ಬೆಂಗಳೂರು (ಫೆ.26): ನಾಡಿನೆಲ್ಲೆಡೆ ಇಂದು ಸಂಭ್ರಮದಿಂದ ಶಿವರಾತ್ರಿ ಆಚರಣೆ ಆರಂಭವಾಗಿದೆ. ರಾಜ್ಯದ ಹಾಗೂ ದೇಶದ ವಿವಿಧ ಶಿವನ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ಆರಂಭವಾಗಿದೆ. ಇನ್ನು ರಾಜ್ಯದ ಬೆಳಗಾವಿಯಲ್ಲಿ ಮರಾಠಿ ಪುಂಡರ ವಿರುದ್ಧ ಕನ್ನಡಿಗರ ಆಕ್ರೋಶ ತೀವ್ರವಾಗಿದ್ದು, ಅವರಿಗೆ ಕಠಿಣ ಶಿಕ್ಷೆ ನೀಡಿ ಗಡೀಪಾರು ಮಾಡಬೇಕು ಎಂದ ಕರವೇ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ತರೆ ಬೀಳಲಿದ್ದು, ದಾಖಲೆಯ 64 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಜ.13 ರಂದು ಆರಂಭವಾಗಿದ್ದ ಮಹಾ ಕುಂಭಮೇಳ ಶಿವರಾತ್ರಿಯ ದಿನದಂದು ತೆರೆ ಕಾಣಲಿದೆ.

11:48 PM (IST) Feb 26
ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನವು ಇಂಗ್ಲೆಂಡ್ ತಂಡವನ್ನು ಸೋಲಿಸಿತು, ಇದು ಇಂಗ್ಲೆಂಡ್‌ನ ನಿರ್ಗಮನಕ್ಕೆ ಕಾರಣವಾಯಿತು. ಇಬ್ರಾಹಿಂ ಜದ್ರಾನ್ ಅವರ ಶತಕ ಮತ್ತು ಅಜ್ಮತುಲ್ಲಾ ಓಮರ್‌ಝೈ ಅವರ ಆಲ್ರೌಂಡರ್ ಆಟವು ಅಫ್ಘಾನಿಸ್ತಾನದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಪೂರ್ತಿ ಓದಿ10:53 PM (IST) Feb 26
ಕೇಂದ್ರ ಸರ್ಕಾರ ಅಸಂಘಟಿತ ನೌಕರರಿಗೆ ಪಿಂಚಣಿ ಯೋಜನೆ ಪರಿಚಯಿಸಲು ಮುಂದಾಗಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ ಬಗ್ಗೆ ಜಾರಿಗೆ ತರಲು ಚಿಂತನೆ ನಡೆಸ್ತಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ.
10:27 PM (IST) Feb 26
ಮಂಗಳ ಗ್ರಹ ಕೆಂಪಾಗಿರಲು ಕಾರಣವಾದ ರಹಸ್ಯವನ್ನು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ. ಕಬ್ಬಿಣದ ಆಕ್ಸೈಡ್ ಧೂಳಿನಿಂದಾಗಿ ಕೆಂಪಗಿರುವ ಗ್ರಹದ ಬಗ್ಗೆ ವಿಜ್ಞಾನಿಗಳು ಹೊಸ ವಿವರಣೆ ನೀಡಿದ್ದಾರೆ.
ಪೂರ್ತಿ ಓದಿ10:00 PM (IST) Feb 26
ಇಲ್ಲಿಯವರೆಗೂ ಅನೇಕರಿಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ.. ಶ್...!
ಪೂರ್ತಿ ಓದಿ09:40 PM (IST) Feb 26
ಕೊಡಗಿನಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡ ಬಡ ದಂಪತಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಹುಸಿಯಾಗಿದೆ. ಪರಿಹಾರ ಮತ್ತು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ, 7 ತಿಂಗಳಾದರೂ ಯಾವುದೇ ನೆರವು ಸಿಕ್ಕಿಲ್ಲ.
