ಬಾಗಲಕೋಟೆ: ಬಜೆಟ್ ಬಳಿಕವೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಭಾನುವಾರ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಈಗ ಅವರೇ ಇದ್ದಾರೆ, ಮುಂದೆ ಅವರೇ ಮುಂದುವರೀತಾರೆ ಎಂದು ಲೆಕ್ಕಾಚಾರ ಅಷ್ಟೇ. ಅರ್ಧಗಿರ್ಧ ಎಂದು ನಾವೆಲ್ಲೂ ಕೇಳಿಲ್ಲ, ಈಗ ಅವರಿದ್ದಾರೆ. ಅವರೇ ಮುಂದುವರೀತಾರೆ ಅನ್ನೋದಷ್ಟೇ ನಮ್ಮ ಲೆಕ್ಕಾಚಾರ. ಮಿಕ್ಕಿದ್ದೆಲ್ಲಾ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.
ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆ ಬೇರೆ ಕಾರ್ಯಕ್ರಮ ಇರುತ್ತವೆ. ಹಾಗಾಗಿ ದೆಹಲಿಗೆ ಹೋಗ್ತಿವಿ. ಇದೇನು ಹೊಸದಲ್ಲ, ತಿಂಗಳಿಗೊಮ್ಮೆ ದೆಹಲಿ ವಿಸಿಟ್ ಮಾಡೇ ಮಾಡ್ತೀವಿ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಆಗಿದ್ದೇವೆ. ಸ್ವಾಭಾವಿಕವಾಗಿ ರಾಜಕೀಯ ಮಾತಾಡಬೇಕಾಗುತ್ತದೆ ಮಾತಾಡಿದ್ದೇವೆ. ದೆಹಲಿಯಲ್ಲಿ ನಿರ್ಣಯ ಆಗಿದೆ ಎನ್ನುವ ವಿಚಾರ ಇರುವ ಗೊಂದಲ ಬಗೆಹರಿಸುವ ನಿರ್ಣಯ ಆಗಿದೆ. ರಾಜ್ಯದಲ್ಲಿ ಗೊಂದಲ ಇದೆ ಅದನ್ನ ಬಗೆಹರಿಸಲು ಹೇಳಿದ್ದೇವೆ. ನೀವು ಮಧ್ಯ ಪ್ರವೇಶಿಸಬೇಕು, ಇಲ್ಲವಾದರೆ ಕಾರ್ಯಕರ್ತರಿಗೆ, ಸರ್ಕಾರಕ್ಕೆ, ಪಕ್ಷಕ್ಕೂ ತೊಂದರೆ ಆಗುತ್ತದೆ ಎಂದು ಹೇಳಿದ್ದೇವೆ. ಆದಷ್ಟು ಬೇಗ ಮಾಡುತ್ತೇವೆ ಎಂದು ಖರ್ಗೆಯವರು ಹೇಳಿದ್ದಾರೆ ಎಂದು ಹೇಳಿದರು.
10:42 PM (IST) Feb 23
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗವಾಗಿದೆ. ಉದಯಪುರದಲ್ಲಿ ಇಂದು ಸಂಜೆಯಂದಲೇ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಕಳೆಗಟ್ಟಿದೆ.
10:08 PM (IST) Feb 23
ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್ ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಜೊತೆ ರಿಯಲ್ ಪತಿ ಬಗ್ಗೆ ಮಾತನಾಡಿದ್ದಾರೆ.
09:46 PM (IST) Feb 23
ದರ್ಶನ್ ತೂಗುದೀಪ ನಟನೆಯ ಜಗ್ಗುದಾದ ಸಿನಿಮಾ ಹೀರೋಯಿನ್ ದೀಕ್ಷಾ ಸೇಠ್‌ಗೆ ನಟಿಯಾಗುವ ಯಾವ ಆಸೆಯೂ ಇರಲಿಲ್ಲ. ಚೆನ್ನೈ, ಮುಂಬೈ, ಕೋಲ್ಕತ್ತಾ, ಕಠ್ಮಂಡು, ರಾಜಸ್ಥಾನ, ಗುಜರಾತ್ ಹೀಗೆ ತಂದೆ ಉದ್ಯೋಗದ ಸ್ಥಳ ಬದಲಾದಂತೆ ದೀಕ್ಷಾ ಕೂಡ ಇಷ್ಟೆಲ್ಲ ನಗರಗಳಲ್ಲಿ ವಾಸ ಮಾಡಲು ಆರಂಭಿಸಿದರು.
