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಕೊಲೆಯು ಮೂರು ವರ್ಷಗಳ ಹಿಂದಿನ ಕಪಿಲ ಎಂಬಾತನ ಕೊಲೆಗೆ ಸೇಡಿಗಾಗಿ ನಡೆದ ರಿವೇಂಜ್ ಮರ್ಡರ್ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

08:58 AM (IST) Feb 26

ಕಬ್ಬು ಬೆಳೆಗಾರರಿಗೆ ₹ 300 ಕೋಟಿ ಬಿಡುಗಡೆ

ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರಾಜ್ಯದ ರೈತರಿಗೆ ಪ್ರತಿ ಟನ್‌ಗೆ ₹50 ಆರ್ಥಿಕ ನೆರವಿನ ಮೊತ್ತ ಒಟ್ಟು ₹300 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ

Read Full Story

More Trending News