ಪೂರ್ತಿ ಓದಿ09:30 PM (IST) Feb 26
ಮೆಗ್ನೀಷಿಯಂ ಅಂಶ ಕಡಿಮೆಯಾದರೆ ಹೃದಯ ಬಡಿತದಲ್ಲಿ ಏರುಪೇರಾಗಬಹುದು. ಇದರಿಂದ ತಲೆತಿರುಗುವಿಕೆ ಅಥವಾ ಪ್ರಜ್ಞಾಹೀನತೆ ಉಂಟಾಗಬಹುದು.
ಪೂರ್ತಿ ಓದಿ09:07 PM (IST) Feb 26
ಚಿಕ್ಕಮಗಳೂರಿನ ರೈತ ಕುಟುಂಬಕ್ಕೆ ಮೆಸ್ಕಾಂ ಇಲಾಖೆ 3 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು ಆಘಾತ ಉಂಟುಮಾಡಿದೆ. 13 ವರ್ಷಗಳ ಬಿಲ್ ಅನ್ನು ಒಮ್ಮೆಲೇ ಪಾವತಿಸುವಂತೆ ನೋಟಿಸ್ ನೀಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ08:50 PM (IST) Feb 26
ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ನೆನಪಿಸುವ ಹಂಪಿ ಉತ್ಸವ ಫೆಬ್ರವರಿ 28 ರಿಂದ ಆರಂಭವಾಗಲಿದೆ. ಸಿದ್ದರಾಮಯ್ಯನವರು ಉತ್ಸವವನ್ನು ಉದ್ಘಾಟಿಸಲಿದ್ದು, ಅದ್ದೂರಿ ವೇದಿಕೆ ಸಿದ್ಧಗೊಂಡಿದೆ.
ಪೂರ್ತಿ ಓದಿ08:25 PM (IST) Feb 26
ಚಂದ್ರು ಅವರ ಮಾತನ್ನು ಕೇಳಿಸಿಕೊಂಡ ಕೆಲವರು 'ಕನ್ನಡಕ್ಕೆ ಇಂಥ ನಿರ್ಮಾಪಕರು ಹಾಗೂ ನಿರ್ದೇಶಕರ ಅಗತ್ಯವಿದೆ ಎಂದರೆ, ಇನ್ನೂ ಹಲವರು 'ಸೋಲೋದಕ್ಕಿಂತ ಸಿನಿಮಾ ಗೆಲ್ಲಬೇಕು, ಆಗ ಇಡೀ ಇಂಡಸ್ಟ್ರಿಗೆ ಇನ್ನೂ ಹೆಚ್ಚಿನ...
ಪೂರ್ತಿ ಓದಿ08:18 PM (IST) Feb 26
ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇಲ್ಲಿ 40 ಕಿಲೋ ಮೀಟರ್ ದೂರದಿಂದ ಕಪಿಲಾ ಜಲವನ್ನು ಬರಿಗಾಲಲ್ಲಿ ತಂದು ಶಿವನಿಗೆ ಅಭಿಷೇಕ ಮಾಡಲಾಗುತ್ತದೆ, ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದ ಪದ್ಧತಿ.
ಪೂರ್ತಿ ಓದಿ07:56 PM (IST) Feb 26
ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ದಂಪತಿ ಮಗುವಿನ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮಗುವನ್ನು ವೆಲ್ ಕಂ ಮಾಡಿದ ವಿಡಿಯೋ ಪೋಸ್ಟ್ ಮಾಡಿ, ಶಿವರಾತ್ರಿ ಶುಭಕೋರಿದ್ದಾರೆ.
07:56 PM (IST) Feb 26
ಗದಗದಲ್ಲಿ ನಿರ್ಮಾಣ ಹಂತದಲ್ಲಿರುವ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಹಣ ಬಿಡುಗಡೆಯಾಗದಿದ್ದಲ್ಲಿ ಭಕ್ತರಿಂದ ಹಣ ಸಂಗ್ರಹಿಸುವುದಾಗಿ ಅವರು ಹೇಳಿದ್ದಾರೆ. ಸ್ಮಾರಕ ಭವನದ ಕಾಮಗಾರಿ 9 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಕಾಯಲಾಗುತ್ತಿದೆ.