09:18 PM (IST) Feb 23
Muddu Sose Serial Kannada: 'ಮುದ್ದುಸೊಸೆ' ಧಾರಾವಾಹಿಯಲ್ಲಿ ಕುತೂಹಲಕಾರಿ ಘಟ್ಟಕ್ಕೆ ಬಂದಿದೆ. ವೇಗವಾದ ಕಥಾಹಂದರ, ರೋಚಕ ತಿರುವುಗಳ ಮೂಲಕ ಗಮನಸೆಳೆದ ಈ ಸೀರಿಯಲ್‌ನಲ್ಲಿ, ಇದೀಗ ಹೀರೋಯಿನ್ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆ ನಡೆದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:08 PM (IST) Feb 23
ಏಷ್ಯಾದಲ್ಲಿ 2ನೇ ಅತೀದೊಡ್ಡ ಅಮೇಜಾನ್ ಆಫೀಸ್ ಬೆಂಗಳೂರಿನಲ್ಲಿ ಆರಂಭ, ಬರೋಬ್ಬರಿ 7,000 ಉದ್ಯೋಗಿಗಳ ಕೆಲಸ ಮಾಡಲು ಸ್ಥಳವಕಾಶವಿರುವ ಅತೀ ದೊಡ್ಡ ಕಚೇರಿ ಇದಾಗಿದೆ. 11 ಮಹಡಿ, 1.1 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ.
08:11 PM (IST) Feb 23
ದಾವಣಗೆರೆಯ ನ್ಯಾಮತಿ ತಾಲೂಕಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಭಾವಿಸಲಾಗಿದ್ದ ವೃದ್ಧೆಯ ಸಾವು ಕೊಲೆ ಎಂದು ಸಾಬೀತಾಗಿದೆ. ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದ ಎಂ.ಕಾಂ ಪದವೀಧರ, ಚಿನ್ನಕ್ಕಾಗಿ ವೃದ್ಧೆಯನ್ನು ಕತ್ತು ಹಿಸುಕಿ ಕೊಂದಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
07:40 PM (IST) Feb 23
ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗಾಗಿ ₹2372 ಕೋಟಿ ವೆಚ್ಚದಲ್ಲಿ ಕಂಪ್ಲಿ ವಯಾ ಗಂಗಾವತಿ-ದರೋಜಿ ಸೇರಿದಂತೆ ಎರಡು ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಸಂಸದ ಈ. ತುಕರಾಮ್ ಅವರ ಪ್ರಕಾರ, ಈ ಯೋಜನೆಯು ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ.
07:34 PM (IST) Feb 23
ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ಬಂದ್ ಹಿನ್ನೆಲೆ ಮದ್ಯ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬ ಕಟ್ಟಡವೇರಿ ಮೇಲಿಂದ ಬೀಳುವುದಾಗಿ ಬೆದರಿಕೆ ಹಾಕಿದ್ದಾನೆ. ನನಗೆ ಎಣ್ಣೆ ತಂದುಕೊಟ್ಟರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದ ಆತನನ್ನು, ಪೊಲೀಸರು ಹರಸಾಹಸಪಟ್ಟು ರಕ್ಷಿಸಿದ್ದಾರೆ.
07:31 PM (IST) Feb 23
ನಟಿ ಮೇಘನಾ ರಾಜ್ ಅವರು ಪತಿ ಚಿರು ಸರ್ಜಾ ಅವರ ಅಕಾಲಿಕ ಮರಣ ಮತ್ತು ಮಗ ರಾಯನ್ ಜನನದ ಸಂದರ್ಭದಲ್ಲಿ ಅನುಭವಿಸಿದ ದುಃಖ ಮತ್ತು ಸಂತೋಷದ ಮಿಶ್ರ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಮಗನಿಗಾಗಿ ಬದುಕುವ ನಿರ್ಧಾರದ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
07:22 PM (IST) Feb 23
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ ಜಗದೀಶ ಅವರು ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾದ ಈ ಜೀವವೈವಿಧ್ಯ ತಾಣದ ಸಂರಕ್ಷಣೆ ಎಲ್ಲರ ಹೊಣೆ ಎಂದಿದ್ದಾರೆ.
07:09 PM (IST) Feb 23
07:02 PM (IST) Feb 23
06:44 PM (IST) Feb 23
06:06 PM (IST) Feb 23
'ಕಾಂತಾರಾ' ಪಾತ್ರವನ್ನು ಅವಹೇಳನ ಮಾಡಿದ್ದ ಆರೋಪದ ಮೇಲೆ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದೆ. ಈ ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ವೇಳೆ ನ್ಯಾಯಾಲಯವು ವಿಶೇಷ ಆದ್ಯತೆ ನೀಡಲು ನಿರಾಕರಿಸಿ, ತುರ್ತು ವಿಚಾರಣೆ ಮನವಿಯನ್ನು ಪ್ರಶ್ನಿಸಿದೆ.
05:36 PM (IST) Feb 23
ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕೋಲಾದಲ್ಲಿ ಸ್ಪಷ್ಟಪಡಿಸಿದ್ದಾರೆ. ಹಾಲಕ್ಕಿ ಒಕ್ಕಲಿಗರ ಎಸ್ಟಿ ಸೇರ್ಪಡೆ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದ್ದು, ಮತ್ತೊಮ್ಮೆ ಶಿಫಾರಸು ಮಾಡುವುದಾಗಿ ತಿಳಿಸಿದರು.
04:53 PM (IST) Feb 23
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಒತ್ತಾಯ ಹೆಚ್ಚಾಗಿದ್ದು, 30ಕ್ಕೂ ಹೆಚ್ಚು ಮೊದಲ ಬಾರಿಯ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಕನಿಷ್ಠ 5ಮಂದಿ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದು, 2028ರ ಚುನಾವಣೆಯ ಗುರಿ ಸಾಧಿಸಲು ಅಗತ್ಯವೆಂದು ಪ್ರತಿಪಾದಿಸಿದ್ದಾರೆ.
04:48 PM (IST) Feb 23
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಫೆಬ್ರವರಿ 24 ರಂದು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ನಿಂದಾಗಿ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
04:41 PM (IST) Feb 23
04:29 PM (IST) Feb 23
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ, ಮೃತನ ತಾಯಿ ರತ್ನಪ್ರಭಾ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿದರು. ತನ್ನ ಮಗ ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ತನಗೆ ತಿಳಿದಿಲ್ಲವೆಂದೂ, ಅವನೊಂದಿಗಿನ ಕೊನೆಯ ಕರೆಯ ವಿವರಗಳನ್ನು ಹಂಚಿಕೊಂಡರು. ಆತನಿಗೆ ಅಪೊಲೋ ಫಾರ್ಮಸಿ ನೀಡ್ತಿದ್ದ ಸಂಬಳ ವಿವರ ಹಂಚಿಕೊಂಡರು.
04:27 PM (IST) Feb 23
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಗಡ್ಡ ಬೋಳಿಸಿರುವುದು ದ್ವಿಪಾತ್ರದ ಬಗ್ಗೆ ಸುಳಿವು ನೀಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಸೇರಿ ಹಲವು ನಾಯಕಿಯರಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
04:17 PM (IST) Feb 23
How To Wash Your Clothes Without Detergent: ಮನೆಯಲ್ಲಿ ಡಿಟರ್ಜೆಂಟ್ ಖಾಲಿಯಾಗಿದೆಯೇ? ಕೆಮಿಕಲ್ ಇಲ್ಲದೆ ಬಟ್ಟೆ ತೊಳೆಯಬೇಕೇ? ಕೆಲ ಮನೆಮದ್ದುಗಳು ಸಣ್ಣಪುಟ್ಟ ಕೊಳೆ, ವಾಸನೆ ಮತ್ತು ಬೆವರಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಹಾಗಾದರೆ ಅವು ಯಾವುವು?