ಪೂರ್ತಿ ಓದಿ07:23 PM (IST) Feb 26
ಬಾಲಿವುಡ್ ನಟ ಅಮೀರ್ ಖಾನ್ ಕಳೆದ 20 ವರ್ಷಗಳಿಂದ ಸಂಭಾವನೆ ಪಡೆಯುತ್ತಿಲ್ಲ. ನಟರು ಸಂಭಾವನೆ ಪಡೆಯದೇ ಕೆಲಸ ಮಾಡುವುದರಿಂದ ನಿರ್ಮಾಪಕತರಿಗೆ ಸೃಜನಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಹಾಗಾದರೆ, ಹಣದ ಮೂಲ ಯಾವುದು ಗೊತ್ತಾ?
ಪೂರ್ತಿ ಓದಿ07:07 PM (IST) Feb 26
ಅದೇ ಕಾರಣಕ್ಕೆ ಪುಟ್ಟಣ್ಣ ಸಾಯುವ ಸ್ವಲ್ಪ ಕಾಲದ ಮೊದಲು ಆರತಿ ಹಾಗೂ ಪುಟ್ಟಣ್ಣ ದೂರವಾಗಿದ್ದರು.. ಆದರೆ, ಪುಟ್ಟಣ್ಣ ಇಹಲೋಕ ತ್ಯಜಿಸಿದ ಮೇಲೆ ಮಂತ್ರಿಯಾಗಿದ್ದ ಆ ವ್ಯಕ್ತಿ.. ಆ ಬಳಿಕ ನಟಿ ಆರತಿಯವರು ಎಂಜಿನಿಯರ್...
ಪೂರ್ತಿ ಓದಿ07:05 PM (IST) Feb 26
ಭಾಗ್ಯಲಕ್ಷ್ಮಿ ಶೂಟಿಂಗ್ ಸೆಟ್ನ ವಿಡಿಯೋ ಒಂದನ್ನು ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಆಗಿದ್ದೇನು?
06:53 PM (IST) Feb 26
ಬಿಗ್ ಬಾಸ್ ಖ್ಯಾತಿಯ ನಟ ರಾಬಿನ್ ರಾಧಾಕೃಷ್ಣನ್ ಮದುವೆ ಕಾರ್ಯಕ್ರಮದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿರುವ ಅವರ ಫೋಟೋಗಳು ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.
ಪೂರ್ತಿ ಓದಿ06:39 PM (IST) Feb 26
ಅವೆರಡು ಪಾರ್ಟ್ ಚೆನ್ನಾಗಿದ್ರೆ ಮಾತ್ರ ಬಾಲಿವುಡ್ನಲ್ಲಿ ಪಟ್ಟ, ಇಲ್ಲದಿದ್ರೆ ಚಟ್ಟ ಎಂದಿದ್ದ ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೆ ಈಗ ವೈರಲ್ ಆಗ್ತಿದೆ!
06:24 PM (IST) Feb 26
ಇಂಗ್ಲೆಂಡ್‌ನ ಬ್ಲೆನ್‌ಹೈಮ್ ಅರಮನೆಯಲ್ಲಿದ್ದ 30 ಕೋಟಿ ಮೌಲ್ಯದ ಚಿನ್ನದ ಕಮೋಡ್ ಕಳ್ಳತನದ ಸಿಸಿಟಿವಿ ದೃಶ್ಯ ಈಗ ವೈರಲ್ ಆಗಿದೆ. ಕಳ್ಳರು ಕೇವಲ 5 ನಿಮಿಷಗಳಲ್ಲಿ ಕಮೋಡ್ ದೋಚಿ ಪರಾರಿಯಾಗಿದ್ದಾರೆ.
ಪೂರ್ತಿ ಓದಿ06:06 PM (IST) Feb 26
ರಾಜ್ಯದ ಅಂತ್ಯೋದಯ, ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್. ಅನ್ನಭಾಗ್ಯ ಯೋಜನೆಯಡಿ ಮಾರ್ಚ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ 15 ಕೆ.ಜಿ. ಅಕ್ಕಿ ನೀಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಪೂರ್ತಿ ಓದಿ06:05 PM (IST) Feb 26
ಶಿವರಾತ್ರಿ ಹಿನ್ನೆಲೆಯಲ್ಲಿ ನಟ ನಿರ್ದೇಶಕ ರಿಷಭ್ ಶೆಟ್ಟಿ ಪತ್ನಿ ಕಾಡು-ಮೇಡು ದಾಟಿ, ಕಡಿದಾದ ಬೆಟ್ಟ ಹತ್ತಿ ಇಳಿದು ಶಿವಲಿಂಗ ದರ್ಶನ ಮಾಡಿದ್ದು, ಕಾನನ ಮಧ್ಯೆ ನೀರವ ಮೌನದಲ್ಲಿ ಕುಳಿತಿರುವ ಈ ಶಿವಲಿಂಗ ಎಲ್ಲಿದೆ ಗೊತ್ತಾ?