04:12 PM (IST) Feb 23
03:52 PM (IST) Feb 23
ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್ 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್ ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?
03:39 PM (IST) Feb 23
ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಉಷ್ಣಾಂಶ ಗಣನೀಯವಾಗಿ ಏರುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಮತ್ತಷ್ಟು ಹೆಚ್ಚಳದ ಮುನ್ಸೂಚನೆ ಇದೆ. ಮಾರ್ಚ್-ಏಪ್ರಿಲ್‌ನಲ್ಲಿ ತೀವ್ರ ಬಿಸಿಲಿನ ಎಚ್ಚರಿಕೆ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
03:16 PM (IST) Feb 23
ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ 6ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಆರೋಪಿ ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
03:08 PM (IST) Feb 23
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರ ಗನ್ ಲೈಸೆನ್ಸ್ ಅನ್ನು ಪೊಲೀಸರು ಅಮಾನತುಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪೊಲೀಸರ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
03:01 PM (IST) Feb 23
Apartment Rules: ನಗರಗಳಲ್ಲಿ ಅಪಾರ್ಟ್‌ಮೆಂಟ್ ಎಷ್ಟು ಸೇಫ್, ಹಾಗೆ ಕಿರಿಕಿರಿ ಕೂಡ ಮಾಡುವುದು. ಅನೇಕರು ಈ ಕಾರಣಕ್ಕೆ ಅಪಾರ್ಟ್‌ಮೆಂಟ್ ಸಹವಾಸವೇ ಬೇಡ ಎನ್ನುತ್ತಾರೆ. ಓರ್ವ ವ್ಯಕ್ತಿ ತನ್ನ ಮಹಿಳಾ ಸಹದ್ಯೋಗಿಯನ್ನು ಮನೆಗೆ ಕರೆಸಿದ್ದಕ್ಕೆ ಸಮಸ್ಯೆ ಎದುರಿಸಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
03:00 PM (IST) Feb 23
02:54 PM (IST) Feb 23
02:42 PM (IST) Feb 23
'ಫೈವ್‌ಸ್ಟಾರ್ ಜೈಲು' ಎಂದು ಕುಖ್ಯಾತವಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗ ಶಿಸ್ತಿನ ಪರ್ವ ಆರಂಭವಾಗಿದೆ. ಖಡಕ್ ಅಧಿಕಾರಿಗಳ ನೇಮಕದ ನಂತರ, ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಕೈದಿಗಳ ಐಷಾರಾಮಿ ಜೀವನಕ್ಕೆ ಅಂತ್ಯ ಹಾಡಲು ದಾಳಿಗಳನ್ನು ನಡೆಸಲಾಗುತ್ತಿದೆ.
02:22 PM (IST) Feb 23
ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆಯ ವೇಳೆ, ಬಸನಗೌಡ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಪೊಲೀಸರು ಆರೋಪಿಯನ್ನು ಬಂಧಿಸಿ, ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
02:22 PM (IST) Feb 23
ಕಿಶ್ತ್ವಾರ್ ಜಿಲ್ಲೆಯಲ್ಲಿ ಭಾರತೀಯ ಸೇನೆಯು 326 ದಿನಗಳ ಜಂಟಿ ಕಾರ್ಯಾಚರಣೆಯಲ್ಲಿ, ಮೋಸ್ಟ್ ವಾಂಟೆಡ್ ಉಗ್ರ ಸೈಫುಲ್ಲಾ ಸೇರಿದಂತೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಮೂವರು ಸದಸ್ಯರನ್ನು ಹತ್ಯೆ ಮಾಡಿದೆ. ಈ ವರ್ಷ ಜಮ್ಮು ಪ್ರದೇಶದಲ್ಲಿ ಒಟ್ಟು ಏಳು ಜೆಇಎಂ ಉಗ್ರರನ್ನು ಹೊಡೆದುರುಳಿಸಲಾಗಿದೆ.