05:37 PM (IST) Feb 26
ಮಾಮೂಲು ರಕ್ತದ ಗುಂಪಿನ ಹೊರತಾಗಿಯೂ ಕೆಲವರು ಬಾಂಬೆ ಬ್ಲಡ್ ಗ್ರೂಪ್ ಹೊಂದಿದ್ದಾರೆ. ಏನಿದು ರಕ್ತದ ಗುಂಪು? ಭಾರತದಲ್ಲಿ ಎಷ್ಟು ಮಂದಿ ಇದ್ದಾರೆ?
05:28 PM (IST) Feb 26
ಪಾಕಿಸ್ತಾನವನ್ನು ಸೋಲಿಸಿದ ಬೆನ್ನಲ್ಲಿಯೇ ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಟಿ ತಮನ್ನಾ ಭಾಟಿಯಾ ಕುಂಭಮೇಳದಲ್ಲಿ ಒಟ್ಟಿಗೆ ಭಾಗವಹಿಸಿದ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ..
ಪೂರ್ತಿ ಓದಿ05:09 PM (IST) Feb 26
ಗುರುಗ್ರಾಮ್‌ನ ಸ್ಟಾರ್ಟ್‌ಅಪ್ ಕಂಪನಿಯೊಂದು ಸಿಗರೇಟ್ ಬ್ರೇಕ್ ತೆಗೆದುಕೊಂಡಿದ್ದಕ್ಕೆ ಉದ್ಯೋಗಿಯನ್ನು ವಜಾ ಮಾಡಿದೆ. ಕೇವಲ 20 ದಿನಗಳಲ್ಲಿ ಅಟಿಟ್ಯೂಡ್ ಸಮಸ್ಯೆ ನೆಪ ಹೇಳಿ ವಜಾ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಪೂರ್ತಿ ಓದಿ04:49 PM (IST) Feb 26
ನಟ ವಿಷ್ಣುವರ್ಧನ್ ಅವರು ಎಡಗೈ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಅವರು ತಮ್ಮ ಬಲಗೈಗೆ ಒಂದು ಕಡಗವನ್ನು ತಮ್ಮ ಜೀವಿತದ ಕೊನೆಯ ದಿನಗಳವರೆಗೂ ಹಾಕಿದ್ದಾರೆ. ಬಲಗೈಯನ್ನು ಎಡಗೈನಲ್ಲಿ ಹಿಡಿದು ಅವರು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದರೆ ಪ್ರತಿಯೊಬ್ಬರೂ ಕೂಡ ಅವರ ಬಲಗೈ ಕಡಗವನ್ನು...
ಪೂರ್ತಿ ಓದಿ04:47 PM (IST) Feb 26
ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದವಳ ಜುಟ್ಟು ಹಿಡಿದು, ಕಿರೀಟ ಕಿತ್ತು ಕಿರುಚಾಡಿದ್ದಾರೆ ರನ್ನರ್ ಅಪ್. ಇದರ ವಿಡಿಯೋ ವೈರಲ್ ಆಗಿದೆ.
04:46 PM (IST) Feb 26
ಬೆಂಗಳೂರಿನಲ್ಲಿ ಅಸಹಜ ಲೈಂಗಿಕತೆಗೆ ಹೆಂಡತಿಯನ್ನು ಒತ್ತಾಯಿಸಿ ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಕಣ್ಣೆದುರೇ ಈ ದುರ್ಘಟನೆ ನಡೆದಿದೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೆಂದು ಶಂಕಿಸಲಾಗಿದೆ.
ಪೂರ್ತಿ ಓದಿ04:14 PM (IST) Feb 26
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಸಂದರ್ಶಕರು ಕೇಳಿದ ಎಲ್ಲ ಪ್ರಶ್ನೆಗೆ ಬೆಸ್ಟ್ ಉತ್ತರ ನೀಡಿದ್ರೂ ನಿಮಗೆ ಕೆಲ್ಸ ಸಿಗ್ದೆ ಹೋಗ್ಬಹುದು. ಅದಕ್ಕೆ ಕಾರಣ ನಿಮ್ಮ ಕ್ರೆಡಿಟ್ ಸ್ಕೋರ್. ನಿಮ್ಮ ಕ್ರೆಡಿಟ್ ಸ್ಕೋರ್ ಸರಿಯಾಗಿ ಮೆಂಟೇನ್ ಮಾಡಿಲ್ಲ ಅಂದ್ರೆ ಕೆಲಸ ಸಿಗೋದು ಅನುಮಾನ.
04:10 PM (IST) Feb 26
ಸುಡಾನ್‌ನಲ್ಲಿ ಉಕ್ರೇನ್ ನಿರ್ಮಿತ ಮಿಲಿಟರಿ ವಿಮಾನ ಪತನಗೊಂಡು 46 ಜನರು ಸಾವನ್ನಪ್ಪಿದ್ದಾರೆ. ಮಿಲಿಟರಿ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿರುವಾಗಲೇ ಈ ದುರಂತ ಸಂಭವಿಸಿದೆ.
ಪೂರ್ತಿ ಓದಿ04:08 PM (IST) Feb 26
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ತನಗೆ ನೀಡಿದ ನಾಯಕತ್ವವನ್ನು ಬಳಸಿಕೊಂಡು ಚುನಾವಣೆಯಲ್ಲಿ ಮುನ್ನಡೆಸುವುದಾಗಿ ಅವರು ಹೇಳಿದ್ದಾರೆ.
ಪೂರ್ತಿ ಓದಿ03:55 PM (IST) Feb 26
ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಪಾಕಿಸ್ತಾನ ತಂಡದ ಬಗ್ಗೆ ಮಾಜಿ ಆಟಗಾರ್ತಿ ಸನಾ ಮೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧೋನಿಯಂತಹ ನಾಯಕನಿಂದಲೂ ತಂಡವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ರಿಕಿ ಪಾಂಟಿಂಗ್ ಶ್ರೇಷ್ಠ ಏಕದಿನ ಕ್ರಿಕೆಟಿಗ ಎಂದು ಹೊಗಳಿದ್ದಾರೆ.
ಪೂರ್ತಿ ಓದಿ03:46 PM (IST) Feb 26
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ತುಳಸಿಗೆ ಏಳು ತಿಂಗಳು ತುಂಬಿದ್ದು ಭರ್ಜರಿ ಸೀಮಂತಕ್ಕೆ ರೆಡಿ ಮಾಡಲಾಗಿದೆ. ಪ್ರೊಮೋ ನೋಡಿ ವೀಕ್ಷಕರು ಹೇಳ್ತಿರೋದೇನು?
03:46 PM (IST) Feb 26
Bhagyalakshmi Kannada Serial Today Episode: ʼಭಾಗ್ಯಲಕ್ಷ್ಮೀʼ ಧಾರಾವಾಹಿಯಲ್ಲಿ ಭಾಗ್ಯ ತನ್ನ ತಾಳಿಯನ್ನು ಕಿತ್ತು ಎಸೆದಿದ್ದಾಳೆ. ಹಾಗಾದರೆ ಮುಂದಿನ ಎಪಿಸೋಡ್‌ಗಳಲ್ಲಿ ಏನಾಗುವುದು?
03:28 PM (IST) Feb 26
ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ತಾಯಿಯೊಬ್ಬಳಿಗೆ ಅವಳಿ ಮಕ್ಕಳು ಜನಿಸಿವೆ. ಆದ್ರೆ ಮಕ್ಕಳ ಡಿಎನ್ ಎ ಮಾತ್ರ ಅಚ್ಚರಿ ಹುಟ್ಟಿಸಿದೆ.