02:19 PM (IST) Feb 23
ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಗೆ 1 ಸಾವಿರ ಎಕರೆ ಜಾಗವನ್ನು ಮೀಸಲಿಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ನಡೆದ ಮೆಗಾ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
02:15 PM (IST) Feb 23
2025-26ರ ರಣಜಿ ಟ್ರೋಫಿ ಫೈನಲ್ ಪಂದ್ಯವು ಹುಬ್ಬಳ್ಳಿಯಲ್ಲಿ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವೆ ನಡೆಯಲಿದೆ. ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್, ಟೀಂ ಇಂಡಿಯಾ ಆಟಗಾರರ ಬಲದಿಂದ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
01:10 PM (IST) Feb 23
ಯಶ್ ಅವರ 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿನ ವಿವಾದಾತ್ಮಕ ದೃಶ್ಯವು ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯಿಸಿದ್ದು, ಯಶ್ ಅವರು ಮುಜುಗರವಾಗುವ ದೃಶ್ಯಗಳನ್ನು ಮಾಡುವುದಿಲ್ಲ ಮತ್ತು ಆ ದೃಶ್ಯದ ಹಿಂದೆ ಒಂದು ಸೂಕ್ಷ್ಮ ಕಾರಣವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
01:02 PM (IST) Feb 23
ಭಾರತದ ಮಾರುಕಟ್ಟೆಯಲ್ಲಿ ಸ್ಕೋಡಾ ಕೈಲಾಕ್ ಕಾರು ಸಖತ್ ಸದ್ದು ಮಾಡ್ತಿದೆ. ಈಗಾಗಲೇ 50,000 ಯೂನಿಟ್‌ಗಳ ಉತ್ಪಾದನೆ ದಾಟಿದೆ. ಬೇಡಿಕೆ ಹೆಚ್ಚಾಗಿರೋದ್ರಿಂದ, ಡೆಲಿವರಿಗೆ ಆರು ವಾರಗಳವರೆಗೆ ಕಾಯಬೇಕು. ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
12:52 PM (IST) Feb 23
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾವು ಜೆಡಿಎಸ್‌ಗೆ ಹೋಗುವ ವದಂತಿಗಳನ್ನು ತಳ್ಳಿಹಾಕಿದ್ದು, ಬಿಜೆಪಿಯನ್ನೇ ರಿಪೇರಿ ಮಾಡುವುದಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿಯಿಂದಲೇ ಗೆಲುವು ಸಾಧ್ಯವಾಯಿತು ಎಂದರು.
12:44 PM (IST) Feb 23
12:36 PM (IST) Feb 23
Colors Kannada New Serial: ಬಿಗ್ ಬಾಸ್ ಕನ್ನಡ 12 ಶೋ ಪ್ರಸಾರ ಆಗುವ ಸಮಯದಲ್ಲಿಯೇ ರಾಣಿ ಧಾರಾವಾಹಿ ಬರಲಿದೆ ಎಂದು ಹೇಳಲಾಗಿತ್ತು. ಅಂದಹಾಗೆ ರಾಣಿ ಧಾರಾವಾಹಿ ಟೀಂ ಕೂಡ ದೊಡ್ಮನೆಗೆ ಭೇಟಿ ಕೊಟ್ಟು, ಧಾರಾವಾಹಿ ಕಥೆ ಹೇಗಿದೆ ಎಂದು ಹೇಳಿತ್ತು. ಈ ಸೀರಿಯಲ್‌ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಲಿದೆ.
12:25 PM (IST) Feb 23
ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಇದು ಉದ್ದೇಶಪೂರ್ವಕ ಕೃತ್ಯವೆಂದು ತಿಳಿದುಬಂದಿದೆ. ಸಾಲ ವಸೂಲಾತಿ ಏಜೆಂಟರ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ಅದೇ ಫೈನಾನ್ಸ್‌ನಿಂದ ಸಾಲ ಪಡೆದು 7.2 ಲಕ್ಷ ರೂ. ಇಎಂಐ ಬಾಕಿ ಉಳಿಸಿಕೊಂಡಿದ್ದ ವ್ಯಕ್ತಿಯದ್ದೇ ಎಂದು ತನಿಖೆಯಿಂದ ಬಯಲಾಗಿದೆ.