03:04 PM (IST) Feb 26
'ಸೀತಾರಾಮ' ಧಾರಾವಾಹಿಯನ್ನು ಕುಂಭಮೇಳದಲ್ಲಿ ಶೂಟಿಂಗ್ ಮಾಡಲಾಗಿದೆ. ಇದು ನಿಜಕ್ಕೂ ಐತಿಹಾಸಿಕ ಕ್ಷಣ ಎನ್ನಬಹುದು. ತೆರೆ ಹಿಂದಿನ ವಿಡಿಯೋ ಈಗ ರಿವೀಲ್ ಆಗಿದೆ.
ಪೂರ್ತಿ ಓದಿ03:04 PM (IST) Feb 26
ಕಳೆದ ಏಳು ವರ್ಷಗಳಲ್ಲಿ ಕಂಪನಿಯಿಂದ 20 ಮಿಲಿಯನ್ ಡಾಲರ್ ಹಣವನ್ನು ಇವರು ಕದ್ದಿದ್ದಾರೆ. ಅಂದರೆ ಸುಮಾರು 174 ಕೋಟಿ ರೂಪಾಯಿ! ಈ ಹಣವನ್ನೆಲ್ಲಾ ಅವರು ಐಷಾರಾಮಿ ವಸ್ತುಗಳನ್ನು ಖರೀದಿಸಲು ಬಳಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೂರ್ತಿ ಓದಿ02:57 PM (IST) Feb 26
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವು ಹಿಂದೂ ಆಗಿ ಹುಟ್ಟಿ, ಹಿಂದೂ ಆಗಿಯೇ ಸಾಯುವುದಾಗಿ ಹೇಳಿದ್ದಾರೆ. ಎಲ್ಲಾ ಧರ್ಮದ ಬಗ್ಗೆ ತಮಗೆ ಗೌರವವಿದ್ದು, ಕುಂಭಮೇಳದಲ್ಲಿ ಉತ್ತಮ ಅನುಭವವಾಗಿದೆ ಎಂದು ತಿಳಿಸಿದ್ದಾರೆ.
ಪೂರ್ತಿ ಓದಿ02:48 PM (IST) Feb 26
ಓಂ ಚಿತ್ರ ಬಿಡುಗಡೆಗೂ ಮುನ್ನ ಶಿವಣ್ಣ ಈ ಮಾತು ಹೇಳಿದ್ದರು. ಶಿವಣ್ಣ ಆಡಿರುವ ಆ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ರೆ ಶಿವಣ್ಣ ಹೇಳಿದ್ದೇನು? ಉಪ್ಪಿ-ಶಿವಣ್ಣ ನಡುವೆ ಅಂದು ಇದ್ದ ಬಾಂಧವ್ಯವೇನು? ಅವರಿಬ್ಬರ ನಂಬಿಕೆ ಆ ಕಾಲದಲ್ಲಿ...
ಪೂರ್ತಿ ಓದಿ02:34 PM (IST) Feb 26
ವೈದ್ಯರ ನಿರ್ಲಕ್ಷ್ಯದಿಂದಾಗಿ ಸುಮಾರು ಎರಡು ತಿಂಗಳ ಕಾಲ ತಾನು ಮತ್ತು ಹೆಂಡತಿ ಅನುಭವಿಸಿದ ಸಂಕಷ್ಟವನ್ನು ವಿವರಿಸಿ ಪತಿ ಪತ್ರ ಬರೆದಿದ್ದಾರೆ.
ಪೂರ್ತಿ ಓದಿ02:20 PM (IST) Feb 26
ನಟ ಶಾರುಖ್ ಖಾನ್ ಅವರು ಎರಡು ನೂರು ಕೋಟಿ ರೂಪಾಯಿ ಬೆಲೆಯ ಮನ್ನತ್ ಬಂಗಲೆಯಿಂದ ಹೊರಬೀಳಲಿದ್ದಾರಂತೆ. ಹೌದು, ಯಾಕೆ ಈ ನಿರ್ಧಾರ ಮಾಡಿದ್ದಾರೆ?
02:07 PM (IST) Feb 26
ಫೆಬ್ರವರಿ 27 ರಿಂದ ಈ 5 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಅದೃಷ್ಟವು ಹೊಳೆಯುತ್ತದೆ. ನೀವು ಕೆಲಸ, ವ್ಯವಹಾರ ಮತ್ತು ವೈಯಕ್ತಿಕ ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯಬಹುದು.